ಬೆಂಗಳೂರು: ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ - ಇಳಿಕೆ ಆಗುತ್ತಲೇ ಇರುತ್ತದೆ. ಆದರೆ ಇಂದು ಚಿನ್ನ ಕೊಳ್ಳುವವರಿಗೆ ಶುಭಸುದ್ದಿ. ಹೌದು ಚಿನ್ನದ ದರದಲ್ಲಿಂದು ಇಳಿಕೆಯಾಗಿದೆ. ಇಂದು ದೇಶದಲ್ಲಿ 10 ಗ್ರಾಂ (24K) ಚಿನ್ನದ ಬೆಲೆ 52,860 ರೂಪಾಯಿ ಇದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆಯಲ್ಲಿ 540 ರೂ. ಇಳಿಕೆ ಕಂಡಂತಾಗಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ,
ರಾಜ್ಯದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ಹೀಗಿದೆ:
ನಗರ | 22K ಚಿನ್ನ | 24K ಚಿನ್ನ | ಬೆಳ್ಳಿ |
ಮಂಗಳೂರು | 4,845 (1ಗ್ರಾಂ) | 5,286 (1ಗ್ರಾಂ) | 70 (1ಗ್ರಾಂ) |
ದಾವಣಗೆರೆ | 4,841 (1ಗ್ರಾಂ) | 5,285 (1ಗ್ರಾಂ) | 70.08 (1ಗ್ರಾಂ) |
ಹುಬ್ಬಳ್ಳಿ | 48,428 (10ಗ್ರಾಂ) | 52,840 (10ಗ್ರಾಂ) | 66,540 (1ಕೆಜಿ) |
ಮೈಸೂರು | 4,825 (1ಗ್ರಾಂ) | 5,342 (1ಗ್ರಾಂ) | 67,000 (1ಕೆಜಿ) |
ಶಿವಮೊಗ್ಗ | 4,825 (1ಗ್ರಾಂ) | 5,188 (1ಗ್ರಾಂ) | 66,600 (1ಕೆಜಿ) |
ಬೆಳಗಾವಿ | 4,815 (1ಗ್ರಾಂ) | 5,300 (1ಗ್ರಾಂ) | 68.3 (1ಗ್ರಾಂ) |
ಇದನ್ನೂ ಓದಿ: ತೈಲ ಬೆಲೆಯಲ್ಲಿ ಯಥಾಸ್ಥಿತಿ.. ಹೀಗಿದೆ ರಾಜ್ಯ- ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ
ದೆಹಲಿಯಲ್ಲಿ 10 ಗ್ರಾಂ ಚಿನ್ನದ (22K) ದರ 49,440 ರೂಪಾಯಿ ಇದೆ. 10 ಗ್ರಾಂ ಚಿನ್ನದ (24K) ದರ 52,850 ರೂಪಾಯಿ ಇದೆ. ಚೆನ್ನೈನಲ್ಲಿ ಪ್ರತಿ 10 ಗ್ರಾಂ(22K) ಚಿನ್ನದ ದರ 48,800 ರೂ. ಇದೆ. 10 ಗ್ರಾಂ(22K) ಚಿನ್ನದ ದರ 53,240 ರೂಪಾಯಿ ಇದೆ. ಕೊಲ್ಕತ್ತಾದಲ್ಲಿ 10 ಗ್ರಾಂ ಚಿನ್ನದ (22K) ದರ 49,440ರೂಪಾಯಿ ಮತ್ತು 24K ಚಿನ್ನದ ದರ 52,850 ರೂ. ಇದೆ. ಮುಂಬೈನಲ್ಲಿ 22K ಚಿನ್ನದ ದರ 49,440 ರೂ. ಮತ್ತು 24K ಚಿನ್ನದ ದರ 52,850 ರೂ. ಇದೆ. ಇನ್ನೂ, ಕೋಲ್ಕತ್ತಾದಲ್ಲಿ ಬೆಳ್ಳಿ ದರ ಕೆ.ಜಿ ಗೆ 65,000 ರೂ. ಇದ್ದರೆ, ದೆಹಲಿ, ಮುಂಬೈ, ಚೆನ್ನೈನಲ್ಲಿ 70,300 ರೂ. ಇದೆ.