ಉಳ್ಳಾಲ: ಕೊಣಾಜೆ ಕೋಡಿಜಾಲ್ ಮನೆಗೆ ಕನ್ನ ಹಾಕಿರುವ ಕಳ್ಳರು, ಸುಮಾರು 700 ಗ್ರಾಂ ಚಿನ್ನಾಭರಣ ಮತ್ತು 5 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.
ಕೋಡಿಜಾಲ್ ನಿವಾಸಿ ಹಬೀಬ್ ಎಂಬುವವರ ಮನೆಗೆ ತಡರಾತ್ರಿ ನುಗ್ಗಿದ ಕಳ್ಳರು, ಮನೆಯ ಬೆಡ್ ರೂಂನಲ್ಲಿದ್ದ ಕಪಾಟಿನಿಂದ 700 ಗ್ರಾಂ ಚಿನ್ನಾಭರಣ ಮತ್ತು 5 ಲಕ್ಷ ನಗದು ಕಳವು ಮಾಡಿದ್ದಾರೆ. ಹಬೀಬ್ ಅಡಕೆ ವ್ಯಾಪಾರಿಯಾಗಿದ್ದು, ಅಡಕೆ ವ್ಯವಹಾರದ ಹಣವನ್ನು ನಿನ್ನೆ ಮನೆಗೆ ತಂದಿದ್ದರು. ಅಕ್ಕನ ಮಗಳ ಮದುವೆಯ ಹಿನ್ನೆಲೆಯಲ್ಲಿ ಬ್ಯಾಂಕ್ನ ಲಾಕರ್ನಲ್ಲಿಟ್ಟಿದ್ದ ಬಂಗಾರವನ್ನೂ ಮನೆಗೆ ತಂದಿದ್ದರು.
ಸ್ಥಳಕ್ಕೆ ಕೊಣಾಜೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕಳುವಾದ ಚಿನ್ನಾಭರಣಗಳ ಮೌಲ್ಯ 20 ಲಕ್ಷಕ್ಕೂ ಅಧಿಕ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಓದಿ: ಹುಬ್ಬಳ್ಳಿಯಲ್ಲಿ ಯುವತಿ ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ಮೇಲ್!