ETV Bharat / city

ಆರೋಗ್ಯಾಧಿಕಾರಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌; ಮಂಜುನಾಥ್‌ ಹೇಳಿದ್ದೇನು? - ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್

ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ನಾಪತ್ತೆ ಪ್ರಕರಣದಲ್ಲಿ ಜಯರಾಜ್‌ ಮತ್ತವರ ಬೆಂಬಲಿಗರ ಪಾತ್ರ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಸಬಂಧ ಮಾಹಿತಿ ನೀಡಿರುವ ಆರೋಗ್ಯಾಧಿಕಾರಿ ಮಂಜುನಾಥ್‌, ನನ್ನ ಕಾರು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

Hosakote Taluk health officer missing case
ಆರೋಗ್ಯಾಧಿಕಾರಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌; ಮಂಜುನಾಥ್‌ ಹೇಳಿದ್ದೇನು?
author img

By

Published : Dec 19, 2020, 4:46 AM IST

ಹೊಸಕೋಟೆ(ಬೆ.ಗ್ರಾಮಾಂತರ ಜಿಲ್ಲೆ): ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಜುನಾಥ್‌, ನನ್ನ ಕಾರು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಮೆಡಿಷನ್ ವಿಚಾರಕ್ಕೆ ನನ್ನ ಕಚೇರಿಗೆ ಬಂದು ಜಯರಾಜ್ ಮತ್ತು ಬೆಂಬಲಿಗರು ಧಮ್ಕಿ ಹಾಕಿದ್ರು, ಪೊಲೀಸ್ ಠಾಣೆಗೆ ಬಂದ್ರೆ ರಾಜಿಮಾಡಿ ಕಳಿಸಿದ್ರು, ನಂತರ ಅಲ್ಲಿಂದ ಆಸ್ಪತ್ರೆಗೆ ಕಡೆ ಹೋಗುತ್ತಿದ್ದಾಗ ಕಾರನ್ನ ಅಡ್ಡಗಟ್ಟಿ ನನಗೆ ಜೀವ ಬೇದರಿಕೆ ಹಾಕಿದ್ರು, ಹೀಗಾಗಿ ನಾನು ಮಂಗಳವಾರ ಸಂಜೆ ಭಯದಿಂದ ಊರು ಬಿಟ್ಟು ಹೋದೆ. ಎಲ್ಲಿಗೆ ಹೋಗಬೇಕು ಏನು ಮಾಡಬೇಕು ಅನ್ನೂದು ಗೊತ್ತಾಗಲಿಲ್ಲ. ಹೀಗಾಗಿ ಕಾರಿನಲ್ಲಿ ಒಡಾಡಿಕೊಂಡು ನೀರು, ಎಳನೀರು ಕುಡಿದು ದಿನ ಕಳೆಯಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ.

ಆರೋಗ್ಯಾಧಿಕಾರಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌; ಮಂಜುನಾಥ್‌ ಹೇಳಿದ್ದೇನು?

ನಾನು ದೇವಸ್ಥಾನಕ್ಕೆ ಹೋಗಿರಲಿಲ್ಲ, ನಿನ್ನೆ ರಾತ್ರಿ ಹಾಸನದಲ್ಲಿ ರೂಮ್ ಮಾಡಿದ್ದೆ, ಆಗ ರಾತ್ರಿ ಟಿವಿ ನೋಡ್ತಿದ್ದಾಗ ಮಾಧ್ಯಮಗಳಲ್ಲಿ ನಮ್ಮ ಸಿಬ್ಬಂದಿ ಕಣ್ಣೀರು ಹಾಕಿದ್ದನ್ನ ಕಂಡೆ, ಮನಸ್ಸು ಬದಲಿಸಿಕೊಂಡು ಬೆಳಗ್ಗೆ ಎಸ್ಪಿಗೆ ಕರೆ ಮಾಡಿ ವಾಪಸ್ ಬಂದಿದ್ದೀನಿ. ನನಗೆ ತುಂಬಾ ಬೇಸರ ಆಗಿದೆ ಎಂದು ದುಃಖವನ್ನು ವ್ಯಕ್ತಪಡಿಸಿದರು

ನಕಲಿ ವೈದ್ಯನ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಕ್ಕೆ ನನಗೆ ಜಯರಾಜ್ ಮತ್ತು ಆತನ ಬೆಂಬಲಿಗರು ಬೆದರಿಕೆ ಹಾಕಿದ್ದರು. ಜಪ್ತಿ ಮಾಡಿದ ಔಷಧ ಹಿಂತಿರುಗಿಸುವಂತೆ ಧಮ್ಕಿ ಹಾಕಿದ್ದರು. ನನಗೆ ಜಯರಾಜ್ ಅವರ ಕಡೆಯಿಂದ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ ಅಂತ ಎಸ್ಪಿ ಯವರಿಗೆ ಮನವಿ ಮಾಡಿರುವ ಜೊತೆಗೆ ಜಯರಾಜ್ ಮತ್ತು ಆತನ ಬೆಂಬಲಿಗರ ವಿರುದ್ಧ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.