ETV Bharat / city

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನೂರೆಂಟು ವಿಘ್ನ; ಮೇಕೆದಾಟು ಯೋಜನೆಯ ಕಾಲಾನುಕ್ರಮ ಪ್ರಗತಿ ಹೇಗಿದೆ ನೋಡಿ

author img

By

Published : Jan 9, 2022, 1:45 AM IST

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಭಾನುವಾರದಿಂದ ಪಾದಯಾತ್ರೆ ನಡೆಸುತ್ತಿದೆ. ಕಾಂಗ್ರೆಸ್ ಮುಖಂಡರೆಲ್ಲರೂ ಭಾನುವಾರದಿಂದ ಪಾದಯಾತ್ರೆಯ ಹೋರಾಟವನ್ನು ಪ್ರಾರಂಭಿಸಲಿದ್ದಾರೆ.‌ ಈ ಪಾದಯಾತ್ರೆ ಇದೀಗ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ನಮ್ಮ ಸರ್ಕಾರದಲ್ಲೇ ಮೇಕೆದಾಟು ಯೋಜನೆ ಪ್ರಗತಿ ಕಂಡಿದ್ದು, ನೀವೇನು ಮಾಡಿಲ್ಲ ಎಂದು ಎರಡೂ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.

Chronological details of Mekedatu project
ಮೇಕೆದಾಟು ಯೋಜನೆ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಸದ್ಯ ಆಡಳಿತ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ವೀಕೆಂಡ್ ಕರ್ಫ್ಯೂ ಮಧ್ಯೆ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಲು ಮುಂದಾಗಿದೆ. ಸದ್ಯ ರಾಜಕೀಯವಾಗಿ ಸದ್ದು ಮಾಡುತ್ತಿರುವ ಮೇಕೆದಾಟು ಯೋಜನೆ ಜಾರಿ ಸಂಬಂಧ ಈವರೆಗೆ ನಡೆದ ಘಟನಾವಳಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಭಾನುವಾರದಿಂದ ಪಾದಯಾತ್ರೆ ನಡೆಸುತ್ತಿದೆ. ಕಾಂಗ್ರೆಸ್ ಮುಖಂಡರೆಲ್ಲರೂ ಭಾನುವಾರದಿಂದ ಪಾದಯಾತ್ರೆಯ ಹೋರಾಟವನ್ನು ಪ್ರಾರಂಭಿಸಲಿದ್ದಾರೆ.‌ ಈ ಪಾದಯಾತ್ರೆ ಇದೀಗ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ನಮ್ಮ ಸರ್ಕಾರದಲ್ಲೇ ಮೇಕೆದಾಟು ಯೋಜನೆ ಪ್ರಗತಿ ಕಂಡಿದ್ದು, ನೀವೇನು ಮಾಡಿಲ್ಲ ಎಂದು ಎರಡೂ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಸದ್ಯ ಮೇಕೆದಾಟು ಯೋಜನೆ ರಾಜಕೀಯದ ಮಧ್ಯೆ ಸಿಲುಕಿಕೊಂಡಿದೆ. 1996ರಲ್ಲಿ ಹುಟ್ಟಿಕೊಂಡ ಈ ಮೇಕೆದಾಟು ಯೋಜನೆ ಪ್ರಸ್ತಾವನೆ ಇಲ್ಲಿವರೆಗೆ ಸಾಗಿ ಬಂದ ಕಾಲಾನುಕ್ರಮದ ವಿವರ ಇಲ್ಲಿದೆ.

ಯೋಜನೆಯ ಕಾಲಾನುಕ್ರಮ ಪ್ರಗತಿ:

1996-97- ಕೆಪಿಸಿಯಿಂದ ಜಲವಿದ್ಯುತ್ ಯೋಜನೆಯಾಗಿ 731.27ಕೋಟಿ ರೂ. ಮೇಕೆದಾಟು ಯೋಜನಾ ವರದಿ ಸಿದ್ಧ

10.9.2013- ಮೇಕೆದಾಟು ಹಾಗೂ ಶಿವನಸಮುದ್ರ ಯೋಜನೆಗೆ ಸಂಬಂಧಿಸಿ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ಪಡೆದು ಡಿಪಿಆರ್ ತಯಾರಿಸಲು ನಿರ್ದೇಶನ

5.11.2013- ಕನ್ಸಲ್ಟೆನ್ಸಿ ಸರ್ವಿಸ್ ಪಡೆಯುವ ಸಲುವಾಗಿ ಕೆಟಿಪಿಪಿ ಕಾಯ್ದೆಯಡಿ 4g ಅನ್ವಯ ವಿನಾಯಿತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

7.04.2014- ಕನ್ಸಲ್ಟೆನ್ಸಿ ಸರ್ವಿಸ್ ಪಡೆಯಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಸರ್ಕಾರದಿಂದ ನಿರ್ದೇಶನ

25.10.2014- ಜಾಗತಿಕ ಮಟ್ಟದ ಟೆಂಡರ್ ಪ್ರಕಟ

10.4.2015- RFP (ರಿಕ್ವೆಸ್ಟ್ ಫಾರ್ ಪ್ರೊಪೋಸಲ್)ನ್ನು ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಅಸ್ತು

30.04.2015- ಪಿಎಂ ಮೋದಿಗೆ ಆಗಿನ ಸಿಎಂ ಸಿದ್ದರಾಮಯ್ಯರಿಂದ ವಿಜ್ಞಾಪನಾ ಪತ್ರ ಸಲ್ಲಿಕೆ

09.07.2015- ಖಾಲಿ RFP (ರಿಕ್ವೆಸ್ಟ್ ಫಾರ್ ಪ್ರೊಪೋಸಲ್) ದಾಖಲೆಗಳನ್ನು ವಿತರಿಸಲು ಕೊನೆಯ ದಿನಾಂಕ

17.08.2015- ತಾಂತ್ರಿಕ ಬಿಡ್ಡುಗಳನ್ನು ತೆರೆಯಲಾಯಿತು

06.10.2015- ತಾಂತ್ರಿಕ ಬಿಡ್ಡುಗಳನ್ನು ಟೆಂಡರ್ ಪರಿಶೀಲನಾ ಸಮಿತಿ ಮಂಜೂರಾತಿಗೆ

8.10.2015- ಆರ್ಥಿಕ ಬಿಡ್ಡುಗಳನ್ನು ತೆರೆಯಲಾಯಿತು

13.10.2015- ಆರ್ಥಿಕ ಬಿಡ್ಡುಗಳನ್ನು ಟೆಂಡರ್ ಪರಿಶೀಲನಾ ಸಮಿತಿ ಮಂಜೂರಾತಿಗಾಗಿ ಮಂಡಿಸಲಾಯಿತು. ಸಮಿತಿ ಸಮಲೋಚಕರು ನಮೂದಿಸಿರುವ ಮೊತ್ತ ಭಾರಿ ಪ್ರಮಾಣದ್ದಾಗಿದ್ದು, ಅವರೊಂದಿಗೆ ಸಂಧಾನ ನಡೆಸಲು ನಿರ್ದೇಶನ

17.10.2015- ಸಮಾಲೋಚಕರು ಮೊತ್ತ ಕಡಿಮೆ ಮಾಡಲು ಒಪ್ಪುವುದಿಲ್ಲ

25.11.2015- ಕಾವೇರಿ ನೀರಾವರಿ ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಸ್ತಾವನೆ ತಿರಸ್ಕಾರ

28.12.2015- ಸಮಾಲೋಚಕರ ಸೇವೆಯನ್ನು ಪಡೆಯುವ ಸಲುವಾಗಿ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ಕೋರಿ ಸರ್ಕಾರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಕೆ

25.02.2016- ಕೆಟಿಪಿಪಿ ಕಾಯ್ದೆಯ 4g ಅಡಿ ಆರ್ಥಿಕ ಇಲಾಖೆಯಿಂದ ವಿನಾಯಿತಿ ನೀಡಲಾಯಿತು

26.02.2016- ಸಮಾಲೋಚಕರ ಸೇವೆಯ ಒಪ್ಪಂದವನ್ನು ಜಾರಿಗೊಳಿಸಲಾಯಿತು

04.06.2016- 5,912 ಕೋಟಿ ಮೊತ್ತದ ಡಿಪಿಆರ್ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಕೆ

13.03.2017- ಸರ್ಕಾರದಿಂದ ತಾತ್ವಿಕ ಅನುಮೋದನೆ

07.06.2017- ಡಿಪಿಆರ್ ಮಂಜೂರಾತಿಗಾಗಿ ಕೇಂದ್ರ ಜಲ ಆಯೋಗ, ಬೆಂಗಳೂರುಗೆ ಸಲ್ಲಿಕೆ

07-07-2017- ಕೇಂದ್ರ ಜಲ ಆಯೋಗ ಬೆಂಗಳೂರು ಪಾಲನಾ ವರದಿಯೊಂದಿಗೆ ಪ್ರಸ್ತಾವನೆಯನ್ನು ದಿಲ್ಲಿಯ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲು ನಿರ್ದೇಶನ.

09.10.2017- ಬೆಂಗಳೂರು ಕೇಂದ್ರ ಜಲ ಆಯೋಗದ ಅನುಪಾಲನಾ ವರದಿಯೊಂದಿಗೆ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ಮಾರ್ಪಡಿಸಿ ಕೇಂದ್ರ ಜಲ ಆಯೋಗ ದಿಲ್ಲಿಗೆ ಸಲ್ಲಿಸಲು ಜಲಸಂಪನ್ಮೂಲ ಇಲಾಖೆಗೆ ಕಳುಹಿಸಲಾಯಿತು

18.01.2018- ಸರ್ಕಾರ ಅಂತರ ರಾಜ್ಯ ಜಲ, ಜಲ ಸಂಪನ್ಮೂಲ ಇಲಾಖೆಯ ಅಭಿಪ್ರಾಯ, ಗಮನಿಸಿದ ಅಂಶಗಳ ಬಗ್ಗೆ ಪರಿಶೀಲಿಸಿ ಡಿಪಿಆರ್ ಸಲ್ಲಿಸಲು ನಿರ್ದೇಶನ

19.03.2018- ಮಾರ್ಪಾಡಿತ ಪೂರ್ವ ಕಾರ್ಯ ಸಾಧ್ಯತಾ ವರದಿಯನ್ನು ಅಂತರ ರಾಜ್ಯ ಜಲ ಮುಖ್ಯ ಎಂಜಿನಿಯರ್​ರನ್ನು ಪರಿಶೀಲನೆಗೆ ಕಳುಹಿಸಲಾಯಿತು

27.03.2018- ಅಂತರ ರಾಜ್ಯ ಜಲ ಮುಖ್ಯ ಎಂಜಿನಿಯರ್ ಗಮನಿಸಿದ ಕೆಲವೊಂದು ಅಂಶಗಳ ಅಳವಡಿಕೆ

16.02.2018- ಕಾವೇರಿ ಜಲ ವಿವಾದ ನ್ಯಾಯಾಧೀಕರಣದ ತೀರ್ಪಿನ ಹಿನ್ನೆಲೆ ಸು.ಕೋರ್ಟ್ ತೀರ್ಪು

28.04.2018- ಪೂರ್ವ ಕಾರ್ಯ ಸಾಧ್ಯತಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಕೆ

20.06.2018- ಸರ್ಕಾರ ಜಲ ವಿಜ್ಞಾನ ಭಾಗಕ್ಕೆ ಸಂಬಂಧಿಸಿದ ವಿವರಗಳನ್ನು ಪರಿಷ್ಕರಿಸಿ, ಅದಕ್ಕೆ ಅನುಗುಣವಾಗಿ ವರ್ಕಿಂಗ್ ಟೇಬಲ್​ಗಳನ್ನು ಹಾಗೂ ಯೋಜನೆ ಉದ್ದೇಶ ಮತ್ತು ಸಮರ್ಥನೆಗಳನ್ನು ಬದಲಾಯಿಸಲು ನಿರ್ದೇಶನ

29.06.2018- ಜಲ ವಿಜ್ಞಾನ ವರದಿ ಹಾಗೂ ವರ್ಕಿಂಗ್ ಟೇಬಲ್​ಗಳನ್ನು ಪರಿಶೀಲನೆ ಮತ್ತು ಅಭಿಪ್ರಾಯಕ್ಕಾಗಿ ಮುಖ್ಯ ಎಂಜಿನಿಯರ್, ಅಂತರ ರಾಜ್ಯ ಜಲ, ಜಲಸಂಪನ್ಮೂಲ ಇಲಾಖೆಗೆ ಸಲ್ಲಿಕೆ

10.07.2018- ಅಂತರ ರಾಜ್ಯ ಜಲ ಮುಖ್ಯ ಎಂಜಿನಿಯರ್ ಪತ್ರದಂತೆ ಮಾರ್ಪಡಿತ ಡಿಪಿಆರ್​ನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲು ಪರಿಗಣಿಸಬಹುದಾಗಿರುತ್ತದೆ ಎಂದು ತಿಳಿಸಲಾಯಿತು

02.08.2018- ಕರ್ನಾಟಕ ಸರ್ಕಾರಕ್ಕೆ ಪೂರ್ವ ಕಾರ್ಯ ಸಾಧ್ಯತಾ ವರದಿ ಸಲ್ಲಿಸಿ, ಕೇಂದ್ರ ಜಲ ಆಯೋಗಕ್ಕೆ ಅದನ್ನು ರವಾನಿಸಲು ಅನುಮತಿ ಕೋರಿಕೆ

04.08.2018- ಪೂರ್ವ ಕಾರ್ಯ ಸಾಧ್ಯತಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ

24.08.2018- ಕೇಂದ್ರ ಜಲ ಆಯೋಗ ಯೋಜನೆಯ ಕುರಿತು ವಿವರವಾಗಿ ಪ್ರಸ್ತುತ ಪಡಿಸಲು ಕೋರಿತು

07.09.2018- ಪೂರ್ವ ಕಾರ್ಯ ಸಾಧ್ಯತಾ ವರದಿಯ ಹೆಚ್ಚುವರಿ ಪ್ರತಿಗಳನ್ನು ಕಾವೇರಿ ಕಣಿವೆ ರಾಜ್ಯಗಳ ಪ್ರಧಾನ ಇಂಜಿನಿಯರ್​ಗೆ ಹಾಗೂ 4 ಪ್ರತಿಗಳನ್ನು CEA, ಕೇಂದ್ರ ಜಲ ಆಯೋಗಕ್ಕೆ ಕಳುಹಿಸಲು ಕೋರಲಾಯಿತು

25.09.2018/04.10.2018- ಪೂರ್ವ ಕಾರ್ಯ ಸಾಧ್ಯತಾ ವರದಿಯ ಹೆಚ್ಚುವರಿ ಪ್ರತಿಗಳನ್ನು ಕಾವೇರಿ ಕಣಿವೆ ರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಿಗೆ ಹಾಗೂ ಪ್ರೊಜೆಕ್ಟ್ ಅಪ್ರೈಸಲ್ ಅರ್ಗನೈಸೇಷನ್ ಕೇಂದ್ರ ಜಲ ಆಯೋಗಕ್ಕೆ ಕಳುಹಿಸಲಾಯಿತು

22.11.2018- ಕೇಂದ್ರ ಜಲ ಆಯೋಗ ಯೋಜನಾ ಅಧಿಕಾರಿಗಳಿಗೆ ಕೆಲ ಷರತ್ತುಗಳಿಗೆ ಒಳಪಟ್ಟಂತೆ ಡಿಪಿಆರ್ ತಯಾರಿಕೆಯನ್ನು ಮುಂದುವರಿಸುವಂತೆ ನಿರ್ದೇಶನ

30.11.2018- ಡಿಪಿಆರ್ ತಯಾರಿಕೆಗೆ ತಡೆಯೊಡ್ಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ

19.12.2018- ಡಿಪಿಆರ್ ತಯಾರಿಕೆಗೆ ಕೆಟಿಪಿಪಿ ಕಾಯ್ದೆಯಡಿ 4g ವಿನಾಯಿತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಕೆ

04.01.2019- ಕೆಟಿಪಿಪಿ ಕಾಯ್ದೆಯಡಿ 4g ಅಡಿ ಡಿಪಿಆರ್ ತಯಾರಿಕೆಗೆ ಆರ್ಥಿಕ ಇಲಾಖೆ ವಿನಾಯಿತಿ ನೀಡಲು ಅನುಮತಿ

18.01.2019- 9000 ಕೋಟಿ ರೂ. ಮೊತ್ತದ ಯೋಜನೆಯ ಡಿಪಿಆರ್​ನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ

20-06-2019- ಯೋಜನೆಗೆ ಅವಶ್ಯವಿರುವ EIA & EMP ವರದಿಗಳನ್ನು ತಯಾರಿಸಲು Terms of Reference (TOR) ಅರ್ಜಿಯನ್ನು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MOEF) ವೆಬ್ ಸೈಟ್​ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

19.07.2019- ಎಕ್ಸ್ ಪರ್ಟ್ ಅಪ್ರೈಸಲ್ ಕಮಿಟಿ (ಇಎಸಿ) ಸಭೆ ನಡೆಸಲಾಯಿತು.

04.10.2019- ಇಎಸಿ ಸೂಚಿಸಿದ ಹೆಚ್ಚುವರಿ ಮಾಹಿತಿಗಳನ್ನು MoEF ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.

- ಸದ್ಯ ಸಮಗ್ರ ಯೋಜನಾ ವರದಿಯ ಪರಿಶೀಲನೆ ಕೇಂದ್ರ ಜಲ ಆಯೋಗದ ಮುಂದೆ ಇದೆ. ಹಾಗೆಯೇ ಅರಣ್ಯ ಮತ್ತು ಪರಿಸರ ಸಚಿವಾಲಯದ ಒಪ್ಪಿಗೆಯ ನಿರೀಕ್ಷೆಯಲ್ಲಿದೆ

- ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಿದ ಆಕ್ಷೇಪಣಾ ಅರ್ಜಿ 12.12.2018, 22.01.2019, 20.02.2019, 08.11.2019 ಮತ್ತು 23.01.2020ಕ್ಕೆ ವಿಚಾರಣೆಗೆ ಬಂದಿತ್ತು. ಸದ್ಯ ವಿಚಾರಣೆಯನ್ನು 25.01.2022ಗೆ ಮುಂದೂಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.