ETV Bharat / city

ಲಾಕ್‍ಡೌನ್ ನಂತರ ಬೆಂಗಳೂರಿನಲ್ಲಿ ಹೃದಯಾಘಾತ ಪ್ರಮಾಣ ಶೇ.30 ರಷ್ಟು ಹೆಚ್ಚಳ..! - ಹಾರ್ಟ್​​ ಅಟ್ಯಾಕ್​​ ಸಮಸ್ಯೆ

ಲಾಕ್‍ಡೌನ್‍ ನಿಂದ ಮಾನಸಿಕ ಒತ್ತಡ, ಆರ್ಥಿಕ ಕಷ್ಟಗಳು, ಜೀವನಶೈಲಿಯಲ್ಲಿ ಆಗಿರುವ ಬದಲಾವಣೆ ಮತ್ತು ಕೆಟ್ಟ ಅಥವಾ ಅಸಮರ್ಪಕವಾದ ಆಹಾರ ಪದ್ಧತಿಗಳು ಈ ಹೃದಯಾಘಾತದ ಪ್ರಮಾಣ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ವಿಶ್ವ ಹೃದಯ ದಿನವಾದ ಇಂದು ಹೃದಯ ರಕ್ಷಣೆಯ ಕುರಿತು ಯಾವೆಲ್ಲಾ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆಗಳನ್ನು ನೀಡಿದ್ದಾರೆ.

world heart day
ವಿಶ್ವ ಹೃದಯ ದಿನ
author img

By

Published : Sep 29, 2020, 6:01 AM IST

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಲ್ಲಿ ಹೃದಯಾಘಾತ ಸಂಖ್ಯೆಯಲ್ಲಿ ಶೇ.30 ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವ ಹೃದಯ ದಿನ ಪ್ರಯುಕ್ತ ಈ ಬಗ್ಗೆ ಮಾಹಿತಿ ನೀಡಿರುವ ಸಕ್ರಾ ವಲ್ರ್ಡ್ ಆಸ್ಪತ್ರೆಯ ಇಂಟರ್‍ವೆನ್ಷನಲ್ ಕಾರ್ಡಿಯೋಲಾಜಿಯ ಮುಖ್ಯಸ್ಥರಾದ ಡಾ.ಶ್ರೀಕಾಂತ್ ಶೆಟ್ಟಿ, ಲಾಕ್‍ಡೌನ್‍ ನಿಂದ ಮಾನಸಿಕ ಒತ್ತಡ, ಆರ್ಥಿಕ ಕಷ್ಟಗಳು, ಜೀವನಶೈಲಿಯಲ್ಲಿ ಆಗಿರುವ ಬದಲಾವಣೆ ಮತ್ತು ಕೆಟ್ಟ ಅಥವಾ ಅಸಮರ್ಪಕವಾದ ಆಹಾರ ಪದ್ಧತಿಗಳು ಈ ಹೃದಯಾಘಾತದ ಪ್ರಮಾಣ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಅನೇಕ ಹೃದಯಾಘಾತಕ್ಕೆ ಒಳಗಾದವರು ಕೋವಿಡ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗುವುದು ತಡವಾಗುತ್ತಿದೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳದೇ ಇರುವುದರಿಂದ ಈ ರೋಗಿಗಳು ಗುಣಮುಖರಾಗುವ ಸಂಕೀರ್ಣತೆ ಅಂದರೆ, ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.

ಲಾಕ್‍ಡೌನ್‍ನ ಆರಂಭಿಕ ತಿಂಗಳುಗಳಲ್ಲಿ ಹೃದಯಾಘಾತದ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. ಮನೆಯಲ್ಲೇ ಇದ್ದುದರಿಂದ ಒತ್ತಡದ ಮಟ್ಟಗಳಲ್ಲಿ ಇಳಿಕೆಯಾಗಿದ್ದು, ಹೆಚ್ಚು ವಿಶ್ರಾಂತಿ ಸಿಕ್ಕಿದ್ದರಿಂದ ಹೃದಯಾಘಾತದ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಕೋವಿಡ್ ಆತಂಕದಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರದಿರುವುದು ಕಾರಣವಾಗಿತ್ತು. ಸೂಕ್ತ ಚಿಕಿತ್ಸೆ ದೊರೆಯದಿರುವುದರಿಂದ ಮನೆಯಲ್ಲೇ ಸಾವನ್ನಪ್ಪುವ ಪ್ರಕರಣಗಳನ್ನು ನಾವು ನೋಡಿದ್ದೇವೆ.

world heart day
ಡಾ.ಶ್ರೀಕಾಂತ್ ಶೆಟ್ಟಿ

ಆದರೆ, ಕಾಲ ಚಕ್ರ ತಿರುಗಿದೆ. ಅನೇಕರಲ್ಲಿ ಮಾನಸಿಕ ಒತ್ತಡ, ಹತಾಶೆ ಮತ್ತು ಆರ್ಥಿಕ ಸಂಕಷ್ಟದಿಂದ, ಉದ್ಯೋಗ ನಷ್ಟ, ವೇತನ ಕಡಿತ, ಅನಿಯಮಿತವಾದ ಕೆಲಸದ ಸಮಯ ಸೇರಿದಂತೆ ಮತ್ತಿತರೆ ಅಭದ್ರತೆಗಳು ಹೆಚ್ಚಾಗತೊಡಗಿವೆ. ಇದರ ಪರಿಣಾಮ ಸಾಂಕ್ರಾಮಿಕದ ಈ ಹಂತದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಸಾಂಕ್ರಾಮಿಕ ಸಂಬಂಧಿತ ಒತ್ತಡ ಕಾರಣ ಎಂದು ಹೇಳಿದ್ದಾರೆ.

ಸಕ್ರ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ಗಮನಿಸಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಹೃದಯಾಘಾತಕ್ಕೆ ತುತ್ತಾದವರ ಪ್ರಮಾಣದಲ್ಲಿ ಶೇ.30 ರಷ್ಟು ಹೆಚ್ಚಳ ಕಂಡುಬಂದಿದೆ. ಆದರೆ, ರೋಗಿಗಳು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರೂ, ತುರ್ತು ಚಿಕಿತ್ಸಾ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್ ಸೋಂಕಿನಿಂದಾಗಿ ಹೆಚ್ಚು ಅಪಾಯಕ್ಕೆ ಸಿಲುಕುತ್ತಾರೆ. ಇವರಲ್ಲಿ ಸಾವನ್ನಪ್ಪುವ ಅಪಾಯವೂ ಬಂದೊದಗಬಹುದು. ಈ ಸೋಂಕು ಹಲವು ಮಾರ್ಗಗಳಲ್ಲಿ ಪರಿಣಾಮ ಬೀರಬಹುದು.

  1. ಒಮ್ಮೆ ಶ್ವಾಸಕೋಶ ಗಂಭೀರವಾಗಿ ಬಾಧಿತವಾದರೆ ಆಮ್ಲಜನಕದ ಮಟ್ಟ ಕೆಳಮಟ್ಟಕ್ಕೆ ಇಳಿಯುತ್ತದೆ. ಆಗ ಹೃದಯದ ಕಾರ್ಯದಲ್ಲಿ ಕುಂಠಿತವಾಗುತ್ತದೆ.
  2. ಈ ಸೋಂಕು ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಹೃದಯದ ಮೇಲೆ ಪರಿಣಾಮ ಬೀರುತ್ತದೆ.
  3. ಹೃದಯಕ್ಕೆ ಸಂಬಂಧಿಸಿದಂತೆ ಈ ಸೋಂಕು ಗಂಭೀರವಾದ ಪರಿಣಾಮವನ್ನು ಉಂಟುಮಾಡುತ್ತದೆ.
  4. ಈ ಕೋವಿಡ್ ಸೋಂಕು ದೇಹದ ಅಪಧಮನಿಗಳು ಮತ್ತು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ.

ಇದರ ಪರಿಣಾಮ ಹೃದಯಾಘಾತಗಳು, ಮಿದುಳು ಪಾಶ್ರ್ವವಾಯು, ಕಾಲಿನ ಗ್ಯಾಂಗ್ರಿನ್, ಡೀಪ್ ವೇಯ್ನ್ ಥ್ರಾಂಬೋಸಿಸ್ ಮತ್ತು ಪಲ್ಮನರಿ ಎಂಬೋಲಿಸಂಗೆ ಕಾರಣವಾಗುತ್ತದೆ. ಇದಲ್ಲದೇ, ಕೋವಿಡ್ ಸೋಂಕು ಹೃದಯದ ಮೇಲೆ ನೇರವಾಗಿ ಪರಿಣಾಮವನ್ನು ಉಂಟು ಮಾಡುತ್ತದೆ. ಇದರಿಂದ ಮಯೋಕಾರ್ಡಿಟಿಸ್ ಉಂಟಾಗಿ ಜೀವಕ್ಕೇ ಅಪಾಯವನ್ನು ತಂದೊಡ್ಡುತ್ತದೆ.

ಅದೇ ರೀತಿ, ಕೋವಿಡ್ ರೋಗಿಗಳಲ್ಲಿ ಇತರೆ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡು ಸಾವಿಗೂ ಕಾರಣವಾಗಬಹುದು. ಸೋಂಕು ಹರಡುವ ಮುನ್ನ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಸೋಂಕು ತಟ್ಟಿದ ನಂತರ ಇಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಹಲವಾರು ಸಂಕೀರ್ಣತೆಗಳನ್ನೂ ತಂದೊಡ್ಡಬಹುದು ಎಂದು ವಿವರಿಸಿದರು.

ಸೋಂಕು ಹರಡುವ ಆತಂಕ ಅಥವಾ ಭೀತಿಯಿಂದಾಗಿ ಹಲವಾರು ಹೃದ್ರೋಗಿಗಳು ತಮ್ಮ ನಿಗದಿತ ಆಸ್ಪತ್ರೆ ಭೇಟಿಯಿಂದ ಹಿಂದೆ ಸರಿಯುತ್ತಾರೆ. ಕೆಲವರು ವಿಡಿಯೋ ಕನ್ಸಲ್ಟೇಷನ್ ಮೂಲಕ ತಜ್ಞ ವೈದ್ಯರ ಮಾರ್ಗದರ್ಶನ ಪಡೆಯುತ್ತಾರೆ. ಅದೃಷ್ಠವಶಾತ್, ಬಹುತೇಕ ರೋಗಿಗಳು ತಮ್ಮ ಚಿಕಿತ್ಸೆಯನ್ನು ಮುಂದುವರಿಸುವ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ ಮತ್ತು ಸಾಂಕ್ರಾಮಿಕದ ಈ ಅವಧಿಯಲ್ಲಿ ಔಷಧಿಯನ್ನು ತೆಗೆದುಕೊಳ್ಳದೇ ಇರುವವರನ್ನು ನಾವು ಕಂಡಿಲ್ಲ. ಅಲ್ಲದೇ, ಈ ಸಂದರ್ಭದಲ್ಲಿ ಔಷಧಿಗಳ ಲಭ್ಯತೆಯ ಸಮಸ್ಯೆ ಉಂಟಾಗಿಲ್ಲ ಎಂದು ಡಾ.ಶೆಟ್ಟಿ ತಿಳಿಸಿದರು.

ಅಪಾಯದ ಮಟ್ಟ ಕಡಿಮೆ ಮಾಡಲು ಇಲ್ಲಿದೆ ಮಾರ್ಗ

ಹೃದಯಕ್ಕೆ ಸಂಬಂಧಿಸಿದ ರೋಗಗಳು ಅಥವಾ ಸಮಸ್ಯೆಗಳಿಂದ ಬಳಲುತ್ತಿರುವವರು ಸೋಂಕಿನ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಮಾರ್ಗಗಳಿವೆ.

  • ಸೋಂಕು ಪೀಡಿತರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರ ಸಂಪರ್ಕದಿಂದ ದೂರವಿರಬೇಕು..
  • ಮತ್ತೊಬ್ಬ ವ್ಯಕ್ತಿಯಿಂದ ಕನಿಷ್ಠ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು.
  • ಸಾಬೂನಿನಿಂದ ಬಿಸಿ ನೀರಿನಲ್ಲಿ ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ಸ್ವಚ್ಛಗೊಳಿಸಬೇಕು.
  • ನಳಿಕೆ ಇರುವ ಮಾಸ್ಕ್ ಧರಿಸಬಾರದು ಮತ್ತು ಸೂಕ್ತವಾದ ಮಾಸ್ಕ್ ಗಳನ್ನು ಧರಿಸಬೇಕು.
  • ಆದಷ್ಟೂ ಹೆಚ್ಚು ಸಮಯ ಮನೆಯಲ್ಲೇ ಇರಬೇಕು ಮತ್ತು ಸಾಧ್ಯವಾದರೆ ಮನೆಯಿಂದಲೇ ಕೆಲಸ ಮಾಡಬೇಕು.
  • ತಪ್ಪದೇ, ರಕ್ತದೊತ್ತಡ ಹಾಗೂ ಡಯಾಬಿಟಿಕ್‍ಗೆ ಔಷಧಿಗಳನ್ನು ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ನಿಯಮಿತವಾದ ಔಷಧಿಗಳನ್ನು ತೆಗೆದುಕೊಳ್ಳಬೇಕು.
  • ಯಾವುದೇ ಕಾರಣಕ್ಕೂ ಬ್ಲಡ್ ಥಿನ್ನರ್‍ಗಳನ್ನು ಬಳಸುತ್ತಿದ್ದರೆ ಅವುಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬಾರದು.

ಹೊಸದಾಗಿ ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆಯ ಲಕ್ಷಣದ ಅನುಭವವಾದರೆ ಯಾವುದೇ ಮುಜುಗರ, ಆತಂಕವಿಲ್ಲದೇ ಕೂಡಲೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು’’ ಎಂದು ಅವರು ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.