ಬೆಂಗಳೂರು : ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ಬಹಿರಂಗ ಪ್ರಕರಣದಲ್ಲಿ ಬಂದ ಮಾಜಿ ಪತ್ರಕರ್ತ ಲಕ್ಷ್ಮಿಪತಿ ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆಡಿದ್ದಾನೆ.
ಈ ಮೊದಲು ಜಾಮೀನಿಗೆ ಅರ್ಜಿ ಹಾಕಿದ್ದ ಲಕ್ಷ್ಮಿಪತಿ, ತನ್ನ ಪರ ವಕೀಲರ ಮೂಲಕ ಅರ್ಜಿ ಹಿಂಪಡೆಡಿದ್ದಾನೆ. ಸೆಷನ್ಸ್ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಇಂದು ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಸೂಚಿಸಿತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆ ಆರೋಪಿಯ ಪರ ವಕೀಲರು ಅರ್ಜಿ ಹಿಂಪಡೆದಿದ್ದಾರೆ. ಸಿಟಿ ಸಿವಿಲ್ ಸಿಸಿಹೆಚ್ 91ನೇ ಕೋರ್ಟ್ನಲ್ಲಿ ಹಾಕಿದ್ದ ಶಂಕಿತ ಆರೋಪಿ ಲಕ್ಷ್ಮಿಪತಿ ಅರ್ಜಿ ಸಲ್ಲಿಸಿದ್ದ.
ಪ್ರಕರಣದ ಹಿನ್ನೆಲೆ : ಸಿಡಿ ಪ್ರಕರಣದಲ್ಲಿ ಮೊದಲ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಲಕ್ಷ್ಮಿಪತಿ, ದಿನೇಶ್ ಕಲ್ಲಹಳ್ಳಿಗೆ ಸಿಡಿ ತಲುಪಿಸಿದ ಆರೋಪವಿದೆ. ಸಿಟಿ ಸಿವಿಲ್ ಕೋರ್ಟ್ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.
ಈ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದರೂ ಸೆಷನ್ಸ್ ಕೋರ್ಟ್ಗೆ ತನ್ನ ಪರ ವಕೀಲರ ಮೂಲಕ ಮಾಜಿ ಪತ್ರಕರ್ತ ಲಕ್ಷ್ಮಿಪತಿ ಅರ್ಜಿ ಸಲ್ಲಿಸಿದ್ದ. ಇಂದು ಆಕ್ಷೇಪಣೆ ಸಲ್ಲಿಸಲು ಅಭಿಯೋಜಕರಿಗೆ ಕೋರ್ಟ್ ಸೂಚಿಸಿತ್ತು. ಪೊಲೀಸರ ವಾದ ಕೇಳಿದ ನಂತರವೇ ತೀರ್ಮಾನವೆಂದು ಕೋರ್ಟ್ ಈ ಮೊದಲು ಹೇಳಿತ್ತು.
ಇದನ್ನೂ ಓದಿ: ಬೈಕ್ ಸವಾರ ಸಾವು ಪ್ರಕರಣ : ಪೊಲೀಸರ ಮೇಲೆ ಹಲ್ಲೆ ಮಾಡಿದ 8 ಜನರ ಬಂಧನ