ETV Bharat / city

ರಾಜ್ಯದಲ್ಲಿ ಇಂದು ಅತ್ಯಧಿಕ ಕೋವಿಡ್ ಕೇಸ್​: ಕೇವಲ 6 ದಿನದಲ್ಲಿ ಬಂದಿದ್ದು ಬರೋಬ್ಬರಿ 100 ಪಾಸಿಟಿವ್ - 6 ದಿನದಲ್ಲಿ ಬರೋಬ್ಬರಿ 100 ಪಾಸಿಟಿವ್ ವರದಿ

ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇವಲ 39 ದಿನಗಳಲ್ಲಿ 313 ಕ್ಕೆ ಏರಿಕೆ ಆಗಿದೆ. ಆದರಲ್ಲೂ ಕೊನೆಯ 100 ಪ್ರಕರಣ ದೃಢವಾಗಿದ್ದು ಕೇವಲ 6 ದಿನದಲ್ಲಿ ಅನ್ನೋದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕೋವಿಡ್ ಕೇಸ್
ಕೋವಿಡ್ ಕೇಸ್
author img

By

Published : Apr 16, 2020, 5:47 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 34 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ರಾಜ್ಯದಲ್ಲಿ ದಿನವೊಂದರಲ್ಲಿ ದೃಢಪಟ್ಟ ಅತ್ಯಧಿಕ ಸಂಖ್ಯೆ ಇದಾಗಿದೆ.

ಮಾರ್ಚ್ 8 ರಂದು ರಾಜ್ಯದಲ್ಲಿ ಮೊದಲ ಕೊರೊನಾ ಕಾಣಿಸಿಕೊಂಡಿದ್ದು, ಕೇವಲ 39 ದಿನದಲ್ಲಿ 300 ರ ಗಡಿ ದಾಟಿದೆ. ಕೊನೆಯ 100 ಪ್ರಕರಣ ದೃಢವಾಗಿದ್ದು ಕೇವಲ 6 ದಿನದಲ್ಲಿ ಅನ್ನೋದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಾರ್ಚ್ 15 ರಂದು 19 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದವು. ಆದರೆ ಇಂದಿನ ಪಾಸಿಟಿವ್ ಪ್ರಮಾಣ ಈವರೆಗಿನ ಗರಿಷ್ಠ ಸಂಖ್ಯೆಯ ಎರಡರಷ್ಟಾಗುವಂತಿದೆ. ಬರೋಬ್ಬರಿ 34 ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಮಾರ್ಚ್ 8 ರಂದು ರಾಜ್ಯದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದರೆ ಮಾರ್ಚ್​ 25ರಂದು 50 ನೇ ಪ್ರಕರಣ ದೃಢಪಟ್ಟಿತ್ತು. ಮಾರ್ಚ್ 31 ರಂದು 100 ನೇ ಪ್ರಕರಣ ಪತ್ತೆಯಾಗಿತ್ತು. ಏಪ್ರಿಲ್ 7 ರಂದು 150 ನೇ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಏಪ್ರಿಲ್ 10 ರಂದು 200 ನೇ ಪಾಸಿಟಿವ್ ಪ್ರಕರಣ ಪತ್ತೆಯಾಯಿತು.

ಇನ್ನು ಏಪ್ರಿಲ್​ 14 ರಂದು 250 ನೇ ಪ್ರಕರಣ ಪತ್ತೆಯಾಗಿದ್ದು ಕೇವಲ ಎರಡು ದಿನದ ಅಂತರದಲ್ಲೇ 300 ಪ್ರಕರಣ ದೃಢಪಟ್ಟಿದೆ. ಮೊದಲ 50 ಕೋವಿಡ್-19 ದೃಢವಾಗಲು 17 ದಿನ ಸಮಯವಾಯಿತು. ಅಲ್ಲಿಂದ ಕೇವಲ 6 ದಿನಗಳಲ್ಲಿ ಆ ಸಂಖ್ಯೆ ದ್ವಿಗುಣವಾಗಿ ಮಾರ್ಚ್ 31 ರಂದು100 ರ ಗಡಿ ತಲುಪಿತು. ನಂತರದ 5 ದಿನಗಳಲ್ಲಿ ಹೊಸದಾಗಿ 50 ಪ್ರಕರಣ ಸೇರ್ಪಡೆಯಾಗಿ ಕೊರೊನಾ ಸೋಂಕಿತರ ಸಂಖ್ಯೆ ಏಪ್ರಿಲ್​ 5 ಕ್ಕೆ150 ದಾಡಿತು. ಮುಂದಿನ 5 ದಿನದಲ್ಲಿ ಮತ್ತೆ 50 ಪ್ರಕರಣ ದೃಢವಾಗುವ ಮೂಲಕ ಏಪ್ರಿಲ್ 10 ರಂದು ಸೋಂಕಿತರ ಸಂಖ್ಯೆ 200 ದಾಟಿತು.

ನಂತರದ ಕೇವಲ 4 ದಿನದಲ್ಲಿ 50 ಪ್ರಕರಣ ದೃಢವಾಗಿ ಏಪ್ರಿಲ್​ 14 ರಂದು 250 ರ ಗಡಿ ದಾಟಿದ್ದು, ನಂತರದ ಕೇವಲ 2 ದಿನದಲ್ಲಿ 50 ಪ್ರಕರಣ ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 300ರ ಗಡಿ ದಾಟಿತು. ಮೊದಲ 100 ಪ್ರಕರಣ ದೃಢವಾಗಲು 23 ದಿನ, ನಂತರದ 100 ಪ್ರಕರಣ ದೃಢವಾಗಲು ತೆಗೆದುಕೊಂಡ ಸಮಯ ಕೇವಲ 10 ದಿನ ಮಾತ್ರ. ಕೊನೆಯ 100 ಪ್ರಕರಣ ದಾಖಲಾಗಲು ತೆಗೆದುಕೊಂಡಿದ್ದು ಕೇವಲ 6 ದಿನ ಮಾತ್ರ. ಏಪ್ರಿಲ್ ತಿಂಗಳಿನಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಕರಣದಲ್ಲಿ ಹೆಚ್ಚಳ ಕಂಡುಬಂದಿದ್ದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ನಿಜಾಮುದ್ದೀನ್ ತಬ್ಲಿಘಿಗಳ ಧಾರ್ಮಿಕ ಸಭೆ ಹಾಗು ನಂಜನಗೂಡಿನ ಜ್ಯುಬಿಲಿಯಂಟ್​ ಕಾರ್ಖಾನೆಯ ಸಿಬ್ಬಂದಿಗೆ ಕೋವಿಡ್ ದೃಢವಾದ ಪ್ರಕರಣ ರಾಜ್ಯದಲ್ಲಿ ತೀವ್ರವಾಗಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಸೋಂಕಿನ ಪ್ರಕರಣದ ವಿವರ:

ಮಾರ್ಚ್ 8 ರಂದು -1 ಪ್ರಕರಣ

ಮಾರ್ಚ್ 10 ರಂದು -3

ಮಾರ್ಚ್ 11 ರಂದು -1

ಮಾರ್ಚ್ 16 ರಂದು -1

ಮಾರ್ಚ್ 17 ರಂದು -1

ಮಾರ್ಚ್ 18 ರಂದು -3

ಮಾರ್ಚ್ 19 ರಂದು -1

ಮಾರ್ಚ್ 21 ರಂದು -5

ಮಾರ್ಚ್ 22 ರಂದು -6

ಮಾರ್ಚ್ 23 ರಂದು -7

ಮಾರ್ಚ್ 24 ರಂದು -8

ಮಾರ್ಚ್ 25 ರಂದು -10

ಮಾರ್ಚ್ 26 ರಂದು -4

ಮಾರ್ಚ್ 27 ರಂದು -9

ಮಾರ್ಚ್ 28 ರಂದು -12

ಮಾರ್ಚ್ 29 ರಂದು -7

ಮಾರ್ಚ್ 30 ರಂದು -5

ಮಾರ್ಚ್ 31 ರಂದು -13

ಏಪ್ರಿಲ್ 1 ರಂದು -9

ಏಪ್ರಿಲ್ 2 ರಂದು -14

ಏಪ್ರಿಲ್ 3 ರಂದು -4

ಏಪ್ರಿಲ್ 4 ರಂದು -16

ಏಪ್ರಿಲ್ 5 ರಂದು -7

ಏಪ್ರಿಲ್ 6 ರಂದು -12

ಏಪ್ರಿಲ್ 7 ರಂದು -12

ಏಪ್ರಿಲ್ 8 ರಂದು -6

ಏಪ್ರಿಲ್ 9 ರಂದು -16

ಏಪ್ರಿಲ್ 10 ರಂದು -10

ಏಪ್ರಿಲ್ 11 ರಂದು -8

ಏಪ್ರಿಲ್ 12 ರಂದು -17

ಏಪ್ರಿಲ್ 13 ರಂದು -15

ಏಪ್ರಿಲ್ 14 ರಂದು -13

ಏಪ್ರಿಲ್ 15 ರಂದು -19

ಏಪ್ರಿಲ್ 16 ರಂದು -34 ಪ್ರಕರಣ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.