ETV Bharat / city

ಆನ್​​ಲೈನ್ ಗೇಮ್ ನಿಷೇಧಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ : ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ - ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ

ರಾಜ್ಯ ಸರ್ಕಾರಕ್ಕೆ ಆನ್​​ಲೈನ್ ಗೇಮ್ ನಿಷೇಧಿಸುವ ಅಧಿಕಾರವಿಲ್ಲ. ನಿಯಮ ಜಾರಿಗೆ ಮುನ್ನ ನಮ್ಮ ಆಕ್ಷೇಪಣೆಯನ್ನೂ ಆಲಿಸಿಲ್ಲ. ಇದರಿಂದಾಗಿ ಆನ್​​ಲೈನ್ ಗೇಮ್ ನಡೆಸುತ್ತಿದ್ದ ಸಂಸ್ಥೆಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ. ಅನಗತ್ಯವಾಗಿ ಪೊಲೀಸ್ ಕೇಸ್​​ಗಳನ್ನು ಎದುರಿಸಬೇಕಿದೆ..

High court
ಹೈಕೋರ್ಟ್​
author img

By

Published : Oct 22, 2021, 7:29 PM IST

ಬೆಂಗಳೂರು : ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಲ್ಲಿ ಆನ್​​ಲೈನ್ ಗೇಮ್ ರದ್ದುಪಡಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಆನ್​​ಲೈನ್ ಗೇಮ್ ಕಂಪನಿಗಳು ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿವೆ.

ರಾಜ್ಯದಲ್ಲಿ ಎಲ್ಲ ಬಗೆಯ ಆನ್​​ಲೈನ್ ಜೂಜು ನಿಷೇಧಿಸಿರುವ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್, ಗ್ಯಾಲಕ್ಟೋಸ್ ಫೋನ್ ವೇರ್ ಟೆಕ್ನಾಲಜೀಸ್ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ವಾದಿಸಿ, ಸರ್ಕಾರ ಕಾನೂನು ಬದ್ಧವಾಗಿಯೇ ನಿಯಯ ಜಾರಿಗೆ ತಂದಿದೆ. ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಕೋರಿಕೆ ಪರಿಗಣಿಸಿದ ಪೀಠ ವಿಚಾರಣೆಯನ್ನು ಅ.27ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ : ಆನ್​​ಲೈನ್ ಜೂಜು ನಿಷೇಧಿಸಿರುವ ಹಿನ್ನೆಲೆ ಕಂಪನಿಗಳು ಕ್ರಿಮಿನಲ್ ಕೇಸ್ ಭೀತಿ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ರದ್ದು ಕೋರಿ ಅರ್ಜಿ ಸಲ್ಲಿಸಿವೆ. ಅರ್ಜಿಯಲ್ಲಿ ಸರ್ಕಾರ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಆನ್​ಲೈನ್ ಗೇಮ್ ನಿರ್ಬಂಧಿಸಿದೆ.

ರಾಜ್ಯ ಸರ್ಕಾರಕ್ಕೆ ಆನ್​​ಲೈನ್ ಗೇಮ್ ನಿಷೇಧಿಸುವ ಅಧಿಕಾರವಿಲ್ಲ. ನಿಯಮ ಜಾರಿಗೆ ಮುನ್ನ ನಮ್ಮ ಆಕ್ಷೇಪಣೆಯನ್ನೂ ಆಲಿಸಿಲ್ಲ. ಇದರಿಂದಾಗಿ ಆನ್​​ಲೈನ್ ಗೇಮ್ ನಡೆಸುತ್ತಿದ್ದ ಸಂಸ್ಥೆಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ. ಅನಗತ್ಯವಾಗಿ ಪೊಲೀಸ್ ಕೇಸ್​​ಗಳನ್ನು ಎದುರಿಸಬೇಕಿದೆ.

ತನಿಖೆ ನೆಪದಲ್ಲಿ ತೊಂದರೆಯಾಗುವ ಸಂಭವವೂ ಇದೆ. ಹೀಗಾಗಿ, ಕಾಯ್ದೆಗೆ ತಿದ್ದುಪಡಿ ತಂದು ಆನ್​​ಲೈನ್ ಗೇಮ್ ನಿಷೇಧಿಸಿರುವ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಗೇಮ್ ನಿಷೇಧಿಸುವ ಬಗ್ಗೆ ಸಚಿವ ಸಂಪುಟ ನಿರ್ಧರಿಸಲಿದೆ : ಹೈಕೋರ್ಟ್​ಗೆ ಸರ್ಕಾರದ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.