ಬೆಂಗಳೂರು: ವಿಧಾನಸೌಧದ ಸಭಾಂಗಣದಲ್ಲಿ ನೂತನ ಶಾಸಕರಿಗೆ ಪ್ರಮಾಣವಚನ ಸ್ವೀಕಾರ (oath)ಸಮಾರಂಭವನ್ನು ಗುರುವಾರ ಏರ್ಪಡಿಸಲಾಗಿತ್ತು. ಈ ವೇಳೆ, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ(Shirivas mane)ಸಮಾರಂಭದ ಮಧ್ಯದಲ್ಲಿಯೇ ಸಭಾಂಗಣದಿಂದ ಹೊರನಡೆದ ಘಟನೆ ನಡೆದಿದೆ.
ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (speaker vishweshwar hegade kageri)ಅವರು ಮೊದಲಿಗೆ ಸಿಂದಗಿಯ ಬಿಜೆಪಿ ಶಾಸಕ ರಮೇಶ್ ಭೂಸನೂರು(ramesh bhusanur) ಅವರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಕಾಂಗ್ರೆಸ್ನ ಶ್ರೀನಿವಾಸ್ ಮಾನೆ ಅವರಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನೀಡಲಾಗಿತ್ತು.
ರಮೇಶ್ ಭೂಸನೂರು ಅವರಿಗೆ ಪ್ರಮಾಣ ವಚನ ಬೋಧಿಸುವ ವೇಳೆ ಕಾಂಗ್ರೆಸ್ನ ಶ್ರೀನಿವಾಸ್ ಮಾನೆ ಅವರು ಸ್ಪೀಕರ್ ಬಳಿ ಬಂದು 2 ನಿಮಿಷದಲ್ಲಿ ಬರುವುದಾಗಿ ಹೇಳಿ ಸಭಾಂಗಣದಿಂದ ಹೊರನಡೆದಿದ್ದಾರೆ.
ಶಾಸಕ ರಮೇಶ್ ಭೂಸನೂರು ಅವರಿಗೆ ಪ್ರಮಾಣ ಬೋಧನೆ ಬಳಿಕವೂ ಶ್ರೀನಿವಾಸ್ ಮಾನೆ ಬಂದಿರಲಿಲ್ಲ. ಬಳಿಕ 10 ನಿಮಿಷ ಕಾದರೂ ಶ್ರೀನಿವಾಸ್ ಮಾನೆ ಸುಳಿವು ಸಿಗದ ಕಾರಣ ಸಿಡಿಮಿಡಿಗೊಂಡ ಸ್ಪೀಕರ್ ಕಾಗೇರಿ ಕಾರ್ಯಕ್ರಮ ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಶ್ರೀನಿವಾಸ್ ಮಾನೆ ಅವರು ಸ್ಪೀಕರ್ ಸಭಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲು ಸೂಚಿಸಿದ್ಧಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಡಿ.ಕೆ.ಶಿವಕುಮಾರ್ ಬಂದ ಬಳಿಕವೇ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕರಿಸಲು ಇಚ್ಚಿಸಿದ್ದರು. ಇದರಿಂದ ಕಾರ್ಯಕ್ರಮದ ಮಧ್ಯೆಯೇ ಹೊರನಡೆದಿದ್ದರು ಎಂದು ಹೇಳಲಾಗಿದೆ. ಇದರಿಂದ ಹಾನಗಲ್ನ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸದೆಯೇ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.