ETV Bharat / city

ಎರಡು ದಿನ  ಜಿಲ್ಲಾ ಪ್ರವಾಸಕ್ಕೆ ಹೊರಟ ಸಿಎಂ: ಸಂಪುಟ‌ ವಿಸ್ತರಣೆ ಮತ್ತಷ್ಟು ವಿಳಂಬ ಸಾಧ್ಯತೆ! - ಜಿಲ್ಲಾ ಪ್ರವಾಸಕ್ಕೆ ಹೊರಟ ಸಿಎಂ ಬೆಂಗಳೂರು ಸುದ್ದಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಮತ್ತು ಸೋಮವಾರ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿರುವುದರಿಂದ ಸಂಪುಟ ವಿಸ್ತರಣೆ ಮತ್ತಷ್ಟು ದಿನ ವಿಳಂಬ ಸಾಧ್ಯತೆ ಇದೆ.

banglore
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
author img

By

Published : Jan 25, 2020, 4:48 PM IST

ಬೆಂಗಳೂರು: ದಾವೋಸ್​ನಿಂದ ವಾಪಸ್ ಬರುತ್ತಿದ್ದಂತೆ ಮೂರ್ನಾಲ್ಕು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದರೂ ಮತ್ತಷ್ಟು ದಿನ ವಿಳಂಬ ಸಾಧ್ಯತೆ ದೃಢವಾಗಿದೆ. ಭಾನುವಾರ ಮತ್ತು ಸೋಮವಾರ ಜಿಲ್ಲಾ ಪ್ರವಾಸಕ್ಕೆ ಸಿಎಂ ತೆರಳುತ್ತಿರುವುದು ಇದಕ್ಕೆ ನಿದರ್ಶನವಾಗಿದೆ.

banglore
ಮೈಸೂರು ಜಿಲ್ಲೆಯಲ್ಲಿ ಕೈಗೊಳ್ಳಲಿರುವ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮಗಳು

ಸಚಿವ ಸಂಪುಟ‌ ವಿಸ್ತರಣೆ ವಿಚಾರ ಸದ್ಯಕ್ಕಿಲ್ಲ, ಭಾನುವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಸಿಎಂ ನಂತರ ಮೈಸೂರಿಗೆ ತೆರಳಲಿದ್ದು, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸೋಮವಾರ ಕೆ ಆರ್ ನಗರ ಮತ್ತು ಮಡಿಕೇರಿ ಪ್ರವಾಸಕ್ಕೆ ತೆರಳುತ್ತಿದ್ದು, ಮಡಿಕೇರಿಯಲ್ಲಿ ನಡೆಯಲಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆಯಲ್ಲಿ ಭಾಗಿಯಾಗಲಿದ್ದಾರೆ.

ಹಾಗಯೇ ಕೆಆರ್‌ ನಗರದಲ್ಲಿ ನಡೆಯಲಿರುವ ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸೋಮವಾರ ಸಿಎಂ ದೆಹಲಿಗೆ ಹೋಗ್ತಾರೆ ಎಂದು ಹೇಳಲಾಗುತ್ತಿದ್ದು, ಇದೀಗ ಸಿಎಂ ಸೋಮವಾರ ಕೂಡ ದೆಹಲಿಗೆ ಹೋಗುವುದಿಲ್ಲ. ಮುಂದಿನ ಎರಡು ದಿನ ಸಂಪುಟ ವಿಸ್ತರಣೆ ಕಡೆ ಗಮನ ಹರಿಸುವುದನ್ನು ಬಿಟ್ಟು, ಬೇರೆ ಜಿಲ್ಲೆಗಳ ಕಡೆ ಗಮನ ಕೊಟ್ಟಿದ್ದಾರೆ.

ಆ ಮೂಲಕ ಸಂಪುಟ ವಿಸ್ತರಣೆ ಮತ್ತಷ್ಟು ದಿನ ಮುಂದೂಡಿಕೆಯಾಗುವ ಸುಳಿವನ್ನು ಸ್ವತಃ ಸಿಎಂ ನೀಡಿದ್ದಾರೆ.

Intro:

ಬೆಂಗಳೂರು:ದಾವೋಸ್ ನಿಂದ ವಾಪಸ್ ಬರುತ್ತಿದ್ದಂತೆ ಮೂರ್ನಾಲ್ಕು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದರೂ ಮತ್ತಷ್ಟು ದಿನ ವಿಳಂಬ ಸಾಧ್ಯತೆ ದಡ್ಡವಾಗಿದೆ, ಭಾನುವಾರ ಮತ್ತು ಸೋಮವಾರ ಜಿಲ್ಲಾ ಪ್ರವಾಸಕ್ಕೆ ಸಿಎಂ ತೆರಳುತ್ತಿರುವುದು ಇದಕ್ಕೆ ನಿದರ್ಶನ.

ಹೌದು,ಸಿಎಂ ದೆಹಲಿ ಪ್ರವಾಸ, ನಾಳೆಯೂ ಇಲ್ಲ, ನಾಡಿದ್ದು ಇಲ್ಲ, ಸಚಿವ ಸಂಪುಟ‌ ವಿಸ್ತರಣೆ ವಿಚಾರ ಸದ್ಯಕ್ಕಿಲ್ಲ, ನಾಳೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಸಿಎಂ ನಂತರ ಮೈಸೂರಿಗೆ ತೆರಳಲಿದ್ದು, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.ನಾಡಿದ್ದು, ಕೆಆರ್ ನಗರ ಮತ್ತು ಮಡಿಕೇರಿ ಪ್ರವಾಸಕ್ಕೆ ತೆರಳುತ್ತಿದ್ದು, ಮಡಿಕೇರಿಯಲ್ಲಿ ನಡೆಯಲಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಯಲ್ಲಿ ಭಾಗಿಯಾಗಲಿದ್ದಾರೆ
ಹಾಗೂ ಕೆಆರ್‌ ನಗರದಲ್ಲಿ ನಡೆಯಲಿರುವ ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ಸೋಮವಾರ ಸಿಎಂ ದೆಹಲಿಗೆ ಹೋಗ್ತಾರೆ ಎಂದು ಹೇಳಲಾಗ್ತಿತ್ತು, ಇದೀಗ ಸಿಎಂ ಸೋಮವಾರ ಕೂಡ ದೆಹಲಿಗೆ ಹೋಗಲ್ಲ.ಮುಂದಿನ ಎರಡು ದಿನ ಸಂಪುಟ ವಿಸ್ತರಣೆ ಕಡೆ ಗಮನಹರಿಸುವುದನ್ನು ಬಿಟ್ಟು, ಬೇರೆ ಜಿಲ್ಲೆಗಳ ಕಡೆ ಗಮನ ಕೊಟ್ಟಿದ್ದಾರೆ ಆ ಮೂಲಕ ಸಂಪುಟ ವಿಸ್ತರಣೆ ಮತ್ತಷ್ಟು ದಿನ ಮುಂದೂಡಿಕೆಯಾಗುವ ಸುಳಿವನ್ನು ಸ್ವತಃ ಸಿಎಂ ನೀಡಿದ್ದಾರೆ.
Body:.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.