ETV Bharat / city

11ಸಾವಿರ ಬಡವರಿಗೆ ಆಹಾರ ಸಾಮಾಗ್ರಿಗಳನ್ನ ವಿತರಿಸಿದ ಮಾಜಿ ಸಚಿವ ಲಿಂಬಾವಳಿ.. - ಕೊವಿಡ್​​-19

ಕೊರೊನಾ ವೈರಸ್‌ ವಿರುದ್ಧದ ಸಮರಕ್ಕಾಗಿ ದೇಶದೆಲ್ಲೆಡೆ ಲಾಕ್​ಡೌನ್​ ಇದೆ. ಆದರೆ, ಇದರಿಂದ ದಿನಗೂಲಿ ನಂಬಿ ಬದುಕುತ್ತಿರುವವರ ಬದುಕು ಅತಂತ್ರವಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಬಡವರಿಗೆ ದಿನಸಿ ಸಾಮಾಗ್ರಿಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ.

former-minister-limbawali-provided-food-supplies-for-11-thousand-poor-people
ಮಾಜಿ ಸಚಿವ ಅರವಿಂದ ಲಿಂಬಾವಳಿ
author img

By

Published : Mar 28, 2020, 8:40 PM IST

ಬೆಂಗಳೂರು : ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಇರುವ 11 ಸಾವಿರಕ್ಕೂ ಹೆಚ್ಚು ಕಡು ಬಡವರ ಕುಟುಂಬಗಳಿಗೆ ಮಹದೇವಪುರ ಕ್ಷೇತ್ರದಲ್ಲಿ ಬರುವ ಕುಂದಲಹಳ್ಳಿ, ನಲ್ಲೂರಹಳ್ಳಿ, ವರ್ತೂರು, ಸಾದರಮಂಗಲ ಸೇರಿ ವಿವಿಧ ಪ್ರದೇಶಗಳ ಜನರಿಗೆ ಆಹಾರ ಪದಾರ್ಥಗಳ ವಿತರಣೆಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಬಡವರಿಗೆ ಆಹಾರ ಸಾಮಾಗ್ರಿಗಳನ್ನ ವಿತರಿಸಿದ ಮಾಜಿ ಸಚಿವ ಲಿಂಬಾವಳಿ..

ದಿನಸಿ ಸಾಮಗ್ರಿಗಳಾದ 5 ಕೆಜಿ ಅಕ್ಕಿ ,1ಕೆಜಿ ಅಡಿಗೆ ಎಣ್ಣೆ ,1 ಕೆಜಿ ಬೇಳೆ,1ಕೆಜಿ ಈರುಳ್ಳಿ, ಮಾಸಾಲಾ ಸಾಮಗ್ರಿಗಳು ಹಾಗೂ ಇನ್ನಿತರ ದಿನಸಿ ವಸ್ತುಗಳನ್ನು ಒಂದು ಕುಟುಂಬಕ್ಕೆ ಒಂದು ವಾರಕ್ಕೆ ಒಂದು ಬಾರಿಯಂತೆ 3 ವಾರ ವಿತರಿಸಲಾಗುತ್ತಿದೆ ಎಂದು ಶಾಸಕ ಲಿಂಬಾವಳಿ ತಿಳಿಸಿದರು.

ಇದಕ್ಕಾಗಿ 25 ಲಕ್ಷ ರೂ. ದೇಣಿಗೆ ನೀಡಿದ್ದೇನೆ. ಉಳಿದ ಹಣವನ್ನು ಕ್ಷೇತ್ರದ ಮುಖಂಡರು ಹಾಗೂ ದಾನಿಗಳೊಂದಿಗೆ ಸಂಗ್ರಹಿಸಿ ವಿತರಿಸಲಾಗುತ್ತಿದೆ. ಸಾರ್ವಜನಿಕರು ಮನೆಯಲ್ಲೇ ಇದ್ದು ಸರ್ಕಾರದ ಆದೇಶ ಪಾಲಿಸಬೇಕು. ಕೊರೊನಾ ಕಾಯಿಲೆಯನ್ನು ಮಟ್ಟಹಾಕಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.