ETV Bharat / city

ಕಾಂಗ್ರೆಸ್​ ಪಾದಯಾತ್ರೆಗೆ ಹೈಕೋರ್ಟ್​ ಗರಂ: ಕೋವಿಡ್​ ನಡುವೆ ಯಾಕೆ ಅನುಮತಿ ಕೊಟ್ರಿ..ಸರ್ಕಾರಕ್ಕೆ ಚಾಟಿ, 'ಕೈ'ಗೆ ನೋಟಿಸ್​! - ಕೆಪಿಸಿಸಿಗೆ ಹೈಕೋರ್ಟ್ ನೋಟಿಸ್​​

ಕೋವಿಡ್ ತುರ್ತು ಪರಿಸ್ಥಿತಿ ವೇಳೆ ಕಾಂಗ್ರೆಸ್ ಸೋಂಕು ಹೆಚ್ಚಿಸುವ ರೀತಿ ಪಾದಯಾತ್ರೆ ಕೈಗೊಂಡಿರುವ ಕ್ರಮ ಸರಿಯಾದುದ್ದಲ್ಲ. ಸರ್ಕಾರವೂ ಇದನ್ನು ನಿಯಂತ್ರಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಪ್ರಸಾದ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು.

ಕಾಂಗ್ರೆಸ್​ ಪಾದಯಾತ್ರೆಗೆ ಹೈಕೋರ್ಟ್​ ಗರಂ: ಕೋವಿಡ್​ ನಡುವೆ ಯಾಕೆ ಅನುಮತಿ ಕೊಟ್ರಿ

author img

By

Published : Jan 12, 2022, 2:24 PM IST

Updated : Jan 12, 2022, 5:03 PM IST

ಬೆಂಗಳೂರು: ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ನಡುವೆಯೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಸಲ್ಲಿಕೆಯಾಗಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಕೋವಿಡ್ ಹೆಚ್ಚುತ್ತಿರುವ ವೇಳೆ ರ್‍ಯಾಲಿ ನಡೆಸಲು ಅನುಮತಿ ನೀಡಿದ್ದು ಯಾರು? ಎಂದು ಸರ್ಕಾರಕ್ಕೆ ಕಟುವಾಗಿ ಪ್ರಶ್ನಿಸಿರುವ ಪೀಠ, ಅನುಮತಿ ಕೊಟ್ಟಿಲ್ಲ ಎಂದಾದರೆ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದೇಕೆ? ಕ್ರಮ ಕೈಗೊಳ್ಳಲು ನ್ಯಾಯಾಲಯವೇ ಹೇಳಬೇಕೇ? ಎಂದು ಪ್ರಶ್ನಿಸಿದೆ.

ಇದೇ ವೇಳೆ ರ್‍ಯಾಲಿಗೆ ಮುನ್ನ ನೀವು ಅನುಮತಿ ಪಡೆದಿದ್ದೀರಾ? ಎಂದು ಕೆಪಿಸಿಸಿಗೆ ಪ್ರಶ್ನಿಸಿರುವ ಪೀಠ, ಈ ಕುರಿತು ಉತ್ತರಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಾಕೀತು ಮಾಡಿದೆ.

ಅರ್ಜಿದಾರರ ಪರ ವಕೀಲರು ಹೇಳಿದ್ದೇನು?

ಕೋವಿಡ್ ಉಲ್ಬಣಿಸುತ್ತಿರುವುದರ ನಡುವೆಯೂ ರಾಜ್ಯ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕ್ರಮ ಆಕ್ಷೇಪಿಸಿ ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಪ್ರಸಾದ್ ಎಂಬುವರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ, ಅರ್ಜಿದಾರರ ಪರ ವಕೀಲರಾದ ಶ್ರೀಧರ್ ಪ್ರಭು, ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕು. ಕೋವಿಡ್ ತುರ್ತು ಪರಿಸ್ಥಿತಿ ವೇಳೆ ಕಾಂಗ್ರೆಸ್ ಸೋಂಕು ಹೆಚ್ಚಿಸುವ ರೀತಿ ಪಾದಯಾತ್ರೆ ಕೈಗೊಂಡಿರುವ ಕ್ರಮ ಸರಿಯಾದುದಲ್ಲ. ಸರ್ಕಾರವೂ ಇದನ್ನು ನಿಯಂತ್ರಿಸುತ್ತಿಲ್ಲ ಎಂದು ವಿವರಿಸಿದರು.

ಅಡ್ವೊಕೇಟ್​​​ ಜನರಲ್​ ವಾದ ಏನು?

ಇದಕ್ಕೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಾದ ಮಂಡಿಸಿ, ಸರ್ಕಾರ ಪಾದಯಾತ್ರೆ ನಡೆಸುತ್ತಿರುವ ಮುಖಂಡರ ವಿರುದ್ಧ ನಿಯಮ ಉಲ್ಲಂಘನೆಗಾಗಿ 3 ಎಫ್ಐಆರ್ ದಾಖಲಿಸಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೋವಿಡ್ ಹೆಚ್ಚುತ್ತಿರುವ ವೇಳೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಪಾದಯಾತ್ರೆಗೆ ಹೇಗೆ ಅನುಮತಿ ಕೊಟ್ಟಿದ್ದೀರಿ?, ಒಂದು ವೇಳೆ, ಅನುಮತಿ ಕೊಟ್ಟಿಲ್ಲವಾದರೆ ಕ್ರಮ ಜರುಗಿಸಲು ಕಾಯುತ್ತಿರುವುದೇಕೆ?, ಹೈಕೋರ್ಟ್ ಆದೇಶದವರೆಗೆ ನೀವು ಕ್ರಮ ಕೈಗೊಳ್ಳುವುದಿಲ್ಲವೇ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ಕೆಪಿಸಿಸಿಗೆ ತುರ್ತು ನೋಟಿಸ್​

ಅಂತಿಮವಾಗಿ ಸರ್ಕಾರ ಹಾಗೂ ಕೆಪಿಸಿಸಿಗೆ ತುರ್ತು ನೋಟಿಸ್ ಜಾರಿ ಮಾಡಿದ ಪೀಠ, ಈ ಕುರಿತು ಉತ್ತರಿಸಲು ಒಂದು ದಿನ ಕಾಲಾವಕಾಶ ನೀಡಿ, ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿತು.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 64 ಮಂದಿ ವಿರುದ್ಧ ಮೂರನೇ ಎಫ್​ಐಆರ್ ದಾಖಲು

Last Updated : Jan 12, 2022, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.