ETV Bharat / city

ಗುಣಮಟ್ಟದ ಆಹಾರ ಪೂರೈಕೆಯಿಂದ ಗುಣಮುಖರಾಗ್ತಿದಾರೆ ರೋಗಿಗಳು!

ಕೊರೊನಾ ವೈರಸ್​ ಸೋಂಕಿತರು ಆಸ್ಪತ್ರೆಗಳಿಂದ ಶೀಘ್ರ ಗುಣಮುಖರಾಗುತ್ತಿರುವುದು ಸಮಾಧಾನಕಾರ ಸಂಗತಿಯಾಗಿದೆ. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ ಎಂಬುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ.

healthy-food-suplying
ಗುಣಮಟ್ಟದ ಆಹಾರ
author img

By

Published : Aug 29, 2020, 4:34 PM IST

ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದು, ಸಿಕ್ಕಸಿಕ್ಕವರನ್ನೆಲ್ಲ ತನ್ನವರನ್ನಾಗಿ ಮಾಡಿಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಆದರೂ ಜನರು ಎದೆಗುಂದದೆ ಅದರ ವಿರುದ್ಧ ಕಾದಾಡಿ ಗೆದ್ದು ಬರುತ್ತಿದ್ದಾರೆ. ಗುಣಮಟ್ಟದ ಔಷಧದ ಜೊತೆಗೆ, ಆಹಾರವನ್ನು ಸಹ ಪೂರೈಸುತ್ತಿರುವುದೇ ಅದಕ್ಕೆ ಕಾರಣ.

ಈ ಹಿಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಊಟ ಮತ್ತು ಉಪಹಾರವನ್ನು ಸಮಾಜ ಕಲ್ಯಾಣ ಇಲಾಖೆ ಒದಗಿಸುತ್ತಿತ್ತು. ಈಗ ಊಟೋಪಚಾರವನ್ನು ಟೆಂಡರ್ ಪಡೆದಿರುವ ಗುತ್ತಿಗೆದಾರರು ಪೂರೈಸುತ್ತಿದ್ದಾರೆ. ಇನ್ನು ಹೋಮ್​ ಐಸೊಲೇಷನ್​​ನಲ್ಲಿ ಇರುವವರಿಗೆ ಊಟೋಪಚಾರದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಅವರಿಗೆ ಬೇಕಾದ ಮೆಡಿಸಿನ್ ಮತ್ತು ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಪೂರೈಕೆ ಮಾಡುತ್ತಿದೆ. ಒಂದು ವೇಳೆ ಅವರಿಗೆ ಮಾಸ್ಕ್, ಮಾತ್ರೆಗಳು ಸಿಗದಿದ್ದರೆ ಆಶಾ ಕಾರ್ಯಕರ್ತೆಯರ ಮೂಲಕ ಕೇಳಿ ಪಡೆಯಬಹುದು.

ಗುಣಮಟ್ಟದ ಆಹಾರ ಪೂರೈಕೆಯಿಂದ ಗುಣಮುಖರಾಗ್ತಿದಾರೆ ರೋಗಿಗಳು!

ಸೋಂಕಿತರ ಕುಟುಂಬಕ್ಕೆ ಹಾಗೂ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಕುಟುಂಬಗಳಿಗೆ ದಿನಸಿ ವಿತರಿಸುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ ಎಂಬುದಕ್ಕೆ ಉತ್ತರಿಸಿದ ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ, ಆಗ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡರೆ ಆ ಪ್ರದೇಶವನ್ನು ಸೀಲ್​​ಡೌನ್​ ಮಾಡಲಾಗುತ್ತಿತ್ತು. ಪ್ರಸ್ತುತ, ಮನೆಯನ್ನು ಮಾತ್ರ ಸೀಲ್​​ಡೌನ್ ಮಾಡಲಾಗುತ್ತಿದೆ. ಹೀಗಾಗಿ ದಿನಸಿ ವಿತರಿಸುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದರು.

ಲಾಕ್​ಡೌನ್​ ಸಮಯದಲ್ಲಿ ಸೋಂಕಿತರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ಆರೋಪಗಳು ಈ ಹಿಂದೆ ಕೇಳಿ ಬಂದಿದ್ದವು. ಆದರೀಗ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಕಾರಣ ಸೋಂಕಿತರು ಶೀಘ್ರ ಗುಣಮುಖರಾಗ್ತಿದ್ದಾರೆ ಎನ್ನಲಾಗ್ತಿದೆ. ಅದು ಹೀಗೆ ಮುಂದುವರೆದರೆ ಉತ್ತಮ ಎಂದು ಸಾರ್ವಜನಿಕರು ಅಭಿಪ್ರಾಯವೂ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.