ETV Bharat / city

ಧ್ವನಿವರ್ಧಕಗಳ ಬಳಕೆಗೆ ಶಾಶ್ವತ ಪರವಾನಗಿ ಇಲ್ಲ, 2 ವರ್ಷಕ್ಕಷ್ಟೇ ಲೈಸೆನ್ಸ್: ಹೈಕೋರ್ಟ್​ಗೆ ರಾಜ್ಯ ಸರ್ಕಾರ ವರದಿ - ಧ್ವನಿವರ್ಧಕ ವಿವಾದ

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಧ್ವನಿವರ್ಧಕಗಳ ಬಳಕೆಗೆ ವಿಶೇಷ ಸಂದರ್ಭ ಹೊರತುಪಡಿಸಿ ಅವಕಾಶ ಇರುವುದಿಲ್ಲ, ಬೆಳಗ್ಗೆ ಆರು ಗಂಟೆಗೂ ಮುಂಚಿತವಾಗಿ ಧ್ವನಿವರ್ಧಕ ಉಪಯೋಗಿಸುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿದೆ.

Loudspeaker
Loudspeaker
author img

By

Published : Jun 18, 2022, 9:09 AM IST

ಬೆಂಗಳೂರು: ಮಸೀದಿ, ಮಂದಿರ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳು, ಪಬ್, ಬಾರ್, ರೆಸ್ಟೋರೆಂಟ್​ಗಳಲ್ಲಿ ಸಾರ್ವಜನಿಕ ಬಳಕೆಯ ಧ್ವನಿವರ್ಧಕಗಳಿಗೆ ರಾಜ್ಯ ಸರ್ಕಾರ ಶಾಶ್ವತ ಪರವಾನಗಿ ನೀಡುವುದಿಲ್ಲ. ಎರಡು ವರ್ಷಗಳಿಗಷ್ಟೇ ಸೀಮಿತವಾಗುವಂತೆ ಲೈಸೆನ್ಸ್ ನೀಡಲಾಗುತ್ತದೆ. ನಂತರ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕಾಗುತ್ತದೆ ಎಂದು ಧ್ವನಿವರ್ಧಕ ಬಳಕೆ ಬಗ್ಗೆ ರೂಪಿಸಿರುವ ನಿಯಮಾವಳಿಗಳ ಬಗ್ಗೆ ಹೈಕೋರ್ಟ್​ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ಧ್ವನಿವರ್ಧಕಗಳ ಬಳಕೆಗೆ ವಿಶೇಷ ಸಂದರ್ಭ ಹೊರತುಪಡಿಸಿ ಅವಕಾಶ ಇರುವುದಿಲ್ಲ, ಬೆಳಗ್ಗೆ ಆರು ಗಂಟೆಗೂ ಮುಂಚಿತವಾಗಿ ಧ್ವನಿವರ್ಧಕ ಉಪಯೋಗಿಸುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿದೆ.

ಬೆಂಗಳೂರಿನ ಕೆಲವು ಮಸೀದಿಗಳು ಧ್ವನಿವರ್ಧಕ ಬಳಸಿ ಶಬ್ದ ಮಾಲಿನ್ಯ ಮಾಡುತ್ತಿವೆ, ಇದಕ್ಕೆ ಕಡಿವಾಣ ಹಾಕಬೇಕು ಎಂದು ಪಿ.ರಾಕೇಶ್‌ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಧ್ವನಿವರ್ದಕಗಳ ಬಳಕೆ ಹೇಗಿರಬೇಕು, ಯಾವಾಗ ಬಳಸಬೇಕು, ಯಾವಾಗ ಬಳಸಬಾರದು ಎನ್ನುವುದರ ಬಗ್ಗೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಭಿಯಾನ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೆಕೆಂದು ವಿಚಾರಣೆ ವೇಳೆ ನಿರ್ದೇಶನ ನೀಡಿದೆ.

ಧ್ವನಿವರ್ಧಕ ಬಳಕೆ ನಿಯಮದಲ್ಲೇನಿದೆ..? ಧಾರ್ಮಿಕ ಸ್ಥಳಗಳು, ಪಬ್ಸ್‌, ರೆಸ್ಟೋರೆಂಟ್‌ ಮತ್ತಿತರ ಕಡೆ ಧ್ವನಿವರ್ಧಕದ ದುರ್ಬಳಕೆ ಮಾಡದಂತೆ ತಡೆಯಲು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದೆ ಎಂದು ಹೈಕೋರ್ಟ್ ಸರಕಾರದ ಗಮನಕ್ಕೆ ತಂದಿತು. ಧ್ವನಿವರ್ಧಕ ಬಳಕೆಗೆ ಶಬ್ದ ಮಾಲಿನ್ಯ (ಸುಧಾರಣೆ ನಿಯಂತ್ರಣ) 2000ರ ನಿಯಮ 5 ಜೊತೆಗೆ ಕರ್ನಾಟಕ ಪೊಲೀಸ್‌ ಕಾಯಿದೆಯ 1963ರ ಸೆಕ್ಷನ್‌ 37ರ
ಅಡಿ ಅನುಮತಿ ನೀಡಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ವರೆಗೆ ಧ್ವನಿವರ್ಧಕ ಮತ್ತು ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನಗಳ ಬಳಕೆಗೆ ಅನುಮತಿ ನೀಡಿಲ್ಲ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.

ವಿಶೇಷವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಸಂದರ್ಭದಲ್ಲಿ ಮಾತ್ರ ಧ್ವನಿವರ್ಧಕ ಮತ್ತು ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನಗಳ ಬಳಕೆಗೆ ರಾತ್ರಿ 10ರಿಂದ 12 ಗಂಟೆವರೆಗೆ 15 ದಿನಗಳಿಗೆ ಮೀರದಂತೆ ಅನುಮತಿ ನೀಡಬಹುದಾಗಿದೆ. ಮಸೀದಿ, ಚರ್ಚ್‌, ಗುರುದ್ವಾರ, ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳು, ಪಬ್ಸ್‌, ರೆಸ್ಟೋರೆಂಟ್ಸ್‌ಗಳಲ್ಲಿ ಧ್ವನಿವರ್ಧಕ ಬಳಕೆ ಮಾಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಸರ್ಕಾರ ಪ್ರಸ್ತಾಪಿಸಿದೆ.

ಸರ್ಕಾರದ ಪರ ವಕೀಲರು ಹೈಕೋರ್ಟ್​ನಲ್ಲಿ ವಾದಿಸುತ್ತಾ... ಶಬ್ದ ಮಾಲಿನ್ಯ ನಿಯಂತ್ರಣ ಕಾಯಿದೆ 2000ರ ನಿಯಮ 5, ಉಪ ನಿಯಮ 1ರ ಅಡಿ ಧ್ವನಿವರ್ಧಕ ಬಳಸಲು ಅನುಮತಿ ನೀಡಲಾಗಿದೆ. ವರ್ಷದಲ್ಲಿ ಒಮ್ಮೆ ರಾತ್ರಿ 10 ಗಂಟೆಯ ನಂತರ 12 ಗಂಟೆವರೆಗೆ ಧ್ವನಿವರ್ಧಕ ಬಳಸಲು ಅನುಮತಿ ಇರುತ್ತದೆ. ಅದು 15 ದಿನ ದಾಟುವಂತಿಲ್ಲ. ಬೆಳಗಿನ ಸಂದರ್ಭದಲ್ಲಿ ಶಬ್ದ, ಡೆಸಿಬಲ್‌ ಎಷ್ಟಿರಬೇಕು ಎಂಬುದರ ಕುರಿತು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ನಿಯಮ 2 ಮತ್ತು 3ರಲ್ಲಿ ರಾತ್ರಿ ವೇಳೆ ಧ್ವನಿವರ್ಧಕ ಬಳಕೆ 15 ದಿನ ದಾಟುವಂತಿಲ್ಲ ಎಂದು ಹೇಳಲಾಗಿದೆ. ರಾತ್ರಿ 10 ರಿಂದ 12 ಗಂಟೆವರೆಗೆ ಅನುಮತಿ ನೀಡಬಹುದಾಗಿದೆ ಎಂದು ನಿಯಮವಿದೆ ಎಂದು ತಿಳಿಸಿದರು.

ಪರವಾನಗಿ ಪಡೆಯದ ಧ್ವನಿವರ್ಧಕಗಳೇ ಹೆಚ್ಚು: ಪರವಾನಗಿ ಪಡೆಯದೇ ಧ್ವನಿವರ್ಧಕಗಳ ಬಳಕೆ ಹೆಚ್ಚಾಗಿದ್ದರಿಂದ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್‌ ಅಧಿಕಾರಿ, ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯನ್ನು ಒಳಗೊಂಡ ಸಮಿತಿ ರಚಸಲಾಗುತ್ತದೆ. ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರೆ, ಈ ಸಮಿತಿ ಪರಿಶೀಲಿಸಿ ಆದೇಶ ಮಾಡುತ್ತದೆ. ಪಾಲಿಕೆ ಇಲ್ಲದ ಕಡೆ ಉಪ ಪೊಲೀಸ್‌ ವರಿಷ್ಠಾಧಿಕಾರಿ, ತಹಶೀಲ್ದಾರ್‌ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರನ್ನು ಒಳಗೊಂಡ ಸಮಿತಿ ನಿರ್ಧಾರ ಮಾಡಲಿದೆ ಸರಕಾರಿ ವಕೀಲರು ಹೈಕೋರ್ಟ್ ಗಮನಕ್ಕೆ ತಂದರು.

ಅಡ್ವೋಕೆಟ್​ ವಾದವೇನು?: ಅರ್ಜಿದಾರರ ಪರ ವಾದಿಸಿದ ವಕೀಲ ಪ್ರಭು ಅವರು ಸರ್ಕಾರ, ಒಂದು ಕಡೆ ಬೆಳಿಗ್ಗೆ 6 ಗಂಟೆಗೂ ಮುಂಚಿತವಾಗಿ ಧ್ವನಿವರ್ಧಕ ಬಳಕೆಗೆ ಅನುಮತಿ ಇಲ್ಲ ಎಂದು ಹೇಳುತ್ತದೆ. ಆದರೆ, ವಕ್ಫ್‌ ಮಂಡಳಿಯು ಹೊರಡಿಸಿರುವ ಸುತ್ತೋಲೆಯಲ್ಲಿ ಪರವಾನಗಿಯನ್ನು ಒಂದು ಅಥವಾ ಎರಡು ವರ್ಷಕ್ಕೆ ನೀಡಲಾಗುತ್ತದೆ ಎಂಬುದನ್ನು ಹೇಳಿಲ್ಲ. ಇದು ಶಾಶ್ವತ ಪರವಾನಗಿಯಾಗಿದೆ.

ಅಲ್ಲದೇ, ವಕ್ಫ್‌ ಮಂಡಳಿ ಹೊರಡಿಸಿರುವ ಸುತ್ತೋಲೆಯಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಬಳಸಬಹುದು ಎಂದು ಹೇಳಲಾಗಿದೆ. ಆಜಾನ್‌ ಅಷ್ಟೇ ಅಲ್ಲ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲೂ ಧ್ವನಿವರ್ಧಕ ಬಳಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು, ಧ್ವನಿವರ್ಧಕ ಬಳಕೆಗೆ ಎರಡು ವರ್ಷಗಳ ಪರವಾನಗಿ ನೀಡುತ್ತೇವೆ ಎಂದು ಹೇಳುತ್ತಿದ್ದೀರಿ. ಅದನ್ನುನವೀಕರಿಸಿಕೊಳ್ಳಬಹುದೇ? ಧಾರ್ಮಿಕ ಸಮಾರಂಭ, ಹಬ್ಬ, ಸೀಮಿತ ಸಂದರ್ಭದಲ್ಲಿ ರಾತ್ರಿ 10ರಿಂದ 12ರವರೆಗೆ ಧ್ವನಿವರ್ಧಕ ಬಳಸಲು ಅನುಮತಿಸಲಾಗಿದೆ. ಇದರರ್ಥ ಈ ಸಂದರ್ಭ ಹೊರತುಪಡಿಸಿ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲವೇ..? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು. ಮುಂದುವರಿದು ಬೆಳಿಗ್ಗೆ 6 ಗಂಟೆ ಮೊದಲು ಧ್ವನಿವರ್ಧಕ ಬಳಸಿದರೆ ಅದು ತಪ್ಪಲ್ಲವೇ? ಸರ್ಕಾರದ ನಿಲುವಿನ ಪ್ರಕಾರ ಬೆಳಿಗ್ಗೆ 6 ಗಂಟೆಗೂ ಮುಂಚಿತವಾಗಿ ಸಂಬಂಧಪಟ್ಟವರಿಂದ ಲಿಖಿತ ಅನುಮತಿ ಪಡೆಯದೇ ಧ್ವನಿವರ್ಧಕ ಬಳಸುವಂತಿಲ್ಲವೇ ಎಂದು ಕೇಳಿದರು.

ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಯಾವ ಕಾನೂನಿನಡಿ ಶಾಶ್ವತ ಪರವಾನಗಿ ನೀಡಲಾಗಿದೆ ಎಂದು ಸರ್ಕಾರವನ್ನು ಕೇಳಿದ ಹೈಕೋರ್ಟ್‌, ಬೆಳಗ್ಗೆ ಆರು ಗಂಟೆಗೂ ಮುಂಚಿತವಾಗಿ ಆಜಾನ್‌ ಕೂಗಲು ಧ್ವನಿವರ್ಧಕವನ್ನು ಕಾನೂನುಬಾಹಿರವಾಗಿ ಬಳಸಲಾಗುತ್ತಿದೆಯೇ? ಇದನ್ನು ತಡೆಯಲು ಯಾವ ಕ್ರಮಕೈಗೊಳ್ಳಲಾಗಿದೆ...? . ಸರ್ಕಾರದ ನಿಯಮ ಮತ್ತು ಸುತ್ತೋಲೆಯ ಪ್ರಕಾರ ಬೆಳಿಗ್ಗೆ 6ಕ್ಕೂ ಮುಂಚೆ ಧ್ವನಿವರ್ಧಕ ಬಳಸುವಂತಿಲ್ಲ. ಅದಾಗ್ಯೂ ಬಳಿಸಿದರೆ ಅದು ಅಕ್ರಮ. ಯಾವೆಲ್ಲಾ ಪ್ರದೇಶಗಳಲ್ಲಿ ಧ್ವನಿವರ್ಧಕ ಬಳಸಲಾಗುತ್ತದೆ, ಏನು ಕ್ರಮಕೈಗೊಳ್ಳಲಾಗಿದೆ ಎನ್ನುವುದನ್ನು ತಿಳಿಯಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

ಸರ್ಕಾರವು ಪರವಾನಗಿ ನೀಡಿರುವ ಕಡೆ ಕಾನೂನಿನ ಅನ್ವಯ ಧ್ವನಿವರ್ಧಕ ಬಳಸಲಾಗುತ್ತಿದೆಯೇ ಎಂಬುದಕ್ಕೆ ಅಭಿಯಾನ ನಡೆಸಿ. ಬಳಿಕ ಸ್ಥಿತಿಗತಿ ವರದಿ ಸಲ್ಲಿಸಿ. ಇಂದು ಕೈಗೊಂಡಿರುವ ನಿಲುವಿನ ಪ್ರಕಾರ ಸಮೀಕ್ಷೆ ನಡೆಸಿ, ಆಂದೋಲನ ಮಾಡಿ, ಅನುಪಾಲನಾ ವರದಿ ಸಲ್ಲಿಸಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿದೆ.

(ಇದನ್ನೂ ಓದಿ: ಬೆಂಗಳೂರಲ್ಲಿ ಭಾರಿ ಮಳೆ: ಬೈಕ್ ರಕ್ಷಿಸಲು ಹೋಗಿ ನೀರಲ್ಲಿ ಕೊಚ್ಚಿಹೋದ ಯುವಕ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.