ETV Bharat / city

ಬೆಂಗಳೂರಿನ ಕಂಟೇನ್​​​​ಮೆಂಟ್​​ ಪ್ರದೇಶದಲ್ಲಿ ಮತ್ತಷ್ಟು ಬಿಗಿ ಕ್ರಮ: ಬಸವರಾಜ ಬೊಮ್ಮಾಯಿ

ಹೋಮ್​​​ ಕ್ವಾರಂಟೈನ್​​​​ನಲ್ಲಿರುವ ವ್ಯಕ್ತಿಗಳ ಮೇಲೆ ಮತ್ತಷ್ಟು ನಿಗಾ ವಹಿಸಲಾಗಿದೆ. ಹಾಗೆಯೇ ನಗರದ ಕಂಟೇನ್​ಮೆಂಟ್​ ಪ್ರದೇಶದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್​​ ಬೊಮ್ಮಾಯಿ ಅವರು ಬೇಕಾಬಿಟ್ಟಿ ಓಡಾಡುವವರಿಗೆ ಎಚ್ಚರ ನೀಡಿದ್ದಾರೆ.

Home Minister Basavaraja Bommai
ಗೃಹ ಸಚಿವ ಬಸವರಾಜ ಬೊಮ್ಮಾಯಿ
author img

By

Published : Jul 1, 2020, 1:53 PM IST

Updated : Jul 1, 2020, 3:56 PM IST

ಬೆಂಗಳೂರು: ನಗರದ ಎಲ್ಲಾ ಕಂಟೇನ್​​​​ಮೆಂಟ್​​ ಪ್ರದೇಶದಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದೇ ವಿಚಾರವಾಗಿ ಚರ್ಚಿಸಲು ಮತ್ತು ಸಮನ್ವಯತೆ ಸಾಧಿಸಲು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಈ ಸಭೆ ಕರೆದಿದ್ದೇವೆ. ಸಭೆಯ ಬಳಿಕ ಉಳಿದ ಮಾಹಿತಿ ನೀಡುತ್ತೇನೆ ಎಂದರು.

ಗೃಹ ಸಚಿವ ಬಸವರಾಜ್​​ ಬೊಮ್ಮಾಯಿ

ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಸಮರ್ಪಕವಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇವೆ. ಮಾಸ್ಕ್ ಧರಿಸದೆ ಓಡಾಡುವರ ವಿರುದ್ಧ ಕಠಿಣ ಕ್ರಮದ ಜೊತೆ ದಂಡ ವಿಧಿಸುವ ಕಾರ್ಯ ಮಾಡಲಿದ್ದೇವೆ. ಜೊತೆಗೆ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಸಚಿವರು ತಿಳಿಸಿದರು.

Last Updated : Jul 1, 2020, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.