ETV Bharat / city

ಕಸ ನಿರ್ವಹಣೆಯ ಶುಲ್ಕ ಫಿಕ್ಸ್‌; ಯಾವುದಕ್ಕೆ ಎಷ್ಟು ಶುಲ್ಕ?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ಕಸ ನಿರ್ವಹಣೆ ಶುಲ್ಕದ ಬಿಲ್‌ ಕೂಡ ಮನೆ ಬಾಗಿಲೆಗೆ ಬರಲಿದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.

Garbage management fee fixed In bengaluru ; details here
ಕಸ ನಿರ್ವಹಣೆಯ ಶುಲ್ಕ ಫಿಕ್ಸ್‌; ಯಾವುದಕ್ಕೆ ಎಷ್ಟು ಶುಲ್ಕ?
author img

By

Published : Dec 17, 2020, 4:06 AM IST

Updated : Dec 17, 2020, 5:16 AM IST

ಬೆಂಗಳೂರು: ಮುಂದಿನ ತಿಂಗಳಿಂದಲೇ ಬೆಸ್ಕಾಂ ಬಿಲ್ ಜೊತೆಗೆ ಕಸ ನಿರ್ವಹಣೆ ಶುಲ್ಕದ ಬಿಲ್ ಬರಲಿದೆ ಎಂದು ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಸ ನಿರ್ವಹಣೆ ಶುಲ್ಕದ ಬಗ್ಗೆ ಅನೇಕ ಗೊಂದಲ ಇದೆ. ಸೆಸ್ ಜಾರಿ ಈ ಹಿಂದಿನಿಂದಲೂ ಇದೆ. ರಸ್ತೆ ಸ್ವಚ್ಛವಾಗಿಡಲು, ಪೌರಕಾರ್ಮಿಕರಿಗಾಗಿ ಕಸದ ಸೆಸ್ ಬಳಕೆ ಮಾಡಲಾಗ್ತಿತ್ತು. ಈಗ ಬಳಕೆದಾರರಿಂದ ಕಸ ತೆಗೆದುಕೊಳ್ಳಲು (ಯೂಸರ್ ಚಾರ್ಜಸ್) ನಿರ್ವಹಣೆಗೆ ಶುಲ್ಕ ವಿಧಿಸಲಾಗುತ್ತದೆ. ಇದು ಘನತ್ಯಾಜ್ಯ ನಿರ್ವಹಣೆ ನಿಯಮ ಹಾಗೂ ಬೈಲಾದಲ್ಲೇ ಇದ್ದು, ಸರ್ಕಾರದಿಂದಲೇ ಗಜೆಟೆಡ್ ನೋಟಿಫಿಕೇಶನ್ ಆಗಿದೆ. ಈ ನಿಯಮ ಇರುವುದರಿಂದ ಇದನ್ನು ಜಾರಿಗೆ ತರುತ್ತಿದ್ದು, ಮುಂದಿನ ತಿಂಗಳಿಂದಲೇ ಬೆಸ್ಕಾಂ ಬಿಲ್ ಜೊತೆಗೆ ಕಸದ ಬಿಲ್ ಬರಲಿದೆ ಎಂದರು.

ಕಸ ನಿರ್ವಹಣೆಯ ಶುಲ್ಕ ಫಿಕ್ಸ್‌; ಯಾವುದಕ್ಕೆ ಎಷ್ಟು ಶುಲ್ಕ?

ಇದನ್ನೂ ಓದಿ: ಬಿಬಿಎಂಪಿ ಕಸ ಸಂಗ್ರಹ ಮಾಸಿಕ ಶುಲ್ಕ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರತಿ ಮನೆಗೆ ಇನ್ನೂರು ರೂಪಾಯಿಯಂತೆ ಸರ್ಕಾರವೇ ಅನುಮೋದನೆಗೊಳಿಸಿದೆ. ಇದರಲ್ಲಿ ಬದಲಾವಣೆ ಇದ್ದರೂ ಸರ್ಕಾರವೇ ಬದಲಾಯಿಸಬೇಕಿದೆ. ಪ್ರತಿ ವರ್ಷ ಬಿಬಿಎಂಪಿ ಕಸನಿರ್ವಹಣೆಗೆ 1000 ಕೋಟಿ ಖರ್ಚು ಮಾಡುತ್ತಿದೆ. ಈಗ ಬಳಕೆದಾರರ ಶುಲ್ಕದಿಂದ 300-400 ಕೋಟಿ ರೂ. ಮಾತ್ರ ನಿರೀಕ್ಷೆ ಮಾಡಲಾಗಿದೆ. ಪೂರ್ತಿ ಹಣ ಇದರಿಂದ ಬರು ನಿರೀಕ್ಷೆಯಿಲ್ಲ. ಬಡಕುಟುಂಬಗಳಿದ್ದರೆ ಆ ಮನೆಗಳಿಗೆ ಕಡಿಮೆ ಶುಲ್ಕ ವಿಧಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದರು.

ಕಸ ನಿರ್ವಹಣಾ ಶುಲ್ಕದ ವಿವರ

ಪ್ರತಿ ಮನೆಗೆ - 200 ರೂ., ವಸತಿ ಕಟ್ಟಡಗಳಿಗೆ ವಿಸ್ತೀರ್ಣ ಚದರ ಅಡಿಗೆ 1000 ವರೆಗೆ 10 ರೂಪಾಯಿ, 1001-3000 ಚದರಡಿಗೆ 30 ರೂಪಾಯಿ 3000ಕ್ಕೂ ಮೇಲ್ಪಟ್ಟಿದ್ದರೆ 50 ರೂಪಾಯಿ.

ವಾಣಿಜ್ಯ ಕಟ್ಟಡಗಳಿಗೆ 1000 ಚದರಡಿಗೆ 50 ರೂ., 1001-3000 ಚದರಡಿಗೆ 100 ರೂ., 5000ಕ್ಕೂ ಮೇಲ್ಪಟ್ಟಿದ್ದರೆ 200 ರೂ., ಕೈಗಾರಿಕಾ ಕಟ್ಟಡದ 1000 ಚದರಡಿಗೆ 50 ರೂಪಾಯಿ, 1001-5000 ವರಿಗೆ 200 ರೂಪಾಯಿ, 5000ಕ್ಕೂ ಮೇಲ್ಪಟ್ಟಿದ್ದರೆ 300 ರೂಪಾಯಿ ವಿಧಿಸಲಾಗುತ್ತದೆ.

ಹೋಟೆಲ್, ಕಲ್ಯಾಣಮಂಟಪ, ಆರೋಗ್ಯ ಸೇವಾ ಸಂಸ್ಥೆಯ ಕಟ್ಟಡಗಳಿಗೆ 1000 ಚ.ಅಡಿಗೆ 300 ರೂಪಾಯಿ, 1000-5000 ಚದರಡಿಗೆ 500 ರೂಪಾಯಿ, 5000ಕ್ಕೂ ಮೇಲ್ಪಟ್ಟಿದ್ದರೆ 600 ರೂಪಾಯಿ ನಿಗದಿ ಪಡಿಸಲಾಗಿದೆ.

ವಾಣಿಜ್ಯ ಮತ್ತು ಸಾಂಸ್ಥಿಕ ಉತ್ಪಾದಕರು ಕಸಕ್ಕೆ ಶುಲ್ಕ ವಿಧಿಸಲಾಗಿದ್ದು, 5 ಕೆಜಿಗಿಂತ ಕಡಿಮೆ ಇದ್ದರೆ 50 ರೂಪಾಯಿ, 5-10 ಕೆಜಿಗೆ 1,400 ರೂ., 10-25 ಕೆಜಿಗೆ 3,500 ರೂ., 25-50 ಕೆಜಿಗೆ 7,000 ರೂ., 50-100 ಕೆಜಿಗೆ 14,000 ರೂ. ಫಿಕ್ಸ್‌ ಮಾಡಲಾಗಿದೆ.

Last Updated : Dec 17, 2020, 5:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.