ETV Bharat / city

ಬ್ಯಾಂಕ್ ಗ್ರಾಹಕರ ಗಮನಕ್ಕೆ: ನಾಲ್ಕು ದಿನ ಬ್ಯಾಂಕ್ ಸೇವೆ ಸ್ಥಗಿತ - ಬ್ಯಾಂಕ್ ನೌಕರರ 9 ಸಂಘಟನೆಗಳ ಒಕ್ಕೂಟ

ಬ್ಯಾಂಕ್ ಒಕ್ಕೂಟವೂ ಮಾರ್ಚ್15 ಮತ್ತು 16 ರಂದು ಮುಷ್ಕರೆ ಕರೆ ನೀಡಿದೆ. ಜೊತೆಗೆ ಮಾರ್ಚ್ 13 ಎರಡನೇ ಶನಿವಾರ, ಮಾರ್ಚ್ 14 ಭಾನುವಾರ. ಹಾಗಾಗಿ ಸತತ ನಾಲ್ಕು ದಿನ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

bank service shutdown
bank service shutdown
author img

By

Published : Mar 11, 2021, 11:04 AM IST

ಬೆಂಗಳೂರು: ಸಾರ್ವಜನಿಕ ವಲಯದ ಎರಡು ಬ್ಯಾಂಕ್​ಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಬ್ಯಾಂಕ್ ನೌಕರರ 9 ಸಂಘಟನೆಗಳ ಒಕ್ಕೂಟ (ಯುಎಫ್​ಬಿಯು) ಬೆಂಗಳೂರು ಘಟಕದಿಂದ ಮಾರ್ಚ್ 15 ರಿಂದ ಎರಡು ದಿನಗಳ ಮುಷ್ಕರ ನಡೆಸುವುದಾಗಿ ತಿಳಿಸಿದೆ.

ಬ್ಯಾಂಕ್ ಒಕ್ಕೂಟವೂ ಮಾರ್ಚ್15 ಮತ್ತು 16 ರಂದು ಮುಷ್ಕರೆ ಕರೆ ನೀಡಿದೆ. ಜೊತೆಗೆ ಮಾರ್ಚ್ 13 ಎರಡನೇ ಶನಿವಾರ, ಮಾರ್ಚ್ 14 ಭಾನುವಾರ. ಹಾಗಾಗಿ ಸತತ ನಾಲ್ಕು ದಿನ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

2021-22ರ ಹೊಸ ಹಣಕಾಸು ವರ್ಷವು ಮಾರ್ಚ್ ಆರಂಭದಿಂದ ಪ್ರಾರಂಭವಾಗುತ್ತದೆ. ಈ ಸನ್ನಿವೇಶದಲ್ಲಿ ರಜಾ ದಿನಗಳ ಕಾರಣದಿಂದ ಬ್ಯಾಂಕಿನ ಶಾಖೆಗಳು ಮುಚ್ಚಲ್ಪಟ್ಟರೂ, ನೀವು ಇಂಟರ್​ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಕೆಲಸಗಳನ್ನು ನಿರ್ವಹಿಸಬಹುದು. ರಾಜ್ಯಗಳಲ್ಲಿ ಬ್ಯಾಂಕ್ ರಜೆಗಳಲ್ಲಿ ವ್ಯತ್ಯಾಸವಾಗಬಹುದು ಎಂದು ಆರ್.ಬಿ.ಐ ಹೇಳಿದೆ. ಆದ್ದರಿಂದ, ಎಲ್ಲಾ ಗ್ರಾಹಕರು ಇದನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕಿಂಗ್​ಗೆ ಸಂಬಂಧಿಸಿದ ತಮ್ಮ ಕೆಲಸವನ್ನು ಯೋಜಿಸಬೇಕಾಗಿದೆ.

ಇನ್ನು ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ ಬ್ಯಾಂಕ್ ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಲಿದ್ದು, ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಒಕ್ಕೂಟ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.