ETV Bharat / city

ಅಧಿಕಾರಕ್ಕೆ ಬಂದರೆ ನೀರಾವರಿ ಕ್ಷೇತ್ರದ ಅಭಿವೃದ್ಧಿ: ಮಾಜಿ ಸಿಎಂ ಹೆಚ್​ಡಿಕೆ - ನೀರಾವರಿ ಯೋಜನೆಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತು

ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ ನೀರಾವರಿ ಯೋಜನೆಗಳ ಜಾರಿ ಬಗ್ಗೆ ಸಂಕಲ್ಪ ಮಾಡುತ್ತೇವೆ. ಅದೇ ದಿನ ಆ ರಥಗಳ ನೀರನ್ನು ಒಂದು ಬ್ರಹ್ಮ ಕಲಶಕ್ಕೆ ತುಂಬಿ ಪೂಜಿಸಿ ನಂತರ ಅಂದೇ ಜೆಪಿ ಭವನದಲ್ಲಿ ಆ ಕಳಸ ಪ್ರತಿಷ್ಠಾಪನೆ ಮಾಡುತ್ತೇವೆ. ಆ ಕಲಶಕ್ಕೆ ಮುಂದಿನ ಚುನಾವಣೆವರೆಗೆ, ನಮ್ಮ ಸಂಪ್ರದಾಯದಂತೆ ನಿತ್ಯ ಗಂಗಾ ಪೂಜೆ ನಡೆಯಲಿದೆ ಎಂದರು..

kumaraswamy
ಹೆಚ್​ಡಿಕೆ
author img

By

Published : Apr 9, 2022, 8:01 PM IST

Updated : Apr 9, 2022, 8:27 PM IST

ರಾಮನಗರ : ಕಳೆದ 75 ವರ್ಷಗಳಿಂದ ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಐದೇ ವರ್ಷದಲ್ಲಿ ಸರಿಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ತಿಂಗಳ 16ರಿಂದ ಪಕ್ಷದ ಮಹತ್ವಾಕಾಂಕ್ಷೆ ಕಾರ್ಯಕ್ರಮವಾದ ಜನತಾ ಜಲಧಾರೆ ಗಂಗಾ ರಥಯಾತ್ರೆಯನ್ನು ಆರಂಭ ಮಾಡಲಾಗುವುದು.

ಈಗಾಗಲೇ 15 ಗಂಗಾ ರಥಗಳು ಸಿದ್ಧವಾಗಿವೆ. ಈ ತಿಂಗಳ 12ರಂದು ರಾಮನಗರದ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಈ ರಥಗಳಿಗೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಹಸಿರು ನಿಶಾನೆ ತೋರಲಿದ್ದಾರೆ ಎಂದರು. ಎಲ್ಲ ರಥಗಳು ಹನುಮ ಜಯಂತಿ ದಿನವಾದ ಈ ತಿಂಗಳ 16ರ ದಿನಕ್ಕೆ ಜಲ ಸಂಗ್ರಹ ಮಾಡುವ ನಿಗದಿತ ಸ್ಥಳಗಳನ್ನು ತಲುಪಲಿವೆ.

ಅಧಿಕಾರಕ್ಕೆ ಬಂದರೆ ನೀರಾವರಿ ಕ್ಷೇತ್ರದ ಅಭಿವೃದ್ಧಿ: ಮಾಜಿ ಸಿಎಂ ಹೆಚ್​ಡಿಕೆ

ಆ ಪುಣ್ಯದಿನವೇ ಹದಿನೈದು ಕಡೆಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು. ಕಳೆದ 75 ವರ್ಷಗಳಿಂದ ಕನ್ನಡಿಗರು ನೀರಾವರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ನಮಗೆ ಅನ್ಯಾಯ ಮಾಡುತ್ತಲೇ ಇದೆ. ಜತೆಗೆ, ಅಕ್ಕಪಕ್ಕದ ರಾಜ್ಯಗಳಿಂದ ದೌರ್ಜನ್ಯಕ್ಕೆ ತುತ್ತಾಗಿದ್ದೇವೆ. ಇದೆಲ್ಲಕ್ಕೂ ಚರಮ ಗೀತೆ ಹಾಡುವ ಉದ್ದೇಶದಿಂದ ನಮ್ಮ ಪಕ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಲಧಾರೆ ಹಮ್ಮಿಕೊಂಡಿದೆ ಎಂದರು.

ಎಲ್ಲಾ ಜಿಲ್ಲೆಗಳಿಗೂ ಜಲ ಸಮಾನತೆ ಹಾಗೂ ಜಲ ಸಂಪನ್ಮೂಲಗಳ ಸದ್ಬಳಕೆ ನಿಟ್ಟಿನಲ್ಲಿ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗುವುದು. ರಾಜ್ಯದಲ್ಲಿ ಕನ್ನಡಿಗರದ್ದೇ ಆದ ಸರ್ಕಾರ ತರಬೇಕು ಎಂಬ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಅದೇ ಉದ್ದೇಶವನ್ನು ಜಲಧಾರೆ ಹೊಂದಿದೆ. ಕೊರೊನಾ ಆತಂಕ ಕಡಿಮೆಯಾಗಿದೆ. ಹಾಗಾಗಿ, ಹಲವಾರು ತಿಂಗಳಿಂದ ಪ್ರಾರಂಭ ಮಾಡಬೇಕಿದ್ದ ಕಾರ್ಯಕ್ರಮಕ್ಕೆ ಈಗ ಚಾಲನೆ ನೀಡುತ್ತಿದ್ದೇವೆ ಎಂದರು.

15 ತಂಡಗಳ ರಚನೆ : ಹದಿನೈದು ಗಂಗಾ ರಥಗಳ ಜತೆಗೆ ಹದಿನೈದು ಕ್ರಿಯಾಶೀಲ ತಂಡಗಳು ಇರುತ್ತವೆ. ರಥಗಳು ಸಾಗುವ ಆಯಾ ಮಾರ್ಗದ ಎಲ್ಲ ಚಟುವಟಿಕೆಗಳ ನಿರ್ವಹಣೆ ಈ ತಂಡಗಳದ್ದು. ಈ ತಂಡಗಳ ನೇತೃತ್ವವನ್ನು ಆಯಾ ಭಾಗದ ನಮ್ಮ ಶಾಸಕರು, ಪಕ್ಷದ ಜಿಲ್ಲಾ ಅಧ್ಯಕ್ಷರು, ಇನ್ನಿತರೆ ಎಲ್ಲ ನಾಯಕರು ವಹಿಸುತ್ತಾರೆ. ಮೇ 8ರಂದು ಬೆಂಗಳೂರು ನಗರಕ್ಕೆ ಎಲ್ಲಾ ರಥಗಳು ಜಲ ಸಂಗ್ರಹ ಮಾಡಿಕೊಂಡು ವಾಪಸ್ ಬರುತ್ತವೆ.

ನಂತರ ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ ನೀರಾವರಿ ಯೋಜನೆಗಳ ಜಾರಿ ಬಗ್ಗೆ ಸಂಕಲ್ಪ ಮಾಡುತ್ತೇವೆ. ಅದೇ ದಿನ ಆ ರಥಗಳ ನೀರನ್ನು ಒಂದು ಬ್ರಹ್ಮ ಕಲಶಕ್ಕೆ ತುಂಬಿ ಪೂಜಿಸಿ ನಂತರ ಅಂದೇ ಜೆಪಿ ಭವನದಲ್ಲಿ ಆ ಕಳಸ ಪ್ರತಿಷ್ಠಾಪನೆ ಮಾಡುತ್ತೇವೆ. ಆ ಕಲಶಕ್ಕೆ ಮುಂದಿನ ಚುನಾವಣೆವರೆಗೆ, ನಮ್ಮ ಸಂಪ್ರದಾಯದಂತೆ ನಿತ್ಯ ಗಂಗಾ ಪೂಜೆ ನಡೆಯಲಿದೆ ಎಂದರು.

ಓದಿ: ಮೋಹನ್​ ಲಿಂಬಿಕಾಯಿ ಸ್ಪರ್ಧೆ ಮಾಡಿದ್ರೆ ನನಗೂ ಖುಷಿ : ಬಸವರಾಜ ಹೊರಟ್ಟಿ

Last Updated : Apr 9, 2022, 8:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.