ETV Bharat / city

ಕಾಮನ್​ವೆಲ್ತ್ ಗೇಮ್ಸ್​: ಮಹಿಳಾ ಟೇಬಲ್ ಟೆನಿಸ್ ಆಯ್ಕೆ ಪಟ್ಟಿ ಪ್ರಶ್ನಿಸಿದ್ದ ಅರ್ಚನಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - ಕಾಮನ್‌ವೆಲ್ತ್ ಗೇಮ್ಸ್

ಕಾಮನ್​ವೆಲ್ತ್ ಗೇಮ್ಸ್​ನ ಮಹಿಳಾ ಟೇಬಲ್ ಟೆನಿಸ್ ಆಯ್ಕೆ ಪಟ್ಟಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಚನಾ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

archana kamath petition rejects over Commonwealth Games, tennis player archana kamath petition rejects, Commonwealth Games, Commonwealth Games news, ಅರ್ಚನಾ ಕಾಮತ್ ಕಾಮನ್‌ವೆಲ್ತ್ ಗೇಮ್ಸ್​ ಅರ್ಜಿ ವಜಾಗೊಳಿಸಿದ ಹೈಕೋರ್ಟ್​, ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್ ಅರ್ಜಿ ವಜಾ, ಕಾಮನ್‌ವೆಲ್ತ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸುದ್ದಿ,
ಮಹಿಳಾ ಟೇಬಲ್ ಟೆನಿಸ್ ಆಯ್ಕೆ ಪಟ್ಟಿ ಪ್ರಶ್ನಿಸಿದ್ದ ಅರ್ಚನಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್
author img

By

Published : Jun 23, 2022, 8:47 AM IST

ಬೆಂಗಳೂರು : ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಹಿಳಾ ಟೇಬಲ್ ಟೆನಿಸ್ ತಂಡದ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಬೆಂಗಳೂರಿನ ಪ್ರಸಿದ್ದ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್‌ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಮಹಿಳಾ ಟೇಬಲ್ ಟೆನಿಸ್ ತಂಡದ ಆಯ್ಕೆದಾರರ ಹೆಸರಿನ ಪಟ್ಟಿ ನೀಡುವುದಕ್ಕೆ ಇದ್ದ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾದಂತಾಗಿದೆ.

ಕಳೆದ 16 ರಂದು ಅರ್ಚನಾ ಕಾಮತ್ ಅವರ ಅರ್ಜಿ ವಿಚಾರಣೆ ನಡೆಸುವ ವೇಳೆ ಹೈಕೋರ್ಟ್ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾಕ್ಕೆ (ಟಿಟಿಎಫ್ಐ) ಮಹಿಳಾ ತಂಡದ ಆಟಗಾರರ ಹೆಸರನ್ನು ಕಾಮನ್​ವೆಲ್ತ್ ಕ್ರೀಡಾಕೂಟಕ್ಕೆ ಸಲ್ಲಿಸದಂತೆ ಮಧ್ಯಂತರ ಆದೇಶದಲ್ಲಿ ತಿಳಿಸಿತ್ತು. ಹೈಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್‌ ದಿನೇಶ್‌ ಕುಮಾರ್‌ ಮತ್ತು ಸಿ.ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ಬುಧವಾರ ನಡೆಸಿದ ವಿಚಾರಣೆ ವೇಳೆ ಟಿಟಿಎಫ್ಐ ವಕೀಲರು ಮಂಡಿಸಿದ ವಾದವನ್ನು ಪರಿಗಣಿಸಿ ಅರ್ಚನಾ ಕಾಮತ್ ಅವರ ಅರ್ಜಿ ವಿಚಾರಣೆಗೆ ಅರ್ಹವಾದುದಲ್ಲ ಎಂದು ಪರಿಗಣಿಸಿ ವಜಾ ಮಾಡಿದೆ.

ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು ಟಿಟಿಎಫ್‌ಐ ಪರ ವಾದಿಸಿ, ದೆಹಲಿ ಹೈಕೋರ್ಟ್‌ ಆಡಳಿತಗಾರರ ಸಮಿತಿ ನೇಮಕ ಮಾಡಿದೆ. ಕಳೆದ ಫೆಬ್ರವರಿಯಲ್ಲಿ ಈ ಸಮಿತಿ ಅಧಿಕಾರ ವಹಿಸಿಕೊಂಡಿದೆ. ಕಾಮನ್‌ವೆಲ್ತ್‌ ಗೇಮ್ಸ್‌ಗೆ ಮೊದಲಿನ ಆಯ್ಕೆ ಪ್ರಕ್ರಿಯೆ ಬದಲಿಸಬಾರದು ಎಂದು ಕೆಲವು ಪೋಷಕರು ಮನವಿ ಮಾಡಿದ್ದರಿಂದ ಆಯ್ಕೆ ಪ್ರಕ್ರಿಯೆ ಬದಲಾವಣೆ ವಿಚಾರವನ್ನು 2022ರ ಅಕ್ಟೋಬರ್‌ಗೆ ಮುಂದೂಡಲಾಗಿದ್ದನ್ನು ಹೈಕೋರ್ಟ್ ಗಮನಕ್ಕೆ ತಂದರು.

ಓದಿ: ಕಾಮನ್​ವೆಲ್ತ್ ಗೇಮ್ಸ್​ಗೆ ಮಹಿಳಾ ಟೇಬಲ್ ಟೆನಿಸ್​ ಆಟಗಾರರ ಹೆಸರು ಕಳಿಸದಂತೆ ಟಿಟಿಎಫ್​ಗೆ ಹೈಕೋರ್ಟ್ ಆದೇಶ ..!

ಆಯ್ಕೆ ಸಮಿತಿಯು ಅರ್ಚನಾ ಕಾಮತ್ ಹೆಸರನ್ನು ಉಲ್ಲೇಖಿಸಿದ್ದು ನಿಜ. ನಂತರ ಇದನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕರಿಗೆ ವರ್ಗಾಯಿಸಲಾಯಿತು. ಕ್ರೀಡಾ ಪ್ರಾಧಿಕಾರವು ಆಯ್ಕೆ ಮಾಡದಿರುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಚನಾ ಅವರ ಹೆಸರು ಬರಲಿಲ್ಲ. ಶಿಲ್ಲೋಂಗ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅರ್ಚನಾ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ, ಅವರ ಹೆಸರನ್ನು ಪರಿಗಣಿಸಲಾಗಿಲ್ಲ.

ಹಿಂದೆ ಆಡಿದ್ದ ಪಂದ್ಯ ಮತ್ತು ಕ್ರೀಡಾಕೂಟಗಳಲ್ಲಿ ಆಟಗಾರ್ತಿಯರಾದ ಶ್ರೀಜಾ ಅಕುಲಾ, ರೀತ್‌ ರಿಷ್ಯಾ ಟೆನ್ನಿಸನ್‌, ಮನಿಕಾ ಬಾತ್ರ, ದಿವ್ಯಾ ಪರಾಗ್‌ ಚಿತಾಲೆ ಮತ್ತು ಸ್ವಸ್ತಿಕಾ ಘೋಷ್‌ ಅವರು ಅರ್ಚನಾಗಿಂತ ಉತ್ತಮ ಶ್ರೇಯಾಂಕ ಪಡೆದಿದ್ದರು. ದೇಶೀಯ ಟೂರ್ನಿಯಲ್ಲಿ ಮನಿಕಾ ಬಾತ್ರ ಅವರು 33ನೇ ಶ್ರೇಯಾಂಕ ಹೊಂದಿದ್ದು, ಅರ್ಚನಾ ಅವರು 37ನೇ ಶ್ರೇಯಾಂಕಿತರಾಗಿದ್ದರು ಎಂದು ಅರ್ಚನಾ ಕಾಮತ್ ಹೆಸರು ಕೈಬಿಟ್ಟಿದ್ದಕ್ಕೆ ಸಮರ್ಥನೆ ನೀಡಿದರು.

ಆಟಗಾರ್ತಿ ಪರ ವಕೀಲರ ವಾದವೇನು?: ಮಾಜಿ ಅಡ್ವೊಕೇಟ್ ಜನರಲ್ ಆದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ಅರ್ಜಿದಾರರಾದ ಅರ್ಚನಾ ಕಾಮತ್ ಪರ ವಾದಿಸಿ, ಮಹಿಳಾ ಡಬಲ್ಸ್‌ ವಿಭಾಗದಲ್ಲಿ ವಿಶ್ವದಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದರೂ ಅರ್ಚನಾರನ್ನು ಭಾರತ ತಂಡದಿಂದ ಕೈಬಿಟ್ಟಿರುವುದು ಸಮಂಜಸವಲ್ಲ. ಇದು ಅನ್ಯಾಯ ಹಾಗೂ ಅಸಮರ್ಥನೀಯ ಎಂದು ನ್ಯಾಯಾಲಯದ ಗಮನ ಸೆಳೆದರು.

ಪ್ರಾರಂಭದಲ್ಲಿ ಅರ್ಚನಾ ಹೆಸರನ್ನು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅಷ್ಟೇ ಅಲ್ಲ ಆಯ್ಕೆ ಸಮಿತಿಯು ಭಾರತವನ್ನು ಪ್ರತಿನಿಧಿಸುವ ಆಟಗಾರ್ತಿ ಎಂದೂ ಸಹ ಶಾರ್ಟ್ ಲಿಸ್ಟ್​ನಲ್ಲಿ ಖಾತರಿ ಪಡಿಸಿತ್ತು. ನಂತರ ತಾಂತ್ರಿಕ ಕಾರಣಗಳನ್ನು ನೀಡಿ ಟಿಟಿಎಫ್‌ಐ ತಮ್ಮ ಹೆಸರನ್ನು ತೆಗೆದು ಹಾಕಿ, ದಿವ್ಯಾ ಪರಾಗ್‌ ಚಿತಾಲೆ ಅವರ ಹೆಸರನ್ನು ಸೇರ್ಪಡೆ ಮಾಡಿದೆ. ಅರ್ಚನಾ ಮತ್ತು ಮನಿಕಾ ಬಾತ್ರಾ ಜೋಡಿಯು ಡಬಲ್ಸ್‌ ವಿಭಾಗದಲ್ಲಿ ದೇಶಕ್ಕೆ ಪದಕ ತಂದು ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಮೊದಲು ಟಿಟಿಎಫ್‌ಐ ಉಲ್ಲೇಖಿಸಿತ್ತು.

ಆದರೆ, ಅಪ್ರಸ್ತುತ ಮತ್ತು ತರ್ಕಹೀನವಾದ ಮಾನದಂಡಗಳ ಅನ್ವಯ ತಮ್ಮ ಹೆಸರನ್ನು ಕೈಬಿಡಲಾಗಿದೆ. ತಮ್ಮನ್ನು ತಂಡದಿಂದ ಕೈಬಿಟ್ಟಿರುವುದು ಹತಾಶೆಗೊಳ್ಳುವಂತೆ ಮಾಡಿದೆ ಎಂದು ಉದಯ ಹೊಳ್ಳ ತಮ್ಮ ವಾದದಲ್ಲಿ ತಿಳಿಸಿದರು. ಎರಡೂ ಕಡೆಯ ವಾದ - ಪ್ರತಿವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಅಂತಿಮವಾಗಿ ಅರ್ಚನಾ ಕಾಮತ್ ಅವರ ಅರ್ಜಿಯನ್ನು ತಿರಸ್ಕರಿಸಿ ತಿರ್ಪು ನೀಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.