ETV Bharat / city

2ನೇ ಹಂತದ ಗ್ರಾಮ ಸಮರ: ರಾಜ್ಯದಲ್ಲಿ ಶೇ. 80.71 ರಷ್ಟು ಮತದಾನ - ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ

GP ELECTION LIVE UPDATES
2ನೇ ಹಂತದ ಗ್ರಾಮ ಸಮರ
author img

By

Published : Dec 27, 2020, 6:53 AM IST

Updated : Dec 27, 2020, 10:57 PM IST

22:55 December 27

ರಾಜ್ಯದಲ್ಲಿ ಶೇ. 80.71 ರಷ್ಟು ಮತದಾನ

GP ELECTION LIVE UPDATES
ಜಿಲ್ಲಾವಾರು ಮತದಾನದ ವಿವರ

ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಒಟ್ಟು ಶೇ. 80.71 ರಷ್ಟು ಮತದಾನವಾಗಿದೆ.

22:28 December 27

ಕುಷ್ಟಗಿಯಲ್ಲಿ ಶೇ.81.05ರಷ್ಟು ಮತದಾನ

ಕುಷ್ಟಗಿ: ತಾಲೂಕಿನ 36 ಗ್ರಾಮ ಪಂಚಾಯಯತ್​ಗಳ 569 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಶೇ.81.05ರಷ್ಟು ಮತದಾನವಾಗಿದೆ.  

22:27 December 27

ಕಲಬುರಗಿಯಲ್ಲಿ ಶೇ. 74.55 ರಷ್ಟು ಮತದಾನ

GP ELECTION LIVE UPDATES
ಕಲಬುರಗಿಯ ಮತಗಟ್ಟೆಯೊಂದರಲ್ಲಿ ಕಂಡು ಬಂದ ದೃಶ್ಯ

ಕಲಬುರಗಿ : ಜಿಲ್ಲೆಯ ಸೇಡಂ, ಜೇವರ್ಗಿ, ಚಿತ್ತಾಪುರ, ಯಡ್ರಾಮಿ ಮತ್ತು ಚಿಂಚೋಳಿ ತಾಲೂಕುಗಳ 116 ಗ್ರಾಮ ಪಂಚಾಯತ್​ಗಳ 1,711 ಸ್ಥಾನಗಳಿಗೆ ಇಂದು 844 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಸೇಡಂನಲ್ಲಿ ಶೇ. 82.39, ಜೇವರ್ಗಿಯಲ್ಲಿ ಶೇ. 77.65 ಚಿತ್ತಾಪುರದಲ್ಲಿ ಶೇ. 66.20 ಯಡ್ರಾಮಿಯಲ್ಲಿ ಶೇ. 69.65 ಹಾಗೂ ಚಿಂಚೋಳಿಯಲ್ಲಿ ಶೇ. 76.85% ಸೇರಿ ಒಟ್ಟು ಶೇ. 74.55 ರಷ್ಟು ಮತದಾನವಾಗಿದೆ.

22:26 December 27

ಮಂಡ್ಯದಲ್ಲಿ ಶೇ. 88.13 ರಷ್ಟು ಮತದಾನ

GP ELECTION LIVE UPDATES
ಮಂಡ್ಯದಲ್ಲಿ ಶೇ. 88.13 ರಷ್ಟು ಮತದಾನ

ಮಂಡ್ಯ: ಜಿಲ್ಲೆಯ ನಾಗಮಂಗಲ, ಶ್ರೀರಂಗಪಟ್ಟಣ, ಪಾಂಡುಪುರ ಹಾಗೂ ಕೆ.ಆರ್. ಪೇಟೆ ತಾಲೂಕುಗಳ 104 ಗ್ರಾಮ ಪಂಚಾಯತ್​ಗಳ 1,786 ಸ್ಥಾನಗಳ ಪೈಕಿ 185 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 1,598 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು. ಒಟ್ಟು 4,004 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು.

ಇಂದು ನಡೆದ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಶೇ. 88.38, ಶ್ರೀರಂಗಪಟ್ಟಣದಲ್ಲಿ ಶೇ. 84.31, ಪಾಂಡುಪುರದಲ್ಲಿ ಶೇ.90.36 ಹಾಗೂ ಕೆ.ಆರ್. ಪೇಟೆಯಲ್ಲಿ ಶೇ. 88.37 ಸೇರಿ ಜಿಲ್ಲೆಯಲ್ಲಿ ಒಟ್ಟು ಶೇ. 88.13 ಮತದಾನವಾಗಿದೆ.  

22:26 December 27

ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ

GP ELECTION LIVE UPDATES
ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ

ಕಲಬುರಗಿ : ಗ್ರಾಮ ಪಂಚಾಯತ್‌ ಮಹಿಳಾ ಅಭ್ಯರ್ಥಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಶುಭ ಸಮಾಚಾರ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಕೇಳಿ ಬಂದಿದೆ.

ಇಂಗಳಗಿ ಗ್ರಾಮದ ವಾರ್ಡ್ ನಂ.4ರ ಅಭ್ಯರ್ಥಿ ಮಂಜುಳಾ ಗುಡುಬಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಕ್ಷೇಮವಾಗಿದ್ದಾರೆ. ಮಂಜುಳಾ ಹಾಗೂ ಅವರ ಅತ್ತೆ ಇಬ್ಬರು ಕಣದಲ್ಲಿದ್ದಾರೆ.

22:25 December 27

ಹುಮ್ಮಸ್ಸಿನಿಂದ ಮತ ಚಲಾಯಿಸಿದ ವೃದ್ಧರು

GP ELECTION LIVE UPDATES
ಹುಮ್ಮಸ್ಸಿನಿಂದ ಮತ ಚಲಾಯಿಸಿದ ವೃದ್ಧರು

ದಾವಣಗೆರೆ : ಎರಡನೇ ಹಂತದ ಗ್ರಾಮ ಪಂಚಾಯತ್‌ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯಿತು. ಹರಿಹರ ತಾಲೂಕಿನ ದೇವರ ಬೆಳಕೆರೆ ಗ್ರಾಮದಲ್ಲಿ ವೃದ್ದರು ಹುಮ್ಮಸ್ಸಿನಿಂದ ಮತದಾನ ಮಾಡಿದರು. ಮೂವರು ಶತಾಯುಷಿಗಳು ತಮ್ಮ ಹಕ್ಕನ್ನು ಚಲಾಯಿಸಿ ಎಲ್ಲರ ಗಮನ ಸೆಳೆದರು. 

21:18 December 27

ಉತ್ತರ ಕನ್ನಡದಲ್ಲಿ ಶೇ. 80.58 ರಷ್ಟು ಮತದಾನ

GP ELECTION LIVE UPDATES
ಗಣ್ಯರಿಂದ ಮತದಾನ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ, ದಾಂಡೇಲಿ ತಾಲೂಕುಗಳ 126 ಗ್ರಾಮ ಪಂಚಾಯತ್​ಗಳ 1,282 ಸ್ಥಾನಗಳಿಗೆ 664 ಮತಗಟ್ಟೆಗಳ ಮೂಲಕ ಇಂದು ಮತದಾನ ನಡೆಯಿತು.  

ಒಟ್ಟು 3,452 ಅಭ್ಯರ್ಥಿಗಳು ಕಣದಲ್ಲಿದ್ದರು. ಶಿರಸಿಯಲ್ಲಿ ಶೇ. 77.75, ಸಿದ್ದರಾಪುರದಲ್ಲಿ ಶೇ.82.02, ಯಲ್ಲಾಪುರದಲ್ಲಿ ಶೇ. 80.87, ಮುಂದಗೋಡದಲ್ಲಿ ಶೇ. 83.99, ಹಳಿಯಾಳದಲ್ಲಿ ಶೇ. 84.64, ದಾಂಡೇಲಿಯಲ್ಲಿ ಶೇ. 75.23, ಜೋಯಿಡಾದಲ್ಲಿ ಶೇ.76.32 ಸೇರಿ ಜಿಲ್ಲೆಯಲ್ಲಿ ಅಂದಾಜು ಶೇ. 80.58 ರಷ್ಟು ಮತದಾನವಾಗಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.  

ಪ್ರಮುಖರ ಮತ ಚಲಾವಣೆ : ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸೋಂದಾ‌ ಗ್ರಾಮದ ಖಾಸಾಪಾಲ ಶಾಲೆಯಲ್ಲಿ ಮತದಾನ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಯಲ್ಲಾಪುರದ ಅರೆಬೈಲ್ ಶಾಲೆಯಲ್ಲಿ ಹಕ್ಕು ಚಲಾಯಿಸಿದರು. ವಿಧಾನಸಭಾ ಸ್ಚೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಕುಳವೆ ಗ್ರಾಮ‌ ಪಂಚಾಯತ್​ ವ್ಯಾಪ್ತಿಯ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು. 

21:07 December 27

ಅಭ್ಯರ್ಥಿ ಸಾವು

GP ELECTION LIVE UPDATES
ಮೃತ ಅಭ್ಯರ್ಥಿ ಶೋಭಾ ಹಡಪದ

ಧಾರವಾಡ : ತಾಲೂಕಿನ ಮನಗುಂಡಿ ಗ್ರಾಮದ ಶೋಭಾ ಹಡಪದ ಎಂಬ ಮಹಿಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಮನಗುಂಡಿ ಗ್ರಾಮದ ಎರಡನೇ ವಾರ್ಡ್ 'ಅ' ವರ್ಗದ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ನಿನ್ನೆ ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡ ಪರಿಣಾಮ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.‌‌‌

21:07 December 27

GP ELECTION LIVE UPDATES
ಹಾವೇರಿಯಲ್ಲಿ ನಡೆದ ಮತದಾನದ ಚಿತ್ರಣ

ಹಾವೇರಿ : ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಶೇ. 84.81ರಷ್ಟು ಮತದಾನವಾಗಿದೆ. ಶಿಗ್ಗಾಂವಿ ಶೇ. 85.09, ಸವಣೂರು ಶೇ. 83.63, ಹಾನಗಲ್ ಶೇ. 84.30 ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಶೇ. 87.32 ಮತ ಚಲಾವಣೆಯಾಗಿದೆ.

20:38 December 27

ಮತಗಟ್ಟೆಗೆ ನುಗ್ಗಿದ ಪ್ಲೈಯಿಂಗ್ ಸ್ನೇಕ್

GP ELECTION LIVE UPDATES
ಮತಗಟ್ಟೆಗೆ ನುಗ್ಗಿದ ಪ್ಲೈಯಿಂಗ್ ಸ್ನೇಕ್

ಚಿಕ್ಕಬಳ್ಳಾಪುರ : ತಾಲೂಕಿನ ಪೊಶೇಟ್ಟಿಹಳ್ಳಿ ಗ್ರಾಮದಲ್ಲಿ ಮತದಾನದ ವೇಳೆ ಮತಗಟ್ಟೆಗೆ ಪ್ಲೈಯಿಂಗ್ ಸ್ನೇಕ್ ಜಾತಿಯ ಹಾವೊಂದು ನುಗ್ಗಿದ್ದರಿಂದ ಮತದಾರರು ಸ್ಥಳದಿಂದ ದಿಕ್ಕಾಪಾಲಾಗಿ ಓಡಿದರು. ಬಳಿಕ ಹಾವನ್ನು ಓಡಿಸಿ, ಮತದಾನ ಮುಂದುವರೆಸಲಾಯಿತು.  

20:27 December 27

ಧಾರವಾಡ ಜಿಲ್ಲೆಯಲ್ಲಿ ಶೇ.79.50 ಮತದಾನ

ಹುಬ್ಬಳ್ಳಿ : ಹುಬ್ಬಳ್ಳಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ವ್ಯಾಪ್ತಿಯ 71 ಗ್ರಾಮ ಪಂಚಾಯತ್​ಗಳಿಗೆ 469 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಒಟ್ಟು 1,032 ಸ್ಥಾನಗಳ ಪೈಕಿ 62 ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 970 ಸದಸ್ಯ ಸ್ಥಾನಗಳಿಗೆ 2,912 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿ ಶೇ. 79.90, ಕುಂದಗೋಳದಲ್ಲಿ ಶೇ.79.81, ಅಣ್ಣಿಗೇರಿಯಲ್ಲಿ ಶೇ‌.81.52, ನವಲಗುಂದದಲ್ಲಿ ಶೇ. 76.75 ಸೇರಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು ಶೇ.79.50 ಮತದಾನವಾಗಿದೆ.

20:27 December 27

ಮತಪತ್ರ ಹರಿದ ಯುವ ಮತದಾರರು

ಕುಷ್ಟಗಿ : ತಾಲೂಕಿನ ಹುಲ್ಸಗೇರಿ, ಚಳಗೇರಾ, ಕಲಾಲಬಂಡಿ, ಜೂಲಕಟ್ಟಿ ಗ್ರಾಮಗಳ ಮತಗಟ್ಟೆಗಳಲ್ಲಿ ನಾಲ್ವರು ಯುವ ಮತದಾರರು ಮತಪತ್ರ ಹರಿದು ಹಾಕಿ ಪಜೀತಿಗೆ ಸಿಲುಕಿದ್ದರು.

ಮತಪತ್ರದಲ್ಲಿ ಹೇಗೆ ಮತ ಚಲಾಯಿಸಬೇಕು ಎಂದು ತಿಳಿಯದ ಇವರು, ಮತದಾನ ಮಾಡಿದ ಬಳಿಕ ಬ್ಯಾಲೆಟ್​ ಪೇಪರ್​ ಹರಿದು ಮತಪೆಟ್ಟಿಗೆಗೆ ಹಾಕಲು ಮುಂದಾದಾಗ ಪೊಲೀಸರು ತಡೆದು ವಶಕ್ಕೆ ಪಡೆದರು. ಬಳಿಕ ಉದ್ದೇಶ ಪೂರ್ವಕವಾಗಿ ಕೃತ್ಯವೆಸಗಿಲ್ಲ ಎಂದು ತಿಳಿದು ಬಿಟ್ಟು ಕಳಿಸಿದ್ದಾರೆ. ಈ ನಾಲ್ವರಿಗೂ ಮರು ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಹಶೀಲ್ದಾರ್​ ಎಂ.ಸಿದ್ದೇಶ ತಿಳಿಸಿದ್ದಾರೆ. 

20:26 December 27

ಬಿದರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಲಾಠಿ ಚಾರ್ಜ್

ಮಹದೇವಪುರ: ಇಲ್ಲಿನ 11 ಗ್ರಾಮ ಪಂಚಾಯತ್​ಗಳಲ್ಲಿ ಬಹುತೇಕ ಶಾಂತಿಯುತವಾಗಿ ಚುನಾವಣೆ ನಡೆಯಿತು. ಬಿದರಹಳ್ಳಿ ಗ್ರಾಮ ಪಂಚಾಯತ್​​ ವ್ಯಾಪ್ತಿಯ ಕಾಡಗ್ರಹಾರದಲ್ಲಿ ಮತದಾನದ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಉಂಟಾಗಿದ್ದರಿಂದ ಪೊಲೀಸರು ಲಾಠಿ ಚಾರ್ಜ್​ ಮಾಡಿದರು.  

ಬಿದರಹಳ್ಳಿ ಪಂಚಾಯತ್​ ವ್ಯಾಪ್ತಿಯ ಆದೂರು, ಹಿರಂಡಳ್ಳಿ,‌ ರಾಂಪುರ ಗ್ರಾಮಗಳಲ್ಲಿ‌ ಒಂದೇ ಮತಗಟ್ಟೆಯಿದ್ದರಿಂದ ಸಂಜೆ 5 ಗಂಟೆಯವರೆಗೂ ಜನರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಮತ ಚಲಾಯಿಸಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು. ಬೆಂಗಳೂರು ಪೂರ್ವ ತಾಲೂಕಿನಲ್ಲಿ ಒಟ್ಟು ಶೇ. 70 ರಷ್ಟು ಮತ ಚಲಾವಣೆಯಾಗಿದೆ.

19:56 December 27

228 ಮಂದಿಗೆ ಮತದಾನಕ್ಕೆ ಅವಕಾಶ

ಹಾಸನ : ಬೇಲೂರು ವಿಧಾನಸಭಾ ಕ್ಷೇತ್ರದ ಕಲ್ಲಹಳ್ಳಿ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಮತದಾನದಿಂದ ವಂಚಿತರಾಗುತ್ತಿದ್ದ 228 ಮಂದಿಗೆ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಲಾಯಿತು.  

ಕಲ್ಲಹಳ್ಳಿ ಗ್ರಾಮ ಪಂಚಾಯತ್​ ವ್ಯಾಪ್ತಿಯ ಅಗ್ಗೊಡ್ಲು ಕ್ಷೇತ್ರದ ಸಾಣೇನಹಳ್ಳಿ, ಹನುಮನಹಳ್ಳಿ, ಗೋಣಿಮಠ ಗ್ರಾಮಗಳ ಸುಮಾರು 820 ಮತದಾರ ಪೈಕಿ ಸಾಣೆಹಳ್ಳಿ ಗ್ರಾಮದ 225 ಮಂದಿಯನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಇದರಿಂದ ಅಗೋಡ್ಲು ಕ್ಷೇತ್ರದ ಜನರು ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಹೀಗಾಗಿ, ರಾತ್ರೋರಾತ್ರಿ ಇವರನ್ನು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. 

19:43 December 27

ಅಥಣಿಯಲ್ಲಿ ಶೇ. 81.37 ಮತದಾನ

ಅಥಣಿ: ತಾಲೂಕಿನಲ್ಲಿ ಎರಡನೆಯ ಹಂತದ ಗ್ರಾಮ ಪಂಚಾಯತ್​ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಶೇ. 81.37 ಮತ ಚಲಾವಣೆಯಾಗಿದೆ. ಇಂದು ಒಟ್ಟು 41 ಗ್ರಾಮ ಪಂಚಾಯತ್​ಗಳಿಗೆ 344 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಒಟ್ಟು 651 ಸ್ಥಾನಗಳಿಗೆ1,760 ಅಭ್ಯರ್ಥಿಗಳು ಕಣದಲ್ಲಿದ್ದರು.

19:43 December 27

ಕೋವಿಡ್ ಸೋಂಕಿತರಿಂದ ಮತದಾನ

ಹುಬ್ಬಳ್ಳಿ : ತಾಲೂಕಿನ ಶೇರೆವಾಡ ಮತ್ತು ಶಿರಗುಪ್ಪಿ ಗ್ರಾಮದ ಮತಗಟ್ಟೆಗಳಲ್ಲಿ ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ಬಂದು ಮತದಾನ ಮಾಡಿದರು.

19:41 December 27

ಶತಾಯುಷಿಗಳಿಂದ ಹಕ್ಕು ಚಲಾವಣೆ

ಬೆಂಗಳೂರು : ಪೂರ್ವ ತಾಲೂಕು ಮಂಡೂರು ಗ್ರಾಮದ ಶತಾಯುಷಿ ಗೌಡರ ಕಮಲಮ್ಮ ಸೇರಿದಂತೆ ಮ‌ೂರು ಜನ 90 ವರ್ಷ ದಾಟಿದ ಹಿರಿಯ ನಾಗರಿಕರು ಮತಗಟ್ಟೆ ಸಂಖ್ಯೆ 2 ರಲ್ಲಿ ಮತದಾನ ಮಾಡಿದರು. ಮೊಮ್ಮಗ ತೇಜಸ್ ಗೌಡ ಜೊತೆ ಮತಗಟ್ಟೆಗೆ ಆಗಮಿಸಿದ ಗೌಡರ ಕಮಲಮ್ಮ ಹಕ್ಕು ಚಲಾಯಿಸಿದರು.

19:16 December 27

GP ELECTION LIVE UPDATES
ಬಳ್ಳಾರಿಯ ಮತಗಟ್ಟೆಯಲ್ಲಿ ಕಂಡು ಬಂದ ದೃಶ್ಯ

ಬಳ್ಳಾರಿ : ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾ.ಪಂ ಚುನಾವಣೆ ಶಾಂತಿಯುತವಾಗಿ ಕೊನೆಗೊಂಡಿದೆ. ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಕೊಟ್ಟೂರು, ಹರಪನಹಳ್ಳಿ ಸೇರಿ ಒಟ್ಟು 6 ತಾಲೂಕುಗಳ 144 ಗ್ರಾ.ಪಂಗಳಿಗೆ 1,150 ಮತಗಟ್ಟೆಗಳಲ್ಲಿ ಇಂದು ಮತದಾನ ನಡೆಯಿತು. ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.  

ಈಗಾಗಲೇ 319 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು 2,243 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 5,457 ಅಭ್ಯರ್ಥಿಗಳು ಕಣದಲ್ಲಿದ್ದರು. ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ. 30 ರಂದು ಯಾರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ ಎಂಬುವುದು ಸ್ಪಷ್ಟವಾಗಲಿದೆ.

19:15 December 27

ಮತದಾನಕ್ಕೆ ಬಂದಿದ್ದ ವ್ಯಕ್ತಿ ಸಾವು

GP ELECTION LIVE UPDATES
ತೀರ್ಥಪುರ ಗ್ರಾಮದ ಮತಗಟ್ಟೆ

ತುಮಕೂರು : ಮತಗಟ್ಟೆಗೆ ಬಂದ ವೃದ್ದರೊಬ್ಬರು ಮತದಾನ ಮಾಡುವ ಮುನ್ನವೇ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ.

ಮರುಳಾರಾಧ್ಯ (76) ಮೃತ ವ್ಯಕ್ತಿ. ನಿವೃತ್ತ ಶಿಕ್ಷಕರಾಗಿರುವ ಇವರು, ಚಿಕ್ಕನಾಯಕನಹಳ್ಳಿ ತಾಲೂಕು ತೀರ್ಥಪುರ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ ನಂ.174 ರಲ್ಲಿ ಮತ ಚಲಾಯಿಸಲು ಬಂದಿದ್ದ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.  

19:15 December 27

ಮತದಾನ ಮಾಡಿದ ಶತಾಯುಷಿ

GP ELECTION LIVE UPDATES
ಮತದಾನ ಮಾಡಿದ ಶತಾಯುಷಿ

ಮೈಸೂರು: ತಿ. ನರಸೀಪುರ ತಾಲೂಕು ಕಟ್ಟೆ ಕೊಪ್ಪಲು ಗ್ರಾಮದ 115 ವರ್ಷದ ದೇವಮ್ಮ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಮಾದರಿಯಾದರು.

18:52 December 27

ಮತಗಟ್ಟೆಯಿಂದ ಹಿಂದಿರುಗುತ್ತಿದ್ದ ಅಜ್ಜಿ ಸಾವು

GP ELECTION LIVE UPDATES
ಮೃತ ಅಜ್ಜಿ ಸರೋಜಮ್ಮ

ಚಿತ್ರದುರ್ಗ : ಮತದಾನ ಮಾಡಿ ಹಿಂದಿರುಗುತ್ತಿದ್ದ ಹಿರಿಯೂರು ತಾಲೂಕಿನ ಬಿರೇನಹಳ್ಳಿ ಗ್ರಾಮದ ವೃದ್ಧೆ ಸರೋಜಮ್ಮ (92) ಮೃತಪಟ್ಟಿದ್ದಾರೆ.  

ಮೊಮ್ಮಗನ ಜೊತೆ ತೆರಳಿ ಮತ ಚಲಾಯಿಸಿದ್ದ ಸರೋಜಮ್ಮ ಮನೆಗೆ ಮರಳುವ ವೇಳೆ ಕೊನೆಯುಸಿರೆಳೆದ್ದಾರೆ.

18:51 December 27

ಅಭ್ಯರ್ಥಿ ಮೇಲೆ ಹಲ್ಲೆ

ಹಲ್ಲೆಗೊಳಗಾದ ಅಭ್ಯರ್ಥಿ ತಮ್ಮಣ್ಣ

ಮಂಡ್ಯ : ಗ್ರಾಮ ಪಂಚಾಯತ್​ ಚುನಾವಣೆಯ ಅಭ್ಯರ್ಥಿ ಮೇಲೆ ಇಬ್ಬರು ಕಿಡಿಗೇಡಿಗಳು ಹಲ್ಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕು ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಎಸ್.ಆರ್.ಲೋಕೇಶ್ ಮತ್ತು ನಂಜೇಗೌಡ ಎಂಬವರು ಮತಗಟ್ಟೆ ಬಳಿ ಅಭ್ಯರ್ಥಿ ತಮ್ಮಣ್ಣನ ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

17:55 December 27

ಕುಟಕನಕೇರಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

GP ELECTION LIVE UPDATES
ಕುಟಕನಕೇರಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಬಾಗಲಕೋಟೆ : ಕಳೆದ ಎರಡು ಅವಧಿಯಲ್ಲೂ ಮತದಾನ ಬಹಿಷ್ಕರಿಸಿದ್ದ ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮಸ್ಥರು ಈ ಬಾರಿಯೂ ಮತ ಚಲಾಯಿಸಲು ಹಿಂದೇಟು ಹಾಕಿದ್ದಾರೆ.

ಕುಟಕನಕೇರಿ ಗ್ರಾಮ ಪಂಚಾಯಯತ್​ ಮಾಡಬೇಕೆಂಬುವುದು ಜನರ ಆಗ್ರಹವಾಗಿದ್ದು, ಹೀಗಾಗಿ, ಗ್ರಾಮದ ಏಳು ಸ್ಥಾನಗಳಿಗೂ ಹಕ್ಕು ಚಲಾಯಿಸದೆ ಬಹಿಷ್ಕಾರ ಮಾಡಿದ್ದಾರೆ.

17:38 December 27

ಮತದಾರರಿಗೆ ಹಂಚಲು ತಂದಿದ್ದ ಸ್ಟೀಲ್ ಪಾತ್ರೆ ವಶ

GP ELECTION LIVE UPDATES
ಮತದಾರರಿಗೆ ಹಂಚಲು ಪಾತ್ರೆ ತಂದಿದ್ದ ಕಾರು

ಹಾಸನ : ಅರಸೀಕೆರೆ ತಾಲೂಕಿನ ಹಾರನಹಳ್ಳಿ ಹಾಗೂ ಬೆಲವತ್ತಳ್ಳಿಯ ಮತದಾರರಿಗೆ ಹಂಚಲು ತಂದಿದ್ದ ಪಾತ್ರೆ ಮತ್ತು ಬೆಲೆಬಾಳುವ ಬೆಳ್ಳಿ ದೀಪಗಳನ್ನು ಅರಸೀಕೆರೆ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಬೆಲವತ್ತಹಳ್ಳಿ ಹೊರವಲಯದ ಅರಣ್ಯ ಪ್ರದೇಶದಲ್ಲಿ ಮಾರುತಿ ಓಮ್ನಿ ಕಾರಿನಲ್ಲಿ ಸ್ಟೀಲ್ ಪಾತ್ರೆಗಳನ್ನು ತಂದು ಹಂಚುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ನೂರಕ್ಕೂ ಅಧಿಕ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ದಾಳಿ ವೇಳೆ, ಆರೋಪಿಗಳು ವಾಹನ ಮತ್ತು ಹಂಚಲು ತಂದಿದ್ದ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. 

17:22 December 27

ಶಾಸಕರಿಂದ ಮತದಾನ

GP ELECTION LIVE UPDATES
ಹಕ್ಕು ಚಲಾಯಿಸಿದ ಶಾಸಕರು

ಮೈಸೂರು : ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಅಶ್ವಿನ್ ಕುಮಾರ್ ತಮ್ಮ ಗ್ರಾಮಗಳಲ್ಲಿ ಮತದಾನ ಮಾಡಿದರು.

ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಸಿದ್ಧರಾಮನಹುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತದಾನ ಮಾಡಿದರೆ, ಟಿ. ನರಸೀಪುರ ತಾಲೂಕಿನ ಶಾಸಕ ಅಶ್ವಿನ್ ಕುಮಾರ್, ಕುಟುಂಬ ಸಮೇತರಾಗಿ‌ ಆಗಮಿಸಿ ತುಂಬಲ ಗ್ರಾಮ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

17:18 December 27

ಮತದಾರರ ಪಟ್ಟಿಯಲ್ಲಿ ಹೆಸರು ಮಾಯ

GP ELECTION LIVE UPDATES
ಸುಬ್ರಹ್ಮಣ್ಯದ ಬಿಳಿನೆಲೆ ಮತಗಟ್ಟೆಯಲ್ಲಿ ಮತದಾರರ ಪಟ್ಟಿ ಗೊಂದಲ

ಸುಬ್ರಹ್ಮಣ್ಯ : ಕಡಬ ತಾಲೂಕಿನ ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಕೆಲವು ಮತದಾರರ ಹೆಸರು ಇಲ್ಲದಿರುವುದು ಗೊಂದಲಕ್ಕೆ ಕಾರಣವಾಯಿತು. ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಗೆ ಬಂದು ಚುನಾವಣಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಸ್ಥಳಕ್ಕೆ ಕಡಬ ತಹಶೀಲ್ದಾರ್ ಅನಂತ ಶಂಕರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದರು. ವಾರ್ಡ್ ವಿಂಗಡಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ.  

16:53 December 27

ಸಹೋದರರ ಸ್ಪರ್ಧೆ

GP ELECTION LIVE UPDATES
ಸಹೋದರರ ಸ್ಪರ್ಧೆ

ಹಾಸನ : ಆಲೂರು ತಾಲೂಕಿನ ಹುಣಸವಳ್ಳಿ ಗ್ರಾಮ ಪಂಚಾಯತ್​ ವ್ಯಾಪ್ತಿಯ ಮಾವನೂರು ಕ್ಷೇತ್ರದ ಒಂದೇ ಸ್ಥಾನಕ್ಕೆ ಸಹೋದರರಿಬ್ಬರು ಸ್ಪರ್ಧೆ ಮಾಡಿ ಗಮನ ಸೆಳೆದಿದ್ದಾರೆ.  

ಮಾವನೂರು ಗ್ರಾಮದ ಮೋಹನ್ ಮತ್ತು ಸಹೋದರ ಗಂಗಾಧರ ಒಂದೇ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ನಾವಿಬ್ಬರು ಸಹೋದರರಾಗಿದ್ದರೂ, ಚುನಾವಣೆ ಬಂದಾಗ ಬೇರೆ ಬೇರೆ. ಜನರು ನಮ್ಮ ಕೆಲಸ ನೋಡಿ ಮತ ಹಾಕುತ್ತಾರೆ ಎಂದು ಇಬ್ಬರು ಅಭ್ಯರ್ಥಿಗಳೂ ತಿಳಿಸಿದ್ದಾರೆ. ಮಾವನೂರು ಕ್ಷೇತ್ರದಲ್ಲಿ 210 ಮತಗಳಿವೆ.  

16:35 December 27

ಬ್ಯಾಲೆಟ್​ ಪೇಪರ್​ ಅದಲು ಬದಲಾಗಿ ಗೊಂದಲ

ಚುನಾವಣಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮತದಾರರು

ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ‌ ಅರಳೇಶ್ವರ ಗ್ರಾಮದ ಮತಗಟ್ಟೆಯೊಂದರಲ್ಲಿ ಬ್ಯಾಲೆಟ್​ ಪೇಪರ್​ ಅದಲು ಬದಲುಗೊಂಡು ಕೆಲಕಾಲ ಗೊಂದಲವುಂಟಾಯಿತು.

ಚುನಾವಣಾ ಸಿಬ್ಬಂದಿ ಅರಳೇಶ್ವರ ಗ್ರಾಮ ಪಂಚಾಯತ್​ ಚುನಾವಣೆಯ ಬ್ಯಾಲೇಟ್ ಪೇಪರ್ ಬದಲು, ಶಿರಗೋಡ ಗ್ರಾಮ ಪಂಚಾಯತ್​ನ ಬ್ಯಾಲೇಟ್​ ಪೇಪರ್​ ನೀಡಿದ್ದು ಗೊಂದಲಕ್ಕೆ ಕಾರಣವಾಯಿತು. 

ಈಗಾಗಲೇ 300 ಕ್ಕೂ ಅಧಿಕ ಮಂದಿ ಬೇರೆ ಬ್ಯಾಲೆಟ್​ ಪೇಪರ್​​ನಲ್ಲೇ ಮತ ಚಲಾಯಿಸಿದ್ದಾರೆ. ಆಕ್ರೋಶಗೊಂಡ ಮತದಾರರು ಮತ್ತು ಅಭ್ಯಥಿರ್ಗಳು ಚುನಾವಣಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಸ್ಥಳಕ್ಕೆ ಎ.ಸಿ ಅನ್ನಪೂರ್ಣ ಮುದಕಮ್ಮನವರ ಹಾಗೂ ತಹಶೀಲ್ದಾರ್​ ಎರಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

16:25 December 27

ಟಾರ್ಚ್ ಹಿಡಿದು ಮತಯಾಚನೆ

ಟಾರ್ಚ್ ಹಿಡಿದು ಮತಯಾಚಿಸುತ್ತಿರುವ ಅಭ್ಯರ್ಥಿ ಬೆಂಬಲಿಗ

ವಿರಾಜಪೇಟೆ (ಕೊಡಗು) : ತಾಲೂಕಿನ ಹಾಲುಗುಂದ ಗ್ರಾಮ ಪಂಚಾಯತ್​​ ವ್ಯಾಪ್ತಿಯ ಕೊಂಡಂಗೇರಿ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ಚುನಾವಣಾ ಚಿಹ್ನೆ ಟಾರ್ಚ್ ಹಿಡಿದು ಮತ ಯಾಚಿಸಿದ್ದಾರೆ.

ಅಭ್ಯರ್ಥಿ ಎಂ.ಕೆ.ನಾಚಪ್ಪ ಅವರ ಚಿಹ್ನೆ ಟಾರ್ಚ್ ಆಗಿದ್ದು, ಅವರ ಬೆಂಬಲಿಗ ಯೂಸುಫ್ ಎಂಬಾತ ಮತಗಟ್ಟೆ ಬಳಿ ಕೈಯಲ್ಲಿ ಟಾರ್ಚ್ ಹಿಡಿದು ಮತಯಾಚಿಸಿದ್ದು ಕಂಡು ಬಂತು.  

ತಾಲೂಕಿನ ಒಂಟಿಯಂಗಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 53 ರಲ್ಲಿ ವಿಶೇಷ ಚೇತನ ಮಹಿಳೆಯೊಬ್ಬರು ಮತ ಚಲಾಯಿಸಿದರು  

16:21 December 27

ಕುಷ್ಟಗಿಯಲ್ಲಿ ಜನ ಪ್ರತಿನಿಧಿಗಳಿಂದ ಮತದಾನ

GP ELECTION LIVE UPDATES
ಹಕ್ಕು ಚಲಾಯಿಸಿದ ಮಾಜಿ ಶಾಸಕ ಹಸನಸಾಬ್ ದೋಟಿಹಾಳ

ಕುಷ್ಟಗಿ (ಕೊಪ್ಪಳ): ಮಾಜಿ ಶಾಸಕ, ಬಿಜೆಪಿ‌ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್​ ಪತ್ನಿ ಲಕ್ಷ್ಮೀದೇವಿ , 90 ವರ್ಷದ ಅಜ್ಜಿ ನೀಲಮ್ಮ ಜೊತೆ ಕೊರಡಕೇರಾ ಗ್ರಾಮದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಇನ್ನೋರ್ವ ಮಾಜಿ ಶಾಸಕ ಹಸನಸಾಬ್, ದೋಟಿಹಾಳ ಗ್ರಾಮದ ಮತಗಟ್ಟೆಯಲ್ಲಿ ಮತ್ತು ಹಿರೇಮನ್ನಾಪೂರ ಜಿ.ಪಂ. ಸದಸ್ಯ ಕೆ.‌ಮಹೇಶ್​ ಸ್ವಗ್ರಾಮ ನವಲಹಳ್ಳಿಯಲ್ಲಿ ಮತ ಚಲಾಯಿಸಿದರು.

15:37 December 27

ಸಚಿವ ಮಾಧುಸ್ವಾಮಿ ಕುಟುಂಬದಿಂದ ಮತಚಲಾವಣೆ

GP ELECTION LIVE UPDATES
ಸಚಿವ ಮಾಧುಸ್ವಾಮಿ ಕುಟುಂಬದಿಂದ ಮತಚಲಾವಣೆ

ತುಮಕೂರು : ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ ಪುರ ಗ್ರಾಮದ ಸರ್ಕಾರಿ ಪ್ರಾರ್ಥಮಿಕ ಶಾಲೆಯ ಮತಗಟ್ಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮತದಾನ ಮಾಡಿದರು. ಪತ್ನಿ, ಮಗ, ಮಗಳು ಸಚಿವರಿಗೆ ಸಾಥ್​ ನೀಡಿದರು. 

15:36 December 27

ಯಡಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಮಾಚಾರ

GP ELECTION LIVE UPDATES
ವಾಮಾಚಾರ ನಡೆದ ಸ್ಥಳ

ಬಳ್ಳಾರಿ : ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಕ್ಕಿಕಟ್ಟಿ ಗ್ರಾಮದ ನಾಲ್ಕು ಕಡೆ ವಾಮಾಚಾರ ಮಾಡಲಾಗಿದೆ.  

ಗ್ರಾಮ ಪಂಚಾಯತ್​ ಚುನಾವಣೆ ಹಿನ್ನಲೆ ವಾಮಾಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಾಮಾಚಾರ ಮಾಡಿದ ಜಾಗದಲ್ಲಿ ನಿಂಬೆಹಣ್ಣು, ಒಂದು ಪಾರಿವಾಳ, ನಾಲ್ಕು ಕೋಳಿ ಕೊಯ್ದು ಬಿಸಾಡಲಾಗಿದೆ. ಘಟನೆಯಿಂದ ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ನಾಲ್ವರು ಅಭ್ಯರ್ಥಿಗಳನ್ನು ಚೌಡಮ್ಮ ದೇಗುಲದಲ್ಲಿ ಪ್ರಮಾಣ ಮಾಡಿಸಿ, ಮತದಾನ ಮುಂದುವರೆಸಲಾಗಿದೆ.  

15:14 December 27

ಚುನಾವಣಾಧಿಕಾರಿಯನ್ನು ಕೂಡಿ ಹಾಕಿದ ಶಾಸಕರ ಪುತ್ರ

ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಗ್ರಾಮದ ಮತಗಟ್ಟೆಯಲ್ಲಿ ಒಂದು ಪಕ್ಷದ ಪರವಾಗಿ ಚುನಾವಣಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಅವರ ಪುತ್ರ ಅಭಿಷೇಕ ‌ನಾಡಗೌಡ ಅಧಿಕಾರಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಗಲಾಟೆ ಮಾಡಿದ್ದಾರೆ.

ಚುನಾವಣೆ ಅಧಿಕಾರಿ ಕಾಂಗ್ರೆಸ್  ಪಕ್ಷದ ಬೆಂಬಲಿತ ಅಭ್ಯರ್ಥಿ ಪರವಾಗಿ ಚೀಟಿ ಕೊಟ್ಟು ಮೈದಾನಕ್ಕೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಶಾಸಕರ ಪುತ್ರ ಅಭಿಷೇಕ ‌ನಾಡಗೌಡ ಮತಗಟ್ಟೆಯ ಕೊಠಡಿಯ ಬಾಗಿಲು ಬಂದ್ ಮಾಡಿದ್ದಾರೆ. ಇದರಿಂದಾಗಿ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಬಳಗಾನೂರ ಪೊಲೀಸರು ಆಗಮಿಸಿ ‌ಚುನಾವಣಾಧಿಕಾರಿಯನ್ನು‌ ಬದಲಿಸಿದ ಬಳಿಕ ಮತದಾನ ಪ್ರಕ್ರಿಯೆ ಮುಂದುವರೆದಿದೆ.  

15:14 December 27

ಸಿದ್ದಯ್ಯನಪುರ ಗ್ರಾಮದಲ್ಲಿ ಮತದಾನ ಬಹಿಷ್ಕಾರ

GP ELECTION LIVE UPDATES
ಸಿದ್ದಯ್ಯನಪುರ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ಕೊಳ್ಳೇಗಾಲ : ತಾಲೂಕಿನ ಸಿದ್ದಯ್ಯನಪುರ ಗ್ರಾಮದ 1ನೇ ವಾರ್ಡ್​ನಲ್ಲಿ ನಾಲ್ಕು ಸ್ಥಾನಕ್ಕೆ ಎರಡು ಮತ ಹಾಕುವಂತೆ ಸೂಚಿಸಿದ ಹಿನ್ನಲೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ತಹಶೀಲ್ದಾರ್ ಜನರ ಮನವೊಲಿಸಿ ಮತ ಚಲಾಯಿಸುವಂತೆ ತಿಳಿಸಿದರು. ಅಧಿಕಾರಿಗಳ ಮಾತಿಗೆ ಮಣಿದು ಗ್ರಾಮಸ್ಥರು ಮತ ಚಲಾಯಿಸಿದ್ದಾರೆ

14:53 December 27

ಸಿದ್ದರಾಮನಹುಂಡಿಯಲ್ಲಿ ಹಕ್ಕು ಚಲಾಯಿಸಿದ ಸಿದ್ದರಾಮಯ್ಯ

ಮೈಸೂರು : ತಿ.ನರಸೀಪುರ ತಾಲೂಕಿನ ಸಿದ್ದರಾಮನಹುಂಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತದಾನ ಮಾಡಿದರು. 

14:26 December 27

ಸಿದ್ದರಾಮನಹುಂಡಿಯಲ್ಲಿ ಮತದಾನ ಚುರುಕು: ಮತದಾನ ಮಾಡಲು ಬರಲಿದ್ದಾರೆ ಮಾಜಿ ಸಿಎಂ

  • ಮೈಸೂರಿನ ತಿ.ನರಸೀಪುರ ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಮತದಾನ ಚುರುಕು
  • ಮತದಾನ ಮಾಡಲು ಬರಲಿರುವ ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
  • ಸಿದ್ದರಾಮಯ್ಯನವರ ಹುಟ್ಟೂರಾಗಿರುವ ಸಿದ್ದರಾಮನಹುಂಡಿ

14:23 December 27

ಮತದಾನ ಬಹಿಷ್ಕಾರಿಸಿದ ಸಿದ್ದಯ್ಯನಪುರ ಗ್ರಾಮಕ್ಕೆ ಡಿಸಿ,ಎಸ್ಪಿ ಭೇಟಿ

  • ಸಿದ್ದಯ್ಯನಪುರ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
  • ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮ
  • 4 ಸ್ಥಾನಗಳ ಆಯ್ಕೆಗೆ 2 ಮತಗಳನ್ನು ಮಾತ್ರ ಹಾಕಲು ಅವಕಾಶ ನೀಡಿರುವುದನ್ನು ವಿರೋಧಿಸಿ ಬಹಿಷ್ಕಾರ
  • ಗ್ರಾಮಕ್ಕೆ ಡಿಸಿ,ಎಸ್ಪಿ ಭೇಟಿ

14:19 December 27

ಕುಷ್ಟಗಿ: ಗ್ರಾ.ಪಂ. ಅಭ್ಯರ್ಥಿ ಸೂಚಕರ ಮೇಲೆ ಹಲ್ಲೆ ಆರೋಪ

  • ಗ್ರಾ.ಪಂ. ಅಭ್ಯರ್ಥಿ ಸೂಚಕರ ಮೇಲೆ ಹಲ್ಲೆ ಆರೋಪ
  • ಅಭ್ಯರ್ಥಿಯೊಬ್ಬರ ಪತಿಯ ಬೆಂಬಲಿಗರಿಂದ ಹಲ್ಲೆ ನಡೆದಿರುವುದಾಗಿ ಆರೋಪ
  • ಕೊಪ್ಪಳದ ಕುಷ್ಟಗಿ ತಾಲೂಕಿನ ಕುರುಬನಾಳ ಗ್ರಾಮದ ಮತಗಟ್ಟೆ ಬಳಿ ಘಟನೆ
  • ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ ಪಿಎಸ್ಐ

14:14 December 27

ರಾಯಚೂರು: ಎರಡು ಗುಂಪಿನ ಮುಖಂಡರ ಮಧ್ಯೆ ವಾಗ್ವಾದ

  • ಗುರುಗುಂಟಾ ಮತಗಟ್ಟೆಯಲ್ಲಿ ಎರಡು ಗುಂಪಿನ ಮುಖಂಡರ ಮಧ್ಯೆ ವಾಗ್ವಾದ
  • ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಮತಗಟ್ಟೆ
  • ಬೇರೆ ಗ್ರಾಮದಲ್ಲಿ ವಾಸಿಸುವ ಮತದಾರರು ಸಂಬಂಧಿಗೆ ಮತ ಹಾಕಲು ಬಂದಾಗ ವಾಗ್ವಾದ

14:03 December 27

ದೇವರ ಬೆಳೆಕೆರೆಯಲ್ಲಿ ಶತಾಯುಷಿಗಳಿಂದ ಹುಮ್ಮಸ್ಸಿನ ಮತದಾನ

  • ದಾವಣಗೆರೆಯಲ್ಲಿ ಬಿರುಸಿನಿಂದ ನಡೆಯುತ್ತಿರುವ ಮತದಾನ
  • ಹರಿಹರ ತಾಲೂಕಿನ ದೇವರ ಬೆಳಕೆರೆ ಗ್ರಾಮದಲ್ಲಿ ಹಕ್ಕು ಚಲಾಯಿಸಿದ ಶತಾಯುಷಿಗಳು
  • ಮಾರಮ್ಮ(102), ಮುನಿಯಮ್ಮ(101) ಹಾಗೂ ಗೌರಮ್ಮ(100)ರಿಂದ ಮತ ಚಲಾವಣೆ
  • ವೀಲ್ ಚೇರ್​ನಲ್ಲಿ ಸಂಬಂಧಿಕರ ಜೊತೆ ಮತಗಟ್ಟೆಗೆ ಬಂದಿದ್ದ ವೃದ್ಧೆಯರು

13:56 December 27

ಮಾಜಿ ಸಚಿವ, ಗೌರಿಬಿದನೂರ ಶಾಸಕರಿಂದ ಸ್ವಗ್ರಾಮದಲ್ಲಿ ಮತದಾನ..

GP ELECTION LIVE UPDATES
ಮಾಜಿ ಸಚಿವ, ಗೌರಿಬಿದನೂರ ಶಾಸಕರಿಂದ ಸ್ವಗ್ರಾಮದಲ್ಲಿ ಮತದಾನ
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ 2ನೇ ಹಂತದ ಗ್ರಾ.ಪಂ. ಚುನಾವಣೆ
  • ಸ್ವಗ್ರಾಮದಲ್ಲಿ ಮತದಾನ ಮಾಡಿದ ಗೌರಿಬಿದನೂರು ಶಾಸಕ ಎನ್ಎಚ್ ಶಿವಶಂಕರ್ ರೆಡ್ಡಿ
  • ನಾಗಸಂದ್ರ ಗ್ರಾಮದಲ್ಲಿ ವೋಟ್

13:14 December 27

ಎರಡೂ ಕೈಗಳಿಲ್ಲದಿದ್ದರೂ ಸೈಕಲ್​ ಏರಿ ಬಂದು ವೋಟ್​ ಮಾಡಿದ ವ್ಯಕ್ತಿ

GP ELECTION LIVE UPDATES
ಎರಡೂ ಕೈಗಳಲ್ಲಿದ್ದರೂ ಸೈಕಲ್​ ಏರಿ ಬಂದು ವೋಟ್​ ಮಾಡಿದ ವ್ಯಕ್ತಿ
  • ಮೈಸೂರಿನಲ್ಲಿ ವಿಶೇಷ ಚೇತನರಿಂದ ಮತದಾನ
  • ಎರಡೂ ಕೈಗಳಿಲ್ಲದಿದ್ದರೂ ಸೈಕಲ್​ ಏರಿ ಬಂದು ವೋಟ್​ ಮಾಡಿದ ವ್ಯಕ್ತಿ
  • ರಂಗ ಸಮುದ್ರ ಗ್ರಾಮದ ನಿವಾಸಿ ನೂರ್ ಹಫೀಜ್
  • 45 ವರ್ಷದ ಹಿಂದೆ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದ ಹಫೀಜ್
  • ಪ್ರತಿ ಚುನಾವಣೆಯಲ್ಲೂ ಉತ್ಸಾಹದಿಂದಲೇ ಮತದಾನಕ್ಕೆ ಮುಂದಾಗುವ ವ್ಯಕ್ತಿ
  • ಮತ ಚಲಾಯಿಸಲ್ಲ ಅಂದ್ರೆ ಸತ್ತಂತೆ, ಇದು ನಮ್ಮ ಕರ್ತವ್ಯ ಅಂತಾರೆ ಹಫೀಜ್

12:59 December 27

ಕೊಪ್ಪಳ: 95ರ ವೃದ್ಧೆಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದ ಮಗ

GP ELECTION LIVE UPDATES
95ರ ವೃದ್ಧೆಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದ ಮಗ
  • 95ರ ವೃದ್ಧೆಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದ ಮಗ
  • ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಪಂ ವ್ಯಾಪ್ತಿಯ ಕೆ.ಗೋನಾಳ ಗ್ರಾಮದಲ್ಲಿ ಇರದ ವೀಲ್​ ಚೇರ್​​ ವ್ಯವಸ್ಥೆ
  • ವೀಲ್​ ಚೇರ್​​ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್​ಗೆ ಮಾಹಿತಿ ನೀಡಿದ ಗ್ರಾಮಸ್ಥರು

12:51 December 27

ಹುಬ್ಬಳ್ಳಿ: ಕಟ್ನೂರು ಗ್ರಾಮದಲ್ಲಿ ಚುನಾವಣೆಗೆ ಬಹಿಷ್ಕಾರ

  • ಮತದಾರರ ಪಟ್ಟಿ, ಮೀಸಲಾತಿ ಅದಲು ಬದಲು
  • ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದಲ್ಲಿ ಚುನಾವಣೆಗೆ ಬಹಿಷ್ಕಾರ
  • 1ನೇ ವಾರ್ಡಿಗೆ ಬರಬೇಕಿದ್ದ ಮೀಸಲಾತಿ 2ನೇ ವಾರ್ಡಗೆ ಅದಲು ಬದಲಾಗಿದೆ
  • ಚುನಾವಣೆ ಬಹಿಷ್ಕರಿಸಿ ಮತದಾನ ಮಾಡದಿರಲು ಗ್ರಾಮಸ್ಥರು ನಿರ್ಧಾರ
  • ಈ ಸಂಬಂಧ ಗ್ರಾಮೀಣ ಹಾಗೂ ನಗರ ತಹಶೀಲ್ದಾರರ ನೇತೃತ್ವದಲ್ಲಿ ಸಭೆ

12:46 December 27

ಬಸವಕಲ್ಯಾಣ: ಮತದಾನ ಮಾಡಲು ಬರುತಿದ್ದಾಗ ಕಾರು ಪಲ್ಟಿಯಾಗಿ 11 ಜನರಿಗೆ ಗಾಯ

GP ELECTION LIVE UPDATES
ಮತದಾನ ಮಾಡಲು ಬರುತಿದ್ದಾಗ ಕಾರು ಪಲ್ಟಿಯಾಗಿ 11 ಜನರಿಗೆ ಗಾಯ
  • ಮತದಾನ ಮಾಡಲು ಬರುತಿದ್ದಾಗ ಇನಾವೋ ಕಾರು ಪಲ್ಟಿ, 11 ಜನರಿಗೆ ಗಾಯ
  • ಬೀದರ್​ನ ಬಸವಕಲ್ಯಾಣದಲ್ಲಿ ಘಟನೆ
  • ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಮಧ್ಯದ ವಿಭಜಕ್ಕೆ ಡಿಕ್ಕಿಯಾಗಿ ಪಲ್ಟಿ
  • ಗಾಯಾಳುಗಳು ಔರಾದ ತಾಲೂಕಿನವರು
  • ಮಹಾರಾಷ್ಟ್ರದ ಪುಣೆಯಿಂದ ಗ್ರಾಮಕ್ಕೆ ಬರುತ್ತಿದ್ದ ಜನರು
  • ಬೀದರನ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳು ದಾಖಲು
  • ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

12:38 December 27

ಕಲಬುರಗಿ: ಮತದಾನ ದಿನವೇ ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ

ಮತದಾನ ದಿನವೇ ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ
  • ಮತದಾನ ದಿನವೇ ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ
  • ಕಲಬುರಗಿಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಅಭ್ಯರ್ಥಿ ಮಂಜುಳಾ ಗುಡುಬಾ
  • ಹೆಣ್ಣು ಮಗುವಿಗೆ ಜನ್ಮ
  • ವಾರ್ಡ್​​ ಸಂಖ್ಯೆ 3ರಲ್ಲಿ ಅತ್ತೆ ಸ್ಪರ್ಧೆ
  • ವಾರ್ಡ್​​ ನಂ.4ರಿಂದ ಸೊಸೆ ಮಂಜುಳಾ ಕಣಕ್ಕೆ

12:27 December 27

ಪೋಕ್ಸೋ ಪ್ರಕರಣ: ಮತದಾನದ ದಿನವೇ ಅಭ್ಯರ್ಥಿ ಪೊಲೀಸರ ವಶಕ್ಕೆ

  • ಪೋಕ್ಸೋ ಪ್ರಕರಣ
  • ಮತದಾನದ ದಿನವೇ ಅಭ್ಯರ್ಥಿ ಪೊಲೀಸರ ವಶಕ್ಕೆ
  • ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾ.ಪಂ.ಗೆ ಸ್ಪರ್ಧಿಸಿದ್ದ ಅಭ್ಯರ್ಥಿ
  • ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಅಲಿಯಾಸ್​​ ನಾರಾಯಣ ಪುಚ್ಚಮ
  • ಸಂಬಂಧಿಯಾಗಿರುವ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಇವರ ಮೇಲಿತ್ತು
  • ಸಂಬಂಧಿಕರ ದೂರಿನ ಪ್ರಕರಣ ದಾಖಲಿಸಿಕೊಂಡು ಹುಕ್ರಪ್ಪರನ್ನು ವಶಕ್ಕೆ ಪಡೆದ ಬೆಳ್ಳಾರೆ ಪೊಲೀಸರು

12:20 December 27

ಚಿಹ್ನೆ ಬದಲು: ಕದಂಪೂರ ಗ್ರಾಮದಲ್ಲಿ ಮತದಾನ ಮುಂದೂಡಿಕೆ

GP ELECTION LIVE UPDATES
ಬ್ಯಾಲೆಟ್ ಪೇಪರ್‌ನಲ್ಲಿ ಚಿಹ್ನೆ ಬದಲು
  • ಬ್ಯಾಲೆಟ್ ಪೇಪರ್‌ನಲ್ಲಿ ಚಿಹ್ನೆ ಬದಲು
  • 'ಬಕೆಟ್' ಚಿಹ್ನೆ ಬದಲು 'ಅಲ್ಮೇರಾ' ಚಿಹ್ನೆ ಮುದ್ರಣ
  • ಬೆಳಗಾವಿಯ ರಾಮದುರ್ಗ ತಾಲೂಕಿನ ಕದಂಪೂರ ಗ್ರಾಮದ ವಾರ್ಡ್‌ ಸಂಖ್ಯೆ 6ರಲ್ಲಿ ಘಟನೆ
  • ಚುನಾವಣಾಧಿಕಾರಿ ವಿರುದ್ಧ ಅಭ್ಯರ್ಥಿ ಗರಂ
  • ಸ್ಥಳಕ್ಕೆ ತಹಶೀಲ್ದಾರ್​ ಭೇಟಿ
  • ನಾಳೆಗೆ ಮತದಾನ ಮುಂದೂಡಿಕೆ

11:57 December 27

ಕರಗಾಂವ ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಅಂಧದರ್ಬಾರ್​​

GP ELECTION LIVE UPDATES
ಚಿಕ್ಕೋಡಿಯ ಕರಗಾಂವ ಮತಗಟ್ಟೆ ಬಳಿಯೇ ಪ್ರಚಾರ
  • ಚಿಕ್ಕೋಡಿಯಲ್ಲಿ ಅಭ್ಯರ್ಥಿಗಳ ಅಂಧದರ್ಬಾರ್​​
  • ಕರಗಾಂವ ಮತಗಟ್ಟೆ ಬಳಿ ಬಂದೇ ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳು, ಮುಖಂಡರು
  • ಆದರೂ ಸುಮ್ಮನೆ ಕುಳಿತಿರುವ ಚುನಾವಣಾ ಸಿಬ್ಬಂದಿ, ಪೊಲೀಸರು
  • ಪೊಲೀಸರ ವಿರುದ್ಧ ವಿರೋಧ ಪಕ್ಷಗಳ ಅಭ್ಯರ್ಥಿಗಳ ಆಕ್ರೋಶ

11:50 December 27

ಮೈಸೂರಲ್ಲಿ ಭಿಕ್ಷುಕನೇ ಅಭ್ಯರ್ಥಿ

GP ELECTION LIVE UPDATES
ಮೈಸೂರಲ್ಲಿ ಭಿಕ್ಷುಕನೇ ಅಭ್ಯರ್ಥಿ
  • ಕುತೂಹಲ ಕೆರಳಿಸಿರುವ ಮೈಸೂರಿನ ಹುಳಿಮಾವು ಗ್ರಾ.ಪಂ.ಚುನಾವಣೆ
  • ಚುನಾವಣಾ ಕಣದಲ್ಲಿ ಭಿಕ್ಷುಕ, ವಿಶೇಷಚೇತರಾಗಿರುವ ಅಂಕನಾಯಕ
  • ಅಭ್ಯರ್ಥಿ ಅಂಕನಾಯಕನನ್ನು ಮತಗಟ್ಟೆಗೆ ಕರೆತಂದ ಮತದಾರರು
  • ಅಂಕನಾಯಕನಿಂದ ಮತದಾನ
  • ಕಳೆದ ಬಾರಿ ಚುನಾಯಿತರಾದ ಅಭ್ಯರ್ಥಿ ಗ್ರಾಮದ ಅಭಿವೃದ್ದಿಗೆ ಒತ್ತು ನೀಡದ ಆರೋಪ
  • ಬೇಸತ್ತ ಗ್ರಾಮಸ್ತರು ಭಿಕ್ಷುಕನನ್ನೇ ಕಣಕ್ಕೆ ಇಳಿಸಿ ಬುದ್ಧಿ ಕಲಿಸಲು ನಿರ್ಧಾರ

11:37 December 27

ಅಭ್ಯರ್ಥಿಯಿಂದ ಬೇವಿನ ಮರದ ಪೂಜೆ

GP ELECTION LIVE UPDATES
ಅಭ್ಯರ್ಥಿಯಿಂದ ಬೇವಿನ ಮರದ ಪೂಜೆ
  • ಮತದಾನಕ್ಕೂ ಮುನ್ನ ಅಭ್ಯರ್ಥಿಯಿಂದ ಬೇವಿನ ಮರದ ಪೂಜೆ
  • ಮತಗಟ್ಟೆ ಮುಂಭಾಗದಲ್ಲಿರುವ ಮರಕ್ಕೆ ಪೂಜೆ
  • ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದುರ್ಗಾವರದ ಮತಗಟ್ಟೆ- 142

11:28 December 27

ಗದಗ್​ನಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಗಲಾಟೆ: ಮತದಾನ ಸ್ಥಗಿತ

GP ELECTION LIVE UPDATES
ಗದಗ್​ನಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಗಲಾಟೆ
  • ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ
  • ರೋಣ ತಾಲೂಕಿನ ಮೆಣಸಗಿ ಗ್ರಾಮದ ಮತಗಟ್ಟೆಯಲ್ಲಿ ಘಟನೆ
  • ಕಾರ್ಯಕರ್ತರ ನಡುವೆ ನೂಕಾಟ, ಮತದಾನ ಸ್ಥಗಿತ
  • ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ
  • ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು
  • ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ

11:28 December 27

ಮತಚಲಾಯಿಸಿದ ಡಿಸಿಎಂ ಲಕ್ಷ್ಮಣ ಸವದಿ

GP ELECTION LIVE UPDATES
ಮತಚಲಾಯಿಸಿದ ಡಿಸಿಎಂ ಲಕ್ಷ್ಮಣ ಸವದಿ
  • ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಂದ ಮತ ಚಲಾವಣೆ
  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿಕೆ ನಾಗನೂರ ಗ್ರಾಮದಲ್ಲಿ ವೋಟ್​
  • ಕುಟುಂಬಸ್ಥರೊಂದಿಗೆ ಬಂದು ಮತದಾನ
  • ನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್​ನಲ್ಲಿ ಹಕ್ಕು ಚಲಾಯಿಸಿದ ಡಿಸಿಎಂ

11:01 December 27

ಬೆಳಗಾವಿಯಲ್ಲಿ ಅಭ್ಯರ್ಥಿ ಸಾವು

ಬೆಳಗಾವಿಯಲ್ಲಿ ಅಭ್ಯರ್ಥಿ ಸಾವು
  • ಫಲಿತಾಂಶ ಬರುವ ಮುನ್ನವೇ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಾವು
  • ತೀವ್ರ ಅನಾರೋಗ್ಯ ಹಿನ್ನೆಲೆ ಮೃತಪಟ್ಟ ನ್ಯಾಯವಾದಿ ಸಿ.ಬಿ.ಅಂಬೋಜಿ (64)
  • ಬೆಳಗಾವಿಯ ಕಕ್ಕೇರಿ ಗ್ರಾ.ಪಂ. ಎರಡನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಅಂಬೋಜಿ
  • ಡಿ. 22ರಂದು ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧೆ
  • ಫಲಿತಾಂಶಕ್ಕೂ ಮುನ್ನವೇ ವಿಧಿಯಾಟ

10:51 December 27

ಬೋಗಸ್​​ ವೋಟ್​​ಗೆ ಯತ್ನ​​​: ಬೆಂಗಳೂರಲ್ಲಿ ಲಾಠಿ ಚಾರ್ಜ್

GP ELECTION LIVE UPDATES
ಮಹದೇವಪುರದಲ್ಲಿ ಲಾಠಿ ಚಾರ್ಜ್
  • ಬೋಗಸ್​​ ವೋಟ್ ಮಾಡಲು ಬಂದು ಸಿಕ್ಕಿಹಾಕಿಕೊಂಡ ಯುವಕರು
  • ಬೆಂಗಳೂರಿನ ಮಹದೇವಪುರದ ಬಿದರಹಳ್ಳಿ ಗ್ರಾ. ಪಂ. ಕಾಡಾಗ್ರಹಾರದಲ್ಲಿ ಘಟನೆ
  • ಬೇರೆಡೆಯಿಂದ ಕಾಂಗ್ರೆಸ್​ ಪರ ಮತಚಲಾಯಿಸಲು ಯುವಕರನ್ನು ಕರೆಸಿದ ಆರೋಪ
  • ಯುವಕರನ್ನು ತಡೆದು ವಿಚಾರಿಸಿದ ಗ್ರಾಮಸ್ಥರು
  • ಅಕ್ರಮವಾಗಿ ಮತದಾನ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವುದು ಬೆಳಕಿಗೆ
  • ಈ ವೇಳೆ ಗ್ರಾಮಸ್ಥರು- ಯುವಕರ ನಡುವೆ ಗಲಾಟೆ
  • ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ ಪೊಲೀಸರು

10:40 December 27

ಬೆಳಗಾವಿಯಲ್ಲಿ 332 ಸ್ಥಾನಗಳಿಗೆ ಅವಿರೋಧ ಆಯ್ಕೆ

  • ಬೆಳಗಾವಿ ಜಿಲ್ಲೆಯ ಏಳು ತಾಲೂಕುಗಳಲ್ಲಿಂದು ಚುನಾವಣೆ
  • ಕಾಗವಾಡ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಸವದತ್ತಿ, ರಾಮದುರ್ಗ ತಾಲೂಕಿನಲ್ಲಿ ಮತದಾನ
  • 3,936 ಸ್ಥಾನಗಳಿಗೆ ಚುನಾವಣೆ
  • 218 ಗ್ರಾ.ಪಂ.ಗಳ 9,472 ಅಭ್ಯರ್ಥಿಗಳು ಕಣಕ್ಕೆ
  • 332 ಸ್ಥಾನಗಳಿಗೆ ಅವಿರೋಧ ಆಯ್ಕೆ
  • 17 ಸ್ಥಾನಗಳಿಗೆ ನಾಮಪತ್ರಗಳೇ ಸಲ್ಲಿಕೆಯಾಗಿಲ್ಲ

10:33 December 27

ಕಲಬುರಗಿಯಲ್ಲಿ ಮತಗಟ್ಟೆ ಮುಂದೆ ಕುಸಿದು ಬಿದ್ದ ಗರ್ಭಿಣಿ

  • ಮತಗಟ್ಟೆ ಮುಂದೆ ಕುಸಿದು ಬಿದ್ದ ಗರ್ಭಿಣಿ
  • ಕಲಬುರಗಿಯ ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದ ಮತಗಟ್ಟೆ 22 ರಲ್ಲಿ ಘಟನೆ
  • ಸರತಿ ಸಾಲಿನಲ್ಲಿ ತುಂಬಾ ಹೊತ್ತಿನಿಂದ ನಿಂತಿದ್ದ ಶಿವಮ್ಮ ತಲೆಸುತ್ತಿ ಕುಸಿದು ಬಿದ್ದಿದ್ದಾರೆ
  • ಬಳಿಕ ತಕ್ಷಣವೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಚುನಾವಣಾ ಸಿಬ್ಬಂದಿ

10:28 December 27

ದಾವಣಗೆರೆಯಲ್ಲಿ ವಿಕಲಚೇತನರಿಂದ ಮತದಾನ

GP ELECTION LIVE UPDATES
ದಾವಣಗೆರೆಯಲ್ಲಿ ವಿಕಲಚೇತನರಿಂದ ಮತದಾನ
  • ಹುಮ್ಮಸ್ಸಿನಿಂದ ಮತಚಲಾಯಿಸಿದ ವಿಕಲಚೇತನರು
  • ವಿಕಲಚೇತನರಿಗಾಗಿ ವೀಲ್ ಚೇರ್ ವ್ಯವಸ್ಥೆ ಮಾಡಿರುವ ದಾವಣಗೆರೆ ಜಿಲ್ಲಾಡಳಿತ
  • ಚನ್ನಗಿರಿ ತಾಲೂಕಿನ ಕೋಗಲೂರು ಗ್ರಾಮದಲ್ಲಿ ಹಕ್ಕು ಚಲಾಯಿಸಿದ ಮಹಿಳೆ

10:06 December 27

ಹಕ್ಕು ಚಲಾಯಿಸಿದ ತಮ್ಮಡಿಹಳ್ಳಿ ಸ್ವಾಮೀಜಿ

ಹಕ್ಕು ಚಲಾಯಿಸಿದ ತಮ್ಮಡಿಹಳ್ಳಿ ಸ್ವಾಮೀಜಿ
  • ತುಮಕೂರಲ್ಲಿ ಬಿರುಸಿನ ಮತದಾನ
  • ಹಕ್ಕು ಚಲಾಯಿಸಿದ ತಮ್ಮಡಿಹಳ್ಳಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ
  • ಚಿ.ನಾ.ಹಳ್ಳಿ ತಾಲೂಕಿನ ಕುಪ್ಪೂರು ಗ್ರಾ.ಪಂ.ನ ಅಬೂಜಿಹಳ್ಳಿ ಮತಗಟ್ಟೆಯಲ್ಲಿ ವೋಟ್​

09:57 December 27

ಹಾವೇರಿ: ಮತಗಟ್ಟೆಗಳಲ್ಲಿ ಕೋವಿಡ್​ ನಿಯಮ ಪಾಲನೆ

  • ಹಾವೇರಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮತದಾನ ಆರಂಭ
  • ಹಾನಗಲ್, ಬ್ಯಾಡಗಿ, ಸವಣೂರು ಮತ್ತು ಶಿಗ್ಗಾವಿ ತಾಲೂಕುಗಳ 105 ಗ್ರಾ. ಪಂ.ಗಳಿಗೆ ಚುನಾವಣೆ
  • ಮತಗಟ್ಟೆಗಳಲ್ಲಿ ಸಕಲ ಕೋವಿಡ್​ ನಿಯಮ ಪಾಲನೆ

09:43 December 27

ಮತದಾರರ ಪಟ್ಟಿ ಅದಲು ಬದಲು

undefined
ದಾವಣಗೆರೆಯಲ್ಲಿ ಪೊಲೀಸರೊಂದಿಗೆ ಅಭ್ಯರ್ಥಿಗಳು ಹಾಗೂ ಮತದಾರ ವಾಗ್ವಾದ
  • ದಾವಣಗೆರೆಯಲ್ಲಿ ಮತದಾರರ ಪಟ್ಟಿ ಅದಲು ಬದಲು
  • ಆಕ್ರೋಶಗೊಂಡ ಅಭ್ಯರ್ಥಿಗಳು ಹಾಗೂ ಮತದಾರರು
  • ಪೊಲೀಸರೊಂದಿಗೆ ವಾಗ್ವಾದ
  • ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಮತಗಟ್ಟೆ- 53 ರಲ್ಲಿ  ಘಟನೆ
  • ತಹಶೀಲ್ದಾರ್​ರಿಗೆ ದೂರವಾಣಿ ಕರೆ
  • ಬಳಿಕ ಮತದಾರರ ಪಟ್ಟಿಯನ್ನು ಸರಿಪಡಿಸಿ ಮತದಾನಕ್ಕೆ‌ ಅನುವು

09:39 December 27

ಕಲಬುರಗಿಯಲ್ಲಿ ವೋಟಿಂಗ್​​

GP ELECTION LIVE UPDATES
ಕಲಬುರಗಿಯಲ್ಲಿ ವೋಟಿಂಗ್​​
  • ಕಲಬುರಗಿಯಲ್ಲಿ 2ನೇ ಹಂತದ ಗ್ರಾಮ ಸಮರ
  • ಜಿಲ್ಲೆಯ 116 ಗ್ರಾಮ ಪಂಚಾಯತಗಳಿಗೆ ಮತದಾನ
  • ಮತಪೆಟ್ಟಿಗೆಗೆ ಸೇರುತ್ತಿರುವ 1711 ಅಭ್ಯರ್ಥಿಗಳ ಹಣೆಬರಹ
  • ಯಡ್ರಾಮಿ, ಜೇವರ್ಗಿ, ಚಿತ್ತಾಪೂರ, ಚಿಂಚೋಳಿ, ಸೇಡಂ ಐದು ತಾಲೂಕುಗಳಲ್ಲಿ ಚುನಾವಣೆ
  • 1953 ಸ್ಥಾನಗಳ ಪೈಕಿ ಈಗಾಗಲೇ 242 ಸ್ಥಾನಗಳು ಅವಿರೋಧ ಆಯ್ಕೆ
  • ಬಿಗಿ ಪೊಲೀಸ್ ಬಂದೋಬಸ್ತ್​​ನಲ್ಲಿ ವೋಟಿಂಗ್​​

09:20 December 27

ಮತಚಲಾಯಿಸಲು ಸ್ವಗ್ರಾಮಗಳಿಗೆ ಬಂದ ವಲಸೆ ಕಾರ್ಮಿಕರು

  • ಮತಚಲಾಯಿಸಲು ಸ್ವಗ್ರಾಮಗಳತ್ತ ವಲಸೆ ಕಾರ್ಮಿಕರು
  • ಕೆಲಸ ಮಾಡಲು ಗುಳೆ ಹೋಗಿದ್ದ ಕಾರ್ಮಿಕರು
  • ಕೊಪ್ಪಳ ಕುಷ್ಟಗಿ ತಾಲೂಕಿಗೆ ಬಂದಿಳಿದ ವಲಸಿಗರು
  • ಗೂಡ್ಸ್ ವಾಹನಗಳಲ್ಲಿ ಮತಗಟ್ಟೆಗೆ ತೆರಳುತ್ತಿರುವ ಮತದಾರರು

09:03 December 27

ಗದಗ ಜಿಲ್ಲೆಯಲ್ಲಿ 895 ಸ್ಥಾನಗಳಿಗೆ ಚುನಾವಣೆ

GP ELECTION LIVE UPDATES
ಗದಗ ಜಿಲ್ಲೆಯಲ್ಲಿ ವೋಟಿಂಗ್​​
  • ಗದಗ ಜಿಲ್ಲೆಯ ನಾಲ್ಕು ತಾಲೂಕಿನ 64 ಗ್ರಾ. ಪಂ.ಗಳ 895 ಸ್ಥಾನಗಳಿಗೆ ಚುನಾವಣೆ
  • ರೋಣ, ನರಗುಂದ, ಗಜೇಂದ್ರಗಡ, ಮುಂಡರಗಿ ತಾಲೂಕಿನಲ್ಲಿ ಮತದಾನ
  • 36 ಸದಸ್ಯರು ಅವಿರೋಧ ಆಯ್ಕೆ
  • ನಾಮಪತ್ರ ಸಲ್ಲಿಸದೆ 9 ಸ್ಥಾನಗಳು ಖಾಲಿ
  • ಕೆಲವೆಡೆ ಮತಗಟ್ಟೆ ಕೊಠಡಿಗೆ ಪೂಜೆ ಮಾಡಿದ ಮತದಾರರು

08:57 December 27

ಬಳ್ಳಾರಿಯಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು - ಬದಲು

  • ವೋಟ್​ ಮಾಡಲು ಮತಗಟ್ಟೆಗೆ ಬಂದ ಮತದಾರರಿಗೆ ಶಾಕ್​
  • ಬಳ್ಳಾರಿಯಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು - ಬದಲು
  • ಮತದಾನ ಮಾಡದಂತೆ ನಿರ್ಧರಿಸಿದ ಜನರು
  • ಮತ್ತಿಹಳ್ಳಿ ಪಂಚಾಯಿತಿ ಒಂದನೇ ಮತ್ತು ಎರಡನೇ ವಾರ್ಡಿನಲ್ಲಿ ಘಟನೆ
  • ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ
  • ಒಂದನೇ ವಾರ್ಡಿನ ಅಭ್ಯರ್ಥಿಯ ಗುರುತು ಎರಡನೇ ವಾರ್ಡಿಗೆ,
  • ಎರಡನೇ ವಾರ್ಡಿನ ಅಭ್ಯರ್ಥಿಯ ಗುರುತು ಒಂದನೇ ವಾರ್ಡಿಗೆ ಶಿಫ್ಟ್
  • ಸ್ಥಳಕ್ಕೆ ತಹಶೀಲ್ದಾರ್​​ ಆಗಮಿಸುವಂತೆ ಗ್ರಾಮಸ್ಥರ ಆಗ್ರಹ

08:50 December 27

ಶಿವಮೊಗ್ಗದ 4 ತಾಲೂಕಿನಲ್ಲಿಂದು ಚುನಾವಣೆ

ಶಿವಮೊಗ್ಗದಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಶಿವಮೊಗ್ಗದಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಸಾಗರ, ಸೊರಬ, ಹೊಸನಗರ ಹಾಗೂ ಶಿಕಾರಿಪುರ ತಾಲೂಕಿನಲ್ಲಿಂದು ಚುನಾವಣೆ
  • 3404 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಿರುವ ಜಿಲ್ಲಾಡಳಿತ
  • 4 ತಾಲೂಕಿನ‌ 131 ಗ್ರಾ.ಪಂ.ಗಳ 773 ಮತಗಟ್ಟೆಗಳಲ್ಲಿ ವೋಟಿಂಗ್​ ಪ್ರಕ್ರಿಯೆ
  • ಒಟ್ಟು 1397 ಸ್ಥಾನಗಳ ಪೈಕಿ 73 ಸ್ಥಾನಗಳಿಗೆ ಅವಿರೋಧ ಆಯ್ಕೆ
  • ಉಳಿದ 1322 ಸ್ಥಾನಗಳಿಗೆ 3689 ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ

08:41 December 27

ಮೈಸೂರಲ್ಲಿ ಮತಗಟ್ಟೆಗಳ ಮೇಲೆ ಪೊಲೀಸ್​​ ಹದ್ದಿನ ಕಣ್ಣು

  • ಮೈಸೂರಲ್ಲಿ ಮತಗಟ್ಟೆಗಳ ಮೇಲೆ ಪೊಲೀಸ್​​ ಹದ್ದಿನ ಕಣ್ಣು
  • ಅಹಿತಕರ ಘಟನೆಗಳು ನಡೆಯದಂತೆ ಕ್ರಮ
  • ಜಿಲ್ಲೆಯ 3 ತಾಲೂಕುಗಳ 102 ಗ್ರಾ.ಪಂ ಗಳಿಗೆ ಚುನಾವಣೆ
  • ನಂಜನಗೂಡು, ನರಸೀಪುರ ಹಾಗೂ ಮೈಸೂರು ತಾಲೂಕುಗಳಲ್ಲಿ ಮತದಾನ ಆರಂಭ

08:34 December 27

ಚಿತ್ರದುರ್ಗ: ಮೈ ಕೊರೆಯುವ ಚಳಿಯಲ್ಲೂ ಮತಗಟ್ಟೆಯತ್ತ ಧಾವಿಸಿ ಹಕ್ಕು ಚಲಾವಣೆ

ಮೈ ಕೊರೆಯುವ ಚಳಿಯಲ್ಲೂ ಮತಗಟ್ಟೆಯತ್ತ ಧಾವಿಸಿ ಹಕ್ಕು ಚಲಾವಣೆ
  • ಚಿತ್ರದುರ್ಗ ಜಿಲ್ಲೆಯಲ್ಲಿಂದು 89 ಗ್ರಾ.ಪಂ.ಗಳ 1475 ಸ್ಥಾನಗಳಿಗೆ ಚುನಾವಣೆ
  • ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕಗಳಲ್ಲಿ ವೋಟಿಂಗ್​​
  • ಮೈ ಕೊರೆಯುವ ಚಳಿಯಲ್ಲೂ ಮತಗಟ್ಟೆಯತ್ತ ಧಾವಿಸಿ ಹಕ್ಕು ಚಲಾಯಿಸುತ್ತಿರುವ ಜನರು
  • ಒಟ್ಟು 1668 ಅಭ್ಯರ್ಥಿಗಳು ಕಣದಲ್ಲಿ
  • ಇವರಲ್ಲಿ 189 ಸದಸ್ಯರು ಅವಿರೋಧ ಆಯ್ಕೆ

08:23 December 27

ಮತಪೆಟ್ಟಿಗೆಗೆ ಪೂಜೆ

GP ELECTION LIVE UPDATES
ಧಾರವಾಡದಲ್ಲಿ ಮತಪೆಟ್ಟಿಗೆಗೆ ಪೂಜೆ
  • ಧಾರವಾಡದಲ್ಲಿ ಉತ್ಸಾಹದಿಂದ‌‌ ಹಕ್ಕುಚಲಾಯಿಸಲು ಬಂದ ಜನರು
  • ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಮತದಾನ
  • 71 ಗ್ರಾ.ಪಂ.ಗಳ 385 ಮತಗಟ್ಟೆಗಳಲ್ಲಿ ಚುನಾವಣೆ
  • ಕುಸುಗಲ್ ಗ್ರಾಮದಲ್ಲಿ ಮತದಾನ ಆರಂಭಕ್ಕೂ ಮುನ್ನ ಮತಪೆಟ್ಟಿಗೆಗೆ ಪೂಜೆ

08:18 December 27

ಆರತಿ ಬೆಳಗಿ ವೋಟ್​ ಹಾಕಲು ಮುಂದಾದ ಮಹಿಳೆಯರು

  • ವಿಜಯಪುರದಲ್ಲಿಂದು 4 ತಾಲೂಕುಗಳಿಗೆ ಮತದಾನ
  • ವೋಟಿಂಗ್​ ಪ್ರಕ್ರಿಯೆ ಆರಂಭ
  • ಇಂಡಿ ತಾಲೂಕಿನ ಹಿರೇ ಮಸಳಿ ಗ್ರಾಮದ ಮತಗಟ್ಟೆಗೆ ಪೂಜೆ ಸಲ್ಲಿಸಲು ಬಂದ ಮಹಿಳೆಯರು
  • ಆರತಿ ಬೆಳಗಿ ಮತ ಹಾಕಲು ಮುಂದಾದ ಕೆಲವರು
  • ಅವಕಾಶ ನೀಡಲು ನಿರಾಕರಿಸಿದ ಅಧಿಕಾರಿಗಳು
  • ಆರತಿ ತಟ್ಟೆ ಒಳಗೆ ತರಲು ಬಿಡುವುದಿಲ್ಲ ಎಂದ ಅಧಿಕಾರಿಗಳು
  • ಬಳಿಕ ಮತದಾನ ಕೊಠಡಿ ಹೊರಗಡೆಯಿಂದ ಆರತಿ ಮಾಡಿದ ಮಹಿಳೆಯರು

08:11 December 27

ಉತ್ತರಕನ್ನಡದಲ್ಲಿ ನಾಮಪತ್ರ ಸಲ್ಲಿಕೆಯಾಗದೆ 2 ಸ್ಥಾನಗಳು ಖಾಲಿ

GP ELECTION LIVE UPDATES
ಉತ್ತರಕನ್ನಡದಲ್ಲಿ ಮತದಾನ ಆರಂಭ
  • ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲ್ಭಾಗದ ಏಳು ತಾಲೂಕುಗಳಲ್ಲಿ ಇಂದು ಮತದಾನ
  • ಒಟ್ಟು 126 ಗ್ರಾಮ ಪಂಚಾಯಿತಿಗಳ 1203 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ
  • 77 ಸ್ಥಾನಗಳಿಗೆ ಅವಿರೋಧ ಆಯ್ಕೆ, ನಾಮಪತ್ರ ಸಲ್ಲಿಕೆಯಾಗದೆ 2  ಸ್ಥಾನಗಳು ಖಾಲಿ
  • ಒಟ್ಟು 1282 ಸ್ಥಾನಗಳು
  • 109 ಸೂಕ್ಷ್ಮ ಹಾಗೂ 72 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತು
  • ಒಟ್ಟು 3763 ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನೇಮಕ

07:22 December 27

ಕಲಬುರಗಿಯಲ್ಲಿ ಮತದಾನ ಪ್ರಕ್ರಿಯೆ ಆರಂಭ

  • ಕಲಬುರಗಿಯಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ತಾಲೂಕಿನಲ್ಲಿಂದು ಚುನಾವಣೆ
  • 116 ಗ್ರಾಮ ಪಂಚಾಯತಿಗಳಿಂದ 1711 ಸ್ಥಾನಗಳಿಗೆ ವೋಟಿಂಗ್​

  • 4314 ಅಭ್ಯರ್ಥಿಗಳು ಕಣದಲ್ಲಿ
  • ಶಾಂತಿಯುತ ಮತದಾನಕ್ಕಾಗಿ ಮತಗಟ್ಟೆಗಳ 100 ಮೀ. ಒಳಾಂಗಣದಲ್ಲಿ 144 ಸೆಕ್ಷನ್​ ಜಾರಿ

06:58 December 27

ಗಣಿನಾಡಿನಲ್ಲಿ 320 ಮಂದಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

  • ಗಣಿನಾಡಿನಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಬಳ್ಳಾರಿ ಜಿಲ್ಲೆಯ ಆರು ತಾಲೂಕುಗಳ 144 ಗ್ರಾಮ ಪಂಚಾಯಿತಿಗಳಲ್ಲಿ ನಡೆಯಲಿರುವ ಚುನಾವಣೆ
  • ಸಂಡೂರು, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ತಾಲೂಕುಗಳಲ್ಲಿ ಇಂದು ಮತದಾನ
  • 2243 ಸ್ಥಾನಗಳಿಗೆ 5457 ಮಂದಿ ಅಭ್ಯರ್ಥಿಗಳು ಕಣದಲ್ಲಿ
  • 99 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ/ ಮತದಾನ ಬಹಿಷ್ಕರಿಸಿದ ಹಿನ್ನೆಲೆ ಮತದಾನ ಸ್ಥಗಿತ
  • 320 ಮಂದಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

06:51 December 27

ಕುಷ್ಟಗಿಯಲ್ಲಿ ಅಭ್ಯರ್ಥಿ ಸಾವು

  • ಕೊಪ್ಪಳದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಾವು
  • ಕುಷ್ಟಗಿ ತಾಲೂಕಿನ ಮೆಣೆದಾಳ ಗ್ರಾಮದ 2ನೇ ವಾರ್ಡ್‌ನಿಂದ ನಿಂತಿದ್ದ ವೀರಭದ್ರಪ್ಪ ಬಡಿಗೇರ (60)
  • ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದ ವೀರಭದ್ರಪ್ಪ
  • ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಸಾವು

06:10 December 27

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ

ಬೆಂಗಳೂರು: ಇಂದು ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇಂದು 2,832 ಗ್ರಾಮ ಪಂಚಾಯಿತಿಗಳಿಗೆ ಎಲೆಕ್ಷನ್​ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್‌ 22 ರಂದು 2,930 ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದ ಚುನಾವಣೆ ನಡೆದಿತ್ತು. ರಾಜ್ಯದಲ್ಲಿ ಶೇ. 83.69 ರಷ್ಟು ಮತದಾನವಾಗಿತ್ತು. 

Last Updated : Dec 27, 2020, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.