ETV Bharat / city

ಸಾಲ ಕೊಡಿಸುವುದಾಗಿ ಸ್ಯಾಂಡಲ್​​ವುಡ್ ನಿರ್ಮಾಪಕನಿಂದ ವಂಚನೆ?: ಪ್ರಕರಣ ದಾಖಲು - ವೆಂಕಟೇಶ್ ರೆಡ್ಡಿ ವಿರುದ್ಧ ವಂಚನೆ ಆರೋಪ

ಪ್ರಥಮ್ ಅಭಿನಯದ ಎಂಎಲ್ಎ ಎಂಬ ಕನ್ನಡ ಚಿತ್ರದ ನಿರ್ಮಿಸಿದ್ದ ವೆಂಕಟೇಶ್ ರೆಡ್ಡಿ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.

Case filed against sandalwood producer
ನಿರ್ಮಾಪಕ ವೆಂಕಟೇಶ್ ರೆಡ್ಡಿ
author img

By

Published : Jul 30, 2022, 11:06 AM IST

ಬೆಂಗಳೂರು: ಸಾಲ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಡಿ ಸ್ಯಾಂಡಲ್​​ವುಡ್ ಸಿನಿಮಾ ನಿರ್ಮಾಪಕನ ವಿರುದ್ಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಥಮ್ ಅಭಿನಯದ ಎಂಎಲ್ಎ ಎಂಬ ಕನ್ನಡ ಚಿತ್ರದ ನಿರ್ಮಿಸಿದ್ದ ವೆಂಕಟೇಶ್ ರೆಡ್ಡಿ ಎಂಬಾತನ ವಿರುದ್ಧ ಆರೋಪ ಕೇಳಿ ಬಂದಿದೆ.

ತಾನೊಬ್ಬ ರಿಯಲ್ ಎಸ್ಟೇಟ್ ಉದ್ಯಮಿ, ವಕೀಲ ಹಾಗೂ ಚಿತ್ರರಂಗದಲ್ಲಿ ನಿರ್ಮಾಪಕನಾಗಿರುವುದಾಗಿ ಹೇಳಿದ್ದ ವೆಂಕಟೇಶ್ ರೆಡ್ಡಿ ಸಂಜಯ್ ರಾಜ್ ಬಿ.ಸಿ ಎಂಬುವವರಿಗೆ ಲೋನ್ ಕೊಡಿಸುವುದಾಗಿ ಹೇಳಿದ್ದರಂತೆ. ನನಗೆ ರಾಷ್ಟ್ರೀಕೃತ ಬ್ಯಾಂಕ್ ನವರು ಪರಿಚಯವಿದ್ದಾರೆ ಎಂದು ನಂಬಿಸಿ 35 ಲಕ್ಷ ಹಣ ಸಾಲ ಕೊಡಿಸುವುದಾಗಿ ಹೇಳಿ 5 ಲಕ್ಷ ಹಣ ಕೇಳಿದ್ದರಂತೆ.

ನಂತರ ಹಂತ ಹಂತವಾಗಿ ಶ್ರೀನಿಧಿ, ರವಿಕುಮಾರ್ ಹಾಗೂ ದಿನೇಶ್ ಎಂಬುವವರ ಖಾತೆಗಳಿಗೆ ಒಟ್ಟು 8 ಲಕ್ಷ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂಜಯ್ ರಾಜ್ ಬಿ.ಸಿ ನೀಡಿದ ದೂರಿನನ್ವಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜೂಜುಕೋರರ ಅಡ್ಡೆ ಮೇಲೆ ದಾಳಿ: ಇಸ್ಪೀಟ್‌ ಆಡುತ್ತಿದ್ದ ನಾಲ್ವರು ಪೊಲೀಸರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.