ETV Bharat / city

ಐಟಿ ದಾಳಿ: ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ- ಗೃಹ ಸಚಿವ ಆರಗ ಜ್ಞಾನೇಂದ್ರ

ಐಟಿ ದಾಳಿ ಬಗ್ಗೆ ಸ್ವಾಗತ, ತಿರಸ್ಕಾರ ಏನೂ ಇಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Araga Jnanendra
ಆರಗ ಜ್ಞಾನೇಂದ್ರ
author img

By

Published : Oct 7, 2021, 1:41 PM IST

ಬೆಂಗಳೂರು: ಐಟಿ ದಾಳಿ ವಿಚಾರವನ್ನು ನಾನು ಮಾಧ್ಯಮದಲ್ಲಿ ನೋಡಿದೆ. ಕಾನೂನು ಕ್ರಮ ಏನು ಆಗಬೇಕೋ ಅದು ಆಗುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ವಿಕಾಸಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಐಟಿ ದಾಳಿ ಎಲ್ಲರ ಮೇಲೂ ಆಗುತ್ತದೆ. ನಾನು ಪ್ರತಿಕ್ರಿಯೆ ಕೊಟ್ಟು ಮಾಡೋದೇನು?. ಈ ಬಗ್ಗೆ ಸ್ವಾಗತ, ತಿರಸ್ಕಾರ ಏನೂ ಇಲ್ಲ. ಇದು ಅಧಿಕಾರಿಗಳಿಗೆ ಸಂಬಂಧಪಟ್ಟದ್ದು, ತಮ್ಮ ಕೆಲಸ ಮಾಡಿದ್ದಾರೆ' ಎಂದು ಹೇಳಿದರು.

'ಆರ್​​ಎಸ್​​ಎಸ್ ಬಗ್ಗೆ ಹೆಚ್​​ಡಿಕೆ ಅವರಿಗೆ ಏನೂ ಗೊತ್ತಿಲ್ಲ'

ಆರ್​​ಎಸ್​​ಎಸ್ ವಿರುದ್ಧ ಹೆಚ್​​.ಡಿ ಕುಮಾರಸ್ವಾಮಿ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, 'ಆರ್​​ಎಸ್​​ಎಸ್ ಬಗ್ಗೆ ಲವಶೇಷವೂ ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಮಾತನಾಡಿದರೆ ಆರ್​​ಎಸ್​​ಎಸ್‌ಗೆ ಏನೂ ಆಗಲ್ಲ. ಅವರು ರಾಜಕಾರಣಕ್ಕೆಂದು ಮಾತನಾಡುವುದು ಬೇಡ. ಆರ್​​ಎಸ್​​ಎಸ್ ಬಗ್ಗೆ ಎಲ್ಲರಿಗೂ‌ ಗೊತ್ತಿದೆ' ಎಂದು ತಿರುಗೇಟು ನೀಡಿದರು.

ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಬಗ್ಗೆ ಆರ್​​ಎಸ್​​ಎಸ್ ಖಂಡನೆ ಮಾಡದ ಕುರಿತು ಕೇಳಿದ ಪ್ರಶ್ನೆಗೆ, 'ಆರ್​​ಎಸ್​​ಎಸ್ ಕೆಲಸವೇ ಬೇರೆ. ಅನಗತ್ಯವಾಗಿ ಸಂಘಟನೆಯನ್ನು ಎಳೆದು ತರುವುದು ಸರಿಯಲ್ಲ' ಎಂದರು.

ಇದನ್ನೂ ಓದಿ: ಐಟಿ ದಾಳಿ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.