ETV Bharat / city

ಗಂಗಾ ಕಲ್ಯಾಣ ಟೆಂಡರ್ ಅಕ್ರಮ ಆರೋಪ; ಅಂದಿನ ಸಮಾಜ ಕಲ್ಯಾಣ ಸಚಿವರ ವಜಾಗೆ ಪ್ರಿಯಾಂಕ್ ಖರ್ಗೆ ಆಗ್ರಹ

author img

By

Published : Mar 19, 2022, 8:20 PM IST

ಸಮಾಜ ಕಲ್ಯಾಣ ಇಲಾಖೆಯಡಿ ವಿವಿಧ ನಿಗಮಗಳಿಂದ ಅನುಷ್ಠಾನಗೊಳ್ಳುವ ಗಂಗಾ ಕಲ್ಯಾಣ ಕೊಳವೆಬಾವಿ ಯೋಜನೆಯಡಿ ಅಕ್ರಮ ನಡೆದಿರುವುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಂದಿನ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾ‌ ಮಾಡಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.

ganga-welfare-tender-scam-priyank-kharge-calls-for-the-dismissal-of-the-former-w-minister
ಗಂಗಾ ಕಲ್ಯಾಣ ಟೆಂಡರ್ ಅಕ್ರಮ ಆರೋಪ; ಅಂದಿನ ಸಮಾಜ ಕಲ್ಯಾಣ ಸಚಿವರ ವಜಾಗೆ ಪ್ರಿಯಾಂಕ್ ಖರ್ಗೆ ಆಗ್ರಹ

ಬೆಂಗಳೂರು: ಸಮಾಜಕಲ್ಯಾಣ ಇಲಾಖೆಯಡಿ ವಿವಿಧ ನಿಗಮಗಳಿಂದ ಅನುಷ್ಠಾನಗೊಳ್ಳುವ ಗಂಗಾ ಕಲ್ಯಾಣ ಕೊಳವೆಬಾವಿ ಯೋಜನೆಯಡಿ ಹಗರಣ ನಡೆದಿರುವುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, 2019-20 ಮತ್ತು 2020-21ರ ಸಾಲಿನಲ್ಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 14,577 ಕೊಳವೆಬಾವಿ ಕೊರೆಸಲು 431 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಅಕ್ರಮ ನಡೆದಿದೆ. ಅರ್ಹರಿಲ್ಲದ ಗುತ್ತಿಗೆದಾರರಿಗೆ ಕೊಳವೆಬಾವಿ ಕೊರೆಸುವ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಗಂಗಾ ಕಲ್ಯಾಣ ಟೆಂಡರ್ ನಲ್ಲಿ ಅಕ್ರಮ ನಡೆದಿರುವುದಾಗಿ ಆರೋಪಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ

2018-19ರಲ್ಲಿ ಒಂದು ಕೊಳವೆ ಬಾವಿ ಕೊರೆಸಲು ಒಂದು ನಿಗಮಕ್ಕೆ ₹94 ಸಾವಿರ ಆಗುತ್ತಿತ್ತು. ಈಗ ಅದು 1.83 ಲಕ್ಷ ರೂ.ಗೆ ಏರಿಕೆ ಆಗಿದೆ. ಇದು ಹೇಗೆ ಡಬಲ್ ಆಗಿದೆ ಎಂಬುದು ಗೊತ್ತಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಂದು ಕೊಳವೆ ಬಾವಿ ಕೊರೆಸುವ ವೆಚ್ಚ 94,000 ರೂ. ಆಗಿದೆ. ಅದೇ ಸಮಾಜಕಲ್ಯಾಣ ಇಲಾಖೆಯಲ್ಲಿ ಒಂದು ಕೊಳವೆ ಬಾವಿ ಕೊರೆಸುವ ವೆಚ್ಚ 1.83 ಲಕ್ಷ ರೂ. ಆಗಿದೆ. ಅದರ ಆಧಾರದಲ್ಲಿ ಸಮಾಜಕಲ್ಯಾಣ ಇಲಾಖೆಯಲ್ಲಿ ಕೊಳವೆ ಬಾವಿ ಕೊರೆಸಲು ಒಟ್ಟು ಟೆಂಡರ್ ವೆಚ್ಚ 266.75 ಕೋಟಿ ರೂ. ಆಗಿದೆ. ಆ ಮೂಲಕ ಸುಮಾರು 137 ಕೋಟಿ ರೂ. ವ್ಯತ್ಯಾಸ ಬಂದಿದೆ ಎಂದು ದಾಖಲೆ ಸಮೇತವಾಗಿ ದೂರಿದರು.

ಬಡವರ ಈ ಯೋಜನೆಯಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಇದಕ್ಕೆ ಉತ್ತರ ನೀಡುವ ಬದಲು ಕಾಶ್ಮೀರ್​ ದಿ ‌ಫೈಲ್ಸ್ ನೋಡಲು ಹೇಳ್ತೀರಾ, ಮಕ್ಕಳ ಕೈಗೆ ಕಿತಾಬ್ ಕೊಡುವ ಬದಲು ಹಿಜಾಬ್ ಕೊಟ್ಟು ಕೇಸರಿ ಶಾಲು ಕೊಡುತ್ತೀರಾ?. ಧರ್ಮ ಪ್ರಚೋದನೆ ನೀಡುತ್ತೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ. ಸಿಎಂಗೆ ಎಸ್ ಸಿ, ಎಸ್ಟಿ ಬಗ್ಗೆ, ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಈ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಅಕ್ರಮ ಮಾಡಿದ ಗುತ್ತಿಗೆದಾರರ ಮೇಲೆ ತನಿಖೆ ಮಾಡಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಈ ಹೊಸ ಪದ್ಧತಿಗೆ ಅನುಮೋದನೆ ನೀಡಿದ ಆಗಿನ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾ‌ ಮಾಡಬೇಕು ಎಂದು ಖರ್ಗೆ ಆಗ್ರಹಿಸಿದರು.

ಹಗರಣದ ಆರೋಪ ಏನು?: 2019-20 ಮತ್ತು 2020-21ರ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ 14,577 ಕೊಳವೆಬಾವಿ ಕೊರೆಸಲು 431 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದು ಗಂಭೀರ ಆರೋಪವಾಗಿದೆ.

ಬಿಜೆಪಿ ಸರ್ಕಾರ ಬಂದ ಬಳಿಕ ಟೆಂಡರ್ ಪ್ರಕ್ರಿಯೆಯನ್ನು ಸರಳೀಕರಿಸುವ ನಿಟ್ಟಿನಲ್ಲಿ ಕೊಳವೆಬಾವಿ ಕೊರೆಸುವ ಗುತ್ತಿಗೆದಾರರು ಹಾಗೂ ಪಂಪ್ ಸೆಟ್ ಅಳವಡಿಸುವ ಪಂಪ್ ಸೆಟ್ ಉತ್ಪಾದಕರು ಇಬ್ಬರೂ ಜೊತೆಗೂಡಿ ಬಿಡ್ ಮಾಡಬಹುದು ಎಂಬ ಹೊಸ ಟೆಂಡರ್ ನಿಯಮ ರೂಪಿಸಲಾಯಿತು. ನವೆಂಬರ್ 10, 2020ಕ್ಕೆ ಈ ಸಂಬಂಧ ಆದೇಶ ಹೊರಡಿಸಲಾಯಿತು. ಆದರೆ ಆದೇಶ ಹೊರಡಿಸಿದ ಎರಡು ತಿಂಗಳ ಬಳಿಕ ಜ.2, 2021ರಲ್ಲಿ ಮತ್ತೊಂದು ಆದೇಶ ಹೊರಡಿಸಲಾಯಿತು. ಅದರಂತೆ ನ.10, 2020ಕ್ಕೆ ಹೊರಡಿಸಲಾದ ಇಬ್ಬರೂ ಒಟ್ಟಾಗಿ ಬಿಡ್ ಹಾಕಬಹುದಾದ ನಿಯಮವನ್ನು ತೆಗೆದು ಹಾಕಿ ಕೃಷ್ಣ ಭಾಗ್ಯ ಜಲ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಗಳು ಕೊಳವೆ ಬಾವಿ ಕೊರೆಯುವುದು, ಪಂಪ್ ಸೆಟ್ ಅಳವಡಿಕೆ ಮತ್ತು ವಿದ್ಯುದೀಕರಣ ಕೆಲಸಗಳನ್ನು ಒಟ್ಟಿಗೆ ಮಾಡುವಂತೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಆದೇಶ ಹೊರಡಿಸಲಾಯಿತು ಎಂದು ತಿಳಿಸಿದರು.

ಈ ಆದೇಶ ಪ್ರತಿಯಲ್ಲಿ ಅಂದಿನ ಸಮಾಜಕಲ್ಯಾಣ ಸಚಿವರ ಅನುಮೋದಿತ ಎಂದು ನೋಟ್ ಹಾಕಲಾಗಿದೆ. ಈ‌ ಮುಂಚಿನ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು 30 ವರ್ಷಗಳಿಂದ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 70ಕ್ಕೂ ಅಧಿಕ ಗುತ್ತಿಗೆದಾರರು ಇದ್ದಾರೆ. ಆದರೆ ಕೃಷ್ಣ ಭಾಗ್ಯ ಜಲ ನಿಗಮ(ಕೆಬಿಜೆ)ದಲ್ಲಿ ಕೇವಲ 12 ಗುತ್ತಿಗೆದಾರರು ಮಾತ್ರ ಇದ್ದಾರೆ. ಕೆಬಿಜೆಯಲ್ಲಿರುವ ಗುತ್ತಿಗೆದಾರರಿಗೆ ಕಡಿಮೆ ಅನುಭವ ಇದೆ. ಅವರಿಗೆ ಕೊಳವೆ ಬಾವಿ ಕೊರೆಯುವ ಪರಿಣತಿ ಇಲ್ಲ. ಕೇವಲ 10-12 ಗುತ್ತಿಗೆದಾರರಿಗೆ ಅನುಕೂಲ ಮಾಡುವ ನಿರ್ಧಾರ ಇದಾಗಿದ್ದು, ಜೊತೆಗೆ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ನಿಯಮದ ಪ್ರಕಾರ ಗುತ್ತಿಗೆದಾರ ಕನಿಷ್ಠ ಒಂದು ವರ್ಷದಲ್ಲಿ ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ 80% ಕೊಳವೆ ಬಾವಿ ಕೊರೆಯುವ, ಪಂಪ್ ಸೆಟ್ ಹಾಕುವ ಹಾಗೂ ವಿದ್ಯುದೀಕರಣ ಮಾಡಿರುವ ಅನುಭವ ಹೊಂದಿರಬೇಕು. ಆದರೆ ಕೆಬಿಜೆಯಲ್ಲಿರುವ ಗುತ್ತಿಗೆದಾರರು ಯಾರೂ ಈ ಷರತ್ತನ್ನು ಪೂರೈಸಿಲ್ಲ. ಅಲ್ಲಿ ಯಾರೂ ಅರ್ಹ ಗುತ್ತಿಗೆದಾರರು ಇಲ್ಲ.‌ ಹಾಗಿದ್ದರೂ ಅವರಿಗೆ ಟೆಂಡರ್ ನೀಡಲಾಗಿದೆ. ಕೆಲಸ ಮಾಡಿಲ್ಲವಾದರೂ ಗುತ್ತಿಗೆದಾರರಿಗೆ ವರ್ಕ್ ಡನ್ ಆದೇಶವನ್ನು ನೀಡಲಾಗಿದೆ ಎಂದು ದೂರಿದ್ದಾರೆ.

ಆರ್ಥಿಕ ಬಿಡ್ಡಿಂಗ್ ನಲ್ಲೂ ಗೋಲ್‌ಮಾಲ್ ನಡೆದಿದೆ.‌ ಆರ್ಥಿಕ ವರ್ಷದಲ್ಲಿ ಒಟ್ಟು ವಹಿವಾಟಿನ ಆಧಾರದಲ್ಲಿ ಫೈನ್ಯಾನ್ಷಿಯಲ್ ಬಿಡ್ ಹಾಕಬೇಕು. ಆದರೆ ಈ ಗುತ್ತಿಗೆದಾರರು ನಿಯಮದ ಪ್ರಕಾರ ಬಿಡ್ ಹಾಕಲು ಅರ್ಹರೇ ಅಲ್ಲ. ಆದರೂ ಅವರಿಗೆ ಟೆಂಡರ್ ಸಿಕ್ಕಿದೆ. ಟೆಂಡರ್ ಹಾಕಿದ ಒಂದೇ ಗುತ್ತಿಗೆದಾರರು ಬೇರೆ ಬೇರೆ ಹಣಕಾಸು ವಹಿವಾಟನ್ನು ಸಲ್ಲಿಕೆ ಮಾಡಿದ್ದಾರೆ. ಬೇರೆ ಬೇರೆ ಟೆಂಡರ್ ಗಳಿಗೆ ಒಂದೇ ನಿಗಮಗಳಿಗೆ ಒಂದೇ ಗುತ್ತಿಗೆದಾರರು ಬೇರೆ ಬೇರೆ ಹಣಕಾಸು ವಹಿವಾಟಿನ ಲೆಕ್ಕವನ್ನು ಸಲ್ಲಿಸಿ ಎಂದು ಪ್ರಿಯಾಂಕ್​ ಖರ್ಗೆ ಹರಿಹಾಯ್ದರು.

ಟೆಂಡರ್ ಪರಿಶೀಲನೆ ವೇಳೆ ಗುತ್ತಿಗೆದಾರರು ಅರ್ಹರಲ್ಲ ಎಂದು ಹೇಳಲಾಗಿದೆ. ಆದರೆ ಮತ್ತೊಂದು ಟೆಂಡರ್ ನಲ್ಲಿ ಅದೇ ಗುತ್ತಿಗೆದಾರರಿಗೆ ಅರ್ಹರು ಎಂಬ ಪ್ರಮಾಣಪತ್ರ ನೀಡಲಾಗಿದೆ. ಒಂದು ನಿಗಮದಲ್ಲಿ ಅವರಿಗೆ ಅರ್ಹರಿಲ್ಲ ಎಂದು ಹೇಳಲಾಗುತ್ತದೆ. ಇನ್ನೊಂದು ನಿಗಮದಲ್ಲಿ ಅದೇ ಗುತ್ತಿಗೆದಾರರಿಗೆ ಅರ್ಹರಾಗಿದ್ದಾರೆ ಎಂಬ ಪ್ರಮಾಣಪತ್ರ ನೀಡಲಾಗುತ್ತದೆ. ಗುತ್ತಿಗೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಓದಿ : ನ್ಯಾಟೋ ಸಮರಾಭ್ಯಾಸದಲ್ಲಿ ಮಿಲಿಟರಿ ವಿಮಾನ ಪತನ : ಅಮೆರಿಕ ನಾಲ್ವರು ಯೋಧರು ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.