ETV Bharat / city

ಬಿಟ್ಟು ಬಿಡದೇ ಕಾಡುತ್ತಿರುವ ಮಳೆ.. ಈವರೆಗೆ ನೆರೆ ಸಂತ್ರಸ್ತರಿಗೆ ಸರ್ಕಾರ ಪಾವತಿಸಿದ ಪರಿಹಾರ ಹೀಗಿದೆ - ಬೆಂಗಳೂರು

ರಾಜ್ಯದ ಬಹುತೇಕ ಕಡೆ ಮಳೆಯ ಅಬ್ಬರಿಸುತ್ತಿದ್ದು, ಬೆಳೆ, ಮನೆ, ಆಸ್ತಿ ಪಾಸ್ತಿಗಳು ಹಾನಿಗೊಳಗಾಗಿವೆ. ಸರ್ಕಾರ ಈಗಾಗಲೇ ತುರ್ತು ಪರಿಹಾರವಾಗಿ ಹಣ ಬಿಡುಗಡೆ ಮಾಡಿದೆ.

Flood Compensation
ಸಾಂದರ್ಭಿಕ ಚಿತ್ರ
author img

By

Published : Aug 15, 2022, 7:08 AM IST

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯೂ ವರುಣನ‌ ಅಬ್ಬರ ಮುಂದುವ‌ರೆದಿದ್ದು, ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಮಳೆ ಹಾನಿಯ ಮೊತ್ತ ದೊಡ್ಡ ಪ್ರಮಾಣದಲ್ಲಿ ಇದ್ದರೂ, ಸರ್ಕಾರ ಮಾತ್ರ ಸೀಮಿತ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಕಳೆದ ಮೂರು ವರ್ಷದಿಂದಲೂ ರಾಜ್ಯದಲ್ಲಿ ಸತತ ಅತಿವೃಷ್ಟಿ ಸಂಭವಿಸುತ್ತಲೇ ಇದೆ. ಮೂರು ವರ್ಷಗಳಲ್ಲಾದ ಮಳೆ ಹಾನಿಗಾಗಿ ಸರ್ಕಾರ ಸಂತ್ರಸ್ತರಿಗೆ ಪಾವತಿಸಿದ ಪರಿಹಾರ ಹಣ ಏನು ಎಂಬ ವರದಿ ಇಲ್ಲಿದೆ.

ಎಸ್​​ಡಿಆರ್​ಎಫ್​​ ಮತ್ತು ಎನ್​ಡಿಆರ್​​ಎಫ್​​ ಮಾರ್ಗಸೂಚಿ ಅನ್ವಯ ಸರ್ಕಾರ ಸಂತ್ರಸ್ತರಿಗೆ ಪರಿಹಾರ ಹಣ ವಿತರಿಸಿದೆ. ಸರ್ಕಾರ ಕಳೆದ ಮೂರು ವರ್ಷಗಳಲ್ಲಿನ ನೆರೆ ಸಂತ್ರಸ್ತರಿಗೆಲ್ಲರಿಗೂ ಪರಿಹಾರ ಹಣವನ್ನು ಪಾವತಿಸಲಾಗಿದೆ ಎಂದು ಹೇಳಿಕೊಂಡಿದೆ. ಆದರೆ, ಸಂತ್ರಸ್ತರು ಮಾತ್ರ ಈಗಲೂ ನೆರೆ ಪರಿಹಾರ ಸಮರ್ಪಕವಾಗಿ ಕೈ ಸೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ ಪುಟ್ ಸಬ್ಸಿಡಿ ಏನು?: ಕಳೆದ ಮೂರು ವರ್ಷಗಳಲ್ಲಿ ಎಸ್​​ಡಿಆರ್​ಎಫ್​​ ಮತ್ತು ಎನ್​ಡಿಆರ್​​ಎಫ್​​ ಮೂಲಕ ನೆರೆ ಪರಿಹಾರವಾಗಿ ಒಟ್ಟು 10,826.48 ಕೋಟಿ ಬಿಡುಗಡೆಯಾಗಿದೆ. ಈ ಹಣದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ಪಾವತಿ ಮಾಡಿದೆ.

  • ಎನ್​ಡಿಆರ್​​ಎಫ್​​ ಮೂಲಕ ಬಿಡುಗಡೆಯಾದ ಹಣವನ್ನು ಇನ್ ಪುಟ್ ಸಬ್ಸಿಡಿ ಮೂಲಕ ಬೆಳೆ ಹಾನಿಗಾಗಿ ರೈತರಿಗೆ ಪರಿಹಾರ ಪಾವತಿ ಮಾಡಲಾಗಿದೆ. ಅದರಂತೆ 2019ರಲ್ಲಿ ನೆರೆಯಿಂದಾದ ಬೆಳೆ ಹಾನಿಗೊಳಗಾದ 6.71ಲಕ್ಷ ರೈತರಿಗೆ 1,232 20 ಕೋಟಿ ರೂ. ಪಾವತಿಸಿರುವುದಾಗಿ ಕಂದಾಯ ಇಲಾಖೆ ಅಂಕಿ - ಅಂಶ ನೀಡಿದೆ.
  • 2020ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಬೆಳೆ ಹಾನಿಗೊಳಗಾದ 12 ಲಕ್ಷ ರೈತರಿಗೆ 941.71 ಕೋಟಿ ರೂ. ಪಾವತಿಸಲಾಗಿದೆ.
  • 2021 ಪ್ರವಾಹದಲ್ಲಿ ಬೆಳೆ ಹಾನಿಗೊಳಗಾದ 18.49 ಲಕ್ಷ ರೈತರಿಗೆ 2,435.57 ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದೆ.

ಮನೆ ಹಾನಿಗೆ ಪಾವತಿಯಾದ ಪರಿಹಾರ ಏನು?: ಕಂದಾಯ ಇಲಾಖೆ ನೀಡಿದ ಅಂಕಿ- ಅಂಶದ ಪ್ರಕಾರ ಪ್ರವಾಹದಿಂದ ಹಾನಿಗೊಳಗಾದ ಗೃಹೋಪಯೋಗಿ ವಸ್ತು ಪರಿಹಾರಕ್ಕಾಗಿ ಪ್ರತಿ ಕುಟುಂಬಕ್ಕೆ ತಲಾ ರೂ.10,000 ರಂತೆ 2019ರಲ್ಲಿ 2.07ಲಕ್ಷ ಕುಟಂಬಗಳಿಗೆ ಪರಿಹಾರ ಪಾವತಿ ಮಾಡಲಾಗಿದೆ.

  • 2020ರಲ್ಲಿ 36,306 ಕುಟುಂಬ ಹಾಗೂ 2021ರಲ್ಲಿ 85,862 ಕುಟುಂಬಗಳಿಗೆ ಪರಿಹಾರ ಪಾವತಿಸಲಾಗಿದೆ.
  • 2019ರಲ್ಲಿ ನೆರೆಯಿಂದ 1,34,936 ಮನೆ ಹಾನಿಯಾಗಿತ್ತು. ಮನೆಹಾನಿ ಪರಿಹಾರವಾಗಿ 2,211.15 ಕೋಟಿ ರೂ. ಪಾವತಿಸಲಾಗಿದೆ‌.
  • 2020ರ ಪ್ರವಾಹದಿಂದ 39,157 ಮನೆ ಹಾನಿಯಾಗಿದ್ದು, ಮನಹಾನಿ ಪರಿಹಾರಕ್ಕಾಗಿ 309.39 ಕೋಟಿ ರೂ. ಪಾವತಿಸಲಾಗಿದೆ‌.
  • 2021ರ ಪ್ರವಾಹದಿಂದ 53,315 ಮನ ಹಾನಿಯಾಗಿದ್ದು, ಮನೆಹಾನಿ ಪರಿಹಾರಕ್ಕಾಗಿ 400.52 ಕೋಟಿ ನೆರೆ ಸಂತ್ರಸ್ತರಿಗೆ ಪಾವತಿಸಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ನೆರೆ ಹಾನಿ ತುರ್ತು ಪರಿಹಾರ ಕಾರ್ಯಕ್ಕಾಗಿ 200 ಕೋಟಿ ರೂ. ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.