ETV Bharat / city

ನಗದು ರಹಿತವಾಗಿ ವಿದ್ಯಾರ್ಥಿ ವೇತನ ಪಾವತಿಗೆ ರಾಜ್ಯ ಸರ್ಕಾರದ ಡಿಜಿಟಲ್ ಪ್ಲಾನ್ - ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ

ವಿದ್ಯಾರ್ಥಿ ವೇತನಕ್ಕೆ ಡಿಜಿಟಲ್ ಟಚ್ ಯಶಸ್ವಿಯಾದರೆ, ಬೀಜ ವಿತರಣೆ, ರಸಗೊಬ್ಬರ ವಿತರಣೆ, ಸೂಕ್ಷ್ಮ ನೀರಾವರಿ ಯೋಜನೆಗಳು ಸೇರಿದಂತೆ ಇತರ ಯೋಜನೆಗಳಲ್ಲಿ e- RUPI ವೋಚರ್ ಬಳಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

government-plans-for-cashless-scholarship-in-karnataka
ಕ್ಯಾಶ್‌ಲೆಸ್ ವಿದ್ಯಾರ್ಥಿ ವೇತನ ಶುಲ್ಕ ಪಾವತಿಗಾಗಿ ರಾಜ್ಯ ಸರ್ಕಾರದ ಡಿಜಿಟಲ್ ಪ್ಲಾನ್..
author img

By

Published : Dec 30, 2021, 1:54 AM IST

Updated : Dec 30, 2021, 2:06 AM IST

ಬೆಂಗಳೂರು: ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಯೋಜನೆಗೆ ಡಿಜಿಟಲ್ ಟಚ್ ಕೊಡಲು ತಯಾರಿ ನಡೆದಿದೆ. ಕರ್ನಾಟಕ ಸರ್ಕಾರದ ಇ- ಆಡಳಿತ ಇಲಾಖೆಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸಹಭಾಗಿತ್ವವನ್ನು ಹೊಂದುವ ಮೂಲಕ ಈ ವ್ಯವಸ್ಥೆ ಜಾರಿಯಾಗಲಿದೆ.

ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ನಗದುರಹಿತ ಮತ್ತು ಸಂಪರ್ಕರಹಿತ ಪಾವತಿ ಪರಿಹಾರವಾದ 'e-RUPT' ಅನ್ನು ಸಕ್ರಿಯಗೊಳಿಸಲು ಮುಂದಾಗಿದೆ. ಕಾಲೇಜು ಅಥವಾ ಸಂಸ್ಥೆಗೆ ಡಿಜಿಟಲ್‌ನಲ್ಲಿ ಪಾವತಿಸುವ ಮೂಲಕ ಅರ್ಹ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕದ ಸೋರಿಕೆ- ವಿತರಣೆಯನ್ನು ಖಚಿತಪಡಿಸಿಕೊಳ್ಳಲು e-RUPI ಅನ್ನು ಒಂದು ಅಸ್ತ್ರವಾಗಿ ಬಳಸಲಾಗುತ್ತದೆ.

ಅಂದಹಾಗೆ, ಸರ್ಕಾರವು ಅರ್ಹ ವಿದ್ಯಾರ್ಥಿಗಳ ಮೊಬೈಲ್‌ಗಳಿಗೆ ಇ- ವೋಚರ್‌ಗಳನ್ನು ತಲುಪಿಸಲಿದೆ. ವೋಚರ್ ಕೋಡ್ ಅನ್ನು ಫೀಚರ್ ಫೋನ್‌ನಲ್ಲಿಯೂ ಸ್ವೀಕರಿಸಬಹುದು. e-RUPI ಅನ್ನು ಗುರುತಿಸಲಾದ ಸಂಸ್ಥೆಗಳು ಅಪ್ಲಿಕೇಶನ್ ಅಥವಾ POS ಯಂತ್ರವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತೋರಿಸುವ QR ಕೋಡ್ ಅಥವಾ SMS ಸ್ಟ್ರಿಂಗ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಡೆಯಲು ಯಾವುದೇ ಭೌತಿಕ ( physical) ಟೋಕನ್ ವಿತರಣೆಯ ಅಗತ್ಯ ಇರೋದಿಲ್ಲ.

ಇದೆಲ್ಲಕ್ಕಿಂತ E-RUPI ಕಾರಣದಿಂದಾಗಿ ಉದ್ದೇಶಿತ ಫಲಾನುಭವಿಗೆ ಪ್ರಯೋಜನಗಳನ್ನು ನೇರವಾಗಿ ವರ್ಗಾಯಿಸಲು ಅನುವು ಮಾಡಿಕೊಡಲಿದೆ. ಸುರಕ್ಷತೆ ಮತ್ತು ಭದ್ರತೆಯೊಂದಿಗೆ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಫಲಾನುಭವಿಯು ಪ್ರಯೋಜನವನ್ನು ಪಡೆಯುವುದನ್ನು ಈ ವ್ಯವಸ್ಥೆ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ.

ಈ ಪ್ರಾಯೋಗಿಕ ಯೋಜನೆಯ ಯಶಸ್ವಿಯಾದರೆ ಇತರ ಯೋಜನೆಗಳಾದ ಬೀಜ ವಿತರಣೆ, ರಸಗೊಬ್ಬರ ವಿತರಣೆ, ಸೂಕ್ಷ್ಮ ನೀರಾವರಿ ಯೋಜನೆಗಳು, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳ ವಿತರಣೆ ಮತ್ತು ನುರಿತ ತರಬೇತಿಯನ್ನು ನೀಡುವಂತಹ ಇತರ ಯೋಜನೆಗಳಲ್ಲಿ e- RUPI ವೋಚರ್ ಬಳಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಜಿಲ್ಲೆಗೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು

Last Updated : Dec 30, 2021, 2:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.