ETV Bharat / city

ಜನರ ನಡವಳಿಕೆ ನೋಡಿದ್ರೆ ಭಯವಾಗುತ್ತೆ: ಸಚಿವ ಸುಧಾಕರ್ ಆತಂಕ

author img

By

Published : Jul 13, 2021, 12:27 PM IST

ಜನರ ಮನವಿ ಮೇರೆಗೆ ಸರ್ಕಾರ ಮದುವೆ ಸಮಾರಂಭಕ್ಕೆ 100 ಜನರಿಗೆ ಅವಕಾಶ ಕೊಟ್ಟರೆ, 400-500 ಜನರು ಸೇರ್ತಿದ್ದಾರೆ. ಮಾರುಕಟ್ಟೆಯಲ್ಲೂ ಸಹ ಹೀಗೆ ಇದೆ. ಯಾವುದೇ ನಿಯಂತ್ರಣವಿಲ್ಲದೇ ಜನರು ಸೇರುವುದನ್ನ ನೋಡ್ತಾ ಇದ್ದರೆ ನಿಜಕ್ಕೂ ಅಸಮಾಧಾನವಾಗಿದೆ. ಜನರು ಈಗಲಾದರೂ ಗಂಭೀರವಾಗಿ ತೆಗೆದುಕೊಂಡು ಮುಂದಿನ 3-4 ತಿಂಗಳು ಎಚ್ಚರಿಕೆಯಿಂದ ಇರುವಂತೆ ಸಚಿವ ಸುಧಾಕರ್ ಮನವಿ ಮಾಡಿದರು.

Minister Sudhakar
ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊರೊನಾ ಹೊಸ ಸೋಂಕಿತರ ಪ್ರಮಾಣ ಶೇ. 1.5ಕ್ಕಿಂತ ಕೆಳಗೆ ಇದೆ. ಆದರೆ, ದೇವಸ್ಥಾನ, ಮಾರುಕಟ್ಟೆಯಲ್ಲಿನ ಜನರ ನಡವಳಿಕೆ ನೋಡಿದರೆ ಭಯವಾಗುತ್ತೆ. ಹೀಗಾಗಿ, ಜನಸಾಮಾನ್ಯರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಜನರ ನಡವಳಿಕೆ ನೋಡಿದ್ರೆ ಭಯವಾಗುತ್ತೆ: ಆತಂಕ ವ್ಯಕ್ತಪಡಿಸಿದ ಆರೋಗ್ಯ ಸಚಿವ ಸುಧಾಕರ್

ಎರಡನೇ ಅಲೆ ಮುಗಿಯುತ್ತಾ ಬಂದಿದ್ದು, ಮೂರನೇ ಅಲೆ ಬರೋದಿಲ್ಲ ಅನ್ನೋ ಖಾತ್ರಿಯಿಲ್ಲ. ರಾಜ್ಯದಲ್ಲಿ ಲಸಿಕೆ ಅನುಪಾತ ಶೇಕಡ 60-70ರಷ್ಟು ಪೂರ್ಣವಾಗುವ ತನಕ ಬಹಳ ಎಚ್ಚರಿಕೆಯಲ್ಲಿ ಇರಬೇಕು. ಇದನ್ನ ಪದೇ ಪದೇ ಜನರಿಗೆ ಹೇಳ್ತಿದ್ದೇವೆ. ತಜ್ಞರು ಕೂಡ ಎಚ್ಚರಿಕೆಯನ್ನ ನೀಡುತ್ತಿದ್ದು, ಮುನ್ನೆಚ್ಚರಿಕೆ ವಹಿಸಬೇಕು. ನಿಮ್ಮ ಆರೋಗ್ಯ, ನಿಮ್ಮ ಜವಾಬ್ದಾರಿ. ಇದನ್ನ ಜನರು ಅರ್ಥ ಮಾಡಿಕೊಳ್ಳದೇ ಹೋದರೆ ಬಹಳ ಕಷ್ಟವಾಗಲಿದೆ ಎಂದರು.

ಮತ್ತೊಂದು ಅಲೆಗೆ ಅವಕಾಶ ಕೊಡದಿರಿ

ಮತ್ತೊಂದು ಅಲೆ ಎದುರಿಸುವ ಅವಕಾಶ ಕೊಡಬಾರದು. ಮೂರನೇ ಅಲೆ ತಡೆಯುವುದು ನಮ್ಮ ಕೈನಲ್ಲೇ ಇದ್ದು, ಮುಂದೆ ಬರಬಹುದಾದ ಯಾವುದೇ ಅಲೆ ತಡೆಯಲು ನಾವು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತರಲೇಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳಬೇಕು. ಜೊತೆಗೆ ಅನಗತ್ಯ ಸಭೆಯಲ್ಲಿ ಭಾಗಿಯಾಗುವುದು ತಪ್ಪಿಸಬೇಕು.

ಜನರ ಮನವಿ ಮೇರೆಗೆ ಸರ್ಕಾರವೂ ಮದುವೆ ಸಮಾರಂಭಕ್ಕೆ 100 ಜನರಿಗೆ ಅವಕಾಶ ಕೊಟ್ಟರೆ, 400-500 ಜನರು ಸೇರ್ತಿದ್ದಾರೆ. ಮಾರುಕಟ್ಟೆಯಲ್ಲೂ ಸಹ ಹೀಗೆ ಇದೆ. ಯಾವುದೇ ನಿಯಂತ್ರಣವಿಲ್ಲದೇ ಜನರು ಸೇರುವುದನ್ನ ನೋಡ್ತಾ ಇದ್ದರೆ ನಿಜಕ್ಕೂ ಅಸಮಾಧಾನವಾಗಿದೆ. ಜನರು ಈಗಲಾದರೂ ಗಂಭೀರವಾಗಿ ತೆಗೆದುಕೊಂಡು ಅವಶ್ಯಕತೆ ಇದ್ದರಷ್ಟೇ ಮಾತ್ರ ಹೊರಗೆ ಹೋಗಿ ಬರಬೇಕು. ಮುಂದಿನ 3-4 ತಿಂಗಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಹಾವಳಿ: ಇನ್ನು ನಿನ್ನೆ ಮತ್ತೊಂದು ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿರುವುದರ ಕುರಿತು ಹೇಳಿದ್ದಾರೆ. ಆದರೆ, ನಿಖರ ವರದಿ ಇನ್ನೂ ನನಗೆ ಬಂದಿಲ್ಲ ಎಂದರು.

ಹಲವು ರಾಜ್ಯದಲ್ಲಿ ಮೂರನೇ ಅಲೆ ಕಾಲಿಟ್ಟಿದೆ

ಅನೇಕ ರಾಜ್ಯಗಳಿಗೆ ಮೂರನೇ ಅಲೆ ಕಾಲಿಟ್ಟಿರುವ ಬಗ್ಗೆ ಹಲವು ವರದಿಗಳಲ್ಲಿ ಉಲ್ಲೇಖವಾಗಿರುವ ಬಗ್ಗೆ ಮಾತಾನಾಡಿದ ಅವರು, ಕೇರಳ, ಮಹಾರಾಷ್ಟ್ರ ರಾಜ್ಯಗಳನ್ನ ನೋಡಿದ್ರೆ ಪ್ರಕರಣಗಳು ಹೆಚ್ಚಾಗಿದೆ. ಎರಡನೇ ಅಲೆಯಲ್ಲಿ ನಮ್ಮ ರಾಜ್ಯದ ರೀತಿ ಸೋಂಕಿತರ ಸಂಖ್ಯೆ ಕಡಿಮೆ ಆಗಲಿಲ್ಲ. ಕೇರಳದಲ್ಲಿ ಎರಡನೇ ಅಲೆಯಲ್ಲಿನ ಸೋಂಕಿತರ ಸಂಖ್ಯೆ ಕಡಿಮೆಯೇ ಆಗಿಲ್ಲ. ಹೀಗಾಗಿ, ಅಲ್ಲಿ ಇನ್ನು ಎರಡನೇ ಅಲೆ ಮುಗಿದಿಲ್ಲ ಅನ್ನೋದು ನನ್ನ ಅಭಿಪ್ರಾಯ ಅಂತ ತಿಳಿಸಿದರು.

ಡಿಸೆಂಬರ್ ತನಕ ನಿತ್ಯಾ 1 ಲಕ್ಷಕ್ಕೂ ಹೆಚ್ಚು ಕೋವಿಡ್ ಡೆಸ್ಟ್

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 30 ಸಾವಿರದ ಅಸುಪಾಸಿನಲ್ಲಿದ್ದು, ಅದು ಕಡಿಮೆ ಆಗಬೇಕು. 10 ಲಕ್ಷ ಜನಸಂಖ್ಯೆಗೆ 50 ಕೇಸ್​ಗಿಂತ ಕಡಿಮೆ ಇರಬೇಕು. ಈಗ ರಾಜ್ಯದಲ್ಲಿ 3,000ಕ್ಕಿಂತ ಸೋಂಕಿತರ ಸಂಖ್ಯೆ ಹೆಚ್ಚಾದರೆ, ಅದು ನಮಗೆ ಎಚ್ಚರಿಕೆ ಘಂಟೆ ಅಂತ ಭಾವಿಸ್ತೇವೆ. ಯಾವುದೇ ಕಾರಣಕ್ಕೂ ಎರಡನೇ ಅಲೆಯಲ್ಲಿ ಆದಂತೆ ಅದು ಮರುಕಳಿಸಬಾರದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಇದಕ್ಕಾಗಿ ಕೋವಿಡ್ ಟೆಸ್ಟ್ ಪ್ರಮಾಣ ಕಡಿಮೆ ಮಾಡಿಲ್ಲ, ಇಂದಿಗೂ ಒಂದು ಲಕ್ಷಕ್ಕೂ ಅಧಿಕ ಟೆಸ್ಟ್ ಮಾಡಲಾಗುತ್ತಿದೆ. ಇದನ್ನ ಡಿಸೆಂಬರ್ ತನಕ ಮುಂದುವರೆಸಲಾಗುವುದು ಎಂದರು.

ಮೂರನೇ ಅಲೆ ಖಾತ್ರಿಗೆ ಸಮಯ ಬೇಕು
ಮೂರನೇ ಅಲೆ ಆರಂಭವಾಗಿದ್ಯಾ ಎಂಬುದನ್ನ ತಿಳಿಯಲು ಇನ್ನು ಕೆಲವು ದಿನಗಳು ಕಾಯಬೇಕು. ಕರ್ನಾಟಕದಲ್ಲಿ ಇನ್ನೂ ಮೂರನೇ ಅಲೆ ಆರಂಭವಾಗಿಲ್ಲ. ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಾ ಬರ್ತಿದೆ. ಅದು ಶೇ.1 ಕ್ಕಿಂತ ಕಡಿಮೆ ಆಗಬೇಕು. ಆಗಷ್ಟೇ ಎರಡನೇ ಅಲೆ ಸಂಪೂರ್ಣ ಹೋಗಿದೆ ಅಂತ ಹೇಳಬಹುದು ಅಂದರು.‌

ಇದನ್ನೂ ಓದಿ: ವಿದ್ಯಾರ್ಥಿಗಳೇ ಬನ್ನಿ, ಪರೀಕ್ಷೆ ಬರೆಯಿರಿ ; ಭಯ ಬೇಡ, ನಾವು ನಿಮ್ಮೊಂದಿಗೆ ಇದ್ದೇವೆ.. ಶಿಕ್ಷಣ ಇಲಾಖೆ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.