ಬೆಂಗಳೂರು: ಎಚ್.ಸಿ.ಎಲ್, ಅಪ್ಲೈಡ್ ಮೆಟೀರಿಯಲ್, ರಾಕಾನ್ ಮತ್ತು ಚಿಂಟ್ ಕಂಪನಿಗಳು ರಾಜ್ಯದಲ್ಲಿ ಒಟ್ಟು 5 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಬಂಡವಾಳ ಹೂಡಲು ಮುಂದೆ ಬಂದಿವೆ. ಈ ಹೂಡಿಕೆಯಿಂದಾಗಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಐಟಿ ಬಿಟಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.
ರಾಜ್ಯದಲ್ಲಿ ಈ ಕಂಪನಿಗಳ ಹೂಡಿಕೆಯಿಂದಾಗಿ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್, ಸೌರ ಕೋಶಗಳು, ವಾಶಿಂಗ್ ಮಷಿನ್ ಮತ್ತು ಹವಾ ನಿಯಂತ್ರಕಗಳಿಗೆ ಅಳವಡಿಸುವ ಮೋಟಾರುಗಳ ಉತ್ಪಾದನೆ ಸಾಧ್ಯವಾಗಲಿದೆ ಎಂದರು.
4 ಕೋಟಿಗೂ ಹೆಚ್ಚು ಜನರನ್ನು ತಲುಪಿದ ಬಿಟಿಎಸ್:
ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗದ 24ನೇ ಆವೃತ್ತಿಯು ಒಟ್ಟಾರೆ 4 ಕೋಟಿಗೂ ಹೆಚ್ಚು ಜನರನ್ನು ತಲುಪಿದೆ ಎಂದು ಐಟಿ/ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ: Anantapur Building Collapse: ಆಂಧ್ರದಲ್ಲಿ ವರುಣನ ರೌದ್ರಾವತಾರ.. ಅನಂತಪುರದಲ್ಲಿ ಕಟ್ಟಡ ಕುಸಿದು ಇಬ್ಬರು ಮಕ್ಕಳು ಬಲಿ
ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ 2.93 ಕೋಟಿ ಜನರನ್ನು ತಲುಪಲಾಗಿದ್ದರೆ, ಮುಖ್ಯಧಾರೆಯ ಮಾಧ್ಯಮಗಳ ಮೂಲಕ 98.10 ಲಕ್ಷ ಜನರನ್ನು ತಲುಪಲಾಗಿದೆ. ಜೊತೆಗೆ 1.45 ಕೋಟಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಘೀ ಮತ್ತು ಚಿಕೂನ್ ಗುನ್ಯಾ ಹೆಚ್ಚಳ ಭೀತಿ.. ಆತಂಕದಲ್ಲಿ ಜನ
16 ಸಾವಿರ ಬಿಸಿನೆಸ್ ಮೀಟಿಂಗ್ಗಳು ಆಗಿವೆ, 26,863 ವಾಣಿಜ್ಯ ಪ್ರತಿನಿಧಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಒಟ್ಟಾರೆ ಕಳೆದ ವರ್ಷಕ್ಕಿಂತ ಹೆಚ್ಚು ಮಂದಿ ಈ ಬಾರಿಯ ಶೃಂಗದಲ್ಲಿ ಭಾಗವಹಿಸಿದ್ದಾರೆ ಎಂದು ಸಚಿವರು ವಿವರಣೆ ನೀಡಿದ್ದಾರೆ.