ಬೆಂಗಳೂರು: ನಿನ್ನೆ ನಗರದಲ್ಲಿ ಸುರಿದ ಭಾರಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಕೇವಲ ಎರಡು ಗಂಟೆಯಲ್ಲಿ 50 ರಿಂದ 60 ಮಿಮೀ ಮಳೆಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡಿದ್ದಾರೆ.
ದೊಮ್ಮಲೂರಿನ ಗೌತಮ್ ಲೇಔಟ್, ವಿಲ್ಸನ್ ಗಾರ್ಡನ್ನಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಜೊತೆಗೆ ಬೆಂಗಳೂರಿನ ಶಿವಾನಂದ ಅಂಡರ್ ಪಾಸ್, ಖೋಡೇಸ್ ಅಂಡರ್ ಪಾಸ್, ಕಾಫಿ ಬೋರ್ಡ್, ಈಜಿಪುರ ಜಂಕ್ಷನ್, ಶಾಂತಿನಗರ, ಆರ್.ಆರ್ ನಗರದಲ್ಲಿ ಸಹ ನೀರು ನಿಂತಿದ್ದ ದೃಶ್ಯ ಕಂಡುಬಂದಿತು.
ಇನ್ನು ಭಾರಿ ಮಳೆ ಹಿನ್ನೆಲೆ ದೊಮ್ಮಲೂರು, ಹಲಸೂರಿನ ರುಕ್ಮಿಣಿ ನಗರ, ಆರ್.ವಿ ರಸ್ತೆಗಳ ಮೇಲೆ ಮರ ಬಿದ್ದಿದ್ದು, ಪರಿಣಾಮ ಕೆಲ ಕಾಲ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಮಳೆ ಪ್ರಮಾಣದ ಮಾಹಿತಿ:
- ಚೋಳೂರುಪಾಳ್ಯ - 67 ಮಿಮೀ
- ಗುರುರಾಜ ಲೇಔಟ್, ದೊಡ್ಡನಕ್ಕುಂದಿ - 56.5 ಮಿಮೀ
- ಮುನ್ನೇಕೊಳಲು - 56 ಮಿಮೀ
- ತೂಬರಹಳ್ಳಿ - 56 ಮಿಮೀ
- ಶಿವಾಜಿನಗರ - 56 ಮಿಮೀ
- ಭಾರತೀನಗರ - 56 ಮಿಮೀ
- ಶಾಂತಲನಗರ - 56 ಮಿಮೀ
- ದತ್ತಾತ್ರೇಯ ಟೆಂಪಲ್ - 50.1 ಮಿಮೀ
- ಮಲ್ಲೇಶ್ವರ - 50 ಮಿಮೀ
- ಕಾವೇರಿಪುರ - 47 ಮಿಮೀ
- ಯಶವಂತಪುರ - 47 ಮಿಮೀ
- ವಿವಿ ಪುರಂ - 47 ಮಿಮೀ
- ಹೆಬ್ಬಾಳ - 45 ಮಿಮೀ. ಮಳೆಯಾಗಿದೆ.