ಬೆಂಗಳೂರು: 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯಪಾಲ ವಜುಭಾಯಿ ವಾಲಾ ಪೂರ್ವಭಾವಿಯಾಗಿ ರಾಜ್ಯದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.
ಈ ಐತಿಹಾಸಿಕ ದಿನದಂದು ನಮ್ಮ ದೇಶದ ನಿರ್ಮಾತೃಗಳಿಗೆ ಶ್ರೇಷ್ಠ ಗೌರವ ಸಲ್ಲಿಸುವಲ್ಲಿ ನಾನು ನಿಮ್ಮೆಲ್ಲರ ಜೊತೆಗೆ ಸೇರುತ್ತೇನೆ. ನಮ್ಮ ತಾಯಿನಾಡಿನ ಎಲ್ಲಾ ಧೀರಪುತ್ರರು, ವೀರ ವನಿತೆಯರು ಹಾಗೂ ಸವಾಲಿನ ಪರಿಸ್ಥಿತಿಯಲ್ಲೂ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನಮ್ಮ ಸಶಸ್ತ್ರ ಪಡೆಗಳು, ಅರೆ ಸೈನಿಕ ಪಡೆ, ಸ್ವಾತಂತ್ರ್ಯ ಹೋರಾಟಗಾರರು, ರಾಜ್ಯ ಪೊಲೀಸ್ ಮತ್ತು ಎಲ್ಲಾ ಇತರೆ ಸಂಸ್ಥೆಗಳಿಗೆ ನನ್ನ ಮೆಚ್ಚುಗೆಯನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಭವ್ಯವಾದ ಆಚರಣೆಯ ಈ ಸಮಯದಲ್ಲಿ ಮತ್ತೊಮ್ಮೆ ನಾನು ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ತಿಳಿಸುತ್ತಾ, ಈ ಸಂದರ್ಭವು ತಮಗೆ ಸಂತೋಷ ಹಾಗೂ ಸಂಭ್ರಮ ತರಲೆಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.