ETV Bharat / city

ಕೋವಿಡ್​ ಕುರಿತಾದ ಸಲಹೆ, ಮಾಹಿತಿ ಕನ್ನಡದಲ್ಲೇ ನೀಡಿ: ಟಿ.ಎಸ್. ನಾಗಾಭರಣ - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ

ಕೋವಿಡ್ ವಿಚಾರ ಧಾರೆಗಳು ಭಾಷಾ ಕಾರಣದಿಂದ ಎಲ್ಲರಿಗೂ ತಲುಪುತ್ತಿಲ್ಲ. ಶೇ 30ರಷ್ಟು ಜನರಿಗೆ ಅಷ್ಟೇ ವಿಷ್ಯ ತಿಳಿಯುತ್ತಿದೆ. ಕೊರೊನಾ ಕುರಿತು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ. ಹೀಗಾಗಿ ಆರೋಗ್ಯ ಇಲಾಖೆ, ಬಿಬಿಎಂಪಿ ಇತ್ಯಾದಿ ಕೋವಿಡ್​ಗೆ ಸಂಬಂಧಪಟ್ಟ ಮಾಹಿತಿಯನ್ನು ಮೊದಲ ಆದ್ಯತೆ ಮೇಲೆ ಕನ್ನಡದಲ್ಲೇ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸರ್ಕಾರಕ್ಕೆ ಒತ್ತಾಯಿಸಿದರು.

give-covid-related-advice-and-information-in-kannada
ಟಿಎಸ್ ನಾಗಾಭರಣ
author img

By

Published : May 22, 2021, 4:33 PM IST

ಬೆಂಗಳೂರು: ಕೋವಿಡ್​​ಗೆ ಸಂಬಂಧಪಟ್ಟ ಮಾಹಿತಿ, ಜಾಗೃತಿ ಯಾವುದೇ ಇದ್ದರೂ ಅದರ ಸಲಹೆ, ಟಿಪ್ಪಣೆ, ಸುತ್ತೋಲೆಗಳು ಕನ್ನಡದಲ್ಲಿ ನೀಡಬೇಕು. ಆ ನಂತರ ಇಂಗ್ಲಿಷ್​ನಲ್ಲಿ ಬರಲಿ ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸರ್ಕಾರಕ್ಕೆ ಆಗ್ರಹಿಸಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸವ ನಿಮಿತ್ತ ನಡೆದ 'ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನ' ಉದ್ಘಾಟಿಸಿ, ಎರಡು ದಿನಗಳ ವರ್ಚುಯಲ್‌ ಕಾರ್ಯಕ್ರಮದಲ್ಲಿ 'ವೈದ್ಯ ವಿಜ್ಞಾನ ಅಂದು - ಇಂದು ಮುಂದು' ವಿಚಾರ ಮಂಡನೆ ವೇಳೆ ಮಾತಾನಾಡಿದ ಅವರು, ಕೋವಿಡ್ ವಿಚಾರ ಧಾರೆಗಳು ಭಾಷಾ ಕಾರಣದಿಂದ ಎಲ್ಲರಿಗೂ ತಲುಪುತ್ತಿಲ್ಲ. ಶೇ 30ರಷ್ಟು ಜನರಿಗೆ ಅಷ್ಟೆ ವಿಷ್ಯ ತಿಳಿಯುತ್ತಿದೆ. ಕೊರೊನಾ ಕುರಿತು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ. ಹೀಗಾಗಿ ಆರೋಗ್ಯ ಇಲಾಖೆ, ಬಿಬಿಎಂಪಿ ಇತ್ಯಾದಿ ಕೋವಿಡ್​ಗೆ ಸಂಬಂಧಪಟ್ಟ ಮಾಹಿತಿಯನ್ನು ಪ್ರಥಮವಾಗಿ ಕನ್ನಡದಲ್ಲೇ ನೀಡಬೇಕು ಎಂದು ಹೇಳಿದರು.

ಪಾರಂಪರಿಕ ವಿಜ್ಞಾನವನ್ನು ವೈಜ್ಞಾನಿಕದ ತಳಹದಿಯಲ್ಲಿ ಅಭ್ಯಸಿಸುವುದು ಅತ್ಯವಶ್ಯಕ. ಆಧುನಿಕತೆಯ ಭರದಲ್ಲಿ ಪಾರಂಪರಿಕತೆ ಬರಡಾಗುತ್ತಿದೆ. ಪಾರಂಪರಿಕ ಜ್ಞಾನದ ಜೊತೆಗೆ ವಿಜ್ಞಾನ ಮೇಳೈಸಿದಾಗ ಬದುಕು ಸುಗಮವಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ, ಸಮ್ಮೇಳನದಲ್ಲಿ ಭವಿಷ್ಯತ್ತಿನ ವೈದ್ಯ ಚಿಕಿತ್ಸೆ, ವೈದ್ಯಕೀಯ ಬ್ಯಾಂಕುಗಳು, ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ಸವಾಲುಗಳು ಸೇರಿದಂತೆ ವೈದ್ಯಕೀಯ ಮುನ್ನಡೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈದ್ಯಕೀಯ ವಿದ್ಯಮಾನಗಳು ಎಂಬ ವಿಷಯಗಳ ಕುರಿತು ಗೋಷ್ಠಿಗಳು ನಡೆದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.