ETV Bharat / city

ನೆರೆ ಪರಿಹಾರ ಲೆಕ್ಕಾಚಾರ: ಕಳೆದ ಮೂರು ವರ್ಷಗಳಲ್ಲಿ ಸಂತ್ರಸ್ತರಿಗೆ ಸಿಕ್ಕಿದ್ದೆಷ್ಟು? - ಕರ್ನಾಟಕ

ಈ ವರ್ಷ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರವಾಗಿ 81,760 ಕುಟುಂಬಗಳಿಗೆ 81.76 ಕೋಟಿ ರೂ. ಪರಿಹಾರ ನೀಡಲಾಗಿದೆ. 18,719 ಮನೆ ಹಾನಿಗಾಗೊಳಗಾದ ಸಂತ್ರಸ್ತರಿಗೆ 11.07 ಕೋಟಿ ರೂ., 45,586 ಬೆಳೆ ಹಾನಿ ಸಂತ್ರಸ್ತರಿಗೆ 38.64 ಕೋಟಿ ರೂಪಾಯಿ ನೀಡಿರುವುದಾಗಿ ಕಂದಾಯ ಇಲಾಖೆ ಮಾಹಿತಿ ನೀಡಿದೆ.

flood relief status in karnataka
ನೆರೆ ಪರಿಹಾರ ಲೆಕ್ಕಾಚಾರ: ಕಳೆದ ಮೂರು ವರ್ಷಗಳಲ್ಲಿ ಸಂತ್ರಸ್ತರಿಗೆ ಸಿಕ್ಕಿದ್ದೆಷ್ಟು?
author img

By

Published : Sep 18, 2021, 4:37 PM IST

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಿರಂತರವಾಗಿ ನೆರೆಯಿಂದಾಗಿ ಜನರು ನಲುಗಿ ಹೋಗಿದ್ದಾರೆ. ಧಾರಾಕಾರ ಮಳೆಯ ಅಬ್ಬರಕ್ಕೆ ಎಷ್ಟೋ ಮಂದಿ ಸೂರು ಕಳೆದುಕೊಂಡು ಬೀದಿಗೆ ಬಂದರೆ, ಬೆಳೆ ಕಳೆದುಕೊಂಡ ಸಾವಿರಾರು ಸಂತ್ರಸ್ತರು ಸರ್ಕಾರ ಘೋಷಿಸಿರುವ ಪರಿಹಾರವನ್ನೇ ನೆಚ್ಚಿಕೊಂಡಿದ್ದಾರೆ.

2019, 2020 ಹಾಗೂ 2021ರಲ್ಲಿ ರಾಜ್ಯ ಭಾರಿ ಮಳೆಯ ಪ್ರತಾಪ ಎದುರಿಸಬೇಕಾಯಿತು. ಒಂದೆಡೆ ಕೋವಿಡ್ ಇನ್ನೊಂದೆಡೆ ಬಿಟ್ಟೂ ಬಿಡದೇ ಕಾಡುತ್ತಿರುವ ಮಳೆಯ ಅಬ್ಬರ. ಈ ಎರಡೂ ವಿಕೋಪಗಳಿಂದ ರಾಜ್ಯ ತತ್ತರಿಸಿ ಹೋಗಿದೆ.‌ ನೆರೆಯಿಂದ ಸಂತ್ರಸ್ತರಾಗಿರುವ ಜನರಿಗೆ ಆಸರೆ ಆಗಿರುವುದು ಸರ್ಕಾರ ಘೋಷಿಸಿರುವ ನೆರೆ ಪರಿಹಾರ. ನೆರೆ ಪರಿಹಾರ ಸಂತ್ರಸ್ತರ ಕೈಗೆ ಸೇರುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಇದು ವಾಸ್ತವವೂ ಕೂಡ. ಬಿಜೆಪಿ ಸರ್ಕಾರ ಸಮರ್ಪಕವಾಗಿ ನೆರೆ ಪರಿಹಾರ ನೀಡದಿರುವ ಬಗ್ಗೆ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಆದರೆ, ಸರ್ಕಾರ ಮಾತ್ರ ಯಾವ ನೆರೆ ಪರಿಹಾರವನ್ನೂ ಬಾಕಿ ಉಳಿಸಿಲ್ಲ. ನೆರೆ ಪರಿಹಾರವನ್ನು ಎಲ್ಲ ಅರ್ಹ ಸಂತ್ರಸ್ತರಿಗೆ ಪಾವತಿಸಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ.

ನೆರೆ ಪರಿಹಾರಕ್ಕೆ ಪಾವತಿಸಿದ್ದೆಷ್ಟು?
2019ರಲ್ಲಿ ನೆರೆ ಸಂತ್ರಸ್ತರ ದಿನ ಬಳಕೆ ವಸ್ತುಗಳಿಗಾಗಿ ತುರ್ತು ಪರಿಹಾರವಾಗಿ 10,000ರೂ. ನಂತೆ 2.07 ಲಕ್ಷ ಕುಟುಂಬಗಳಿಗೆ ಒಟ್ಟು 207 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಅದೇ 1.34 ಲಕ್ಷ ಮನೆಗಳಿಗೆ 1,933.67 ಕೋಟಿ ರೂ. ಮನೆ ಹಾನಿ ಪರಿಹಾರ ಪಾವತಿಸಲಾಗಿದೆ. ಬೆಳೆ ಹಾನಿ ಪರಿಹಾರವಾಗಿ 6.71 ಲಕ್ಷ ಸಂತ್ರಸ್ತರಿಗೆ 1,232 ಕೋಟಿ ರೂ. ಪಾವತಿಸಲಾಗಿದೆ.

ಇನ್ನು 90 ಮಾನವ ಹಾನಿಗಾಗಿ ವಾರಸುದಾರರಿಗೆ 4.50 ಕೋಟಿ ರೂ. ನೀಡಲಾಗಿದೆ. 3,400 ಜಾನುವಾರು ಕಳೆದುಕೊಂಡ ವಾರಸುದಾರನಿಗೆ 6.17 ಕೋಟಿ ರೂ. ಪಾವತಿಸಿರುವುದಾಗಿ ಕಂದಾಯ ಇಲಾಖೆ ತಿಳಿಸಿದೆ.

27,000 ಕುಟುಂಬಗಳಿಗೆ 27.77 ಕೋಟಿ ರೂ. ತುರ್ತು ಪರಿಹಾರ
2020ರಲ್ಲಿ ಸುರಿದ ಭಾರಿ ಮಳೆಗೆ ನೆರೆ ಸಂತ್ರಸ್ತರ ದಿನ ಬಳಕೆ ವಸ್ತುಗಳಿಗಾಗಿ ತುರ್ತು ಪರಿಹಾರವಾಗಿ 27,773 ಕುಟುಂಬಗಳಿಗೆ 27.77 ಕೋಟಿ ರೂ. ನೀಡಲಾಗಿದೆ. 39,815 ಮನೆಗಳಿಗೆ 151.72 ಕೋಟಿ ರೂ. ಪಾವತಿಸಲಾಗಿದೆ. 12.01 ಲಕ್ಷ ಬೆಳೆ ಹಾನಿ ಸಂತ್ರಸ್ತರಿಗೆ 939.66 ಕೋಟಿ ರೂ.‌ ಪರಿಹಾರ ಪಾವತಿಸಲಾಗಿದೆ. 104 ಮಾನವ ಹಾನಿಯಾದ ವಾರಸುದಾರರಿಗೆ 5.20 ಕೋಟಿ ರೂ. ಪಾವತಿಸಲಾಗಿದೆ.

2021ರಲ್ಲಿನ ನೆರೆ ಸಂತ್ರಸ್ತರ ದಿನ ಬಳಕೆ ವಸ್ತುಗಳಿಗಾಗಿ ತುರ್ತು ಪರಿಹಾರವಾಗಿ 81,760 ಕುಟುಂಬಗಳಿಗೆ 81.76 ಕೋಟಿ ರೂ. ಪರಿಹಾರ ನೀಡಲಾಗಿದೆ. 18,719 ಮನೆ ಹಾನಿಗಾಗೊಳಗಾದ ಸಂತ್ರಸ್ತರಿಗೆ 11.07 ಕೋಟಿ ರೂ., 45,586 ಬೆಳೆ ಹಾನಿ ಸಂತ್ರಸ್ತರಿಗೆ 38.64 ಕೋಟಿ ರೂ., 16 ಜೀವ ಹಾನಿಯಾದ ವಾರಸುದಾರರಿಗೆ 80 ಲಕ್ಷ ರೂಪಾಯಿ ಪಾವತಿಸಲಾಗಿದೆ ಎಂದು ಕಂದಾಯ ಇಲಾಖೆ ಅಂಕಿ - ಅಂಶ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.