ETV Bharat / city

ಕಾವೇರಿ ಕೂಗಿಗೆ ಸರ್ಕಾರದಿಂದ ಸಂಪೂರ್ಣ ಸಹಕಾರ: ಸಿಎಂ ಬಿಎಸ್​​ವೈ ಭರವಸೆ - ಕಾವೇರಿ ಕೂಗು ಅಭಿಯಾನಕ್ಕೆ ಸದ್ಗುರು ಚಾಲನೆ

ಕಾವೇರಿ ನದಿ ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಶಾ ಫೌಂಡೇಷನ್‌ ಕೈಗೊಂಡಿರುವ 'ಕಾವೇರಿ ಕೂಗು' ಯಾತ್ರೆ ನಗರದಲ್ಲಿ ಭಾನುವಾರ ಬೃಹತ್‌ ಬೈಕ್‌ ಜಾಥಾ ಮೂಲಕ ನಡೆಯಿತು.

government-give-to-the-full-support-for-cauvery-calling
author img

By

Published : Sep 9, 2019, 12:03 AM IST

ಬೆಂಗಳೂರು: ಕಾವೇರಿ ನದಿ ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಶಾ ಫೌಂಡೇಷನ್‌ ಕೈಗೊಂಡಿರುವ 'ಕಾವೇರಿ ಕೂಗು' ಯಾತ್ರೆ ನಗರದಲ್ಲಿ ಭಾನುವಾರ ಬೃಹತ್‌ ಬೈಕ್‌ ಜಾಥಾ ಮೂಲಕ ನಡೆಯಿತು. ಬಳಿಕ ಅರಮನೆ ಮೈದಾನದಲ್ಲಿ ಅಭಿಯಾನದ ಸಮಾರೋಪ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಕಾವೇರಿ ಕೂಗು ಅಭಿಯಾನದ ಪ್ರಯುಕ್ತ ಕೋಟಿಗೂ ಅಧಿಕ ಗಿಡಗಳನ್ನು ಸಿದ್ಧಗೊಳಿಸಲು‌ ಕಾರ್ಯಪ್ರವೃತ್ತರಾಗಿ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಕ್ಕೆ ಬೇಕಾದ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

ಮಾನವನ ಅವೈಜ್ಞಾನಿಕ ಚಟುವಟಿಕೆಗಳಿಂದ ಪ್ರಕೃತಿ ನಮ್ಮಿಂದ ದೂರವಾಗುತ್ತಿದೆ. ಇದರಿಂದಾಗಿ ಹವಾಮಾನದಲ್ಲಿ ವೈಪರಿತ್ಯ ಕಂಡುಬರುತ್ತಿದೆ. ಎರಡು ವರ್ಷಗಳಿಂದ ರಾಜ್ಯ ಅತಿವೃಷ್ಟಿ, ಅನಾವೃಷ್ಟಿಯಿಂದ ನಲುಗಿದೆ ಎಂದ ಅವರು, ಕಾವೇರಿ ನದಿಯ ಪುನಶ್ಚೇತನಕ್ಕೆ ಕನ್ನಡಿಗರಾದ ಸದ್ಗುರು ಅವರ ಅಭಿಯಾನ ಶ್ಲಾಘನೀಯ ಎಂದರು.

ಮರಗಳು ವಿಮೆ ಇದ್ದ ಹಾಗೆ: ಮರಗಳು ರೈತರಿಗೆ ವಿಮೆ ಇದ್ದ ಹಾಗೆ. ರೈತ ಬೆಳೆದ ಮರ ಕಡಿಯಲು ಯಾರಿಗೂ ಅವಕಾಶ ಇಲ್ಲ. ಬೆಳೆದ ಮರ ಆತನ ಸ್ವತ್ತು. ಅದನ್ನು ಕಡಿಯುವುದು, ಮಾರುವುದು ಅವರ ಹಕ್ಕು. ರೈತರ ಆತ್ಮಹತ್ಯೆ ತಡೆಯಲು ಮರಗಳ ರಕ್ಷಣೆ ಅಗತ್ಯ. ಈಗಾಗಲೇ ಕಾವೇರಿ ನದಿಯನ್ನು ಕೆಡಿಸಿದ್ದೇವೆ. ಅದನ್ನು ಸರಿಪಡಿಸುವ ಅರಿವು ನಮ್ಮಲ್ಲಿದೆ. ಇದಕ್ಕೆ ಸರ್ಕಾರವೂ ಎಲ್ಲ ಸಹಕಾರ ನೀಡಲಿದೆ. 12 ವರ್ಷದಲ್ಲಿ ಕಾವೇರಿ ನದಿ ಪುನಶ್ಚೇತನಗೊಳಿಸುವುದು ನಮ್ಮ ಗುರಿ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

ಇಶಾ ಫೌಂಡೇಷನ್‌ ಸಂಸ್ಥಾಪಕ ಸದ್ಗುರು

ಎಂಟು ಪಟ್ಟು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಮಣ್ಣನ್ನು ಹಾಳು ಮಾಡಿದ್ದೇವೆ. ಅದರ ಪುನಶ್ಚೇತನಕ್ಕೆ ಸಸಿ ನೆಡುವುದು ಅನಿವಾರ್ಯ. ರಾಜ್ಯದಲ್ಲಿ ಶೇ. 17ರಷ್ಟು ಭೂಮಿ ಬರಡಾಗಿದೆ. ಇದನ್ನು ತಡೆಗಟ್ಟಲು ಅರಣ್ಯೀಕರಣ ಅಗತ್ಯ. ಈ ವರ್ಷ ಹುಟ್ಟುವ ಮಕ್ಕಳಿಗೆ ಕಾವೇರಿ ಎಂದು ಹೆಸರಿಡಿ. ಆಗ ಕಾವೇರಿ ನದಿ ಬಗ್ಗೆ ಪ್ರೀತಿ ಹೆಚ್ಚುತ್ತದೆ ಎಂದರು.

ಕಾವೇರಿಗಾಗಿ ನಾವೆಲ್ಲ ಒಂದಾಗೋಣ: ಕಾವೇರಿ ನದಿಗಾಗಿ ನಾವೆಲ್ಲ ಒಂದಾಗೋಣ. ತಾಯಿ ಕಾವೇರಿ ತನ್ನನ್ನು ರಕ್ಷಿಸಿ ಎಂದು ಕೂಗುತ್ತಿದ್ದಾಳೆ. ಹೀಗಾಗಿ ಎಲ್ಲರು ಈ ಮಹತ್ವದ ಕಾರ್ಯಕ್ಕೆ ಕೊಡುಗೆ ನೀಡಬೇಕು ಎಂದು ಉದ್ಯಮಿ ಕಿರಣ್ ಮಜುಂದಾರ್ ಶಾ ಮನವಿ ಮಾಡಿದರು.

ಅರಮನೆ ಮೈದಾನದಲ್ಲಿ ಕಾವೇರಿ ಕೂಗು!: ಕಾವೇರಿ ನದಿ ಉಳಿಸುವ ನಿಟ್ಟಿನಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 242 ಕೋಟಿ ಗಿಡಗಳನ್ನು ನೆಟ್ಟು ರೈತರನ್ನು ಬೆಂಬಲಿಸುವುದೇ ಈ ಅಭಿಯಾನದ ಉದ್ದೇಶ. ಕಾವೇರಿ ಜಲಾನಯನ ಪ್ರದೇಶ ಉಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ‘ಕಾವೇರಿ ಕೂಗು ಅಭಿಯಾನ’ಕ್ಕೆ ಮಡಿಕೇರಿಯ ತಲಕಾವೇರಿಯಲ್ಲಿ ಸೆ. 3ರಂದು ಸದ್ಗುರು ಚಾಲನೆ ನೀಡಿದರು.

ನದಿಗಳನ್ನು ರಕ್ಷಿಸುವ ಈ ಜನಾಂದೋಲನ 2017ರಲ್ಲೇ ಪ್ರಾರಂಭವಾಗಿದೆ. ಸದ್ಗುರು ಕಾವೇರಿ ಕೊಳ್ಳ‌ ಪ್ರದೇಶಗಳಲ್ಲಿ 3,500 ಕಿ.ಮೀ. ಬೈಕ್ ರ್ಯಾಲಿ ನಡೆಸಿ ಜನರಲ್ಲಿ ಕಾವೇರಿ ನದಿ ರಕ್ಷಿಸಲು ಜಾಗೃತಿ ಮೂಡಿಸಿದರು. ಈ ಅಭಿಯಾನಕ್ಕೆ ಚಲನಚಿತ್ರ ನಟ-ನಟಿಯರು, ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ನಾಯಕರು, ಗಣ್ಯರು ಬೆಂಬಲ ನೀಡಿದ್ದಾರೆ.

Intro:Body:KN_BNG_02_CAUVERYCALLING_PROGRAMME_SCRIPT_7201951

ಕಾವೇರಿ ಕೂಗಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ: ಸಿಎಂ

ಬೆಂಗಳೂರು: ಕಾವೇರಿ ಕೂಗು ಅಭಿಯಾನದ ಅಂಗವಾಗಿ ಸಸಿ ನೆಡಲು ಕೋಟ್ಯಂತರ ಸಸಿಗಳನ್ನು ಸಿದ್ಧಗೊಳಿಸಲು‌ ಕಾರ್ಯಪ್ರವೃತ್ತರಾಗಿ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸರ್ಕಾರ ಸಕಲ ಸಹಕಾರವನ್ನೂ ನೀಡಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಅರಮನೆ ಮೈದಾನದಲ್ಲಿ ಇಶಾ ಫೌಂಡೇಷನ್‌ ಆಯೋಜಿತ ನದಿಗಳನ್ನು ರಕ್ಷಿಸಿ ಅಭಿಯಾನದ ಮುಂದುವರಿದ ಭಾಗವಾದ ಕಾವೇರಿ ಕೂಗು ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಅಪೇಕ್ಷೆ ಯಂತೆ ಕೋಟ್ಯಂತರ ಸಸಿಗಳನ್ನು ನೀಡಲಿದ್ದೇವೆ. ಪರಿಸರ ರಕ್ಷಣೆಯ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಸಹಕಾರ ಇದೆ. ಎರಡು ಕೋಟಿ ಸಸಿಗಳು ಅರಣ್ಯ ಇಲಾಖೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ಪ್ರಕೃತಿ ಮೇಲೆ ಮಾನವ ದೌರ್ಜನ್ಯ ಹೆಚ್ಚಿದಂತೆ ಕಾಡು ಸೊರಗುತ್ತಿದೆ. ಹವಮಾನ ವೈಪರೀತ್ಯ ಆಗುತ್ತಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯ ಅತಿವೃಷ್ಠಿ ಅನಾವೃಷ್ಠಿ ಕಂಡಿದೆ. ಇದು ಪ್ರಕೃತಿ ನಮಗೆ ನೀಡಿದ ಎಚ್ಚರಿಕೆ ಎಂಬುದು ನನ್ನ ಭಾವನೆ ಎಂದು ವಿವರಿಸಿದರು.

ಕಾವೇರಿ ನದಿಯ ಪುನಶ್ಚೇತನಕ್ಕೆ ಸದ್ಗುರು ಅಭಿಯಾನ ಶ್ಲಾಘನೀಯವಾಗಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಆಗಿದೆ. ಕನ್ನಡಿಗರಾದ ಸದ್ಗುರು ಕಾವೇರಿ ಕೂಗು ಅಭಿಯಾನ ಆಯೋಜಿಸಿರುವುದು ಕುಷಿ ತಂದಿದೆ ಎಂದರು.

ಮರಗಳು ವಿಮೆ ಇದ್ದ ಹಾಗೆ:

ಮರಗಳು ರೈತರಿಗೆ ವಿಮೆ ಇದ್ದ ಹಾಗೆ. ನಮ್ಮ ರೈತರು ಬೆಳೆದ ಮರ ಕಡಿಯಲು ಅವಕಾಶ ಇಲ್ಲ. ಆತ ಬೆಳೆದ ಮರ ಆತನ ಸ್ವತ್ತು. ಅದನ್ನು ಕಡಿಯುವುದು, ಮಾರುವುದು ಆತನ ಹಕ್ಕು ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಇಲ್ಲದಂತೆ ಮಾಡಲು ಮರಗಳ ರಕ್ಷಣೆ ಮಾಡಬೇಕು. ಕಾವೇರಿ ನದಿಯನ್ನು ನಾವು ಕೆಡಿಸಿದ್ದೇವೆ. ಅದನ್ನು ಸರಿಪಡಿಸುವ ಅರಿವು ನಮ್ಮಲ್ಲಿದೆ ಎಂಬುದನ್ನು ನೀವು ಇಲ್ಲಿಗೆ ಬಂದು ತೋರಿಸಿದ್ದೀರಿ. ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದು ಹೇಳಿದೆ‌. 12 ವರ್ಷದಲ್ಲಿ ಕಾವೇರಿ ನದಿ ಪುನಶ್ಚೇತನಗೊಳಿಸುವ ಕಾರ್ಯವನ್ನು ಮಾಡಬೇಕು ಎಂಬುದು ನಮ್ಮ ಗುರಿ. ರೈತರು ಈ ಅಭಿಯಾನ ಸಂಬಂಧ ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಮಳೆ ಒಂದೇ ನೀರಿನ ಮೂಲವಾಗಿದೆ‌. ಆದರೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಎಂಟು ಪಟ್ಟು ಮಳೆ ನೀರನ್ನು ಮಣ್ಣು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ ನಾವು ಮಣ್ಣನ್ನು ಹಾಳು ಮಾಡಿದ್ದೇವೆ. ಅದನ್ನು ಪುನಶ್ಚೇತನಗೊಳಿಸಲು ಗಿಡಗಳನ್ನು ನೆಡುವ ಅಗತ್ಯ ಇದೆ. ರಾಜ್ಯದಲ್ಲಿ 17 ಶೇ. ಭೂಮಿ ಬರಡಾಗಿದೆ. ನಾವು ಭೂಮಿಯನ್ನು ಮರಭೂಮಿ‌ ಮಾಡುತ್ತಿದ್ದೇವೆ. ಇದನ್ನು ತಡೆಯಲು ಅರಣ್ಯೀಕರಣ ಮಾಡಬೇಕಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸದ್ಗುರು ಈ ವರ್ಷ ರಾಜ್ಯದಲ್ಲಿ ಹುಟ್ಟುವ ಎಲ್ಲ ಮಕ್ಕಳಿಗೆ ಕಾವೇರಿ ಎಂದು ಹೆಸರಿಡಲು ಮನವಿ ಮಾಡಿದರು. ಆ ಮೂಲಕ ಕಾವೇರಿ ನದಿ ಬಗ್ಗೆ ಅರಿವು, ಪ್ರೀತಿ ಹೆಚ್ಚುತ್ತದೆ ಎಂದು ಕರೆ ನೀಡಿದರು.

ಕಾವೇರಿಗಾಗಿ ನಾವೆಲ್ಲ ಒಂದಾಗೋಣ:

ಕಾವೇರಿ ನದಿಗಾಗಿ ನಾವೆಲ್ಲಾ ಒಂದಾಗೋಣ ಎಂದು ಉದ್ಯಮಿ ಕಿರಣ್ ಮಜುಂದಾರ್ ಶಾ ತಿಳಿಸಿದರು.

ಇದು ಬಹಳ ಮುಖ್ಯ ಕಾರ್ಯಕ್ರಮವಾಗಿದೆ. ಸದ್ಗುರು ನಾಯಕತ್ವದಲ್ಲಿ ನೀರಿಗಾಗಿ ನಾವೆಲ್ಲ ಒಂದಾಗೋಣ. ತಾಯಿ ಕಾವೇರಿ ಕೂಗ್ತಾ ಇದ್ದಾಳೆ. ನನ್ನನ್ನು ರಕ್ಷಿಸುವಂತೆ ಕಾವೇರಿ ಕೂಗ್ತಾ ಇದ್ದಾಳೆ. ಮಕ್ಕಳು ಕೂಡ ಈ ಅಭಿಯಾನಕ್ಕೆ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಎಲ್ಲರು ಈ ಮಹತ್ವದ ಕಾರ್ಯಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಅರಮನೆ ಮೈದಾನದಲ್ಲಿ ಕಾವೇರಿ ಕೂಗು!:

ಕಾವೇರಿ ನದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 242 ಕೋಟಿ ಗಿಡಗಳನ್ನು ನೆಡಲು ರೈತರಿಗೆ ಬೆಂಬಲಿಸುವ ಅಭಿಯಾನ ಇದಾಗಿದೆ.

ಕಾವೇರಿ ಕೂಗು ಅಭಿಯಾನ ಅಂಗವಾಗಿ ಸೆ. 3 ರಿಂದ ಸದ್ಗುರು ಜಗ್ಗಿ ಅವರು ಸ್ವತ: ಬೈಕ್ ರಾಲಿಯಲ್ಲಿ ಭಾಗಿಯಗಿದ್ದರು.‌ ಇಂದು ಕಾರ್ಯಕ್ರಮಕ್ಕೂ ಬೈಕ್ ಮೂಲಕ ಎಂಟ್ರಿ ಕೊಟ್ಟರು. ಅರಮನೆ ಮೈದಾನದ ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ವರ್ಗದ ಜನರು, ಕಾವೇರಿ ಕೂಗಿಗೆ ಓಗೊಟ್ಟರು.

ನದಿಗಳನ್ನು ರಕ್ಷಿಸುವ ಈ ಜನಾಂದೋಲನ 2017 ರಿಂದ ಪ್ರಾರಂಭವಾಗಿದೆ. ಕಾವೇರಿ ಕೊಳ್ಳ‌ ಪ್ರದೇಶಗಳಲ್ಲಿ 3500 ಕಿ.ಮೀ ಬೈಕ್ ರಾಲಿ ನಡೆಸಿರುವ ಸದ್ಗುರು, ಆ ಮೂಲಕ ಜನರಲ್ಲಿ ಕಾವೇರಿ ನದಿ ಪುನರುಜ್ಜೀವಗೊಳಿಸಲು ಜಾಗೃತಿ ಮೂಡಿಸುತ್ತಿದ್ದಾರೆ. ಕಾವೇರಿ ಜಲಾನಯನ‌ ಪ್ರದೇಶಗಳಲ್ಲಿನ ಏಳು ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಭಿಯಾನ ಮತ್ತು ಜನ ಜಾಗೃತಿ ಮೂಡಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ, ಗಣ್ಯರಾದ ರಾಜಮಾತೆ ಪ್ರಮೋದಾ ದೇವಿ, ಉದ್ಯಮಿ ಕಿರಣ್ ಮಜುಂದಾರ್ ಶಾ, ಮೋಹನ್‌ದಾಸ್ ಪೈ, ಸಂಸದ ಪಿ.ಸಿ.ಮೋಹನ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಭಾಗಿಯಾಗಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.