ETV Bharat / city

ನಿಮ್ಮ ಹುಳುಕು ಮುಚ್ಚಿಕೊಳ್ಳಲು HDK ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ : ಅನ್ಸಾರಿಗೆ ಶರವಣ ಟಾಂಗ್​​ - ಟಿ.ಎ. ಶರವಣ

'ಗಂಗಾವತಿಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಏದುಸಿರು ಬಿಡುತ್ತಿದ್ದ ನೀವು ದಡ ಸೇರಲು ಇದೇ ಕುಮಾರಸ್ವಾಮಿ ಅವರ ನೆರವು ಬೇಕಾಯಿತು. ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ'..

TA Sharavana
ಟಿ.ಎ. ಶರವಣ
author img

By

Published : Oct 17, 2021, 3:03 PM IST

ಬೆಂಗಳೂರು : ಇಕ್ಬಾಲ್ ಅನ್ಸಾರಿ ಅವರೇ ನೀವು ಇಷ್ಟು ಬೇಗ ಹಳೆಯದನ್ನೆಲ್ಲ ಮರೆತರೆ ಹೇಗೆ?. ನಿಮ್ಮ ಹುಳುಕು ಮುಚ್ಚಿಕೊಳ್ಳಲು ಹೆಚ್ ಡಿ ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ತಿರುಗೇಟು ನೀಡಿದ್ದಾರೆ.

  • ಇಕ್ಬಾಲ್ ಅನ್ಸಾರಿ ಅವರೇ ನೀವು ಇಷ್ಟು ಬೇಗ ಹಳೆಯದನ್ನೆಲ್ಲ ಮರೆತರೆ ಹೇಗೆ? ನಿಮ್ಮ ಹುಳುಕು ಮುಚ್ಚಿಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ.1/2

    — Sharavana TA (@SharavanaTa) October 17, 2021 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊಪ್ಪಳದಲ್ಲಿ ನೀವು ಎಷ್ಟು ಕೊನೆಯಲ್ಲಿದ್ದಿರಿ?. ಕಾಂಗ್ರೆಸ್'ನಲ್ಲಿ ನಿಮ್ಮ ಸ್ಥಾನ ಎಷ್ಟು ಕೊನೆಯಲ್ಲಿತ್ತು ಎನ್ನುವುದು ನಿಮಗಿಂತ ಕೊಪ್ಪಳದ ಜನತೆಗೆ ಚೆನ್ನಾಗಿ ಗೊತ್ತಿದೆ. ಜೆಡಿಎಸ್ ಅಭ್ಯರ್ಥಿ ಆಗಿದ್ದಾಗ ಎರಡು ಸಲ ಗೆದ್ದಿರಿ. ಅದೇ ಕಾಂಗ್ರೆಸ್ ಪಕ್ಷದಲ್ಲಿ ಎರಡು ಸಲ ಅಭ್ಯರ್ಥಿ ಆದಾಗ ಮಕಾಡೆ ಮಲಗಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಧರಂಸಿಂಗ್ ಸಂಪುಟದಲ್ಲಿ ಪ್ರಮಾಣ ಸ್ವೀಕರಿಸುವಾಗ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಅನ್ಸಾರಿ ಅವರೇ?. ಅವತ್ತು ಸಚಿವನಾಗಿ ಪ್ರಮಾಣ ಸ್ವೀಕಾರ ಮಾಡಿದಾಗ ಸಿದ್ದರಾಮಯ್ಯ ಹೆಸರಿನಲ್ಲೇ ನೀವು ಪ್ರಮಾಣ ಯಾಕೆ ಸ್ವೀಕರಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಗಂಗಾವತಿಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಏದುಸಿರು ಬಿಡುತ್ತಿದ್ದ ನೀವು ದಡ ಸೇರಲು ಇದೇ ಕುಮಾರಸ್ವಾಮಿ ಅವರ ನೆರವು ಬೇಕಾಯಿತು. ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ ಎಂಬ ಗಾದೆ ಮಾತಿನಂತೆ ಇದೆ ನಿಮ್ಮ ವರಸೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಹೆಚ್​ಡಿಕೆ ಅವರದ್ದು ಡಬಲ್ ಸ್ಟ್ಯಾಂಡರ್ಡ್ ಪಾಲಿಸಿ: ಇಕ್ಬಾಲ್ ಅನ್ಸಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.