ETV Bharat / city

ವಿದ್ಯುತ್ ಉತ್ಪಾದಕರ ಬಾಕಿ ಬಿಲ್ ಪಾವತಿಸಲು ಎಸ್ಕಾಂಗಳಿಗೆ ಹೈಕೋರ್ಟ್ ಸೂಚನೆ - ವಿದ್ಯುತ್ ಉತ್ಪಾದಕರ ಬಾಕಿ ಬಿಲ್

ವಿದ್ಯುತ್ ಉತ್ಪಾದಕರಿಗೆ ಒಪ್ಪಂದದ ಅನುಸಾರ ಬಿಲ್​ಗಳನ್ನು ಯಾವುದೇ ವಿಳಂಬ ಮಾಡದೇ ಪಾವತಿಸಬೇಕು. ಈ ನಿಟ್ಟಿನಲ್ಲಿ ಎಸ್ಕಾಂಗಳು ಹಾಗೂ ರಾಜ್ಯ ಸರ್ಕಾರ ತಮ್ಮ ಬಾಧ್ಯತೆಗಳನ್ನು ಪೂರೈಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಎಸ್ಕಾಂಗಳಿಗೆ ಹೈಕೋರ್ಟ್ ಆದೇಶ,High court orders escoms to pay pending electricity bill
ಎಸ್ಕಾಂಗಳಿಗೆ ಹೈಕೋರ್ಟ್ ಆದೇಶ
author img

By

Published : Dec 11, 2021, 7:33 PM IST

ಬೆಂಗಳೂರು: ವಿದ್ಯುತ್ ಉತ್ಪಾದಕರ ಬಾಕಿ ಬಿಲ್ ಪಾವತಿಸುವಂತೆ ರಾಜ್ಯ ಸರ್ಕಾರ ಹಾಗೂ ಎಸ್ಕಾಂಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ. ಬಾಕಿ ಬಿಲ್ ಬಿಡುಗಡೆ ಮಾಡಲು ಕೋರಿ ವಿದ್ಯುತ್ ಉತ್ಪಾದಕ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್ ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಎಸ್ಕಾಂಗಳ ಪರ ವಕೀಲರು ವಾದಿಸಿ, ವಿದ್ಯುತ್ ಉತ್ಪಾದಕರ ಬಿಲ್ ಬಾಕಿ ಉಳಿಸಿಕೊಳ್ಳವು ಉದ್ದೇಶ ತಮಗಿಲ್ಲ. ಒಪ್ಪಂದದಂತೆ ಹಣ ಪಾವತಿಸಲು ಸಿದ್ದರಿದ್ದೇವೆ.

ಆದರೆ, ರಾಜ್ಯ ಸರ್ಕಾರ ರೈತರಿಗೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸಬ್ಸಿಡಿ ಹಣ ಇನ್ನೂ ನೀಡಿಲ್ಲ. ಹೀಗಾಗಿ, ಉತ್ಪಾದಕರ ಬಿಲ್ ಪಾವತಿಸಲು ವಿಳಂಬವಾಗಿದೆ ಎಂದು ವಿವರಿಸಿದರು.

ವಾದ ಆಲಿಸಿದ ಪೀಠ, ವಿದ್ಯುತ್ ಉತ್ಪಾದಕರಿಗೆ ಒಪ್ಪಂದದ ಅನುಸಾರ ಬಿಲ್​ಗಳನ್ನು ಯಾವುದೇ ವಿಳಂಬ ಮಾಡದೇ ಪಾವತಿಬೇಕು. ಈ ನಿಟ್ಟಿನಲ್ಲಿ ಎಸ್ಕಾಂಗಳು ಹಾಗೂ ರಾಜ್ಯ ಸರ್ಕಾರ ತಮ್ಮ ಬಾಧ್ಯತೆಗಳನ್ನು ಪೂರೈಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

(ಇದನ್ನೂ ಓದಿ: 'ವರುಣ್ ಓರ್ವ​​ ಹೋರಾಟಗಾರ'... ವೀರಪುತ್ರನ ಆರೋಗ್ಯದ ಬಗ್ಗೆ ತಂದೆ ಹೇಳಿದ್ದೇನು!?)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.