ETV Bharat / city

ದೇಶ ಭಕ್ತ ಟಿಪ್ಪು ಸುಲ್ತಾನ ಪಾಠವನ್ನು ಪಠ್ಯದಿಂದ ಕೈಬಿಡುವುದು ಸರಿಯಲ್ಲ.. ಮಾಜಿ ಪ್ರಧಾನಿ ಹೆಚ್‌ಡಿಡಿ - ಪಠ್ಯದಿಂಧ ಟಿಪ್ಪು ಸುಲ್ತಾನ್​ ಪಾಠ ಕೈಬಿಟ್ಟ ಸರ್ಕಾರ

ತನ್ನ ಆಸ್ಥಾನದಲ್ಲಿ ದಿವಾನ್ ಪೂರ್ಣಯ್ಯನವರನ್ನು ನೇಮಿಸಿರುವುದೇ ಧರ್ಮಸಹಿಷ್ಣುತೆಗೆ ಸಾಕ್ಷಿಯಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಆಂಗ್ಲೋ-ಮೈಸೂರು ಕದನದಲ್ಲಿ ಸೋಲುಂಟಾದಾಗ ಕದನ ವಿರಾಮದಂತೆ ತನ್ನ ಮಕ್ಕಳನ್ನು ಒತ್ತೆ ಇಟ್ಟಿದ್ದ ಟಿಪ್ಪು ಸುಲ್ತಾನ್‌ ಅಪ್ರತಿಮ ದೇಶಭಕ್ತಿ ಮತ್ತು ಮಮತೆಗೆ ಸಾಕ್ಷಿ..

tippusultan-lesson
ದೇವೇಗೌಡ
author img

By

Published : Jul 31, 2020, 3:31 PM IST

ಬೆಂಗಳೂರು : ಟಿಪ್ಪು ಸುಲ್ತಾನ್ ಕುರಿತ ಬೋಧನೆಗಳನ್ನು ಪಠ್ಯ ಪುಸ್ತಕದಿಂದ ಹೊರಗಿಡಲು ವಿವೇಚನೆ ಇಲ್ಲದೆ ಬಿಜೆಪಿ ಸರ್ಕಾರ ಹೊರಟಿದೆ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್ ಡಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮತ್ತು ವಿದೇಶಿ ಆಕ್ರಮಣಕಾರರು ಒಳಗೊಂಡಂತೆ ಮೊಘಲ್‌ ಆಳ್ವಿಕೆ ಸಹಿತ ವಿವಿಧ ಸಾಮ್ರಾಜ್ಯ ಶಾಹಿಗಳ ಪಠ್ಯ ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದಕ್ಕೆ ಕಿಡಿಕಾರಿದ ಅವರು, ಮದ್ಯಪಾನ ಕಡು ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ಧರ್ಮ ಸಹಿಷ್ಣು ಎನ್ನುವುದಕ್ಕೆ ಸಾಕ್ಷಿಯಾಗಿ ಶೃಂಗೇರಿ ಪೀಠದಲ್ಲಿ ದೇವಿಯ ಮರುಪ್ರತಿಷ್ಠಾಪನೆಗೆ ನೆರವು, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಗೆ ಆಭರಣ ಅರ್ಪಣೆ, ಮೈಸೂರಿನ ಚಾಮುಂಡೇಶ್ವರಿ ಮತ್ತು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಗಳಿಗೆ ಸಾಮಗ್ರಿಗಳನ್ನು ನೀಡಿರುವುದೇ ಸಾಕ್ಷಿ.

ದೇಶ ಭಕ್ತ ಟಿಪ್ಪು ಸುಲ್ತಾನ ಪಾಠವನ್ನು ಪಠ್ಯದಿಂದ ಕೈಬಿಡುವುದು ಸರಿಯಲ್ಲ- ಗುಡುಗಿದ ಗೌಡರು

ತನ್ನ ಆಸ್ಥಾನದಲ್ಲಿ ದಿವಾನ್ ಪೂರ್ಣಯ್ಯನವರನ್ನು ನೇಮಿಸಿರುವುದೇ ಧರ್ಮಸಹಿಷ್ಣುತೆಗೆ ಸಾಕ್ಷಿಯಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಆಂಗ್ಲೋ-ಮೈಸೂರು ಕದನದಲ್ಲಿ ಸೋಲುಂಟಾದಾಗ ಕದನ ವಿರಾಮದಂತೆ ತನ್ನ ಮಕ್ಕಳನ್ನು ಒತ್ತೆ ಇಟ್ಟಿದ್ದ ಟಿಪ್ಪು ಸುಲ್ತಾನ್‌ ಅಪ್ರತಿಮ ದೇಶಭಕ್ತಿ ಮತ್ತು ಮಮತೆಗೆ ಸಾಕ್ಷಿ ಎಂದರು.

ರಾಜ್ಯದಲ್ಲಿ ಅಧಿಕಾರ ಹಿಡಿದ ಸಾಮಾಜಿಕ ನ್ಯಾಯ ಮತ್ತು ದೇಶದ ಪರಂಪರೆಗೆ ಬದ್ಧವಾದ ಎಲ್ಲಾ ಸರ್ಕಾರಗಳು, ಟಿಪ್ಪು ಜಯಂತಿ ಆಚರಿಸಿವೆ. ಆದರೆ, ಈ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸುವುದರೊಂದಿಗೆ ಟಿಪ್ಪುವಿನ ಇತಿಹಾಸ ಪಠ್ಯ ಪುಸ್ತಕದಿಂದ ಹೊರ ಹಾಕುವುದು ದೇಶದ ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು, ವಿದೇಶಿ ಆಕ್ರಮಣ, ಭಾರತದ ಮೊಗಲರ ಆಳ್ವಿಕೆಯನ್ನು ದೇಶದ ಇತಿಹಾಸ ಪಠ್ಯ ಪುಸ್ತಕದಿಂದ ಹೊರಗಿಡಲು ಯೋಚಿಸುವುದು ದುರದೃಷ್ಟಕರ. ಇಂತಹ ಕ್ರಮದಿಂದ ವಿದೇಶಿ ಆಕ್ರಮಣ ವಿರುದ್ಧ ಹೋರಾಡಿದ ಪೃಥ್ವಿರಾಜನ ಸ್ಥೈರ್ಯ ಪರಾಕ್ರಮವನ್ನು ಚಿತ್ರಿಸಲು ಸಾಧ್ಯವೇ ? ಎಂದು ಪ್ರಶ್ನಿಸಿದರು.

1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಜಾಫರ್‌ ಷಾರವರನ್ನು ಮರೆತಲ್ಲಿ, ಅದರಲ್ಲಿ ಭಾಗಿಯಾಗಿದ್ದ ಝಾನ್ಸಿರಾಣಿ ಲಕ್ಷ್ಮಿಬಾಯಿ, ನಾನಾ ‌ಟೋಪಿ ಮೊದಲಾದವರನ್ನು ಇತಿಹಾಸದ ಪಠ್ಯಪುಸ್ತಕದಿಂದ ಕೈಬಿಡುವರೇ? ಎಂದು ಪ್ರಶ್ನಿಸಿದ ಗೌಡರು, ಯಾವುದೇ ದೇಶದ ಪರಂಪರೆಯ ಮತ್ತು ಧರ್ಮಗಳ ಆಚರಣೆ ವಿಷಯಗಳನ್ನು ಋಷಿ ಮುನಿಗಳಿಗೆ ಮತ್ತು ಶ್ರದ್ಧಾ ಧರ್ಮಿಗಳಿಗೆ ಬಿಡಬೇಕು. ಅದರಂತೆ, ದೇಶದ ಇತಿಹಾಸ ರಚನೆಯನ್ನು ಕಲ್ಮಶವಿಲ್ಲದ ರಚನೆ ಮಾಡಲು ಇತಿಹಾಸಕಾರರಿಗೆ ಬಿಡಬೇಕು ಎಂದರು.

ನಾವು ಪ್ರಜಾಪ್ರಭುತ್ವದಲ್ಲಿ ವಾಸಿಸುವ ಮತ್ತು ನಮ್ಮ ಪರಂಪರೆ ಇತಿಹಾಸದಲ್ಲಿ ನಂಬಿಕೆಯುಳ್ಳ ಮತ್ತು ಸರ್ವಧರ್ಮೀಯರನ್ನೂ ಪ್ರತಿನಿಧಿಸುವ ವ್ಯವಸ್ಥೆಯಲ್ಲಿರುವವರು. ರಾಜಕೀಯ ಪಕ್ಷಗಳ ಸಾಮ್ರಾಜ್ಯದಲ್ಲಿ ನನಗೆ ತಿಳಿದಂತೆ ಮತ್ತು ತಮ್ಮ ಪಕ್ಷದ ಮುಚ್ಚಳಿಕೆಯಂತೆ ಇತಿಹಾಸವನ್ನು ತಿದ್ದಲು ಎಂದಿಗೂ ಸಾಧ್ಯವಿಲ್ಲ. ಈ ಎಲ್ಲಾ ಅಂಶಗಳನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲ ಪಕ್ಷಗಳು ಅರಿಯಬೇಕು ಎಂದು ಸಲಹೆ ಮಾಡಿದರು.

ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಟಿಪ್ಪು ಪಾಠವನ್ನು ನಾವೇ ಓದಿದ್ದೇವೆ. ಟಿಪ್ಪು ಹೆಸರಲ್ಲಿ ರೆಸಿಡೆನ್ಸಿಯಲ್ ಶಾಲೆ ಮಾಡಿದ್ದೇವೆ. ಗುಲ್ಬರ್ಗ, ಬಿಜಾಪುರ, ಶ್ರೀರಂಗಪಟ್ಟಣ, ರಾಮನಗರ, ಧಾರವಾಡದಲ್ಲಿ ಟಿಪ್ಪು ಹೆಸರಲ್ಲಿ ರೆಸಿಡೆನ್ಸಿಯಲ್ ಶಾಲೆಗಳಿವೆ. ಆಗ ಯಾರೂ ವಿರೋಧ ಮಾಡಿರಲಿಲ್ಲ. ಈಗ ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿ ಮಾಡೋದು ಬೇಕಿರಲಿಲ್ಲ. ಈ ಬಗ್ಗೆ ಸರ್ಕಾರ ಮತ್ತೆ ಪರಿಶೀಲನೆ ಮಾಡಬೇಕು. ಎಲ್ಲರಿಗೂ ಸಮಾಧಾನ ಆಗುವಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕನ್ನಡ ನಾಡಿನಲ್ಲಿ ಬಸವ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಕೆಂಪೇಗೌಡ ಜಯಂತಿ ಆಚರಿಸುವ ನಾವು ದೇಶಭಕ್ತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಏತಕ್ಕೆ ಅಡ್ಡಿ ಒಡ್ಡಬೇಕು ಎಂಬುದನ್ನು ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ತಿಳಿಸಬೇಕು ಎಂದಿದ್ದಾರೆ ಮಾಜಿ ಪ್ರಧಾನಿ ದೇವೇಗೌಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.