ETV Bharat / city

ಸಾಲಬಾಧೆಯಿಂದ ಬೆಂಗಳೂರಲ್ಲಿ ನೇಣಿಗೆ ಶರಣಾದ ಹೆಡ್ ಕಾನ್ಸ್​ಟೇಬಲ್‌ - ಹೆಡ್ ಕಾನ್ಸ್​ಟೇಬಲ್‌ ಆತ್ಮಹತ್ಯೆ

ಪಶ್ವಿಮ ವಿಭಾಗದ ಸಶಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್​ಟೇಬಲ್‌ ಕುಮಾರ್​ ಎಂಬುವರು ಸಾಲಬಾಧೆ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

head-constable-committed-suicide-in-banglore
ಹೆಡ್ ಕಾನ್ಸ್​ಟೇಬಲ್‌ ಸಾವು
author img

By

Published : Nov 9, 2021, 2:14 PM IST

ಬೆಂಗಳೂರು: ಸಾಲಬಾಧೆ ತಾಳಲಾರದೆ ಹೆಡ್ ಕಾನ್ಸ್​ಟೇಬಲ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ‌ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದುಬಾಸಿಪಾಳ್ಯದ‌ ನಿವಾಸಿ ಹೆಡ್ ಕಾನ್‌ಸ್ಟೇಬಲ್ ಕುಮಾರ್ (36) ಮೃತರು. ಪಶ್ವಿಮ ವಿಭಾಗದ ಸಶಸ್ತ್ರ ವಿಭಾಗದಲ್ಲಿ ಹೆಡ್ ಕಾನ್​ಸ್ಟೇಬಲ್‌ ಆಗಿ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಉಳ್ಳಾಲದಲ್ಲಿರುವ ಸಿಎಆರ್ ಕಚೇರಿಗೆ ನಿನ್ನೆ ಕರ್ತವ್ಯಕ್ಕೆಂದು ತೆರಳಿದ್ದರು. ಯಾರೂ ಇಲ್ಲದಿರುವಾಗ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿಗೆ ಕಾರಣವಾಯ್ತು ಸಾಲಬಾಧೆ: ವಿಪರೀತ ಸಾಲ ಬಾಧೆಯಿಂದ ತತ್ತರಿಸಿದ್ದ ಕುಮಾರ್, ಡೆತ್ ನೋಟ್​ನಲ್ಲಿಯೂ ಸಾವಿಗೆ ಸಾಲವೇ ಪ್ರಮುಖ ಕಾರಣ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ರವಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.