ETV Bharat / city

ಪತಿ ವಿರುದ್ಧ ಪತ್ನಿ ಕೀಳು ಆರೋಪ: ಮಗುವಿಗಾಗಿ ತಾಯಿಗೆ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್ - ಮಾನನಷ್ಟ ಮೊಕ್ಕದ್ದಮೆ

ಮಗುವನ್ನು ಆರೈಕೆ ಮಾಡುವ ಸಲುವಾಗಿ ತಾಯಿಗೆ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್​​, ದಂಡದ ಮೊತ್ತವನ್ನು 5 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಿ ಆದೇಶಿಸಿದೆ.

High court
ಹೈಕೋರ್ಟ್​
author img

By

Published : Oct 12, 2020, 7:32 PM IST

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನಿಂದ ದೂರವಾಗಿರುವ ಪತ್ನಿಯೊಂದಿಗೆ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗೆ ಕೋರಿ ಅರ್ಜಿ ಸಲ್ಲಿಸಿದ್ದ ಪತಿಯ ವಿರುದ್ಧ ಕೀಳು ಮಟ್ಟದ ಆರೋಪ ಮಾಡಿದ್ದ ಪತ್ನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಯನ್ನು ಮಗಳ ಹಿತಾಸಕ್ತಿ ಹಿನ್ನೆಲೆಯಲ್ಲಿ ಹೈಕೋರ್ಟ್ ರದ್ದುಪಡಿಸಿ ಮಹತ್ವದ ಆದೇಶ ನೀಡಿದೆ.

ಮಗಳು ಅಪ್ರಾಪ್ತಳಾಗಿದ್ದು, ಆಕೆಯ ಆರೈಕೆಯನ್ನು ತಾಯಿಯೇ ನಿರ್ವಹಿಸುತ್ತಿರುವುದರಿಂದ ಜೈಲು ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಜೈಲು ಶಿಕ್ಷೆಯ ಬದಲು ದಂಡದ ಮೊತ್ತವನ್ನು ಹೆಚ್ಚಿಸಿದೆ. ಪತಿ-ಪತ್ನಿ ಕಲಹದಲ್ಲಿ ಮಗಳು ಸಂಕಷ್ಟ ಅನುಭವಿಸಬಾರದು ಎಂಬ ಮಾನವೀಯ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶ ಮಾಡಿದೆ. ಇದರಿಂದಾಗಿ ಒಂದು ತಿಂಗಳು ಜೈಲು ಶಿಕ್ಷೆಗೆ ಒಳಗಾಗಿದ್ದ ಪತ್ನಿ ಶಿಕ್ಷೆಯಿಂದ ಪಾರಾಗಿದ್ದಾಳೆ.

ಪ್ರಕರಣದ ಹಿನ್ನೆಲೆ: ಕೌಟುಂಬಿಕ ಕಲಹ ಹಿನ್ನೆಲೆಯೆಲ್ಲಿ ಪತಿ-ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವೈವಾಹಿಕ ಹಕ್ಕುಗಳ ಮರುಸ್ಥಾಪನೆ ಕೋರಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಪತಿ ಮದ್ಯಪಾನ ಮಾಡಿ ಬಂದು ಹಲ್ಲೆ ಮಾಡುತ್ತಾರೆ. ನಗ್ನ ನೃತ್ಯ ಮಾಡುವಂತೆ ಒತ್ತಾಯಿಸುತ್ತಾರೆ. ಅಲ್ಲದೇ, ಸ್ನೇಹಿತರೊಂದಿಗೆ ಸಹಕರಿಸುವಂತೆ ಒತ್ತಾಯಿಸುತ್ತಾರೆ ಎಂದು ಆರೋಪ ಮಾಡಿದ್ದರು.

ಈ ಆರೋಪಗಳಿಂದ ತನ್ನ ಮಾನಹಾನಿಯಾಗಿದೆ ಎಂದು ಪತಿ, ಪತ್ನಿಯ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ಹೂಡಿದ್ದರು. ಪತ್ನಿ ತಾನು ಮಾಡಿದ್ದ ಆರೋಪಗಳನ್ನು ಸಾಬೀತು ಮಾಡುವಲ್ಲಿ ವಿಫಲವಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪತ್ನಿಯನ್ನು ದೋಷಿ ಎಂದು ಪರಿಗಣಿಸಿ, ಒಂದು ತಿಂಗಳು ಜೈಲು ಮತ್ತು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು.

ಬಳಿಕ ಪತ್ನಿ ಜೈಲು ಶಿಕ್ಷೆ ರದ್ದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್, ಪತ್ನಿ ದೋಷಿ ಎಂಬುದನ್ನು ಒಪ್ಪಬಹುದಾದರೂ, ಆಕೆಯ ಅಪ್ರಾಪ್ತ ಮಗಳನ್ನು ತಾಯಿಯೇ ಪೋಷಿಸಬೇಕಾಗಿದೆ. ಅಪ್ರಾಪ್ತ ಬಾಲಕಿ ದೂರುದಾರನಿಗೂ ಮಗಳು. ಹೀಗಾಗಿ, ಒಂದು ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ. ಹಾಗೆಯೇ, ದಂಡದ ಮೊತ್ತವನ್ನು 5 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಿ ಆದೇಶಿಸಿದೆ. ದಂಡ ಪಾವತಿಸದಿದ್ದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೂಡ ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.