ETV Bharat / city

ರಾಜ್ಯದಲ್ಲಿ ನಾಲ್ಕು ವರ್ಷದಲ್ಲಿ 27 ಲಾಕಪ್ ಡೆತ್ ನಡೆದಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ - ಆರಗ ಜ್ಞಾನೇಂದ್ರ

ಕಾಂಗ್ರೆಸ್ ಸದಸ್ಯ ಗೋವಿಂದರಾಜು ಅವರ ಲಾಕಪ್ ಡೆತ್ ಕುರಿತ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ನಾಲ್ಕು ವರ್ಷದಲ್ಲಿ 27 ಲಾಕಪ್‌ ಡೆತ್‌ಗಳು ಆಗಿವೆ ಎಂದು ಮಾಹಿತಿ ನೀಡಿದ್ದಾರೆ.

Home minister araga jnanendra talking in council session
ನಾಲ್ಕು ವರ್ಷದಲ್ಲಿ 27 ಲಾಕಪ್ ಡೆತ್ ನಡೆದಿದೆ; ಪರಿಷತ್‌ಗೆ ಆರಗ ಜ್ಞಾನೇಂದ್ರ ಮಾಹಿತಿ
author img

By

Published : Sep 16, 2021, 3:43 PM IST

Updated : Sep 16, 2021, 4:37 PM IST

ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ‌ 27 ಲಾಕಪ್ ಡೆತ್‌ಗಳು ಆಗಿವೆ. ಪೊಲೀಸರ ಹಿಂಸೆ, ದೌರ್ಜನ್ಯದಿಂದ ಸಾವು ಬಹಳ ಕಡಿಮೆ ಇದೆ. ಈ ಘಟನೆಗಳು ನಡೆದಾಗ ಪೊಲೀಸರನ್ನೇ ಬಂಧಿಸಿ ನಮ್ಮ ಸಿಒಡಿ ತಂಡದಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದ ರಾಜು, ಡ್ರಗ್ ಪೆಡ್ಲರ್ ಕಾಂಗೋ ಲಾಕಪ್ ಡೆತ್ ಆಗಿದೆ. ನಂತರ ಪ್ರಕರಣ ಏನಾಯಿತು ಎಂದು ಗೊತ್ತಿಲ್ಲ, ವೈದ್ಯರ ಮೇಲೂ ಹಲ್ಲೆ ನಡೆಸಿ ಕೆಳಗಿನ ಅಧಿಕಾರಿ ಎಸಿಪಿಯಿಂದ ತನಿಖೆ ಮಾಡಿಸುತ್ತಾರೆ, ಲಾಕಪ್‌ ಡೆತ್ ಆಗಿಲ್ಲ ಎಂದು ವರದಿ ಬರೆಸಿಕೊಂಡು ಬರುತ್ತಿದ್ದಾರೆ. ಕೆಲವರು ಮಾಡುವ ತಪ್ಪು ಇಡೀ ಇಲಾಖೆಗೆ ಕೆಟ್ಟ ಹೆಸರು ಬರಲಿದೆ. ವಿಜಯಪುರದಲ್ಲಿ ಎರಡು ಲಾಕಪ್ ಡೆತ್ ನಡೆದಿದೆ ಇದರ ಬಗ್ಗೆ ಮಾಹಿತಿ ಕೇಳಿದರು.

ನಾಲ್ಕು ವರ್ಷದಲ್ಲಿ 27 ಲಾಕಪ್ ಡೆತ್ ನಡೆದಿದೆ; ಪರಿಷತ್‌ಗೆ ಆರಗ ಜ್ಞಾನೇಂದ್ರ ಮಾಹಿತಿ

ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, 2018 ರಿಂದ ಈವರೆಗೆ ಒಟ್ಟು 27 ಲಾಕಪ್ ಡೆತ್‌ಗಳು ನಡೆದಿವೆ. 2018 ರಲ್ಲಿ 8, 2019 ರಲ್ಲಿ 3, 2020 ರಲ್ಲಿ 6 ಹಾಗೂ 2021 ರಲ್ಲಿ 10 ಡೆತ್‌ಗಳು ಆಗಿವೆ. ಲಾಕಪ್ ಡೆತ್ ಎಂದಾಕ್ಷಣ ಲಾಕಪ್‌ನಲ್ಲೇ ಸಾಯುವುದಲ್ಲ. ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಕರೆದೊಯ್ಯವವರೆಗೂ ನಡೆಯುವ ಡೆತ್‌ಗಳು ಲಾಕಪ್ ಡೆತ್‌ಗಳು, ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ ಅಪಘಾತವಾಗಿ ಸಾವು ಆಗಿರಲಿದೆ. ಬಹಿರ್ದೆಸೆಗೆ ಹೋಗಿ ಲುಂಗಿಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೆ ಎಂದು ವಿವರಿಸಿದರು.

ಈ ವೇಳೆ ಪ್ರತಿಪಕ್ಷ ನಾಯಕ ಎಸ್.ಆರ್‌.ಪಾಟೀಲ್ ಮಾತನಾಡಿ, ಬಹಿರ್ದೆಸೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಪೊಲೀಸರೇ ಕಾರಣ. ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್‌ನಿಂದ ಹೆದರಿ ಶೌಚಾಲಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಪೊಲೀಸರ ಅತಿಯಾದ ಚಿತ್ರಹಿಂಸೆಯೇ ಇದಕ್ಕೆ ಕಾರಣವಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆರಗ ಜ್ಞಾನೇಂದ್ರ, ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಜಿಲ್ಲಾ ಮಟ್ಟ ರಾಜ್ಯಮಟ್ಟದ ಸಮಿತಿ ರಚಿಸಿ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತದೆ, ಪೊಲೀಸರ ಹಿಂಸೆ ದೌರ್ಜನ್ಯದಿಂದ ಸಾವು ಬಹಳ ಕಡಿಮೆ ಇದೆ, ಪೊಲೀಸರನ್ನೇ ಬಂಧಿಸಿ ನಮ್ಮ ಸಿಒಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಶಶಿಕಲಾ ಜೊಲ್ಲೆಗೆ ಝೀರೋ ಟ್ರಾಫಿಕ್ ಮಾಡಿರಲಿಲ್ಲ:

ನೂತನ ಸಚಿವರಾಗಿ ಶಶಿಕಲಾ ಜೊಲ್ಲೆ ಪ್ರಮಾಣ ವಚನ ಸ್ವೀಕಾರ ಮಾಡಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಆಗಮಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿರಲಿಲ್ಲ, ಕೇವಲ ಸಿಗ್ನಲ್ ಫ್ರೀ ಮಾಡಿಕೊಡಲಾಗಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಶಾಸಕರಿಗೆ ಹಿಂದೆ ಮುಂದೆ ಸೆಕ್ಯುರಿಟಿ ಜೀಪ್ ಇಲ್ಲ, ಯಾವುದಾದರೂ ಇದ್ದರೂ ತಿಳಿಸಿ ತೆಗೆಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಝೀರೋ ಟ್ರಾಫಿಕ್ ಇಲ್ಲ, ಗಣ್ಯರ ಪ್ರೋಟೋಕಾಲ್ ಭದ್ರತೆ ಕಾರಣದಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಾ‌ನು ಮತ್ತು ಸಿಎಂ ಝೀರೋ ಟ್ರಾಫಿಕ್ ಪಡೆದಿಲ್ಲ, ಪೊಲೀಸರಿಗೆ ಸಂಚಾರ ನಿರ್ವಹಣೆ ಎಲ್ಲ ಗೊತ್ತು. ಗಣ್ಯರನ್ನು ಸಿಗ್ನಲ್ ಫ್ರೀ ಮಾಡಿ ಕರೆದುಕೊಂಡು ಬರಲಾಗುತ್ತದೆ ಇದಕ್ಕೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ ಎಂದರು.

ಶಶಿಕಲಾ ಜೊಲ್ಲೆ ಅವರಿಗೆ ರಾಜಭವನದ ಕರೆ ಬಂದಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿ ಏನಾದರೂ ಮಾಡಬಹುದಾ ಎನ್ನುವುದು ಕೇಳಿದ್ದಾರೆ. ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಲ್ಲ, ಆದರೆ ಸಿಗ್ನಲ್ ಫ್ರೀ ಮಾಡಿ ಕರೆದುಕೊಂಡು ಬರಲಾಗಿದೆ. ನಾನು ಮಾಹಿತಿ ಪಡೆದಿದ್ದೇನೆ. ಈ ಪ್ರಕರಣ ಕೋರ್ಟ್‌ನಲ್ಲಿದೆ. ಹಾಗಾಗಿ ಹೆಚ್ಚಿನ ಚರ್ಚೆ ಬೇಡ. ತೀರ್ಪು ಬಂದ ನಂತರ ಪ್ರಸ್ತಾಪಿಸುತ್ತೇನೆ ಎಂದರು.

ಸದನದಲ್ಲಿ 'ದ್ರೋಹ'ದ ಜಟಾಪಟಿ:

ಈ ವೇಳೆ ಉಪ ಪ್ರಶ್ನೆ ಕೇಳಿದ ನಾರಾಯಣಸ್ವಾಮಿ, ನಮ್ಮ ಪಕ್ಷಕ್ಕೆ ದ್ರೋಹವೆಸಗಿ ಕೆಲ ಶಾಸಕರು ರಾಜೀನಾಮೆ ನೀಡಿ ಹೋದಾಗಲೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು ಎನ್ನುತ್ತಿದ್ದಂತೆ ಕಾನೂನು ಸಚಿವ ಮಾಧುಸ್ವಾಮಿ ಕಿಡಿಕಾರಿದರು. ದ್ರೋಹ ಮಾಡಿ, ವಿಷ ಹಾಕಿ ಹೀಗೆಲ್ಲಾ ಮಾತನಾಡಬಾರದು, ಯಾರೇನು ಬರೆದುಕೊಟ್ಟಿರಲ್ಲ ಎಂದರು. ನಿಮ್ಮ ಪಕ್ಷದಲ್ಲೂ ಬೇಕಾದಷ್ಟು ಜನ ದ್ರೋಹ ಮಾಡಿದ್ದಾರೆ ಬಿಡಿ ಎಂದು ಕಾಲೆಳೆದರು.

ಬಿಜೆಪಿ ಸದಸ್ಯರು ಸಚಿವರ ನೆರವಿಗೆ ಧಾವಿಸಿ, ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ದ್ರೋಹ ಪದವನ್ನು ಕಡತದಿಂದ ತೆಗೆಯುಂತೆ ಆಗ್ರಹಿಸಿದರು. ಸದನ ಗದ್ದಲದ ಗೂಡಾಗುತ್ತಿದ್ದಂತೆ ಮುಂದಿನ ಕಲಾಪ ಕೈಗೆತ್ತಿಕೊಂಡು ಸಭಾಪತಿಗಳು, ಪರಿಸ್ಥಿತಿ ತಿಳಿಸಿಕೊಳಿಸಿ ಸದನವನ್ನು ಸಹಜ ಸ್ಥಿತಿಗೆ ತಂದರು.

Last Updated : Sep 16, 2021, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.