ETV Bharat / city

'ಹಿಂದಿನ ಕಾಮಗಾರಿಗಳ ಬಿಲ್ ಬಾಕಿ ಇದೆ, ಹೊಸ ನೀರಾವರಿ ಯೋಜನೆಗಳನ್ನ ಹೇಗೆ ಕೈಗೆತ್ತಿಕೊಳ್ಳುತ್ತಾರೆ?:MBP ಪ್ರಶ್ನೆ

2018ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1.50 ಲಕ್ಷ ಕೋಟಿ ಹಣವನ್ನು ನೀರಾವರಿ ಯೋಜನೆಗಳಿಗೆ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆಡಳಿತಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ 40 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಈಗಾಗಲೇ 10-12 ಸಾವಿರ ಕೋಟಿ ಮೊತ್ತದ ಕಾಮಗಾರಿಗಳ ಹಿಂದಿನ ಬಿಲ್ ಬಾಕಿ ಇದೆ. ಹೊಸ ನೀರಾವರಿ ಯೋಜನೆಗಳನ್ನು ಹೇಗೆ ಕೈಗೆತ್ತಿಕೊಳ್ಳುತ್ತಾರೆ? ಎಂದು ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಎಂ.ಬಿ ಪಾಟೀಲ್
ಎಂ.ಬಿ ಪಾಟೀಲ್
author img

By

Published : Mar 5, 2022, 9:32 AM IST

ಬೆಂಗಳೂರು: ಈ ಬಾರಿ ಬಜೆಟ್‍ನಲ್ಲಿ ನೀರಾವರಿ ಇಲಾಖೆಗೆ 20 ಸಾವಿರ ಕೋಟಿ ನೀಡಿದ್ದು, ಇದರಲ್ಲಿ ಸಣ್ಣ ನೀರಾವರಿ ಇಲಾಖೆಗೆ ಕನಿಷ್ಠ 3 ಸಾವಿರ ಕೋಟಿ ಹೋಗುತ್ತದೆ. ಬಾಕಿ ಉಳಿಯುವ 17 ಸಾವಿರ ಕೋಟಿಗಳಲ್ಲಿ ಈಗಾಗಲೇ 10-12 ಸಾವಿರ ಕೋಟಿ ಮೊತ್ತದ ಕಾಮಗಾರಿಗಳ ಹಿಂದಿನ ಬಿಲ್ ಬಾಕಿ ಇದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ರಾಜ್ಯ ಸರ್ಕಾರದ ಬಜೆಟ್ ಮಂಡನೆ ನಂತರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಎಲ್ಲ ಮೊತ್ತವನ್ನು ಪಾವತಿಸಿದಾಗ 5 ಸಾವಿರ ಕೋಟಿ ಮಾತ್ರ ಉಳಿಯುತ್ತದೆ. ಇದರಲ್ಲಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಹೇಗೆ ಕೈಗೆತ್ತಿಕೊಳ್ಳುತ್ತಾರೆ? ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

2018ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1.50 ಲಕ್ಷ ಕೋಟಿ ಹಣವನ್ನು ನೀರಾವರಿ ಯೋಜನೆಗಳಿಗೆ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆಡಳಿತಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ 40 ಸಾವಿರ ಕೋಟಿ ಖರ್ಚು ಮಾಡಿದ್ದು, ಈ ವರ್ಷ 17 ಸಾವಿರ ಕೋಟಿ, ಮುಂದಿನ ವರ್ಷದ ಬಜೆಟ್ ಲೆಕ್ಕಕ್ಕಿಲ್ಲದಂತಾಗಿದೆ.

ಯುಕೆಪಿಗೆ 5 ಸಾವಿರ ಕೋಟಿ ನೀಡಿದ್ದಾಗಿ ಹೇಳಿದ್ದು, ಇದರಲ್ಲಿ 3 ಸಾವಿರ ಕೋಟಿ ಮೊತ್ತದ ಪೆಂಡಿಂಗ್ ಬಿಲ್‍ಗಳೇ ಇವೆ. ಎಸ್‍ಸಿಪಿ/ಟಿಎಸ್​ಪಿ ಯೋಜನೆಗೆ ಮತ್ತು ಆಡಳಿತಾತ್ಮಕ ಖರ್ಚುಗಳು ವೆಚ್ಚ ಮಾಡಿದರೆ ಯುಕೆಪಿಗೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಇನ್ನು ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಎಲ್ಲಿಂದ ದುಡ್ಡು ತರುತ್ತಾರೆ? ಎಂದು ಕೇಳಿದ್ದಾರೆ.

ಸಚಿವ ಕಾರಜೋಳ ಬಣ್ಣ ಬಯಲು: ಎತ್ತಿನಹೊಳೆಗೆ 3 ಸಾವಿರ ಕೋಟಿ ನೀಡಿದ್ದು, ಅಲ್ಲಿ ಕೂಡ 3 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇವೆ. ತುಂಗಭದ್ರಾ, ಮೇಕೆದಾಟು ಮತ್ತು ಮಹದಾಯಿ ಯೋಜನೆಗೆ ಹಣ ನೀಡಿದ್ದರೂ ನ್ಯಾಯಾಲಯದಲ್ಲಿ ವ್ಯಾಜ್ಯ ಇರುವುದರಿಂದ ಹಣ ಖರ್ಚು ಮಾಡಲು ಆಗುವುದಿಲ್ಲ. ಹೀಗಾಗಿ, ಇದು ಫಾಲ್ಸ್ ಬಜೆಟ್. ಬಂಪರ್ ಬಜೆಟ್ ಕೊಡುತ್ತೇನೆ ಎಂದು ನಿನ್ನೆಯೇ ಕೊಚ್ಚಿಕೊಂಡಿದ್ದ ಸಚಿವ ಗೋವಿಂದ ಕಾರಜೋಳ ಅವರ ಬಣ್ಣ ಈ ಬಜೆಟ್‍ನಿಂದ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಗೆ ಈ ಬಜೆಟ್‍ನಲ್ಲಿ ನೀಡಿರುವ ಕೊಡುಗೆ ಶೂನ್ಯ. ನಿರೀಕ್ಷಿತ ರೇವಣಸಿದ್ದೇಶ್ವರ ಏತಾ ನೀರಾವರಿ ಯೋಜನೆಗೆ ಜಿಲ್ಲೆಯವರೇ ಆದ ಕಾರಜೋಳ ಅವರು ಹಣ ಒದಗಿಸದೇ ಜಿಲ್ಲೆಯ ಜನತೆಗೆ ವಂಚನೆ ಮಾಡಿದ್ದಾರೆ. ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡದೇ ಇರುವುದು ದುರ್ದೈವದ ಸಂಗತಿ. ಅಕ್ಕಮಹಾದೇವಿ ಮಹಿಳಾ ವಿವಿ ಬಲಪಡಿಸಲು ಯಾವುದೇ ಘೋಷಣೆ ಮಾಡಿಲ್ಲ. ತೊರವಿಯಲ್ಲಿ ವೈನ್ ಪಾರ್ಕ್ ಘೋಷಿಸಿದ್ದರೂ ಪಿಪಿಪಿ ಮಾದರಿಯಲ್ಲಿ (ಖಾಸಗಿ ಸಹಭಾಗಿತ್ವದಲ್ಲಿ) ಮಾಡಲು ಹೊರಟಿರುವುದು ನಾಚಿಕೆಗೇಡು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.