ETV Bharat / city

ದರೋಡೆಗೆ ಸಂಚು: ರೌಡಿ ಕುಳ್ಳು ರಿಜ್ವಾನ್ ಸಹಚರರು ಅರೆಸ್ಟ್! - ರೌಡಿ ಕುಳ್ಳು ರಿಜ್ವಾನ್

ಮಾರಕಾಸ್ತ್ರ ಹಿಡಿದು ದರೋಡೆಗೆ ಸಂಚು ರೂಪಿಸುತ್ತಿದ್ದ ಕುಖ್ಯಾತ ರೌಡಿ ಕುಳ್ಳು ರಿಜ್ವಾನ್​ನ ನಾಲ್ವರು ಸಹಚರರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

bangalore gangsters arrested in bangalore
ರೌಡಿ ಕುಳ್ಳು ರಿಜ್ವಾನ್ ಸಹಚರರು ಅರೆಸ್ಟ್
author img

By

Published : Feb 6, 2022, 2:04 PM IST

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಕಿರಾತಕರೀಗ ಪೊಲೀಸರ ಅತಿಥಿಯಾಗಿದ್ದಾರೆ. ದರೋಡೆಗೆ ಸಂಚು ರೂಪಿಸುತ್ತಿದ್ದ ಕುಖ್ಯಾತ ರೌಡಿ ಕುಳ್ಳು ರಿಜ್ವಾನ್​ನ ನಾಲ್ವರು ಸಹಚರರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ

ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕೇನಹಳ್ಳಿ ಅಪಾರ್ಟ್​ಮೆಂಟ್​​ ಮುಂಭಾಗದಲ್ಲಿ ಕುಳ್ಳು ರಿಜ್ವಾನ್ ಸಹಚರರಾದ ಬ್ಯಾಟರಾಯನಪುರ ರೌಡಿಶೀಟರ್​ಗಳಾದ ದಿಲೀಪ್, ಕೇಶವ ಹಾಗೂ ಮಾಗಡಿ ರೋಡ್ ಠಾಣೆ ವ್ಯಾಪ್ತಿಯ ರೌಡಿಗಳಾದ ಅಜಿತ್ ಹಾಗೂ ಹರೀಶ್ ಸೇರಿ ನಾಲ್ವರು ‌ಆರೋಪಿಗಳು ಮಾರಕಾಸ್ತ್ರ ಹಿಡಿದು ದರೋಡೆಗೆ ಸಂಚು ರೂಪಿಸುತ್ತಿದ್ದರು‌.‌

ಇದನ್ನೂ ಓದಿ: ರಾಯಚೂರು-ಆಂಧ್ರ ಗಡಿಯಲ್ಲಿ ಆಟೋ ಪಲ್ಟಿ: ಇಬ್ಬರು ಸಾವು!

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಕುಳ್ಳು ರಿಜ್ವಾನ್​ ಸಹಚರರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.