ETV Bharat / city

ಕೋವಿಡ್ ವರದಿ ನೆಗೆಟಿವ್​: ಸಚಿವ ಶ್ರೀರಾಮುಲು ಆಸ್ಪತ್ರೆಯಿಂದ ಡಿಸ್ಜಾರ್ಜ್ - ಬೆಂಗಳೂರು ಸುದ್ದಿ

ಕೊರೊನಾ ವೈರಸ್​ ದೃಢಪಟ್ಟ ಹಿನ್ನೆಲೆ, ಶಿವಾಜಿ ನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದ ಆರೋಗ್ಯ ಸಚಿವ ಶ್ರೀರಾಮುಲು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Health Minister Sriramulu Discharge from the hospital
ಕೋವಿಡ್ ವರದಿ ನೆಗೆಟಿವ್​: ಆರೋಗ್ಯ ಸಚಿವ ಶ್ರೀರಾಮುಲು ಡಿಸ್ಜಾರ್ಜ್
author img

By

Published : Aug 16, 2020, 7:21 PM IST

Updated : Aug 16, 2020, 7:30 PM IST

ಬೆಂಗಳೂರು: ಕೊರೊನಾ ವೈರಸ್​ ದೃಢಪಟ್ಟ ಹಿನ್ನೆಲೆ, ಚಿಕಿತ್ಸೆ ಪಡೆಯುತ್ತಿದ್ದ ಆರೋಗ್ಯ ಸಚಿವ ಶ್ರೀರಾಮುಲು ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಶ್ರೀರಾಮುಲು ಅವರಿಗೆ ಆಗಸ್ಟ್ 9ರಂದು ಜ್ವರ ಕಾಣಿಸಿಕೊಂಡ‌ ಹಿನ್ನೆಲೆ, ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ರಾಮುಲು ಮನೆಯಿಂದ ಆಹಾರ ತರಿಸಿಕೊಳ್ಳದೆ, ಆಸ್ಪತ್ರೆಯಲ್ಲಿ ನೀಡುವ ಡಯಟ್ ಫುಡ್ ಸೇವಿಸುತ್ತಿದ್ದರು. ಸದ್ಯ, 8 ದಿನಗಳ ಆಸ್ಪತ್ರೆವಾಸ ಮುಗಿಸಿ ಗುಣಮುಖರಾಗಿರುವ ಸಚಿವ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.

ನನಗೆ ಎರಡು ದಿನಗಳ ಕಾಲ ಜ್ವರ, ಕೆಮ್ಮು ಇತ್ತು. ಉಳಿದಂತೆ ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ವರದಿ ನೆಗಟಿವ್ ಬಂದಿದ್ದು, ಆರೋಗ್ಯ ಸ್ಥಿರವಾಗಿದೆ. ನನ್ನ ಆರೈಕೆ ಮಾಡಿದ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಎಂದಿದ್ದಾರೆ.

Last Updated : Aug 16, 2020, 7:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.