ETV Bharat / city

ಆತುರ ಬೇಡ.. ಇನ್ನೂ ಎರಡು ದಿನಗಳ ಕಾಲ ಇರುತ್ತೆ ಉಚಿತ ಬಸ್​ ಸೇವೆ.. ಸಿಎಂ ಅಭಯ - ಕೋವಿಡ್​-19

ವಿವಿಧ ಜಿಲ್ಲೆಗಳಲ್ಲಿ ಸಿಲುಕಿದ್ದ ವಲಸಿಗರನ್ನು ತಮ್ಮ ತಮ್ಮ ಜಿಲ್ಲೆಗಳಿಗೆ ಕಳುಹಿಸುವ ಉಚಿತ ಬಸ್​ ಸೇವೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಈಗ ಮತ್ತೆ ಎರಡು ದಿನಗಳ ಕಾಲ ಉಚಿತ ಬಸ್ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ.

cm bsy
ಸಿಎಂ ಬಿಎಸ್​ವೈ
author img

By

Published : May 4, 2020, 12:11 PM IST

ಬೆಂಗಳೂರು : ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು ಅದನ್ನು ಇನ್ನು 2 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಮೇ 5ರಂದು ಈ ಸೌಲಭ್ಯ ಕೊನೆಗೊಳ್ಳಬೇಕಿತ್ತು. ಆದರೆ, ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಮತ್ತು ಇತರೆ ಜನರು ಬಸ್ ನಿಲ್ದಾಣಗಳಲ್ಲಿ ಜಮಾವಣೆಯಾಗದೆ ನೆಮ್ಮದಿಯಿಂದ ತಮ್ಮ ಊರುಗಳಿಗೆ ತೆರಳಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಭಾನುವಾರ 951 ಕೆಎಸ್ಆರ್​ಟಿಸಿ ಬಸ್​​ಗಳನ್ನು ಒದಗಿಸಲಾಗಿದೆ. ಅಂದಾಜು 30 ಸಾವಿರ ಜನರು ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದಾರೆ. ಇಂದು ಈಗಾಗಲೇ 50 ಬಸ್​​ಗಳಲ್ಲಿ ಸುಮಾರು 1,500 ಪ್ರಯಾಣಿಕರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ 550 ಬಸ್​​ಗಳು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ 400 ಬಸ್​​ಗಳನ್ನು ಈ ಸೌಲಭ್ಯ ನೀಡಲು ಕಾಯ್ದಿರಿಸಲಾಗಿದೆ. ಶನಿವಾರದಂದೂ 550 ಬಸ್​ಗಳಲ್ಲಿ ಅಂದಾಜು 16,500 ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ.

ಭಾನುವಾರ ಎರಡು ರೈಲುಗಳು ಬಿಹಾರದ ಪಾಟ್ನಾಗೆ, ಒಂದು ಜಾರ್ಖಂಡ್​ನ ರಾಂಚಿಗೆ ಹಾಗೂ ಒಡಿಶಾದ ಭುವನೇಶ್ವರಕ್ಕೆ ಒಂದು ರೈಲು ತೆರಳಿದ್ದು ಸುಮಾರು 4,800 ಪ್ರಯಾಣಿಕರು ಅವರವರ ರಾಜ್ಯಗಳಿಗೆ ತೆರಳಿದ್ದಾರೆ ಎಂದು ಬಿಎಸ್​ವೈ ಮಾಹಿತಿ ನೀಡಿದ್ದಾರೆ. ಇಂದು ಎರಡು ರೈಲುಗಳು ರಾಜಸ್ಥಾನದ ಜೈಪುರ್ ಮತ್ತು ಬಿಹಾರದ ಪಾಟ್ನಾಕ್ಕೆ ಹೊರಡಲಿವೆ. ಪ್ರಯಾಣಕ್ಕಿಂತ ಮೊದಲು ಎಲ್ಲಾ ಜನರಿಗೂ ಉಚಿತ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.