ETV Bharat / city

ವರದಕ್ಷಿಣೆ‌ ಕಿರುಕುಳ ಆರೋಪ: ಪತಿ ವಿರುದ್ಧ ದೂರು ನೀಡಿದ ವಿದೇಶಿ ಮಹಿಳೆ - ವರದಕ್ಷಿಣೆ‌ ಕಿರುಕುಳ ಆರೋಪ

ವರದಕ್ಷಿಣೆ‌ ಕಿರುಕುಳ ನೀಡಿದ ಆರೋಪದಡಿ ವಿದೇಶಿ ಮೂಲದ ವಿವಾಹಿತೆಯೋರ್ವಳು ತನ್ನ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ‌.

Foreign woman
ವಿದೇಶಿ ಮಹಿಳೆ
author img

By

Published : Jan 25, 2020, 9:40 AM IST

ಬೆಂಗಳೂರು: ವರದಕ್ಷಿಣೆ‌ ಕಿರುಕುಳ ನೀಡಿದ ಆರೋಪದಡಿ ವಿದೇಶಿ ಮೂಲದ ವಿವಾಹಿತೆಯೋರ್ವಳು ತನ್ನ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ‌.

ದಕ್ಷಿಣ ಅಮೆರಿಕದ ಚಿಲಿಯ ಮಹಿಳೆಯೋರ್ವಳು ಪತಿ ವಿಕ್ರಂ‌‌ ಮಾಡಾ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಭರತನಾಟ್ಯ ಹಾಗೂ ಕಥಕ್ ಕಲಿಯಲು 2017ರಲ್ಲಿ ಬೆಂಗಳೂರಿಗೆ ಬಂದಿದ್ದ ಈ ಮಹಿಳೆ, ಹೈದರಾಬಾದ್ ಮೂಲದ ವಿಕ್ರಂ ಮಾಡಾ ಎಂಬುವವರ ಜೊತೆ ಪರಿಚಯವಾಗಿ ನಂತರ‌ ಪ್ರೇಮಾಂಕುರವಾಗಿ 2018ರ ಜುಲೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಈ ದಂಪತಿ ಮದುವೆ ಬಳಿಕ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು.

2019ರಲ್ಲಿ ದಂಪತಿ ಚಿಲಿಗೆ ಹೋಗಿ ಬಂದಿದ್ದರು. ಆ ಬಳಿಕ ಪತ್ನಿಯ ಮನೆಯ ಸ್ಥಿತಿಗತಿ ಕಂಡು ಪತಿ ಹಣಕ್ಕಾಗಿ ಕಿರುಕುಳ ನೀಡಿದ್ದಾನೆ. ಅಲ್ಲದೇ ಪತ್ನಿಯನ್ನು ಅನುಮಾನಿಸಿ ಫೋನ್ ಚೆಕ್ ಮಾಡಿ,‌ ಮಾನಸಿಕ ಹಿಂಸೆ ನೀಡುತ್ತಿದ್ದನಂತೆ. ಜೊತೆಗೆ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎಂದು ವಿದೇಶಿ ಮಹಿಳೆ ಆರೋಪಿಸಿದ್ದಾಳೆ.

ಈ ಕುರಿತು ಬಸವನಗುಡಿ‌‌ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾದ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:(Leady Photo bulr madi)

ಬೆಂಗಳೂರು: ವರದಕ್ಷಿಣೆ‌ ಕಿರುಕುಳ ನೀಡಿದ ಆರೋಪದಡಿ ವಿದೇಶಿ ಮೂಲದ ವಿವಾಹಿತೆಯಿಂದ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ‌.
ದಕ್ಷಿಣ ಅಮೇರಿಕಾದ ಚಿಲಿ ದೇಶದ ಕಾರ್ಲಾ ಮಾರ್ಟೂಸ್ ಬ್ರಾವೂ ಎಂಬಾಕೆಯು ಪತಿ ವಿಕ್ರಂ‌‌ ಮಾಡಾ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ. ಭರತನಾಟ್ಯ ಹಾಗೂ ಕಥಕ್ ಕಲಿಯಲು 2017 ರಲ್ಲಿ ಬೆಂಗಳೂರಿಗೆ ಬಂದಿದ್ದ ಕಾರ್ಲಾ ಮಾರ್ಟೂಸ್, ಈ ವೇಳೆ ಹೈದರಾಬಾದ್ ಮೂಲದ ವಿಕ್ರಂ ಮಾಡ ಪರಿಚಯವಾಗಿ ನಂತರ‌ ಪ್ರೇಮಾಂಕುರಕ್ಕೆ ತಿರುಗಿತ್ತು.. 2018 ರ ಜುಲೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ದಂಪತಿ ಮದುವೆ ಬಳಿಕ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು. 2019 ರಲ್ಲಿ ದಂಪತಿಯು ಕಾರ್ಲಾಳ ಚಿಲಿ ದೇಶಕ್ಕೆ ಹೋಗಿ ಬಂದಿದ್ದರು. ಆ ಬಳಿಕ ಪತ್ನಿ ಮನೆಯ ಸ್ಥಿತಿಗತಿ ಕಂಡು ಪತಿಯಿಂದ ಹಣಕ್ಕಾಗಿ ಕಿರುಕುಳ ನೀಡಿದ್ದಾರೆ.. ಅಲ್ಲದ ಪತ್ನಿಯನ್ನು ಅನುಮಾನಿಸಿ ಪೋನ್ ಚೆಕ್ ಮಾಡಿ‌ ಮಾನಸಿಕ ಹಿಂಸೆ‌ಗೆ ಬೇಸತ್ತು ಕಾರ್ಲಾ ವಿಚ್ಚೇದನ ನೀಡಲು ನಿರ್ಧರಿಸಿದ್ದಾಳೆ. ಈ ಬಗ್ಗೆ ಮಾತನಾಡಲು ತೆರಳಿದ್ದಾಗ ವಿಕ್ರಂ ಮಾಡಾ ವಿರುದ್ದ ಹಲ್ಲೆ ಮಾಡಿದ್ದಾನೆ ಎಂದು ಆಪಾದಿಸಿದ್ದಾಳೆ ಎಂದು ಬಸವನಗುಡಿ‌‌ ಮಹಿಳಾ ಪೊಲೀಸ್ ಠಾಣೆಗೆ ದೂರು‌ ನೀಡಿದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.