ETV Bharat / city

ಬೆಂಗಳೂರಲ್ಲಿ ಯುವತಿ ಮೇಲೆ ಗ್ಯಾಂಗ್​ ರೇಪ್​... ತಾಯಿಯೇ ಡೀಲ್ ನಡೆಸಿರುವ ಶಂಕೆ! - gang rape

ಯುವತಿ ಮೇಲೆ ಗ್ಯಾಂಗ್​ ರೇಪ್​.ತಾಯಿಯೇ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಡೀಲ್ ನೀಡಿರುವ ಶಂಕೆ.ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಯುವತಿ
author img

By

Published : Mar 25, 2019, 2:10 PM IST

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸುವಂತ ಅಮಾನವೀಯ ಘಟನೆಯೊಂದು ನಡೆದಿದೆ. ಸಂಪಿಗೆ ಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರು ಬಳಿ ಯುವತಿವೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ತಾಯಿಯೇ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಡೀಲ್ ಕೊಟ್ಟಿದ್ದು, ಪುಡಾರಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಸಂತ್ರಸ್ತೆಯನ್ನು ಆಕೆಯ ತಾಯಿ ಬಾರ್ ಗರ್ಲ್ ಆಗುವಂತೆ ಒತ್ತಾಯಿಸಿದ್ದಳು. ಅದಕ್ಕೆ ಮಗಳು ನಿರಾಕರಿಸಿದಾಗ ಪುಡಾರಿ ಯುವಕರಿಂದ ಹಣ ಪಡೆದು ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಯುವತಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ‌ಜಕ್ಕೂರು ಕೆರೆ ಬಳಿ ಕರೆ ತಂದು ಚಾಕು ಹಾಕಲು ಮುಂದಾಗಿದ್ದರು. ಆಗ ಯುವತಿ ಕಿರುಚಾಡಿದಾಗ ಸಾರ್ವಜನಿಕರು ಸ್ಥಳಕ್ಕಾಗಮಿಸಿ ಯುವತಿಯನ್ನು ರಕ್ಷಿಸಿ‌ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾರ್​ಗರ್ಲ್ ಆಗುವಂತೆ ಒತ್ತಾಯಿಸುತ್ತಿದ್ದ ಯುವತಿಯ ತಾಯಿಯ ಮೇಲೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

KN_Bng_02_25_rape case_bhavya_7204498

Bhavya shibaroor

ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಹೇಡಿ ಕೃತ್ಯ
ತಾಯಿಯೆ ಮಗಳನ್ನ ವೇಶ್ಯಾವಟಿಕೆ ವೃತ್ತಿಗೆ ತಳ್ಳಿರುವ ಘಟನೆ ಬೆಳಕಿಗೆ

ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಹೇಡಿ ಕೃತ್ಯ ಬೆಳಕಿಗೆ ಬಂದಿದೆ..ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲು ಯತ್ನ  ಪಟ್ಟಿರುವ ಘಟನೆ ಸಂಪಿಗೆ ಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರು ಬಳಿ ನಡೆದಿದೆ.

ತಾಯಿಯೇ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಡೀಲ್ ಕೊಟ್ಡಿರುವ ಶಂಕೆ  ವ್ಯಕ್ತವಾಗಿದೆ .ಯಾಕಂದ್ರೆ ಸಂತ್ರಸ್ಥೆ ಯುವತಿಯನ್ನ ತಾಯಿ ಬಾರ್ ಗರ್ಲ್ ಆಗುವಂತೆ ಒತ್ತಾಯ ಮಾಡಿದ್ದಾಳೆ ಮಗಳು ನಿರಾಕರಣೆ ಮಾಡಿದಾಗ ಪುಡಾರಿ ಯುವಕರಿಂದ ಹಣ ಪಡೆದು ಮಗಳನ್ನೇ  ವೈಶ್ಯಾವಟಿಕೆ ದಂಧೆಗೆ  ಮಾರಾಟ ಮಾಡಿದ್ದಾಳಂತೆ.

ಇನ್ನು ಸಂತ್ರಸ್ಥೆಯನ್ನ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚರ ನಡೆಸಿ ನಂತ್ರ ‌ಜಕ್ಕೂರು ಕೆರೆ ಬಳಿ ಕರೆ ತಂದು ಚಾಕು ಹಾಕಲು ಮುಂದಾಗಿದ್ದಾರೆ. ಇನ್ನು ಚಾಕು ಹಾಕಲು ಮುಂದಾದಗ ಯುವತಿ ಕಿರುಚಾಟ ನಡೆಸಿದ್ದಾಳೆ.. ದುಷ್ಕರ್ಮಿಗಳು ಚಾಕು ಹಾಕುವಷ್ಟರಲ್ಲಿ ಅಲ್ಲಿದ್ದ ಸಾರ್ವಜನಿಕರಯ ಯುವತಿ ರಕ್ಷಣೆ  ಮಾಡಿ‌ ಯಲಹಂಕ  ಸರ್ಕಾರಿ ಆಸ್ಪತ್ರೆಗೆ ಕರೆ ತಂದು ನಂತ್ರ ಹೆಚ್ವಿನ ಚಿಕಿತ್ಸೆಗೆ  ವಿಕ್ಟೋರಿಯಾ ಆಸ್ಪತ್ರೆಗೆ ರವಾನೆಮಾಡಿದ್ದಾರೆ.. ಬಾರ್  ಗರ್ಲ್ ಆಗುವಂತೆ ಒತ್ತಾಯಿಸುತ್ತಿದ್ದ ತಾಯಿ‌ಮೇಲೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ತನಿಖೆ ಮುಂದುವರೆದಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.