ಬೆಂಗಳೂರು : ಕೋವಿಡ್ ಎರಡನೇ ಅಲೆ ಹಿನ್ನೆಲೆ ಜಿಮ್ ಮುಚ್ಚಲು ಆದೇಶ ಹೊರಡಿಸಿದ್ದ ಸರ್ಕಾರ ಜಿಮ್ ಅಸೋಸಿಯೇಷನ್ ಮನವಿ ಮೇರೆಗೆ ನಿಷೇಧ ಸಡಿಲಿಸಿ ಪರಿಷ್ಕೃತ ಆದೇಶ ಹೊರಡಿಸಿದೆ.
![Government issued revised Guidelines gym](https://etvbharatimages.akamaized.net/etvbharat/prod-images/kn-bng-02-gimorderrevised-50nod-script-7201951_04042021183129_0404f_1617541289_949.jpg)
ಜಿಮ್ ಮುಚ್ಚುವ ಆದೇಶದ ಹಿನ್ನೆಲೆ ಜಿಮ್ ಅಸೋಸಿಯೇಷನ್ ಸದಸ್ಯರು ನಿನ್ನೆ ಗೃಹ ಕಚೇರಿ ಕೃಷ್ಣಾಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದರು. ಶೇ.50ರಷ್ಟು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಸರ್ಕಾರ ಇದೀಗ ಶೇ.50ರಷ್ಟು ಅವಕಾಶ ನೀಡಿ ಹೊಸ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.
ಹೊಸ ಮಾರ್ಗಸೂಚಿಯನ್ವಯ ಜಿಮ್‌ನಲ್ಲಿ ಶೇ.50ರ ಮಿತಿಯ ನಿರ್ಬಂಧ ಅನುಸರಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಪ್ರತಿ ಬಳಕೆ ಬಳಿಕ ಜಿಮ್ ಉಪಕರಣವನ್ನು ಸ್ಯಾನಿಟೈಸ್ ಮಾಡಬೇಕು. ಈ ನಿಯಮ ಉಲ್ಲಂಘಿಸಿದರೆ ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೆ ಜಿಮ್ಗಳನ್ನು ಮುಚ್ಚಲಾಗುತ್ತದೆ ಎಂದು ಪರಿಷ್ಕೃತ ಆದೇಶದಲ್ಲಿ ತಿಳಿಸಲಾಗಿದೆ.