ಬೆಂಗಳೂರು: ಗಾರ್ಮೆಂಟ್ ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಖಾಸಗಿ ವಾಹನಗಳಲ್ಲಿ ಕೆಲಸಕ್ಕೆ ಹಾಜರಾಗಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ಕಾರ್ಮಿಕರು ಖಾಸಗಿ ವಾಹನಗಳಲ್ಲಿ ಓಡಾಡುವುದು ಕಷ್ಟವಾಗುತ್ತದೆ. ಸ್ಕೆಲ್ಟನ್ ಬಸ್ ಅಥವಾ ಸಾರ್ವಜನಿಕ ಸಾರಿಗೆಗೆ ವ್ಯವಸ್ಥೆ ಮಾಡಬೇಕು. ಕೈಗಾರಿಕೆ ಉದ್ಯಮ ನಡೆಸಬೇಕೆಂದರೆ ಕೆಮಿಕಲ್ ಸಪ್ಲೈ, ಟ್ರೇಡರ್ಸ್, ಪಂಪ್ ಸಪ್ಲೈ, ಎಲೆಕ್ಟ್ರಿಕಲ್ಸ್ ಹೀಗೆ ಹಲವಾರು ವರ್ಗದವರು ಇರುತ್ತಾರೆ. ಕೈಗಾರಿಕೋದ್ಯಮ ನಡೆಸಬೇಕೆಂದರೆ ಈ ಎಲ್ಲಾ ಅಂಗಡಿಗಳು ತೆರೆಯಬೇಕು. ಹೀಗಾಗಿ, ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಪೆರಿಕಲ್ ಎಂ.ಸುಂದರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮದವೇರಿದ ಗಜ.. ಸ್ಥಳದಿಂದ ಕಾಲ್ಕಿತ್ತ ಮದುಮಗ : Video