ETV Bharat / city

ರಾಜ್ಯ ಬೆಳಗುವ ವಿದ್ಯುತ್​ ಕೇಂದ್ರಗಳಲ್ಲಿ ಸುರಕ್ಷತೆ ಹೇಗಿದೆ? - Power outages

ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

How safe are our electric sub-stations
ವಿದ್ಯುತ್​ ಕೇಂದ್ರಗಳಲ್ಲಿ ಸುರಕ್ಷತೆ
author img

By

Published : Sep 3, 2020, 7:04 PM IST

ಬೆಂಗಳೂರು: ಕೊರೊನಾ ಪ್ರೇರಿತ ಲಾಕ್​ಡೌನ್​​​​​​​​​​ನಲ್ಲಿ​ ಜನರು ಮನೆ ಬಿಟ್ಟು ಬರದ ಪರಿಸ್ಥಿತಿ ಉಂಟಾಗಿದ್ದ ಸಂದರ್ಭದಲ್ಲಿ ವಿದ್ಯುತ್​ ಕೊರತೆ ಎದುರಾಗದಂತೆ ರಾಜ್ಯದ ಜನರ ಪಾಲಿಗೆ ಬೆಳಕಾಗಿದ್ದ ವಿದ್ಯುತ್ ಪ್ರಸರಣ ನಿಗಮಗಳು, ವಿಭಾಗಗಳು ಮತ್ತು ಅದರ ಉಪವಿಭಾಗಗಳಲ್ಲಿ ಸುರಕ್ಷತೆಯ ಪ್ರಶ್ನೆ ಎದ್ದಿದೆ. ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ರಾಜ್ಯದ ಜನರಿಗೆ ಬೆಳಕು ನೀಡುವ ವಿದ್ಯುತ್​ ಉತ್ಪಾದನೆ, ವಿತರಣಾ ಮತ್ತು ಪ್ರಸರಣಾ ಕೇಂದ್ರಗಳಲ್ಲಿ ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಕೊರತೆಯು ಭಾರೀ ಅವಘಡಗಳಿಗೆ ಕಾರಣ. ಅಂತಹ ಎಷ್ಟೋ ಅವಘಡಗಳು ಸಂಭವಿಸಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ. ಅದು ಕೂಡ ಹೆಚ್ಚು ಮಳೆಗಾಲದಲ್ಲಿ. ಅವುಗಳ ತಡೆಗೆ ವಿದ್ಯುತ್​ ಇಲಾಖೆ ಮಿಂಚಿನ ಕಾರ್ಯಾಚರಣೆ ನಡೆಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿ ನಂದಿಸಲು ಮೆಕ್ಯಾನಿಕಲ್ ಫೋಮ್, ನೀರಿನ ಮೂಲಕ, ಕಾರ್ಬನ್ ಡೈಯಾಕ್ಸೈಡ್ ಹಾಗೂ ಮರಳನ್ನು ಬಳಸಲಾಗುತ್ತದೆ. ವಿದ್ಯುತ್ ಕೇಂದ್ರಗಳಲ್ಲಿ ಆಕಸ್ಮಿಕ ಬೆಂಕಿ ನಂದಿಸಲು ಸಾಕಷ್ಟು ಸುರಕ್ಷತಾ ಕ್ರಮ ಅನಿವಾರ್ಯ.

ವಿದ್ಯುತ್​ ಕೇಂದ್ರಗಳಲ್ಲಿ ಸುರಕ್ಷತೆ

ಇನ್ನೂ ಕೆಲವೆಡೆಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಒಂದಾದ್ರೆ, ಮತ್ತೆ ಕೆಲವೆಡೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುತ್ತವೆ. ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ತುಮಕೂರು, ಹಾಸನ, ಶಿವಮೊಗ್ಗ ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಅಂತಹ ಯಾವುದೇ ಘಟನೆಗಳು ದಾಖಲಾಗಿಲ್ಲ. ಹಾಗಂತ ನಿರ್ಲಕ್ಷ್ಯವೂ ಬೇಡ. ಮುಂದೆಯೂ ಸಹ ಮತ್ತಷ್ಟು ಸುರಕ್ಷತೆಗೆ ಒತ್ತು ನೀಡಲು ತಜ್ಞರ ಪಡೆದರೆ ಉತ್ತಮ. ಉಪಕೇಂದ್ರಗಳನ್ನು ಮೇಲಧಿಕಾರಿಗಳು ಆಗಾಗ್ಗೆ ಪರಿಶೀಲನೆ ನಡೆಸಬೇಕು. ಹಾಗೆಯೇ ಸ್ಫೋಟಕ್ಕೆ ಗುರಿಯಾಗುವ ವಿದ್ಯುತ್ ಪರಿವರ್ತಕಗಳು ಉಪಕೇಂದ್ರಗಳಲ್ಲಿವೆಯೇ? ಟ್ರಾನ್ಸ್‌ಫಾರ್ಮರ್‌ಗಳನ್ನು ಅವಘಡಗಳಿಂದ ರಕ್ಷಿಸಲು ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಗಳಿವೆಯೇ? ಎಂಬುದರ ಕುರಿತು ಮಾಹಿತಿ ಪಡೆಯಬೇಕು.

ರಾಜ್ಯದ ಜನತೆಗೆ ವಿದ್ಯುತ್​ ಒದಗಿಸುವ ವಿದ್ಯುತ್​ ಕೇಂದ್ರಗಳಲ್ಲಿ ಸುರಕ್ಷತೆ ಎಂಬುದು ಅತಿ ಮುಖ್ಯ. ಆದರೆ, ಕೆಲವೆಡೆ ಸಿಬ್ಬಂದಿ ಕೊರತೆ, ಮುನ್ನೆಚ್ಚರಿಕಾ ಕ್ರಮಕೈಗೊಳ್ಳದ ಕಾರಣ ಘಟನೆಗಳು ಸಂಭವಿಸಿವೆ ಎನ್ನಲಾಗ್ತಿದೆ. ಆದರೆ, ಸದ್ಯದ ಮಟ್ಟಿಗೆ ದುರಂತಗಳು ನಡೆಯದಿದ್ದರೂ ಹದ್ದಿನ ಕಣ್ಣಿಟ್ಟಿರಬೇಕು. ಹಾಗೆಯೇ ಕೊರೊನಾ ದೃಷ್ಟಿಯಿಂದ ಸಿಬ್ಬಂದಿ ಸ್ಯಾನಿಟೈಸರ್​, ಮಾಸ್ಕ್​ ಬಳಕೆ ಕಡ್ಡಾಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.