ನವದೆಹಲಿ/ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,500 ರೂಪಾಯಿ ಮತ್ತು 24 ಕ್ಯಾರೆಟ್ 51,820 ರೂ. ಇದೆ. ಚೆನ್ನೈನಲ್ಲಿ 22K ಕ್ಯಾರೆಟ್ ಚಿನ್ನ 48,250 ರೂ., 24K ಕ್ಯಾರೆಟ್ ಚಿನ್ನ 52,640 ರೂ.ಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಬಂಗಾರ 47,650 ಕ್ಕೆ ಹಾಗು 24 ಕ್ಯಾರೆಟ್ ಬಂಗಾರ 51,980 ಕ್ಕೆ ಲಭ್ಯವಾಗುತ್ತಿದೆ.
ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಹೇಗಿದೆ?:
ನಗರ | ಚಿನ್ನ22K (1 ಗ್ರಾಂ) | ಚಿನ್ನ24K (1 ಗ್ರಾಂ) | ಬೆಳ್ಳಿ |
ಬೆಂಗಳೂರು | 4,785 | 5,200 | 58.0 |
ಮಂಗಳೂರು | 4,755 | 5,188 | 63.20 |
ಹುಬ್ಬಳ್ಳಿ | 4,830 | 5,072 | 63.00 |
ದಾವಣಗೆರೆ | 4,745 | 5,138 | 63.28 |
ಮೈಸೂರು | 4,830 | 5,353 | 59.40 |
ನಿನ್ನೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ 1 ಗ್ರಾಂ 22K ಚಿನ್ನದ ದರದಲ್ಲಿ 40 ರೂ., 24K ಚಿನ್ನದ ದರದಲ್ಲಿ 45 ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರದಲ್ಲಿ 35 ರೂ. ಹೆಚ್ಚಳವಾಗಿದ್ದು, 24 ಕ್ಯಾರೆಟ್ ಚಿನ್ನದಲ್ಲಿ 39 ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ 20 ಪೈಸೆ ಏರಿಕೆ ಕಂಡಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 30 ರೂ. ಮತ್ತು 24K ಚಿನ್ನದ ದರದಲ್ಲಿ 21 ರೂ. ಏರಿಕೆ ಕಂಡಿದೆ. ಮೈಸೂರಿನಲ್ಲಿ ಸಹ ಚಿನ್ನದ ದರ ಏರಿಕೆ ಕಂಡಿದ್ದು, ಒಂದು ಗ್ರಾಂ 22 ಕ್ಯಾರೆಟ್ ಚಿನ್ನ 35 ರೂಪಾಯಿ, 24 ಕ್ಯಾರೆಟ್ ಚಿನ್ನ 41 ರೂಪಾಯಿ ಜಾಸ್ತಿಯಾಗಿದೆ. ದಾವಣಗೆರೆ ಚಿನ್ನ ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ.
ಇದನ್ನೂ ಓದಿ: ಫಾರ್ಚೂನ್ ಗ್ಲೋಬಲ್ 500 ಪಟ್ಟಿ: ರಿಲಯನ್ಸ್ ಇಂಡಸ್ಟ್ರೀಸ್ಗೆ 104 ನೇ ಸ್ಥಾನ