ETV Bharat / city

ಆಟೋವನ್ನೇ ಆ್ಯಂಬುಲೆನ್ಸ್​ ಮಾಡಿದ ಚಾಲಕ: 24x7 ಉಚಿತ ಸೇವೆ ನೀಡಿ ಮಾದರಿ - coronavirus update

ಕೊರೊನಾ ವೈರಸ್​ ಸಮಯದಲ್ಲಿ ಆಸ್ಪತ್ರೆಗಳಿಗೆ ಹೋಗಲು ಹತ್ತು ಹಲವು ಸಮಸ್ಯೆ ಎದುರಿಸಿದ ಜನರಿಗೆ ಅನುಕೂಲವಾಗಲಿ ಎಂದು ಸ್ವಯಂ ಸೇವಕರು ಉಚಿತ ಆ್ಯಂಬುಲೆನ್ಸ್​ ಸೇವೆ ನೀಡಿದ್ದಾರೆ.

free ambulance service
ಆಟೋ ಚಾಲಕ ಅಬ್ದುಲ್ ಮಜೀದ್
author img

By

Published : Sep 24, 2020, 5:27 PM IST

ಬೆಂಗಳೂರು: ಕೊರೊನಾ ಸಮಯದಲ್ಲಿ ಹೆಚ್ಚು ತಾಪತ್ರಯಕ್ಕೆ ಒಳಗಾಗಿದ್ದು, ಕೋವಿಡೇತರ ರೋಗಿಗಳು. ರಾಜ್ಯದಲ್ಲಿ ಲಭ್ಯವಿದ್ದ ಆ್ಯಂಬುಲೆನ್ಸ್​ಗಳನ್ನ ಸಂಪೂರ್ಣ ಕೊರೊನಾ ರೋಗಿಗಳಿಗೆ ಮೀಸಲಿಡಲಾಯಿತು. ಹೀಗಾಗಿ ತುರ್ತು ಎಂದು ಆ್ಯಂಬುಲೆನ್ಸ್​​ಗೆ ಮಾಡಿದರೂ ಬರೋದು ತಡವಾಗುತ್ತಿತ್ತು. ಈ ವೇಳೆ, ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದೂ ಇದೆ. ಇಂದಿಗೂ ಈ ಕುರಿತು ವರದಿಯಾಗುತ್ತಿವೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮಾನವೀಯತೆ ತೋರುತ್ತಿರುವವರು ನಮ್ಮ‌ ನಡುವೆಯೇ ಇದ್ದಾರೆ. ಉದಾಹರಣೆಗೆ ಬೆಂಗಳೂರಿನ ಹೆಬ್ಬಾಳದ ಭುವನೇಶ್ವರಿನಗರದ ನಿವಾಸಿ ಆಟೋ ಚಾಲಕ ಅಬ್ದುಲ್ ಮಜೀದ್ ಸೌದಾಗರ್. ತಮ್ಮ ಆಟೋವನ್ನೇ ಆ್ಯಂಬುಲೆನ್ಸ್​​​ನಂತೆ ಪರಿವರ್ತಿಸಿಕೊಂಡಿದ್ದಾರೆ. ಈ ಮೂಲಕ ಅವರು, ದಿನಪೂರ್ತಿ ಸೇವೆಯಲ್ಲಿ ತೊಡಗಿದ್ದಾರೆ. ಅನಾರೋಗ್ಯ ಸಮಸ್ಯೆಯುಳ್ಳ ಬಡವರನ್ನು ಆಟೋದಲ್ಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾದರಿಯಾಗಿದ್ದಾರೆ.

ಸಂಪೂರ್ಣ ಪಿಪಿಇ ಕಿಟ್ ಧರಿಸಿ, ಫೇಸ್​ ಶೀಲ್ಡ್, ಮಾಸ್ಕ್, ಕೈಗವಸು ಹೀಗೆ ಎಲ್ಲವನ್ನೂ ಧರಿಸಿರುತ್ತಾರೆ. 24/7 ಸೇವೆ ನೀಡುವ ಅವರು, ಮನುಷ್ಯರಾಗಿ ಹುಟ್ಟಿದ ಮೇಲೆ ಒಬ್ಬರಿಗೆ ಒಬ್ಬರು ನೆರವಾಗಬೇಕು. ಈ ಕೆಲಸಕ್ಕೆ ಮನೆಯವರ ಪ್ರೋತ್ಸಾಹ ಕೂಡ ಇದೆ. ನಮ್ಮ ಗುರು-ಹಿರಿಯರು ಹೇಳಿಕೊಟ್ಟಂತೆ ನಾವು ಮತ್ತೊಬ್ಬರಿಗೆ ಸಹಾಯ ಮಾಡುತ್ತಾ ಬರುತ್ತಿದ್ದೇವೆ ಎಂದು ಈಟಿವಿ ಭಾರತಕ್ಕೆ ತಿಳಿಸಿದರು.

ಮೆಡಿಕಲ್ ಸೇವೆಗಾಗಿ ಅಷ್ಟೇ ತಮ್ಮ ಆಟೋವನ್ನು‌ ಬಳಸಿಕೊಳ್ಳುತ್ತಿರುವ ಅಬ್ದುಲ್, ಆಟೋ ಮೀಟರ್ ಕೂಡ ತೆಗೆದು ಮನೆಯಲ್ಲಿ ಇಟ್ಟಿದ್ದಾರೆ. ಕೇವಲ ಕೋವಿಡ್-ನಾನ್ ಕೋವಿಡ್ ರೋಗಿಗಳಿಗೆ ಅಲ್ಲದೇ ಆಸ್ಪತ್ರೆ ಸಿಬ್ಬಂದಿಯನ್ನೂ ಆಸ್ಪತ್ರೆಗೆ ತಲುಪಿಸುತ್ತಾರೆ.

ಇದನ್ನೂ ಓದಿ...ಉಚಿತ ಆಂಬುಲೆನ್ಸ್ ಸೇವೆ: ಆಪತ್​ ಕಾಲದಲ್ಲಿ ಆದರು ಆಪತ್ಬಾಂಧವರು!

ಅಂತ್ಯಕ್ರಿಯೆಗೂ ಉಚಿತ ಸೇವೆ: ಒಂದು ಕಡೆ ಉಚಿತವಾಗಿ ಆಟೋವನ್ನೇ ಆ್ಯಂಬುಲೆನ್ಸ್​​ ಮಾಡಿಕೊಂಡು ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ಅಬ್ದುಲ್ ಅವರ ಮಾದರಿ ಕಥೆ ಒಂದು ಕಡೆಯಾದರೆ, ಮತ್ತೊಂದು ಕಡೆ ಕೊರೊನಾದಿಂದ ಮೃತಪಟ್ಟವರಿಗೆ ಇಲ್ಲೊಂದು ತಂಡ ಮುಕ್ತಿದಾತರಾಗಿದ್ದಾರೆ.

ಆಟೋವನ್ನೇ ಆ್ಯಂಬುಲೆನ್ಸ್​ ಮಾಡಿದ ಚಾಲಕ

ಶಾಸಕ ಜಮ್ಮೀರ್ ಅವರು ನಿಯೋಜಿಸಿರುವ BZ ತಂಡ ಇದಾಗಿದ್ದು, ಅದರಲ್ಲಿ 20-22 ಜನ ಇದ್ದಾರೆ. ಕೊರೊನಾದಿಂದ ಮೃತಪಟ್ಟ ಎಷ್ಟೋ ಅನಾಥ ಶವಗಳಿಗೆ ಮುಕ್ತಿ ನೀಡುತ್ತಿದ್ದಾರೆ. ಸಾವನ್ನಪ್ಪಿದವರ ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ಈ ತಂಡ ನೆರವೇರಿಸುತ್ತದೆ. ಈವರೆಗೂ ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟ 100ಕ್ಕೂ ಅಧಿಕ ಮೃತ ವ್ಯಕ್ತಿಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇವರಷ್ಟೇ ಅಲ್ಲ, ಬಿಬಿಎಂಪಿ ಸದಸ್ಯ ಶಿವರಾಜು ಅವರು ಸಹ ತಮ್ಮ ವಾರ್ಡ್​​ನಲ್ಲಿ ಲಾಕ್​ಡೌನ್​​ನಲ್ಲಿ ಪರದಾಡಿದ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿದ್ದರು. ರೋಗಿಗಳನ್ನ ಆಸ್ಪತ್ರೆಗೆ ದಾಖಲಿಸುವುದಾಗಲಿ, ಬೆಡ್ ವ್ಯವಸ್ಥೆಯಿಂದ ಹಿಡಿದು, ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆಯನ್ನು ತಾವೇ ಮುಂದೆ ನಿಂತು ಮುಗಿಸಿದ್ದಾರೆ.

  • ಅಬ್ದುಲ್ ಮಜೀದ್ ಅವರ ಸಂಪರ್ಕ: 99869,03424

ETV Bharat Logo

Copyright © 2024 Ushodaya Enterprises Pvt. Ltd., All Rights Reserved.