ETV Bharat / city

ನೆರೆ ಹೊರೆ.. ಮಧ್ಯಂತರ ಬಜೆಟ್ ಮಂಡನೆ ಕೈಬಿಟ್ಟು, ಮೈತ್ರಿ ಬಜೆಟ್ ಅನುಮೋದಿಸಲಿರುವ ಸರ್ಕಾರ.. - ಮೈತ್ರಿ ಬಜೆಟ್ ಅನುಮೋದನೆ

ಈ ಬಾರಿ ಭೀಕರ ಅತಿವೃಷ್ಟಿ ಉಂಟಾಗಿರುವ ಹಿನ್ನೆಲೆ ರಾಜ್ಯದ ಮೇಲೆ ಭಾರೀ ಆರ್ಥಿಕ ಹೊರೆ ಬೀಳಲಿದೆ. ಹಾಗಾಗಿ ಬಿಜೆಪಿ ಸರ್ಕಾರ ತನ್ನ ಮಧ್ಯಂತರ ಬಜೆಟ್ ಮಂಡಿಸುವ ಚಿಂತನೆಯನ್ನು ಬಹುತೇಕ ಕೈಬಿಟ್ಟಿದೆ ಎನ್ನಲಾಗಿದೆ.

ಮಾಧು ಸ್ವಾಮಿ
author img

By

Published : Sep 23, 2019, 5:11 PM IST

ಬೆಂಗಳೂರು: ಈ ಬಾರಿ ಭೀಕರ ಅತಿವೃಷ್ಟಿ ಉಂಟಾಗಿರುವ ಹಿನ್ನೆಲೆ ರಾಜ್ಯದ ಮೇಲೆ ಭಾರೀ ಆರ್ಥಿಕ ಹೊರೆ ಬೀಳಲಿದೆ. ಹಾಗಾಗಿ ಬಿಜೆಪಿ ಸರ್ಕಾರ ತನ್ನ ಮಧ್ಯಂತರ ಬಜೆಟ್ ಮಂಡಿಸುವ ಚಿಂತನೆಯನ್ನು ಬಹುತೇಕ ಕೈಬಿಟ್ಟಿದೆ ಎನ್ನಲಾಗಿದೆ.

ಬಜೆಟ್ ಮಂಡನೆ ಕುರಿತು ಮಾಧುಸ್ವಾಮಿ ಪ್ರತಿಕ್ರಿಯೆ..

ಈ ಬಾರಿ ಉಂಟಾದ ಪ್ರಳಯ ರಾಜ್ಯದ ಮೇಲೆ ಭಾರೀ ಹೊರೆಯನ್ನು ಬೀಳಿಸಿದೆ. ರಾಜ್ಯ ಸರ್ಕಾರ ಈಗಾಗಲೇ ನೆರೆಯಿಂದ ಸುಮಾರು 35 ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅಧಿಕೃತ ವರದಿಯನ್ನು ಸಲ್ಲಿಸಿದೆ. ಭೀಕರ ಮಳೆಗೆ ಅಪಾರ ಪ್ರಮಾಣದಲ್ಲಿ ಮನೆ ಹಾನಿ, ಬೆಳೆ ಹಾನಿ, ರಸ್ತೆ ಹಾನಿ ಸೇರಿ ಮೂಲಸೌಕರ್ಯಗಳು ಹಾನಿಗೊಳಗಾಗಿದೆ. ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ನೆರೆ ಹಾನಿ ಪರಿಹಾರ ಮೊದಲ ಆದ್ಯತೆಯಾಗಿದೆ. ಆದಾಯ ಕ್ರೋಢೀಕರಣಕ್ಕೆ ಹಿನ್ನಡೆಯಾಗಿರುವ ಹಿನ್ನೆಲೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆ ಬೀಳುತ್ತಿದೆ.

ಯಡಿಯೂರಪ್ಪ ನೇತೃತ್ವದ ಹೊಸ ಸರ್ಕಾರ ತಮ್ಮದೇ ಯೋಜನೆಗಳನ್ನು ಒಳಗೊಂಡ ಪೂರಕ‌ ಬಜೆಟ್ ಮಂಡಿಸಲು ಯೋಚಿಸಿತ್ತು. ಈ ಸಂಬಂಧ ಆರ್ಥಿಕ ಇಲಾಖೆಗೆ ತಯಾರಿ ನಡೆಸಲು ಸೂಚನೆ ನೀಡಿತ್ತು. ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದ ಹಾಗೆಯೇ ಯಡಿಯೂರಪ್ಪ ಮೂರು ತಿಂಗಳಿಗೆ ಲೇಖಾನುದಾನಕ್ಕೆ ಅನುಮೋದನೆ ಪಡೆದುಕೊಂಡಿದ್ದರು‌. ಅದರಂತೆ ಅಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್​ವರೆಗೆ 62,751 ಕೋಟಿ ರೂ. ಮೊತ್ತಕ್ಕೆ ಲೇಖಾನುದಾನ ಪಡೆದಿದ್ದರು. ನವಂಬರ್​ನಿಂದ 2020 ಮಾರ್ಚ್‌ವರೆಗಿನ ಐದು ತಿಂಗಳ ಅವಧಿಗೆ ಮಧ್ಯಂತರ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಚಿಂತನೆ‌ ನಡೆಸಿದ್ದರು.

ನೆರೆ ಹೊರೆಗೆ ಮಧ್ಯಂತರ ಬಜೆಟ್ ಮಂಡನೆಗೆ ಬ್ರೇಕ್:

ರಾಜ್ಯದಲ್ಲಿ ಉಂಟಾಗಿರುವ ಇಷ್ಟೊಂದು ದೊಡ್ಡ ಪ್ರಮಾಣದ ಹಾನಿಯನ್ನು ನಿಭಾಯಿಸುವುದು ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಂದೆಡೆ ತೆರಿಗೆ‌ ಸಂಗ್ರಹದಲ್ಲಿ‌ ಕುಸಿತ ಕಂಡಿರುವ ಕಾರಣ ಸರ್ಕಾರಕ್ಕೆ ಹಣ ಹೊಂದಿಸುವುದು ಸಮಸ್ಯೆಯಾಗುತ್ತಿದೆ. ಸದ್ಯ ರಾಜ್ಯ ಸುಮಾರು 23,000 ಕೋಟಿಗೂ ಅಧಿಕ ವಿತ್ತೀಯ ಕೊರತೆ ಅನುಭವಿಸುತ್ತಿದೆ. ಇನ್ನು ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕ್ಷೀಣವಾಗಿದ್ದು, ಬಹುತೇಕ ರಾಜ್ಯ ಸರ್ಕಾರವೇ ನೆರೆ ಪರಿಹಾರ ಹಣವನ್ನು ಹೊಂದಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮುಂದಿನ ತಿಂಗಳು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನೆರೆ ಹಾನಿ ಪರಿಹಾರಕ್ಕೆ ಸೀಮಿತವಾಗಿ ಪೂರಕ ಅಂದಾಜು ಮಂಡನೆ ಮಾಡಲು ನಿರ್ಧರಿಸಿದೆ.

ಮೈತ್ರಿ ಸರ್ಕಾರದ ಬಜೆಟ್ ಅನುಮೋದನೆಗೆ ನಿರ್ಧಾರ:

ಬಿಜೆಪಿ ಸರ್ಕಾರದ ಹೊಸ ಯೋಜನೆ ಘೋಷಣೆ ಮಾಡಲು ಹಣದ ಕೊರತೆ ಎದುರಾಗಿರುವುದರಿಂದ, ಜತೆಗೆ ನೆರೆ ಹಾನಿಗೆ ಹಣ ಹೊಂದಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆ ಹಿನ್ನೆಲೆ ಮಧ್ಯಂತರ ಬಜೆಟ್ ಮಂಡನೆ ನಿರ್ಧಾರವನ್ನು ಬಹುತೇಕ ಕೈ ಬಿಟ್ಟಿದೆ ಎಂಬ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮುನ್ಸೂಚನೆ ನೀಡಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಹಿಂದಿನ ಮೈತ್ರಿ ಸರ್ಕಾರ ಮಂಡಿಸಿದ್ದ ಬಜೆಟ್​ಗೆ ಅನುಮೋದನೆ ನೀಡಲು ಬಿಜೆಪಿ ಸರ್ಕಾರ ಯೋಚಿಸಿದೆ. ಅದರ ಜತೆಗೆ ನೆರೆ ಹಾನಿ ಪರಿಹಾರ ಕಾಮಗಾರಿಗಳಿಗಾಗಿ ಪೂರಕ ಅಂದಾಜು ಹಣ ಮಂಡಿಸಲು ನಿರ್ಧರಿಸಿದೆ.

Intro:Body:KN_BNG_01_MIDBUDGET_FLOODDROPPED_SCRIPT_7201951

ನೆರೆ ಹೊರೆ: ಮಧ್ಯಂತರ ಬಜೆಟ್ ಮಂಡನೆ ಯೋಚನೆ ಕೈ ಬಿಟ್ಟು, ಮೈತ್ರಿ ಬಜೆಟ್ ಅನುಮೋದಿಸಲಿರುವ ಸರ್ಕಾರ

ಬೆಂಗಳೂರು: ರಾಜ್ಯ ಹಿಂದೆಂದು ಕಂಡರಿಯದಷ್ಟು ಈ ಬಾರಿ ಭೀಕರ ಅತಿವೃಷ್ಠಿ ಎದುರಿಸಿದೆ. ಈ ಅತಿವೃಷ್ಠಿ ರಾಜ್ಯದ ಮೇಲೆ ಭಾರೀ ಆರ್ಥಿಕ ಹೊರೆ ಬೀಳಿಸಿದೆ. ಆರ್ಥಿಕ ಹೊರೆಯ ಹಿನ್ನೆಲೆ ಬಿಜೆಪಿ ಸರ್ಕಾರ ತನ್ನ ಮಧ್ಯಂತರ ಬಜೆಟ್ ಮಂಡಿಸುವ ಚಿಂತನೆಯನ್ನು ಬಹುತೇಕ ಕೈಬಿಟ್ಟಿದೆ.

ವರುಣಾಘಾತ ಸೃಷ್ಟಿಸಿದ ಪ್ರಳಯ ರಾಜ್ಯದ ಮೇಲೆ ಭಾರೀ ಹೊರೆಯನ್ನು ಬೀಳಿಸಿದೆ. ರಾಜ್ಯ ಸರ್ಕಾರ ಈಗಾಗಲೇ ನೆರೆಯಿಂದ ಸುಮಾರು 35 ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅಧಿಕೃತ ವರದಿಯನ್ನು ಸಲ್ಲಿಸಿದೆ. ಭೀಕರ ಮಳೆಗೆ ಅಪಾರ ಪ್ರಮಾಣದಲ್ಲಿ ಮನೆ ಹಾನಿ, ಬೆಳೆ ಹಾನಿ, ರಸ್ತೆ ಹಾನಿ ಸೇರಿದಂತೆ ಮೂಲ ಸೌಕರ್ಯಗಳ ಹಾನಿಗೊಳಗಾಗಿದೆ. ಸದ್ಯ ರಾಜ್ಯ ಸರ್ಕಾರಕ್ಕೆ ನೆರೆ ಹಾನಿ ಪರಿಹಾರ ಮೊದಲ ಆಧ್ಯತೆಯಾಗಿದೆ. ಆದಾಯ ಕ್ರೋಢೀಕರಣ ಹಿನ್ನಡೆಯಾಗಿರುವ ಹಿನ್ನೆಲೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆ ಬೀಳುತ್ತಿದೆ. ಈ ಮಧ್ಯೆ ಅತಿವೃಷ್ಠಿಯಿಂದ ಸಂಭವಿಸಿರುವ ಅಪಾರ ಹಾನಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಯಡಿಯೂರಪ್ಪ ನೇತೃತ್ವದ ಹೊಸ ಸರ್ಕಾರ ತಮ್ಮದೇ ಯೋಜನೆಗಳೊಳಗೊಂಡ ಪೂರಕ‌ ಬಜೆಟ್ ಮಂಡಿಸಲು ಯೋಚಿಸಿದ್ದರು. ಈ ಸಂಬಂಧ ಆರ್ಥಿಕ ಇಲಾಖೆಗೆ ತಯಾರಿ ನಡೆಸಲು ಸೂಚನೆ ನೀಡಿದ್ದರು. ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದ ಹಾಗೇ ಯಡಿಯೂರಪ್ಪ, ಮೂರು ತಿಂಗಳಿಗೆ ಲೇಖಾನುದಾನಕ್ಕೆ ಅನುಮೋದನೆ ಪಡೆದುಕೊಂಡಿದ್ದರು‌. ಅದರಂತೆ ಅಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ವರೆಗೆ 62,751 ಕೋಟಿ ರೂ. ಮೊತ್ತಕ್ಕೆ ಲೇಖಾನುದಾನ ಪಡೆದಿದ್ದರು. ನವಂಬರ್ ನಿಂದ 2020 ಮಾರ್ಚ್ ವರೆಗಿನ ಐದು ತಿಂಗಳ ಅವಧಿಗೆ ಮಧ್ಯಂತರ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಚಿಂತನೆ‌ ನಡೆಸಿದ್ದರು.

ನೆರೆ ಹೊರೆಗೆ ಮಧ್ಯಂತರ ಬಜೆಟ್ ಮಂಡನೆಗೆ ಬ್ರೇಕ್:

ನೆರೆ ಹೊರೆ ಹಿಂದಿನ ಬಜೆಟ್ ಮೊತ್ತದ ಸುಮಾರು ಅರ್ಧದಷ್ಟು ತಲುಪುತ್ತಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ಹಾನಿಯನ್ನು ನಿಭಾಯಿಸುವುದು ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಂದೆಡೆ ತೆರಿಗೆ‌ ಸಂಗ್ರಹದಲ್ಲಿ‌ ಕುಸಿತ ಕಂಡಿರುವ ಕಾರಣ ಸರ್ಕಾರಕ್ಕೆ ಹಣ ಹೊಂದಿಸುವುದು ಸಮಸ್ಯೆಯಾಗುತ್ತಿದೆ. ಸದ್ಯ ರಾಜ್ಯ ಸುಮಾರು 23,000 ಕೋಟಿಗೂ ಅಧಿಕ ವಿತ್ತೀಯ ಕೊರತೆ ಅನುಭವಿಸುತ್ತಿದೆ.

ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕ್ಷೀಣವಾಗಿದ್ದು, ಬಹುತೇಕ ರಾಜ್ಯ ಸರ್ಕಾರವೇ ನೆರೆ ಪರಿಹಾರ ಹಣವನ್ನು ಹೊಂದಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮುಂದಿನ ತಿಂಗಳು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನೆರೆ ಹಾನಿ ಪರಿಹಾರಕ್ಕೆ ಸೀಮಿತವಾಗಿ ಪೂರಕ ಅಂದಾಜು ಮಂಡನೆ ಮಾಡಲು ನಿರ್ಧರಿಸಿದೆ.

ಮೈತ್ರಿ ಸರ್ಕಾರದ ಬಜೆಟ್ ಅನುಮೋದನೆಗೆ ನಿರ್ಧಾರ:

ಬಿಜೆಪಿ ಸರ್ಕಾರದ ಹೊಸ ಯೋಜನೆ ಘೋಷಣೆ ಮಾಡಲು ಹಣದ ಕೊರತೆ ಎದುರಾಗಿರುವುದರಿಂದ, ಜತೆಗೆ ನೆರೆ ಹಾನಿಗೆ ಹಣ ಹೊಂದಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆ ಹಿನ್ನೆಲೆ ಮಧ್ಯಂತರ ಬಜೆಟ್ ಮಂಡನೆ ನಿರ್ಧಾರವನ್ನು ಬಹುತೇಕ ಕೈ ಬಿಟ್ಟಿದೆ ಎಂಬ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಮಾಧು ಸ್ವಾಮಿ ಮುನ್ಸೂಚನೆ ನೀಡಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಹಿಂದಿನ ಮೈತ್ರಿ ಸರ್ಕಾರ ಮಂಡಿಸಿದ್ದ ಬಜೆಟ್ ಗೇ ಅನುಮೋದನೆ ನೀಡಲು ಬಿಜೆಪಿ ಸರ್ಕಾರ ಯೋಚಿಸಿದೆ. ಅದರ ಜತೆಗೆ ನೆರೆ ಹಾನಿ ಪರಿಹಾರ ಕಾಮಗಾರಿಗಳಿಗಾಗಿ ಪೂರಕ ಅಂದಾಜು ಮಂಡಿಸಲು ನಿರ್ಧರಿಸಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.